The Rameshwaram Cafe: ಪ್ರಸಿದ್ಧ ದಕ್ಷಿಣ ಭಾರತೀಯ ತಿನಿಸುಗಳ ಹೋಟೆಲ್ ಸರಣಿ 'ದಿ ರಾಮೇಶ್ವರಂ ಕೆಫೆ' ತನ್ನ ಹೆಸರಿನಲ್ಲಿ ಹರಿದಾಡುತ್ತಿರುವ ನಕಲಿ ಫ್ರಾಂಚೈಸಿ ಆಫರ್‌ಗಳ ಬಗ್ಗೆ ಗ್ರಾಹಕರು ಮತ್ತು ಹೂಡಿಕೆದಾರರಿಗೆ ಸಾರ್ವಜನಿಕ ಎಚ್ಚರಿಕೆ ನೀಡಿದೆ.
ಈ ಕುರಿತು ಆನ್‌ಲೈನ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿರುವ ಸಂಸ್ಥೆ, ಕೆಲವು ವ್ಯಕ್ತಿಗಳು 'ದಿ ರಾಮೇಶ್ವರಂ ಕೆಫೆ' ಹೆಸರನ್ನು ಬಳಸಿಕೊಂಡು ನಕಲಿ ಫ್ರಾಂಚೈಸಿ ಆಫರ್‌ಗಳು ಮತ್ತು 'ಲೆಟರ್ ಆಫ್ ಇಂಟೆಂಟ್' ಪತ್ರಗಳನ್ನು ಹಂಚುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.
ವೈರಲ್ ಆಗಿರುವ ಈ ಫ್ರಾಂಚೈಸಿ ಪತ್ರಗಳು ಸಂಪೂರ್ಣ ನಕಲಿ. ಏಜೆಂಟ್‌ಗಳು ಅಥವಾ ಹಣ ಪಡೆದು ನಾವು ಫ್ರಾಂಚೈಸಿ ನೀಡುವುದಿಲ್ಲ ಎಂದು ರಾಮೇಶ್ವರಂ ಕೆಫೆ ಖಚಿತಪಡಿಸಿದೆ.
ಫ್ರಾಂಚೈಸಿಯ ಎಲ್ಲಾ ಅಧಿಕೃತ ಮಾತುಕತೆಗಳು ಕಂಪನಿಯ ಸಿಇಒ ಮತ್ತು ಎಂಡಿ ಅವರೊಂದಿಗೆ ನೇರವಾಗಿ ಮುಖಾಮುಖಿ ಮಾತ್ರ ನಡೆಯುತ್ತವೆ ಎಂದು ಸಂಸ್ಥೆ ಹೇಳಿದೆ.
ನಕಲಿ ಆಫರ್‌ಗಳಿಗೆ ಮರುಳಾಗಿ ಅನಧಿಕೃತ ವ್ಯಕ್ತಿಗಳಿಗೆ ಹಣವಾಗಲಿ, ವೈಯಕ್ತಿಕ ಮಾಹಿತಿಯನ್ನಾಗಲಿ ನೀಡಬೇಡಿ. ಫ್ರಾಂಚೈಸಿ ಬಗ್ಗೆ ಮುಂದುವರಿಯುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಿ ಎಂದು ಸಂಸ್ಥೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.