ಕರೊನಾ ಸಾವಿನ ನೈಜ ಪ್ರಮಾಣ ಎಷ್ಟು?

covid-fatality
Published on

ವಿಶ್ವ ಆರೋಗ್ಯ ಸಂಸ್ಥೆ ಡೇಟಾ ಪ್ರಕಾರ ಭಾರತ ದಲ್ಲಿ 2020&2021ರಲ್ಲಿ 47 ಲಕ್ಷ ಸಾವು ಸಂಭವಿಸಿದೆ. ಇದು ಜಗತ್ತಿನ ಬೇರಾವುದೇ ದೇಶಕ್ಕೆ ಹೋಲಿಸಿದರೆ ಗರಿಷ್ಠ ಪ್ರಮಾಣದ್ದು. ಆದರೆ ಇತರ ದೇಶಗಳ ಜನಸಂಖ್ಯೆ ಮತ್ತು ಸಾವಿನ ಸಂಖ್ಯೆಯ ಅನುಪಾತದ ತುಲನೆ ಮಾಡಿದರೆ ಭಾರತದ ನಿರ್ವಹಣೆ ಉತ್ತಮವಾಗಿದೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ 47.4 ಲಕ್ಷ ದೊಡ್ಡ ಸಂಖ್ಯೆ ಅಲ್ಲ. ಇದು ಮಧ್ಯಮ ಪ್ರಮಾಣ ಎಂದು ಪರಿಣತರು ಹೇಳಿದ್ದಾರೆ.

ಪೆರು ಗರಿಷ್ಠ ಸಂಖ್ಯೆ

10 ಕೋಟಿ ಜನಸಂಖ್ಯೆಗಿಂತ ಹೆಚ್ಚಿರುವ ರಾಷ್ಟ್ರಗಳಲ್ಲಿ ಈ ಅವಧಿಯಲ್ಲಿ ಸಂಭವಿಸಿದ ಸಾವಿನ ಲೆಕ್ಕ ನೋಡಿದರೆ ಪೆರುವಿನಲ್ಲಿ ಗರಿಷ್ಠ ಪ್ರಮಾಣ ಗೋಚರಿಸಿದೆ. ಇಲ್ಲಿ ಲಕ್ಷ ಜನಸಂಖ್ಯೆಗೆ 437 ಸಾವು ಸಂಭವಿಸಿದೆ. ಭಾರತದಲ್ಲಿ ಲಕ್ಷ ಜನಸಂಖ್ಯೆಗೆ 171 ಸಾವು ಸಂಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರ ಪ್ರಕಾರವೇ ಬ್ರೆಜಿಲ್​ನಲ್ಲಿ ಲಕ್ಷ ಜನಸಂಖ್ಯೆಗೆ 160 ಸಾವು ಸಂಭವಿಸಿದ್ದು. ಇದಕ್ಕಿಂತ ಭಾರತದ್ದು ತುಸು ಹೆಚ್ಚು. ರಷ್ಯಾದ ಸಾವಿನ ಸಂಖ್ಯೆ ಲಕ್ಷಕ್ಕೆ 367 ಇದೆ. ದಣ ಆಫ್ರಿಕಾ ಮತ್ತು ಇಂಡೋನೇಷ್ಯಾಕ್ಕಿಂತ ಭಾರತದಲ್ಲಿ ಸಾವು ಕಡಿಮೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net