6 ಜನರಿದ್ದ ಲಿಫ್ಟ್ ದಿಢೀರ್ ಕೈಕೊಟ್ಟಾಗ ಆಗಿದ್ದೇನು? ನಾಸಿಕ್ ಅಪಾರ್ಟ್‌ಮೆಂಟ್‌ನ ಎದೆ ಝಲ್ಲೆನಿಸುವ ಸಿಸಿಟಿವಿ ದೃಶ್ಯ | Lift Accident

Nashik lift accident
ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಭಯಾನಕ ಅವಘಡ
Published on: 
Summary
  • ನಾಸಿಕ್‌ನಲ್ಲಿ 6 ಜನರಿದ್ದ ಲಿಫ್ಟ್‌ನಲ್ಲಿ ತಾಂತ್ರಿಕ ದೋಷದಿಂದ ದುರಂತ

  • ಲಿಫ್ಟ್‌ನಿಂದ ಹೊರಬರುತ್ತಿದ್ದ ಮಹಿಳೆಯನ್ನು ಮೇಲಕ್ಕೆ ಎಳೆದೊಯ್ದ ಭಯಾನಕ ದೃಶ್ಯ

  • ಅಪಾರ್ಟ್‌ಮೆಂಟ್‌ಗಳ ಲಿಫ್ಟ್ ಸುರಕ್ಷತೆ ಮತ್ತು ನಿರ್ವಹಣೆ ಬಗ್ಗೆ ಗಂಭೀರ ಪ್ರಶ್ನೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ 6 ಜನರಿದ್ದ ಲಿಫ್ಟ್ ದಿಢೀರ್ ಕೈಕೊಟ್ಟಿದ್ದು, ಮಹಿಳೆಯೊಬ್ಬರು ಗಾಯಗೊಂಡಿರುವ ಭಯಾನಕ ಘಟನೆ ನಡೆದಿದೆ. ಈ ದುರಂತದ ಸಿಸಿಟಿವಿ ದೃಶ್ಯಗಳು ಈಗ ಹೊರಬಿದ್ದಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ.

ನಾಸಿಕ್‌ನ ಸತ್ಪುರ್ ಪ್ರದೇಶದ ಶಿವಾಜಿನಗರದ ವಿಠ್ಠಲ-ರುಕ್ಮಿಣಿ ಕಾಲೋನಿಯಲ್ಲಿರುವ 'ಸನ್‌ಶೈನ್ ಅಪಾರ್ಟ್‌ಮೆಂಟ್'ನಲ್ಲಿ ಈ ಘಟನೆ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ ಒಬ್ಬ ಮಹಿಳೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕೆಲವು ಮಹಿಳೆಯರು ಸೇರಿದಂತೆ ಒಟ್ಟು 6 ಮಂದಿ ಲಿಫ್ಟ್ ಒಳಗೆ ಪ್ರವೇಶಿಸುವುದನ್ನು ಕಾಣಬಹುದು. ನಿಗದಿತ ಮಹಡಿಯಲ್ಲಿ ಲಿಫ್ಟ್ ನಿಂತು ಬಾಗಿಲು ತೆರೆದಾಗ, ಮಹಿಳೆಯೊಬ್ಬರು ಹೊರಗೆ ಇಳಿಯಲು ಮುಂದಾಗಿದ್ದಾರೆ.

ಏಕಾಏಕಿ ಮೇಲಕ್ಕೆ ಚಲಿಸಿದ ಲಿಫ್ಟ್

ಮಹಿಳೆ ಹೊರಬರುವಷ್ಟರಲ್ಲೇ ಲಿಫ್ಟ್ ಏಕಾಏಕಿ ಮೇಲಕ್ಕೆ ಚಲಿಸಲು ಆರಂಭಿಸಿದ್ದು, ಬಾಗಿಲು ಬಡಿದ ರಭಸಕ್ಕೆ ಆಕೆಯನ್ನೂ ಮೇಲಕ್ಕೆ ಎಳೆದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಅವಘಡದಲ್ಲಿ ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಫ್ರಾಂಚೈಸಿ ಬೇಕೆಂದು ಹಣ ಕಟ್ಟಬೇಡಿ: ನಕಲಿ ಆಫರ್‌ಗಳ ಬಗ್ಗೆ ಸಂಸ್ಥೆಯಿಂದ ಎಚ್ಚರಿಕೆ! | The Rameshwaram Cafe

ಸುರಕ್ಷತೆ ಬಗ್ಗೆ ಹೆಚ್ಚಿದ ಆತಂಕ

ತಾಂತ್ರಿಕ ದೋಷದಿಂದಾಗಿ ಲಿಫ್ಟ್ ದಿಢೀರ್ ಚಲಿಸಿ ಈ ಅಪಘಾತ ನಡೆದಿದೆಯೇ ಎಂಬ ಪ್ರಶ್ನೆ ಈಗ ಮೂಡಿದೆ. ಈ ಘಟನೆಯ ನಂತರ, ಅಪಾರ್ಟ್‌ಮೆಂಟ್​ಗಳಲ್ಲಿರುವ ಲಿಫ್ಟ್‌ಗಳ ಸುರಕ್ಷತಾ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಮತ್ತು ಅವುಗಳ ನಿರ್ವಹಣೆ ಸರಿಯಾಗಿದೆಯೇ ಎಂಬ ಬಗ್ಗೆ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.