

Nita Ambani : ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ಕುಟುಂಬ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಸಾಮಾನ್ಯ ಜನರು ಯಾವಾಗಲೂ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಅವರು ಬಳಸುವ ಪ್ರತಿಯೊಂದು ವಸ್ತುಗಳು ಹಾಗೂ ಅವರಿಷ್ಟದ ತಿನಿಸುಗಳು ಸೇರಿದಂತೆ ಪ್ರತಿಯೊಂದು ವಿಷಯವನ್ನು ತಿಳಿಯಲು ಬಯಸುತ್ತಾರೆ. ಏಕೆಂದರೆ, ಐಷಾರಾಮಿ ಜೀವನಕ್ಕೆ ಇನ್ನೊಂದು ಹೆಸರೇ ಅಂಬಾನಿ ಕುಟುಂಬ.
ಅಂದಹಾಗೆ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ರಿಲಯನ್ಸ್ ಅಧ್ಯಕ್ಷರಾಗಿದ್ದಾರೆ. ಐಷಾರಾಮಿ ಜೀವನಶೈಲಿಯಿಂದಲೇ ನೀತಾ ಅಂಬಾನಿ ಸದಾ ಸುದ್ದಿಯಲ್ಲಿರುತ್ತಾರೆ. ನೀತಾ ಅವರು ಪ್ರತಿದಿನ ಬಳಸುವ ಪ್ರತಿಯೊಂದು ವಸ್ತುವೂ ದುಬಾರಿ. ಇತ್ತೀಚೆಗೆ ನೀತಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಕುಟುಂಬಕ್ಕೆ ಇಷ್ಟವಾದ ಸ್ಥಳದ ಬಗ್ಗೆ ತಿಳಿಸಿದ್ದಾರೆ.
ಜಾಮ್‌ನಗರ ನಮ್ಮ ಕುಟುಂಬದ ನೆಚ್ಚಿನ ಸ್ಥಳವಾಗಿದೆ. ಇದು ನಮ್ಮ ಕನಸಿನ ಸ್ಥಳವಾಗಿದೆ. ಇಲ್ಲಿ ಮಾನವನ ಕಲ್ಪನೆ ಮತ್ತು ಪ್ರಕೃತಿ ಎರಡೂ ಒಟ್ಟಿಗೆ ಸೇರುತ್ತದೆ. ಅಂಬಾನಿ ಕುಟುಂಬದ ಪರಂಪರೆಯಲ್ಲಿ ಜಾಮ್‌ನಗರಕ್ಕೆ ವಿಶೇಷ ಸ್ಥಾನವಿದೆ. ರಿಲಯನ್ಸ್‌ನ ಪ್ರಮುಖ ಸಂಸ್ಕರಣಾಗಾರ ಯೋಜನೆಯನ್ನು ಜಾಮ್‌ನಗರದಲ್ಲಿ ಜಾರಿಗೊಳಿಸಲಾಗಿದೆ. ಜಾಮ್‌ನಗರದ ಬಗ್ಗೆ ತಮ್ಮ ಕುಟುಂಬಕ್ಕೆ ವಿಶೇಷ ಪ್ರೀತಿ ಇದೆ ಎಂದು ನೀತಾ ಅಂಬಾನಿ ಈ ಹಿಂದೆ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನನ್ನ ಕಿರಿಯ ಮಗ ಆನಂದ್ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ವಿಚಾರಕ್ಕೆ ಬಂದಾಗ ನನಗೆ ಒಂದು ಆಸೆ ಇತ್ತು. ಅದು ಜಾಮ್‌ನಗರದಲ್ಲಿ ನಡೆಯಬೇಕೆಂಬ ಆಸೆ ಇತ್ತು. ಹೀಗಾಗಿ ಅಲ್ಲಿಯೇ ವಿವಾಹ ಕಾರ್ಯವನ್ನು ಅದ್ಧೂರಿಯಾಗಿ ಮಾಡಿದೆವು. ಜಾಮ್‌ನಗರ ಯಾವಾಗಲೂ ನಮಗೆ ವಿಶೇಷ ಸ್ಥಳವಾಗಿದೆ. ನಾವು ಗುಜರಾತ್‌ನಿಂದ ಬಂದಿದ್ದೇವೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. (ಏಜೆನ್ಸೀಸ್)