ಎಸ್ಸೆಸ್ಸೆಲ್ಸಿ ಪರೀಕ್ಷಾ ಭಯ ತೊಲಗಿಸಿ, ಹಬ್ಬದಂತೆ ಆಚರಿಸಲು ಇಲಾಖೆ ಮಾಡಿದ ಕೆಲಸವೇನು? ಇಲ್ಲಿದೆ ಮಾಹಿತಿ

CET Results
Published on

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹಬ್ಬದಂತೆ ಆಚರಿಸಲು ಮತ್ತು ಮಕ್ಕಳ್ಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ ಜಿಲ್ಲಾ ಹಂತದಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಲಿತಾಂಶ ವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೈಂಡ್ ಮ್ಯಾಪ್, ಗೆಲುವಿನ ಹೆಜ್ಹೆ ಸೇರಿ ಪ್ರೇರಣಾದಾಯಕ ಕಾರ್ಯಕ್ರಮಗಳು, ಫ್ಲಿಪ್‌ಬುಕ್ ಲಿಂಕ್ ಕಲ್ಪತರು ಪ್ರಶ್ನೆ ಮಾಲಿಕೆ, ಮ್ಯಾತ್ಸ್ ಟಾನಿಕ್, ಪ್ರತಿ ಶುಕ್ರವಾರ ಪಠ್ಯಾಧಾರಿತ ಚಟುವಟಿಕೆಗಳು ಸೇರಿ ಹತ್ತಾರು ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹೇಗೆ ತಯಾರು ಮಾಡಬೇಕು ಎಂಬ ನಿಟ್ಟಿನಲ್ಲಿ ಡಿಎಸ್‌ಇಆರ್‌ಟಿ ವತಿಯಿಂದ ಮಾಹಿತಿಯುಳ್ಳ ಪುಸ್ತಕವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಪುಸ್ತಕದಲ್ಲಿರುವ ಆಯ್ದ ಚಟುವಟಿಕೆಗಳ ಮಾಹಿತಿ ಇಲ್ಲಿದೆ

ಮೈಂಡ್ ಮ್ಯಾಪ್

ಕೋರ್ ವಿಷಯಗಳಲ್ಲಿನ ಪರಿಕ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಂಡು ದೀರ್ಘಕಾಲ ನೆನಪಿನಲ್ಲಿರಿಸಿಕೊಳ್ಳಳು ಅನುಕೂಲವಾಗುವಂತೆ ವಿಷಯ ಪರಿಣಿತರಿಂದ ‘ಮೈಂಡ್ ಮ್ಯಾಪ್’ ಸಿದ್ಧಪಡಿಸಲಾಗಿದೆ.

ಗೆಲುವಿನ ಹೆಜ್ಜೆ ತರಬೇತಿ

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗರಿಷ್ಠ ಅಂಕ ಗಳಿಸಲು ಅನುಕೂಲವಾಗುವಂತೆ 3 ದಿನಗಳ ‘ಗೆಲುವಿನ ಹೆಜ್ಜೆ’ ಎಂಬ ಕಲಿಕಾ ಶಿಬಿರ ಆಯೋಜನೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಅಧ್ಯಯನಶೀಲತೆ ಬೆಳೆಸುವುದು, ಜವಾಬ್ದಾರಿಯಿಂದ ತರಗತಿಯಲ್ಲಿ ವರ್ತಿಸುವುದು, ಅಧ್ಯಯನ, ಪರೀಕ್ಷಾಪೂರ್ವ ಸಿದ್ಧತೆಯ ಶಿಸ್ತನ್ನು ಮೂಡಿಸುವುದು, ನೂರಕ್ಕೆ ನೂರು ಸಾಧಿಸುವ ಸಾತ್ವಿಕ ಹಠ, ಪ್ರಯತ್ನಶೀಲತೆ ಬೆಳೆಸುವುದು

ರಾತ್ರಿ ಶಾಲೆ ನಿರ್ವಹಣೆ

ಉತ್ತಮ ಲಿತಾಂಶದ ಪ್ರಯತ್ನವಾಗಿ ವಿದ್ಯಾರ್ಥಿಗಳ ಸರ್ವಸುರಕ್ಷಾಕ್ರಮಗಳೊಂದಿಗೆ ಜಿಲ್ಲೆಯಲ್ಲಿ ಪಾಲಕರು, ಎಸ್‌ಡಿಎಂಸಿ ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ರಾತ್ರಿ ಶಾಲೆಯನ್ನು ನಡೆಸಲಾಗುತ್ತಿದೆ.

