ನಾನು ಹೇಳಿದ ಆ ಒಂದು ಕೆಲಸ ಮಾಡಿದ್ರೆ ಬಿಟ್ಟುಬಿಡ್ತೇನೆ; ಸಲ್ಮಾನ್​ ಖಾನ್​ಗೆ ಓಪನ್​ ಆಫರ್​ ಕೊಟ್ಟ Lawrence Bishnoi

Salman Bishnoi
Published on

ಮುಂಬೈ: ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ಕಿ (Baba Siddique) ಅವರನ್ನು ಹತ್ಯೆ ಮಾಡುವ ಮೂಲಕ ರಾಷ್ಟ್ರವ್ಯಾಪಿ ತೀವ್ರ ಸಂಚಲನವನ್ನು ಹುಟ್ಟು ಹಾಕಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಬಾಲಿವುಡ್​ ನಟ ಸಲ್ಮಾನ್​ ಖಾನ್​ (Salman Khan) ಅವರನ್ನು ಹತ್ಯೆ ಮಾಡುವುದೇ ಈತನ ಪರಗುರಿಯಾಗಿದ್ದು, ಸಲ್ಲುಗೆ ಹತ್ತಿರವಿರುವವರನ್ನು ಮುಗಿಸುವುದಾಗಿ ಜೈಲಿನಿಂದಲೇ ಬೆದರಿಕೆ ಹಾಕಿದ್ದಾನೆ. ಜೈಲಿನಲ್ಲಿದ್ದುಕೊಂಡೆ ಈತ ಎಲ್ಲವನ್ನೂ ಆಪರೇಟ್​ ಮಾಡುತ್ತಿದ್ದು, ಕಾನೂನು-ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸಲು ಶುರುವಾಗಿದೆ. ಇದೆಲ್ಲದರ ನಡುವೆ ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಸಲ್ಮಾನ್​ ಖಾನ್​ಗೆ (Salman Khan) ಆಫರ್​ ಒಂದನ್ನು ನೀಡಿದ್ದು, ಈ ಅಂಶ ಎಲ್ಲರ ಗಮನ ಸೆಳೆಯುತ್ತಿದೆ.

ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಕೆಲವು ವರ್ಷಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಗೆ ಗುಜರಾತ್​ನ ಸಬರಮತಿ ಕಾರಾಗೃಹದಲ್ಲಿದ್ದುಕೊಂಡೆ ಸಂದರ್ಶನ (Interview) ಒಂದನ್ನು ನೀಡಿದ್ದ. ಈ ಸಂದರ್ಶನದಲ್ಲಿ ಆತ ಸಲ್ಮಾನ್​​ ಖಾನ್​ಗೆ (Salman Khan) ತಾನು ಹೇಳಿದ ಆ ಒಂದು ಕೆಲಸ ಮಾಡಿದ್ರೆ ಜೀವಂತೆ ಬಿಟ್ಟುಬಿಡುವುದಾಗಿ ಹೇಳಿದ್ದಾನೆ. ಈ ಸುದ್ದಿ ಇದೀಗ ಮುನ್ನೆಲೆಗೆ ಬಂದಿದ್ದು, ನೆಟ್ಟಿಗರು ಸಲ್ಮಾನ್​ ಖಾನ್​ಗೆ (Salman Khan) ಅದನ್ನು ಪಾಲಿಸುವಂತೆ ಸಲಹೆ ನೀಡುತ್ತಿದ್ದಾರೆ.

