ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರಿಗೆ ಹಣ ವಾಪಸ್​ ಸಿಗುವುದೇ? ವಿತ್ತ ಸಚಿವರು ಹೇಳಿದ್ದೇನು?

nirmala
Published on

ಬೆಂಗಳೂರು : ಹಗರಣದ ಹಿನ್ನೆಲೆಯಲ್ಲಿ ನಗರದ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್​ನಲ್ಲಿ ಸಿಕ್ಕಿಹಾಕಿಕೊಂಡಿರುವ ತಮ್ಮ ಹಣ ಹಿಂಪಡೆಯಲು ಹೋರಾಟ ನಡೆಸುತ್ತಿರುವ ಠೇವಣಿದಾರ‌ರು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿ ಮಾಡಿದರು. ವಿತ್ತ ಸಚಿವರ ಬಳಿ ತಮ್ಮ ಅಳಲು ತೋಡಿಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಅವರು, ಗುರು ರಾಘವೇಂದ್ರ ಬ್ಯಾಂಕಿಗೆ ನೇಮಿಸಲಾಗಿರುವ ಆಡಳಿತಾಧಿಕಾರಿ ಆರ್​​ಬಿಐಗೆ ವರದಿ ನೀಡುವವರೆಗೂ ತಾಳ್ಮೆಯಿಂದ ಇರಿ ಎಂದರು. ಪ್ರತಿ ಬಾರಿಯೂ ಪ್ರಧಾನಿ ಮೋದಿ ಅವರು ಠೇವಣಿದಾರರ ಹಣವನ್ನು ಮರುಪಾವತಿ ಮಾಡುವ ಬಗ್ಗೆ ನನ್ನನ್ನು ಕೇಳುತ್ತಾರೆ.

ಆಡಳಿತಾಧಿಕಾರಿಯ ಮೂಲಕ ಹಣವನ್ನು ನಿಮ್ಮ ಖಾತೆಯಿಂದ ಪಡೆಯುವ ಅವಕಾಶ ಇದೆ ಎಂದು ಠೇವಣಿದಾರರಿಗೆ ಸಮಾಧಾನದ ಮಾತುಗಳನ್ನು ಹೇಳಿದ ನಿರ್ಮಲಾ ಸೀತಾರಾಮನ್, ನಿಮ್ಮೊಂದಿಗೆ ನಾನು ಸಾಕಷ್ಟು ಬಾರಿ ಚರ್ಚೆ ನಡೆಸಿದ್ದೇನೆ. ಆದರೆ ಪೂರ್ಣ ಪ್ರಕ್ರಿಯೆಗಳು ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ. ಎಲ್ಲರೂ ಪಂಜಾಬ್ ಮಹಾರಾಷ್ಟ್ರ ಆಪರೇಟಿವ್ ಬ್ಯಾಂಕ್ ಬಗ್ಗೆ ಉದಾಹರಣೆ ನೀಡುತ್ತಾರೆ. ಆದರೆ ಅದರಲ್ಲೂ ಸಾಕಷ್ಟು ಸಮಯ ತೆಗೆದುಕೊಂಡಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net