ಆಗಬೇಕಿದೆ ಅನಂತಮೂರ್ತಿ, ಕಾರಂತರ ಜೀವಂತವಾಗಿಡುವ ಕೆಲಸ

book realesed
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಅನಂತಮೂರ್ತಿ ಅವರ ಕಥನ ಸಾಹಿತ್ಯದಲ್ಲಿ ಪೂರ್ವ ಪಶ್ಚಿಮ ಚಿಂತನೆಗಳು ಮತ್ತು ಕಾರಂತರ ಕಾದಂಬರಿಗಳಲ್ಲಿ ಸ್ಥಳೀಯತೆ ಕೃತಿಯನ್ನು ಲೇಖಕಿ ಎಸ್ತರ್ ಅನಂತಮೂರ್ತಿ ಬಿಡುಗಡೆಗೊಳಿಸಿದರು. ಕೆ.ಕೇಶವಶರ್ಮ, ಡಾ. ತಾರಿಣಿ ಶುಭದಾಯಿನಿ, ಕೆ.ಲಕ್ಷ್ಮೀನಾರಾಯಣ್‌ರಾವ್, ಬಿ.ಎನ್.ಸುನಿಲ್ಕುಮಾರ್ ಇದ್ದರು.
Published on

ಶಿವಮೊಗ್ಗ: ಕನ್ನಡ ನಾಡಿನ ಸಾರಸ್ವತ ಸಾಹಿತ್ಯದ ಲೋಕದ ದಿಗ್ಗಜರಾಗಿರುವ ಯು.ಆರ್.ಅನಂತಮೂರ್ತಿ ಮತ್ತು ಬಿ.ವಿ.ಕಾರಂತರನ್ನು ಜೀವಂತವಾಗಿಡುವ ಕೆಲಸ ಎಂದು ಲೇಖಕಿ ಎಸ್ತರ್ ಅನಂತಮೂರ್ತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಶಿಕಾರಿಪುರದ ಸುದ್ದಿ ಪಬ್ಲಿಕೇಶನ್ಸ್ ಮತ್ತು ಜನಸ್ಪಂದನ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾ ಸಾಹಿತ್ಯ ಸಮುದಾಯ ವೇದಿಕೆಯಿಂದ ಸಾಹಿತಿ ಕೆ.ಕೇಶವಶರ್ಮ ಅವರ ಅನಂತಮೂರ್ತಿ ಅವರ ಕಥನ ಸಾಹಿತ್ಯದಲ್ಲಿ ಪೂರ್ವ ಪಶ್ಚಿಮ ಚಿಂತನೆಗಳು ಮತ್ತು ಕಾರಂತರ ಕಾದಂಬರಿಗಳಲ್ಲಿ ಸ್ಥಳೀಯತೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಅನಂತಮೂರ್ತಿ ಮತ್ತು ಕಾರಂತರ ಪರಿಚಯ ಇಲ್ಲ. ಅವರಿಬ್ಬರೂ ಯಾರು ಎಂಬ ಪ್ರಶ್ನೆಯೇ ಹಲವರಲ್ಲಿ ಮೂಡುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಕೃತಿಕಾರ ಕೆ.ಕೇಶವಶರ್ಮ ಮಾತನಾಡಿ, ಸಾಮಾನ್ಯವಾಗಿ ಅಪ್ರಪ್ರಚಾರಗಳು ವೇಗವಾಗಿ ಹರಡುತ್ತವೆ. ಸಾಹಿತ್ಯ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಕನ್ನಡ ಸಾಹಿತ್ಯದಲ್ಲಿ ಓದುವ ಸಂಸ್ಕೃತಿ ಕಡಿಮೆ ಆಗುತ್ತಿದೆ. ಆ ಕಾರಣಕ್ಕೆ ಕನ್ನಡ ಸಾಹಿತ್ಯ ಕ್ಷೇತ್ರವು ವಿಷಾದದ ಸ್ಥಿತಿಯಲ್ಲಿದೆ. 15-20 ವರ್ಷದ ಹಿಂದೆ ಈ ರೀತಿ ಪರಿಸ್ಥಿತಿ ಇರಲಿಲ್ಲ. ಅನಂತಮೂರ್ತಿ, ಲಂಕೇಶ್, ತೇಜಸ್ವಿ ಅವರು ಬರೆಯುತ್ತಿದ್ದ ಕಾಲ ಅದ್ಬುತವಾಗಿತ್ತು. ಲೇಖನ ಬರೆಯದ ಕಠೋರವಾದ ಪರಿಸ್ಥಿತಿ ಇತ್ತು. ಸುಳ್ಳು ಕೇಸ್ ದಾಖಲಿಸಿ ಜೈಲಿಗೂ ಹಾಕುತ್ತಿದ್ದರು. ಅಂತಹ ಸಂದಿಗ್ದತೆಯಲ್ಲೂ ಅನಂತಮೂರ್ತಿ ಅವರು ಲೇಖನ ಬರೆಯುತ್ತಿದ್ದರು ಎಂದರು.
ಪುಸ್ತಕಗಳ ಬಗ್ಗೆ ಮಾತನಾಡಿದ ವಿಮರ್ಶಕಿ ಡಾ. ತಾರಿಣಿ ಶುಭದಾಯಿನಿ, ದೃಷ್ಟಿಕೋನ ಸಾಹಿತ್ಯದಲ್ಲೂ, ಸೃಜನಶೀಲತೆಯಲ್ಲೂ ಪರಿಭಾಷೆ ಕೊರತೆಯನ್ನು ಕಾಣಬಹುದು. ಚರಿತ್ರೆ, ಸಾಹಿತ್ಯ, ಸಂಸ್ಕೃತಿಯನ್ನು ಲೇಖಕರು ಎರಡೂ ಪುಸ್ತಕಗಳಲ್ಲಿ ಪರಿಚಯಿಸಿದ್ದಾರೆ. ವಿಕಲ್ಪಗಳನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಬೌತಿಕವಾಗಿ ಹೊರಗಿನ ಪ್ರಪಂಚವನ್ನು ಪರಿಚಯಿಸಿದ್ದಾರೆ ಎಂದರು. ಕಡೇಕೊಪ್ಪಳ ಪ್ರತಿಷ್ಠಾನ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ್‌ರಾವ್, ಪ್ರಕಾಶಕ ಬಿ.ಎನ್.ಸುನಿಲ್ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net