ಸಲ್ಮಾನ್ ಖಾನ್ (Salman Khan) ಅನ್ನು ಕೊಲ್ಲುವುದೇ ನನ್ನ ಜೀವನದ ಗುರಿ ಎಂದು ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಹೇಳುತ್ತಾನೆ. ಇದಕ್ಕೆ ಪ್ರತಿಯಾಗಿ ಅವರನ್ನು ಕೊಲ್ಲದೇ ಇರಬೇಕೆಂದರೆ ಸಲ್ಮಾನ್ ಖಾನ್ (Salman Khan) ಏನು ಮಾಡಬೇಕು ಎಂದು ನಿರೂಪಕರು (Anchor) ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ನಮ್ಮ ಬಿಷ್ಣೋಯಿಗಳ ದೇವಾಲಯ ಮುಕ್ತಿಧಾಮ ಮುಕಾಮ್ ರಾಜಸ್ಥಾನದ ಬಿಕಾನೆರ್ (Rajasthan Bikaner) ಜಿಲ್ಲೆಯ ನೋಕಾತಾಲ್ಲೂಕಿನಲ್ಲಿದೆ, ಅಲ್ಲಿಗೆ ಹೋಗಿ ಕ್ಷಮೆ ಕೇಳಿ ಬಿಡಲಿ ಸಾಕು. ನನ್ನಿಂದ ತಪ್ಪಾಗಿದೆ, ಆಗದೆಯೂ ಇರಬಹುದು ಆದರೆ ಆರೋಪ ಬಂದಿದೆ. ನನ್ನಿಂದ ಈ ಸಮುದಾಯದ ಮನೋಭಾವನೆಗೆ ಧಕ್ಕೆ ಬಂದಿದೆ ಹಾಗಾಗಿ ಕ್ಷಮೆ ಕೇಳುತ್ತೇನೆ ಎಂದು ಆ ದೇವಸ್ಥಾನದಲ್ಲಿ ನಿಂತು ಹೇಳಲಿ ಸಾಕು, ನಾನು ಆತನನ್ನು ಬಿಟ್ಟುಬಿಡುತ್ತೇನೆ. ಆತನನ್ನು ಕೊಲ್ಲುವ ಪ್ರಯತ್ನ ಮಾಡುವುದಿಲ್ಲ ಎಂದು ಸಂದರ್ಶನದಲ್ಲಿ (Interview) ಹೇಳಿದ್ದಾನೆ.

Salman Bishnoi

1998ರಲ್ಲಿ ಸಲ್ಮಾನ್​ ಖಾನ್​ (Salman Khan) ನಟನೆಯ ಹಮ್‌ ಸಾಥ್‌ ಸಾಥ್‌ ಹೈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಕೃಷ್ಣಮೃಗವನ್ನು (Deer) ಬೇಟೆಯಾಡಿದ್ದರು ಎಂಬ ಆರೋಪಿ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್​ ಖಾನ್​ (Salman Khan) 2016ರಲ್ಲಿ ಖುಲಾಸೆಗೊಂಡಿದ್ದರು. ಇದೆಲ್ಲದರ ಹೊರತಾಗಿಯೂ ಬಿಷ್ಣೋಯ್​ ಗ್ಯಾಂಗ್​ (lawrence Bishnoi) ಸಲ್ಲು ಹತ್ಯೆಗೆ ಸಂಚು ಹಾಕಿ ಕುಳಿತಿದ್ದು, ಇದಕ್ಕೆ ಕಾರಣವನ್ನು ಸಹ ನೀಡಲಾಗಿದೆ.

ಬಿಷ್ಣೋಯ್​ (lawrence Bishnoi) ಪ್ರತಿನಿಧಿಸುವ ಬುಡಕಟ್ಟು ಸಮುದಾಯವು ಪವಿತ್ರ ಪ್ರಾಣಿ ಎಂದೇ ಪೂಜಿಸುವ ಕೃಷ್ಣಮೃಗವನ್ನು (Deer) ಕೊಂದ ಸಲ್ಮಾನ್‌ ಖಾನ್‌ (Salman Khan) ಅವರನ್ನು ಮುಗಿಸುವುದು ಲಾರೆನ್ಸ್‌ ಬಿಷ್ಣೋಯಿ ಗುರಿಯಾಗಿದೆ. ಅನೇಕ ಸಂದರ್ಶನದಲ್ಲಿ ಈ ವಿಚಾರವನ್ನು ಕುಖ್ಯಾತ ಗ್ಯಾಂಗ್​ಸ್ಟರ್​ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಇದಲ್ಲದೆ ಈತ ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನು ಆಪರೇಟ್​ ಮಾಡುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net