

ಪರಿಷ್ಕೃತ ಪ್ರೖೆವೆಸಿ ಪಾಲಿಸಿಯನ್ನು ಪ್ರಕಟಿಸಿರುವ ವಾಟ್ಸ್ಆ್ಯಪ್ಗೆ ದೊಡ್ಡ ಪೆಟ್ಟು ಬಿದ್ದಿದೆ. ಪ್ರತಿಸ್ಪರ್ಧಿ ಆ್ಯಪ್ಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿವೆ. ಹೀಗಾಗಿ, ವಾಟ್ಸ್ಆ್ಯಪ್ ತನ್ನ ನೀತಿಯ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿ ಬಂದಿದೆ. ಸ್ನೇಹಿತರು ಮತ್ತು ಕುಟುಂಬವರ್ಗದವರೊಂದಿಗಿನ ಸಂವಹನ, ಚಾಟ್, ಗ್ರೂಪ್ಗಳ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈಗ ಬಿಜಿನೆಸ್ ಬಳಕೆಯ ವಿಚಾರದಲ್ಲಷ್ಟೇ ನೀತಿ ಬದಲಾಗಿದೆ. ಪರಿಷ್ಕೃತ ನೀತಿ ಅದಕ್ಕೆ ಸಂಬಂಧಿಸಿದ್ದು ಎಂದು ವಾಟ್ಸ್ಆ್ಯಪ್ ಸ್ಪಷ್ಟೀಕರಣ ನೀಡಿದೆ. ಅದರ ಪ್ರಮುಖಾಂಶಗಳು ಹೀಗಿವೆ.
ವಾಟ್ಸ್ಆಪ್ ಬಿಜಿನೆಸ್ ಆಯ್ಕೆ ಮಾಡಿಕೊಂಡವರ ಬಿಜಿನೆಸ್ ಮೆಸೇಜ್ಗಳಿಗೆ ಸಂಬಂಧಿಸಿ ಹೊಸ ಸೇವಾ ನಿಯಮ ಮತ್ತು ಗೌಪ್ಯತೆ ನೀತಿ ಅನುಷ್ಠಾನಗೊಂಡಿದ್ದು, ಅಲ್ಲಿ ವಾಟ್ಸ್ಆಪ್ ಮತ್ತು ಅದರ ಪೇರೆಂಟ್ ಕಂಪನಿ ಫೇಸ್ಬುಕ್ ನಡುವೆ ಆಂತರಿಕ ಹೊಂದಾಣಿಕೆ ಇರುತ್ತದೆ. ಕೆಲ ದೊಡ್ಡ ಉದ್ಯಮಗಳು ತಮ್ಮ ವಾಟ್ಸ್ಆಪ್ ಗ್ರೂಪ್ಗಳ ಸುರಕ್ಷಿತ ಹೋಸ್ಟಿಂಗ್ ಸೇವೆಗಳಿಗೆ ಫೇಸ್ಬುಕ್ ಅನ್ನು ಬಳಸಬೇಕಾಗಬಹುದು. ಫೇಸ್ಬುಕ್ನಲ್ಲಿನ ಜಾಹೀರಾತು ಸೇವೆಗೆ ವಾಟ್ಸ್ಆಪ್ ಬಳಕೆ ಇತ್ಯಾದಿಗಳಿಗೂ ಇದು ಅನ್ವಯವಾಗುತ್ತದೆ. ಈ ಲೇಬಲ್ಗಳು ಈಗಾಗಲೇ ಕಾಣಿಸಿಕೊಳ್ಳತೊಡಗಿವೆ. ಇನ್ಸ್ಟಾಗ್ರಾಂ ಸೇವೆಗಳಲ್ಲೂ ಇದು ಕಾಣಿಸಿದೆ.
ಸರ್ಕಾರ ಪರಿಶೀಲಿಸಲಿದೆ: ಮಾಹಿತಿ-ತಂತ್ರಜ್ಞಾನ ಸಚಿವಾಲಯ ಆಂತರಿಕವಾಗಿ ಫೇಸ್ಬುಕ್ ಮಾಲೀಕತ್ವದ ವಾಟ್ಸ್ ಆಪ್ ನೀತಿಯನ್ನು ಪರಿಶೀಲನೆಗೆ ಒಳಪಡಿಸಿದೆ. ಆದಾಗ್ಯೂ, ಈ ಕುರಿತು ಸ್ಪಷ್ಟೀಕರಣ ನೀಡುವಂತೆ ವಾಟ್ಸ್ಆಪ್ ಅನ್ನು ಸಚಿವಾಲಯ ಇದುವರೆಗೆ ಕೇಳಿಲ್ಲ ಎಂದು ಮೂಲಗಳು ತಿಳಿಸಿವೆ.