ಸ್ಫೂರ್ತಿ ಚಿಲುಮೆ, ಪ್ರೇರಣಾ ಶಿಬಿರ

ಹಿಂದಿನ ವರ್ಷಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯಿಸಿ ಸಾಧಕರಿಂದ ಸ್ಫೂರ್ತಿಯ ಮಾತುಗಳನ್ನಾಡಿಸುವ ಮೂಲಕ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಾಗುವಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

ತುಮಕೂರಿನಲ್ಲಿ ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ ಅವರಿಂದ 10ನೆ ತರಗತಿ ಮಕ್ಕಳು ಪರೀಕ್ಷಾ ಒತ್ತಡದಿಂದ ಮುಕ್ತರಾಗುವ ಕುರಿತು ಶಿಬಿರ ಆಯೋಜಿಸಲಾಗುತ್ತಿದೆ.

ಪ್ರಾರ್ಥನಾ ಅವಧಿಯಲ್ಲಿ ಪಠ್ಯ ವಿಷಯ ಮಂಡನೆ

ಜೂನ್‌ನಿಂದಲೇ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಪ್ರತಿದಿನ ಒಂದು ವಿಷಯದ ಪ್ರಮುಖಾಂಶವನ್ನು ವಿದ್ಯಾರ್ಥಿಗಳಿಂದಲೇ ಮಂಡನೆ ಮಾಡಿಸಲಾಗುತ್ತಿದೆ. ಈ ಚಟುವಟಿಕೆಯಿಂದ ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಲಿದೆ

ವಾರದಲ್ಲಿ ಒಂದು ದಿನ ರಸಪ್ರಶ್ನೆ

ಪ್ರತಿ ಶಾಲೆಯಲ್ಲಿ ವಾರದಲ್ಲಿ ಒಂದು ದಿನ ಎಲ್ಲ ವಿಷಯಗಳ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ವೇಳಾಪಟ್ಟಿಯನ್ನು ಜಿಲ್ಲಾ ಹಂತದಿಂದ ಸಿದ್ಧಪಡಿಸಿ ನೀಡಲಾಗಿದೆ.

ಫ್ಲಿಪ್‌ಬುಕ್ ಲಿಂಕ್ ಕಲ್ಪತರು ಪ್ರಶ್ನೆ ಮಾಲಿಕೆ

ಪ್ರತಿ ದಿನ 6 ವಿಷಯಗಳ ಒಂದೊಂದು ಪ್ರಶ್ನೆ/ಉತ್ತರವನ್ನು ವಾಟ್ಸಾಪ್ ಮೂಲಕ ‘ಫ್ಲಿಪ್ ಬುಕ್ ಲಿಂಕ್’ ಅನ್ನು ಶಾಲೆಗಳಿಗೆ ಕಳುಹಿಸಿ ವಿದ್ಯಾರ್ಥಿಗಳು ಪ್ರಾರ್ಥನಾ ಸಮಯದಲ್ಲಿ ಹಾಗೂ ತರಗತಿಯಲ್ಲಿ ಅಭ್ಯಾಸ ಮಾಡಿಸುವ ಮೂಲಕ ಲಿತಾಂಶ ವೃದ್ಧಿಗೆ ಕ್ರಮ. ನಿಧಾನತಿಯ ಕಲಿಕೆ ಮಕ್ಕಳಿಗೆ ಹಂತ-1 ಮತ್ತು ಉತ್ತಮ ಕಲಿಕೆ ಇರುವವರಿಗೆ ಕಲಿಕೆ-2ರಲ್ಲಿ ಪ್ರಶ್ನೋತ್ತರ ನೀಡಲಾಗುತ್ತಿದೆ.

ಮ್ಯಾತ್ಸ್ ಟಾನಿಕ್

ಒಂದು ಅವಧಿಯಲ್ಲಿ ನಿರ್ವಹಿಸದ ಗಣಿತ ಕಲಿಕೆಗೆ ಸಂಬಂಧಿಸಿದಂತೆ ಆ ದಿನವೇ ಕಿರು ಪರೀಕ್ಷೆ ನಡೆಸುವುದು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ಸರಳವಾಗಿರುತ್ತದೆ. ಈ ಮಾದರಿಯನ್ನು ಎಲ್ಲ ವಿಷಯಗಳಿಗೂ ವಿಸ್ತರಣೆ.

ಬಡ್ಡಿ ಪೇರಿಂಗ್

ನಿಧಾನಗತಿಯ ಕಲಿಕಾ ಲಕ್ಷಣಗಳಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸಲು ‘ಬಡ್ಡಿ ಪೇರಿಂಗ್’ ಕಾರ್ಯಕ್ರಮ ಆಯೋಜನೆ.

ತೆರೆದ ಪುಸ್ತಕ ಪರೀಕ್ಷೆ

ವಿಜಯನಗರ ಜಿಲ್ಲೆಯಲ್ಲಿ ಕಿರು ಪರೀಕ್ಷೆಗಳನ್ನು ತೆರೆದ ಪುಸ್ತಕ ಮಾದರಿಯಲ್ಲಿ ನಡೆಸಲಾಗುತ್ತಿದೆ. ಮಗುವೇ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿಕೊಂಡು ಬರೆಯುವುದು. ಸರಣಿ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆ ಲಿತಾಂಶ ವಿಶ್ಲೇಷಿಸುವುದು.

