

ಜಿಲ್ಲೆಗೆ ಮೆಡಿಕಲ್ ಕಾಲೇಜು, ರಿಂಗ್ ರೋಡ್, ಎತ್ತಿನ ಹೊಳೆ ಯೋಜನೆ, ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು, ಎಪಿಎಂಸಿಗೆ ಜಾಗ ಕಲ್ಪಿಸುವ ಸಂಬಂಧ ಈಗಾಗಲೇ ಶಾಸಕ ಕೊತ್ತೂರು ಮಂಜುನಾಥ್, ನಾನು ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಎಂ.ಎಲ್.ಅನಿಲ್‌ಕುಮಾರ್ ವಿಧಾನ ಪರಿಷತ್ ಸದಸ್ಯ, ಕೋಲಾರ ಕೋಲಾರವನ್ನು ಸ್ವಾವಲಂಬಿ ಜಿಲ್ಲೆಯನ್ನಾಗಿಸಲು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಆದ್ಯತೆ ಮೇರೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಪಿಎಂಸಿಗೆ ಹೆಚ್ಚುವರಿ ಜಾಗ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಸಿಎಂಆರ್ ಶ್ರೀನಾಥ್ ಮಂಡಿ ಮಾಲೀಕ, ಕೋಲಾರ