ತಿರುಪತಿ ದೇವಸ್ಥಾನ ಸೇವೆಗೆ ವಾಟ್ಸ್​ಆಪ್ ನೆರವು

8-67f80cf37e33a
Published on

ತಿರುಪತಿ: ಭಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಾಟ್ಸ್​ಆಪ್ ಆಧಾರಿತ ಸೇವೆಗಳಿಗೆ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಚಾಲನೆ ನೀಡಿದೆ.

ಟಿಕೆಟ್ ಕಾಯ್ದಿರಿಸುವಿಕೆ, ವಸತಿ ಮಾಹಿತಿ ಇಂದುಗೊಳಿಸುವಿಕೆ ಮತ್ತು ರಿಯಲ್- ಟೈಮ್ ಮಂದಿರ ಚಟುವಟಿಕೆ ಅಲರ್ಟ್​ಗಳನ್ನು ಹೊಸ ಡಿಜಿಟಲ್ ಉಪಕ್ರಮ ಸರಳಗೊಳಿಸಲಿದೆ.

ದೇವಾಲಯ ಭೇಟಿಯನ್ನು ಸುಗಮಗೊಳಿಸಲು ಹಾಗೂ ಯಾತ್ರಾರ್ಥಿಗಳ ಕಾಯುವಿಕೆ ಸಮಯವನ್ನು ಕನಿಷ್ಠಗೊಳಿಸಲು ಟಿಟಿಡಿ 15 ಪ್ರಮುಖ ಸೇವೆಗಳನ್ನು ವಾಟ್ಸ್​ಆಪ್ ವೇದಿಕೆ ಮೂಲಕ ಸಮಗ್ರಗೊಳಿಸಿದೆ. ಆಂಧ್ರ ಪ್ರದೇಶ ಸರ್ಕಾರದ ನಾಗರಿಕ ಸಹಾಯವಾಣಿ ಸಂಖ್ಯೆ 9552300009 ಫೋನ್​ನಲ್ಲಿ ಸೇವ್ ಮಾಡಿಕೊಂಡು ಸೂಕ್ತ ಪ್ರಕ್ರಿಯೆ ಮೂಲಕ ಟಿಟಿಡಿಯ ವಾಟ್ಸ್​ಆಪ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net