ದಿನಕ್ಕೊಂದು ಸಾಮರ್ಥ್ಯ ರೂಢಿ

ವರ್ಷದ ಆರಂಭದಲಿಂದಲೇ ಪ್ರತಿದಿನ ಒಂದೊಂದು ಸಾಮರ್ಥ್ಯ ರೂಢಿಸುವುದು. ಸೋಮವಾರ ಪದ್ಯ, ಮಂಗಳವಾರ ಕವಿ/ಲೆಖಕರ ಪರಿಚಯ, ಬುಏಧವಾರ ಗಾದೆ ವಿಸ್ತರಣೆ, ಗುರುವಾರ-ಪತ್ರಲೇಖನ, ಶುಕ್ರವಾರ-ಪ್ರಬಂಧ ಬರಹ, ಶನಿವಾರ-ಸಂದರ್ಭ ಸೃಷ್ಟೀಕರಣ, ಭಾನುವಾರ- ಒಂದು, ಎರಡು ಅಂಕದ ಪ್ರಶ್ನೋತ್ತರ

ಬಾನುಲಿ ಪಾಠದ ವರದಿ, ೆನ್ ಇನ್

ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಎಲ್ಲ ಶಾಲೆಗಳಲ್ಲಿಯೂ ‘ಬಾನುಲಿ ಪಾಠ’ದ ಪ್ರಸಾರ ಮಾಡಲಾಗಿದೆ. ಪ್ರಸಾರದ ನಂತರ ಪಾಠದ ಬಗ್ಗೆ ಚರ್ಚಿಸಿ ವಿದ್ಯಾರ್ಥಿಗಳಲ್ಲಿ ಪರಿಕಲ್ಪನೆಗಳನ್ನು ಗಟ್ಟಿಗೊಳಿಸುವಲ್ಲಿ ಶಿಕ್ಷಕರ ಶ್ರಮವಹಿಸುತ್ತಿದ್ದಾರೆ.

ಪರೀಕ್ಷೆ ಭಯ ನಿವಾರನೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವಿಷಯವಾರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ೆನ್ ಇನ್ ಕಾರ್ಯಕ್ರಮ ಪ್ರಸಾರ.

ಜ್ಞಾನ ಸಿಂಚನ ಆನ್‌ಲೈನ್ ಕಾರ್ಯಕ್ರಮ

ಜಿಲ್ಲೆಯ 49 ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಗಳ 1,470 ವಿದ್ಯಾರ್ಥಿಗಳಿಗೆ ಸಂಜೆ 6ರಿಂದ 7ಗಂಟೆಯವರೆಗೆ ‘ಜ್ಞಾನ ಸಿಂಚನ’ ಎಂಬ ಆನ್‌ಲೈನ್ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ.

ಆಕ್ಷನ್ ಪ್ಲಾನ್ ಜೀರೋ ಟು ಹೀರೋ

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸುಲಭವಾದ ಪ್ರಶ್ನೆಗಳ ಮೂಲಕ ಆರಂಭಿಸಿ ಮಕ್ಕಳಲ್ಲಿ ವಿಶ್ವಾಸ ಮೂಡಿಸಿ ನಂತರ ಕಠಿಣವಾದ ಪ್ರಶ್ನೆಗಳನ್ನು ನೀಡಿ ಪರೀಕ್ಷೆಗೆ ಅಣಿಗೊಳಿಸುವುದು.

ಕ್ವಿಜ್ ಗೇಮ್ ಸ್‌ಟಾವೇರ್

ಈ ಗೇಮ್ ಅನ್ನು ಎಲ್ಲ ವಿದ್ಯಾರ್ಥಿಗಳು 5 ತಂಡಗಳಾಗಿ ವಿಂಗಡಿಸಿ ಒಂದು ತಂಡಕ್ಕೆ ಒಂದು ಪ್ರಶ್ನೆ ಅಥವಾ ಎಲ್ಲ ತಂಡಗಳಿಗೆ ಒಂದು ಪ್ರಶ್ನೆಯಾಗಿ ಆಡಬಹುದು. ದೃಶ್ಯ ಶ್ರವಣ ಮತ್ತು ಗುಂಪು ಕಲಿಕೆಯಿಂದ ಮಕ್ಕಳು ಆಡುವುದರ ಮೂಲಕ ಪರಿಣಾಮಕಾರಿ ಕಲಿಕೆ ಉಂಟಾಗುತ್ತದೆ. ಎಂಸಿಕ್ಯು, ಕಿರು ಪ್ರಶ್ನೆಗಳು, ದೀರ್ಘ ಉತ್ತರಿಸುವ ಪ್ರಶ್ನೆಗಳು ಎಂದು ವಿಂಗಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net