

ಮುಂದುವರಿದ ಭಾಗ..
ಹಾಲುಣಿಸುವ ಎಲ್ಲ ಪ್ರಾಣಿಗಳನ್ನು ಸಸ್ತನಿ ಎಂದು ಕರೆಯಲಾಗುತ್ತದೆ. ನೀರಾನೆಯೂ ಸಸ್ತನಿ, ಇದು ತಿಮಿಂಗಿಲಗಳಿಗೆ ಹತ್ತಿರದ ಸೋದರ ಸಂಬಂಧಿ. ಹಂದಿ ಗಾತ್ರದ ಜೀವಿಯಿಂದ ವಿಕಾಸವಾಗಿ 6 ಕೋಟಿ ವರ್ಷವಾಗಿದೆ. ಸಸ್ಯಾಹಾರಿ ನೀರಾನೆ ಮತ್ತು ಮಾಂಸಾಹಾರಿ ಮೊಸಳೆ ಒಟ್ಟಿಗೆ ಜೀವಿಸುವ ಶತ್ರುಗಳು. ಇವೆರಡರ ಮಧ್ಯೆ ಪ್ರಕೃತಿಯ ಸಂಬಂಧ, ಹೊಂದಾಣಿಕೆಯಿದ್ದರೂ, ಬಹಳ ವ್ಯತ್ಯಾಸಗಳೂ ಇವೆ. ಇವರೆಡೂ ವಾಸಿಸುವ ಕೆರೆ, ನದಿ ಮತ್ತು ಸಮೀಪದ ಅರಣ್ಯದ ಜೀವವೈವಿಧ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮೊಸಳೆಯ ರೀತಿ ನೀರಾನೆಯೂ ಕೂಡ ದಿನದ 16 ಗಂಟೆ ನೀರಿನಲ್ಲಿ ಕಳೆಯುತ್ತದೆ. ಆದರೂ ಇದಕ್ಕೆ ಈಜಲು ಬರುವುದಿಲ್ಲ. ಇದನ್ನು ಉಭಯಜೀವಿ ಅಂತಲೂ ಕರೆಯಬಹುದು. ಇವುಗಳು ಆನೆಯ ರೀತಿ ಕುಟುಂಬ ಪ್ರೇಮಿ ಜೀವಿ. ಒಂದು ಕುಟುಂಬದ ಸದಸ್ಯರು ಗುಂಪಿನಲ್ಲಿ ಒಟ್ಟಾಗಿ ಜೀವಿಸುತ್ತವೆ.
ಇವುಗಳು 2 ವರ್ಷಕ್ಕೊಮ್ಮೆ ಒಂದೇ ಮರಿಗೆ ನೀರಿನಲ್ಲಿ ಜನ್ಮಕೊಡುತ್ತವೆ. ಗರ್ಭವತಿಯಾಗಿ ಹೆರಿಗೆಯ ಸಮಯ ಬಂದಾಗ ಸ್ವಲ್ಪ ಉಗ್ರವಾಗಿ ವರ್ತಿಸುತ್ತವೆ. ಬೇರೆ ನೀರಾನೆಗಳನ್ನು ಹತ್ತಿರ ಸೇರಿಸುವುದಿಲ್ಲ ಮತ್ತು ಬೇರೆಲ್ಲ ಪ್ರಾಣಿಗಳಿಂದ ಸ್ವಲ್ಪ ದೂರ ಹೋಗಿ ಮರಿಗೆ ನೀರಿನೊಳಗೆ ಜನ್ಮಕೊಡುತ್ತದೆ. ನೀರಾನೆಗಳಿಗೆ ವರ್ಣತಂತುಗಳು ಇರುವುದರಿಂದ ಹುಟ್ಟುವ ಮರಿಯ ಲಿಂಗ ಗರ್ಭದಲ್ಲಿಯೇ ನಿರ್ಧಾರವಾಗುತ್ತದೆ.