ಇದು ಕೂಡ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಆಪ್. ರಷ್ಯನ್ ಸಹೋದರರಾದ ನಿಕೋಲಾಯ್ ಮತ್ತು ಪವೆಲ್ ದುರೋವ್ ಇದರ ಸ್ಥಾಪಕರು. ವಾಟ್ಸ್ಆಪ್ ಮಾದರಿಯ ಅಂಶಗಳನ್ನು ಇದು ಕೂಡ ಹೊಂದಿದೆ. 2013ರಿಂದಲೇ ಚಾಲ್ತಿಯಲ್ಲಿರುವ ಕಾರಣ ಸಿಗ್ನಲ್ಗಿಂತ ಹೆಚ್ಚು ಅಂಶಗಳನ್ನು ಹೊಂದಿದೆ. ಗ್ರೂಪ್ಗಳಲ್ಲಿ 2 ಲಕ್ಷ ಸದಸ್ಯರನ್ನು ಸೇರಿಸಬಹುದು. ವಾಟ್ಸ್ ಆಪ್ನಲ್ಲಿ 257ರ ಮಿತಿ ಇದೆ. ವಾಟ್ಸ್ಆಪ್ನ ಹೊಸ ಸೇವಾ ನಿಯಮ ಮತ್ತು ಗೌಪ್ಯತೆ ನೀತಿ ವಿವಾದವೆಬ್ಬಿಸಿದ ಬೆನ್ನಿಗೆ ಟೆಲಿಗ್ರಾಂ ಬಳಕೆದಾರರ ಸಂಖ್ಯೆ 50 ಕೋಟಿ ಏರಿಕೆಯಾಗಿದೆ. ಕಳೆದ 72 ಗಂಟೆ ಅವಧಿಯಲ್ಲಿ 2.5 ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ.
ವಾಟ್ಸ್ಆಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಇದರ ಸಹಸಂಸ್ಥಾಪಕ. ಸಿಗ್ನಲ್ನಲ್ಲಿ ಬಳಸುತ್ತಿರುವ ಎಂಡ್ ಟು ಎಂಡ್ ಪ್ರೊಟೊಕಾಲ್ ಅನ್ನು ವಾಟ್ಸ್ಆಪ್ ಬಳಸುತ್ತಿದೆ. ವಾಟ್ಸ್ಆಪ್ನಲ್ಲಿರುವ ಅನೇಕ ಅಂಶಗಳು ಇದರಲ್ಲೂ ಇವೆ. ಆದರೆ, ವಿಡಿಯೋ ಕಾಲಿಂಗ್ ಮತ್ತು ಇತರ ಕೆಲವು ಅಂಶಗಳು ಇನ್ನೂ ಬೇಟಾ ಸ್ಥಿತಿಯಲ್ಲಿವೆ. ವಾಟ್ಸ್ಆಪ್ನಲ್ಲಿರುವಂತೆ ತೃತೀಯ ಪಕ್ಷದ ಸೇವೆಗಳಲ್ಲಿ ಅಂದರೆ ಗೂಗಲ್ ಡ್ರೖೆವ್ ಅಥವಾ ಐಕ್ಲೌಡ್ನಲ್ಲಿ ಅಥವಾ ಇತರ ಬಿಜಿನೆಸ್ ಖಾತೆಗಳಿಗೆ ಜೋಡಿಸುವಲ್ಲಿ ಸಿಗ್ನಲ್ ಇನ್ನೂ ಹಿಂದಿದೆ.
ಭಾರತದ ಸ್ಥಿತಿ: ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗುವ ತನಕ ಭಾರತೀಯರಿಗೆ ಸಂಕಷ್ಟ ತಪ್ಪಿದ್ದಲ್ಲ. ಭಾರತದಲ್ಲಿ ಈ ಸಂಬಂಧ ನಿಯಂತ್ರಣ ಪ್ರಾಧಿಕಾರದ ಕೊರತೆ ಇದೆ.