More

    68 ಹಲ್ಲುಗಳಿದ್ದರೂ ಮಾಂಸ ಜಗಿಯಲಾಗದ ಮೊಸಳೆ! ಕಾರಣ ಏನು ಗೊತ್ತಾ?

    ಮುಂದುವರಿದ ಭಾಗ…

    68 ಹಲ್ಲುಗಳಿದ್ದರೂ ಮಾಂಸ ಜಗಿಯಲಾಗದ ಮೊಸಳೆ! ಕಾರಣ ಏನು ಗೊತ್ತಾ?ನೀರಿಗೆ ಬಂದ ಮರಿಗಳನ್ನು ಹೆಚ್ಚಿನ ಪಕ್ಷ ಬೇರೆ ದೊಡ್ಡ ಮೊಸಳೆಗಳು, ಪಕ್ಷಿಗಳು, ಮೀನುಗಳು, ದೊಡ್ಡ ಆಮೆಗಳು, ಸೀಳು ನಾಯಿಗಳು, ಸಿಂಹ ಮತ್ತು ಇತರ ಮಾಂಸಾಹಾರಿಗಳು ತಿನ್ನುತ್ತವೆ. ಆದ್ದರಿಂದ ತಾಯಿ ಮೊಸಳೆ ಇಟ್ಟ ನೂರು ಮೊಟ್ಟೆಗಳಲ್ಲಿ ಕೇವಲ 2% ಮಾತ್ರ ದೊಡ್ಡವಾಗಿ ಬೆಳೆದು ಅದರ ವಂಶವನ್ನು ಬೆಳೆಸುತ್ತವೆ. ಅವುಗಳು ದೊಡ್ಡವಾದ ಮೇಲೆ ಅವುಗಳ ಸಹಜ ಶತ್ರು ಎಂದರೆ ಮನುಷ್ಯ ಮತ್ತು ಬೇರೆ ದೊಡ್ಡ ಮೊಸಳೆಗಳು.

    ಯಾವುದೇ ವ್ಯಕ್ತಿ ಅಥವಾ ಪ್ರಾಣಿ ಪರಾವಲಂಬಿಯಾದರೆ ತಾನು ಬೆಳೆಯುವುದು ಎಷ್ಟು ಕಷ್ಟ ಎಂದು ಈ ಮೊಸಳೆಗಳ ಜೀವನವನ್ನು ಅರಿತರೆ ತಿಳಿಯುತ್ತದೆ. ಆದರೆ ಮೊಸಳೆಯ ಜೀವನದಲ್ಲಿ ಪರಾವಲಂಬನೆ ಎಂಬುದು ಪ್ರಕೃತಿಯ ನಿಯಮ, ಅದು ಅವುಗಳ ಸಂಖ್ಯೆಯನ್ನು ಹತೋಟಿಯಲ್ಲಿಡಲು ಹೀಗೆ ಮಾಡಿರಬಹುದು.

    ಇವು ಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ತುಂಡರಿಸಲು, ಬೇಟೆಯ ಒಂದು ತುದಿಯನ್ನು ಕಚ್ಚಿ ನೀರಿನಲ್ಲಿ ರಭಸವಾಗಿ ಸುತ್ತುತ್ತದೆ. ಮಾಂಸ ತುಂಡರಿಸಿದ ಮೇಲೆ ತಿನ್ನುತ್ತವೆ. ಅಂತಹ ಮಾಂಸವನ್ನು ಹರಿಯಲು ಕೆಲವೊಮ್ಮೆ ಇತರ ಮೊಸಳೆಗಳ ಸಹಾಯ ಪಡೆದು ಆಹಾರವನ್ನು ಹಂಚಿ ತಿನ್ನುತ್ತವೆ. ಮೊಸಳೆಗೆ 68 ಹಲ್ಲುಗಳಿದ್ದರೂ ಕೂಡ ಅದರ ಹಲ್ಲುಗಳಿಂದ ಮಾಂಸವನ್ನು ಜಗಿಯಲಾಗುವುದಿಲ್ಲ, ಹರಿಯಬಹುದು ಅಷ್ಟೆ. ಬಹುತೇಕ ಮಾಂಸಹಾರಿ ಪ್ರಾಣಿಗಳಿಗೆ ಕೋರೆ ಹಲ್ಲುಗಳು ಮಾತ್ರ ಇರುತ್ತವೆ, ದವಡೆ ಹಲ್ಲುಗಳಿರುವುದಿಲ್ಲ. ಆದ್ದರಿಂದ ಮಾಂಸವನ್ನು ಹಾಗೆಯೇ ನುಂಗುತ್ತವೆ, ಮೂಳೆಗಳನ್ನೂ ಹಾಗೆಯೇ ನುಂಗಬೇಕು. ಅಂತಹ ಮೂಳೆಯನ್ನು ದೇಹದಲ್ಲಿರುವ ಲ್ಯಾಕ್ಟಿಕ್ ಆಮ್ಲ ಕರಗಿಸುತ್ತದೆ. ಮೊಸಳೆಯ ಹಲ್ಲುಗಳು ಆಗಾಗ್ಗೆ ನಿರಂತರವಾಗಿ ಬಿದ್ದುಹೋಗುತ್ತವೆ ಪುನಃ ಅದೇ ಜಾಗದಲ್ಲಿ ಬೆಳೆಯುತ್ತವೆ. ವಯಸ್ಸಾದಾಗ ಈ ಹಲ್ಲುಗಳು ಪುನಃ ಹುಟ್ಟದೇ ಇದ್ದರೆ ಇವುಗಳ ಜೀವನ ಬಹಳ ಕಷ್ಟ. ತನ್ನ ಊಟವನ್ನು ಕರಗಿಸುವುದಕ್ಕೆ ಕೆಲವು ಪಕ್ಷಿಗಳು ಚಿಕ್ಕ ಚಿಕ್ಕ ಕಲ್ಲುಗಳನ್ನು ನುಂಗುವ ಹಾಗೆ ಮೊಸಳೆಗಳೂ ಕೂಡ ಚಿಕ್ಕ ಚಿಕ್ಕ ಕಲ್ಲುಗಳನ್ನು ತಿನ್ನುತ್ತವೆ.

    ಅಪರೂಪಕ್ಕೊಮ್ಮೆ ಮೊಸಳೆಗಳು ಮನುಷ್ಯರನ್ನೂ ಬೇಟೆಯಾಡುತ್ತವೆ. ಮೊಸಳೆಯ ಜತೆಗೆ 15 ವರ್ಷದಿಂದ ಒಬ್ಬ ಸ್ನೇಹ ಬೆಳಸಿ ಸಾಕುತ್ತಿರುವ ಸನ್ನಿವೇಶವೂ ಇದೆ. ಆದ್ದರಿಂದ ಇದು ಸ್ನೇಹಜೀವಿಯೂ ಹೌದು.

    ಮರಳಿನಲ್ಲೇ ನಿರ್ಧಾರವಾಗುತ್ತೆ ಮೊಸಳೆಯ ಲಿಂಗ! ಮೊಟ್ಟೆಯೊಡೆದಾಗ ಅದು ಗಂಡೂ ಅಲ್ಲ ಹೆಣ್ಣೂ ಅಲ್ಲ!

    ಕರೀನಾ ಕಪೂರ್​ ಮಗುವಿನ ಫೋಟೋ ವೈರಲ್​! ಇಲ್ಲಿದೆ ನೋಡಿ ಆ ಫೋಟೋ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts