ವಾಟ್ಸ್ಆ್ಯಪ್​ನ ಹೊಸ 'ಅವತಾರ್​' ಸದ್ಯದಲ್ಲೇ..!

Avathar
Published on

ನವದೆಹಲಿ: ವಾಟ್ಸ್ಆ್ಯಪ್ ಫೀಚರ್​​ಗಳು ದಿನದಿಂದ ದಿನಕ್ಕೆ ಅಪ್ಡೇಡ್ ಆಗುತ್ತಿವೆ. ಇದೀಗ ವಾಟ್ಸಪ್​ ತನ್ನ ಬಳಕೆದಾರರಿಗೆ ಹೊಸದೊಂದು ಫೀಚರನ್ನು ಪರಿಚಯಿಸುತ್ತಿದೆ. ಆ್ಯಂಡ್ರಾಯ್ಡ್​ ಬಳಕೆದಾರರ ವಾಟ್ಸ್ಆ್ಯಪ್​ನ ಈ ಹೋಸ ಫೀಚರನ್ನು ಬಳಕೆ ಬಳಕೆ ಮಾಡಬಹುದಾಗಿದೆ.

ವಾಟ್ಸ್ಆ್ಯಪ್ನಲ್ಲಿ ಈಗಾಗಲೇ ಹಲವು ಇಮೋಜಿಗಳಿವೆ. ಈ ಸಾಲಿಗೆ ಇದೀಗ ಅವತಾರ್ (Avatar) ಸೇರ್ಪಡೆಯಾಗಿದೆ. ಅವತಾರ್​ ಡೌನ್ಲೋಡ್ ಮಾಡಿಕೊಂಡು, ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಫೇಸ್​ಬುಕ್ ಹಾಗೂ ಇನ್​​ಸ್ಟಾಗ್ರಾಂ ಬಳಕೆದಾರರು ಅವತಾರ್ ಎಮೋಜಿಗಳನ್ನು ಬಳಸುತ್ತಿದ್ದಾರೆ. ಇದೀಗ ಈ ಅವತಾರ್ ವಾಟ್ಸ್ಆ್ಯಪ್​ನಲ್ಲೂ ಲಭ್ಯವಾಗುತ್ತಿದೆ.

ವಾಟ್ಸ್ಆ್ಯಪ್ ಬಳಕೆದಾರರು ಸ್ಟಿಕ್ಕರ್ ಬಾಕ್ಸ್​ ಆಯ್ಕೆ ಮಾಡಿಕೊಂಡಾಗ ಎಮೋಜಿಗಳು ಲಭ್ಯವಾಗುತ್ತದೆ. ಇನ್ನು ಮುಂದೆ ಇಮೋಜಿಗಳ ಜೊತೆಗೆ ಅವತಾರ್ ಸ್ಟಿಕ್ಕರ್​ಗಳು ಲಭ್ಯವಾಗಲಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net