

ನವದೆಹಲಿ: ವಾಟ್ಸ್ಆಪ್ನಲ್ಲಿ ಕಳುಹಿಸಲಾಗಿರುವ ಸಂದೇಶಗಳನ್ನು ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಹೊಸ ಸೌಲಭ್ಯವನ್ನು ವಾಟ್ಸ್ಆಪ್ ಸಂಸ್ಥೆ ಆರಂಭಿಸಿದೆ. ಇ
ದುವರೆಗೆ ವಾಟ್ಸ್ಆಪ್ನಲ್ಲಿ ರವಾನೆಯಾಗಿದ್ದ ಸಂದೇಶವನ್ನು ಬಳಕೆದಾರರೇ ಡಿಲೀಟ್ ಮಾಡಬೇಕಿತ್ತು. ಇದರಿಂದಾಗಿ ಸ್ಟೋರೇಜ್ ತುಂಬಿ, ಸಾಫ್ಟ್ವೇರ್ ನಿಧಾನವಾಗುವ ಸಾಧ್ಯತೆಯಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಹೊಸ ಸೌಲಭ್ಯವನ್ನು ಆರಂಭಿಸಲಾಗಿದೆ. ಡಿಸ್ಅಪೀಯರಿಂಗ್ ಮೆಸೇಜಸ್ ಎನ್ನುವ ಆಯ್ಕೆ ನೀಡಲಾಗಿದ್ದು, ಅದನ್ನು ಆಯ್ಕೆ ಮಾಡಿದವರು ಮೆಸೇಜ್ ಮಾಡಿದ ಏಳು ದಿನಗಳಲ್ಲಿ ಅಳಿಸಿಹೋಗುತ್ತದೆ.
ವ್ಯಕ್ತಿಗತವಾಗಿ ಕಳುಹಿಸಲಾದ ಸಂದೇಶಗಳಿಗೆ ಮಾತ್ರವೇ ಈ ಆಯ್ಕೆ ಇರಲಿದೆ. ಗ್ರೂಪ್ ಚಾಟ್ಗಳಲ್ಲಿ ಅದರ ಅಡ್ಮಿನ್ಗಳು ಈ ಆಯ್ಕೆ ಮೂಲಕ ಗ್ರೂಪಿನಲ್ಲಿ ನಡೆಸಲಾದ ಸಂದೇಶವನ್ನು ಏಳು ದಿನಗಳ ಬಳಿಕ ಅಳಿಸಬಹುದಾಗಿದೆ.