More

    ಏಕಾಏಕಿ ಮಹಿಳೆಯ ಮೇಲೆ ದಾಳಿ ಮಾಡಿದ ಮೊಸಳೆ,  ಆದರೆ ಕೊನೆಯಲ್ಲಿ ಟ್ವಿಸ್ಟ್ ಹೇಗಿತ್ತು ನೋಡಿ…! 

    ಬೆಂಗಳೂರು: ಪ್ರಪಂಚದಲ್ಲಿ ನಮಗೆ ಅನೇಕ ಪ್ರಾಣಿಗಳು ಕಾಣಸಿಗುತ್ತವೆ. ಕೆಲವು ಪ್ರಾಣಿಗಳು ಎತ್ತರದಲ್ಲಿ ಚಿಕ್ಕದಾಗಿದ್ದರೂ ಸಾಕಷ್ಟು ಮುದ್ದಾಗಿರುತ್ತವೆ. ಜತೆಗೆ ಅವುಗಳ ಶಾಂತ ನಡವಳಿಕೆ ನೋಡಿ  ಜನರು ಸಾಕಲು ಇಷ್ಟಪಡುತ್ತಾರೆ. ಮತ್ತೆ ಕೆಲವು ಪ್ರಾಣಿಗಳನ್ನು ನೋಡಿದರೇನೇ ಭಯವಾಗುತ್ತದೆ.  ಹೌದು, ಅಂತಹ ಅಪಾಯಕಾರಿ ಪ್ರಾಣಿಗಳ ಪಟ್ಟಿಯಲ್ಲಿ ಸಿಂಹ, ಚಿರತೆ, ಮೊಸಳೆ ಮುಂತಾದ ಹೆಸರುಗಳು ನೆನಪಿಗೆ ಬರುತ್ತವೆ. ಈ ಪ್ರಾಣಿಗಳು ಎಷ್ಟು ಅಪಾಯಕಾರಿ ಎಂದರೆ ಅವುಗಳ ಹತ್ತಿರ ಹೋದರೆ ಅಪಾಯ ತಪ್ಪಿದ್ದಲ್ಲ. 

    ಮೃಗಾಲಯಗಳಲ್ಲಿಯೂ ಈ ಪ್ರಾಣಿಗಳ ತರಬೇತಿ ಪಡೆದ ಕೆಲವು ವ್ಯಕ್ತಿಗಳು ಇವುಗಳ ಆರೈಕೆ ಮಾಡುತ್ತಾರೆ.  ಆದರೂ ಈ ಪ್ರಾಣಿಗಳು ಜನರ ಮೇಲೆ ಯಾವಾಗ ದಾಳಿ ಮಾಡುತ್ತವೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಸದ್ಯ ಇಂತಹ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

    ವಿಡಿಯೋದಲ್ಲಿ ಕಂಡದ್ದೇನು?

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊಸಳೆ ತನ್ನ ತೊಟ್ಟಿಯಿಂದ ಹೊರಬರಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಅಲ್ಲಿರುವ ಮೃಗಾಲಯದ ಮಹಿಳಾ ಕೀಪರ್ ಅದನ್ನು ಮತ್ತೆ ನೀರಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಮೊಸಳೆ ತನ್ನ ದವಡೆಯಿಂದ ಆಕೆಯ ಕೈಯನ್ನು ಹಿಡಿದು ನೀರಿಗೆ ಎಳೆಯುತ್ತದೆ. ಮಹಿಳೆ ತನ್ನ ಕೈಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಸಾಧ್ಯವಾಗುವುದಿಲ್ಲ. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬರು ನೀರಿಗೆ ಹಾರಿ ಮಹಿಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಬಹಳ ಹೊತ್ತು ಹೆಣಗಾಡಿದ ನಂತರ ಮೊಸಳೆ ಮಹಿಳೆಯ ಕೈ ಬಿಟ್ಟಿದೆ. ಇದಾದ ನಂತರ ಇಬ್ಬರೂ ಎಚ್ಚರಿಕೆಯಿಂದ ಹೊರಗೆ ಹೋಗುತ್ತಾರೆ.

    ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ X (ಹಿಂದಿನ Twitter) ನಲ್ಲಿ @PicturesFoIder ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ. ‘ಮೊಸಳೆಯು ಮೃಗಾಲಯದ ಪಾಲಕರ ಮೇಲೆ ದಾಳಿ ಮಾಡುತ್ತದೆ ಮತ್ತು ಸಂದರ್ಶಕ ಅವರನ್ನು ರಕ್ಷಿಸಲು ಪಂಜರದೊಳಗೆ ಜಿಗಿಯುತ್ತಾರೆ’ ಎಂದು ವಿಡಿಯೋ ಜೊತೆಗಿನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆದರೆ, ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂದು ನಮೂದಿಸಲಾಗಿಲ್ಲ. ಸುದ್ದಿ ಬರೆಯುವ ತನಕ, ವಿಡಿಯೋವನ್ನು 38 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts