ಸಿಂಹಿಣಿಯನ್ನು ತಬ್ಬಿಕೊಂಡು ಮುದ್ದಾಡಿದ ಭೂಪ! ಸಿಂಹ ಮಾಡಿದ್ದೇನು?

lion lioness
Published on

ನವದೆಹಲಿ: ನಿಮ್ಮ ಹತ್ತಿರ ಯಾರಾದರು ಬೇರೆಯವರು ಹೆಚ್ಚಾಗಿ ಬೆರೆತರೆ, ನಿಮ್ಮ ಪ್ರೀತಿಪಾತ್ರರಿಗೆ ಹೊಟ್ಟೆಕಿಚ್ಚಾಗುವುದು ಸಹಜ. ಈ ಭಾವನೆ ಹೆಚ್ಚಾಗಿ ಮನುಷ್ಯರಲ್ಲಿ ಕಂಡುಬರುತ್ತದೆ. ಆದರೆ ಪ್ರಾಣಿಗಳಿಗೂ ಈ ರೀತಿಯ ಭಾವನೆಗಳು ಇರುತ್ತವೆ/ ಇದಕ್ಕೆ ಹೊರತಾಗಿಲ್ಲ. ಇದೀಗ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ಒಬ್ಬ ವ್ಯಕ್ತಿಯು ಸಿಂಹಿಣಿಯನ್ನು ಅಪ್ಪಿಕೊಳ್ಳುತ್ತಾನೆ ಮತ್ತು ಸಿಂಹವನ್ನು ಅಗಿಯಲಾಗುತ್ತದೆ.

ಸಿಂಹ- ಸಿಂಹಿಣಿಯ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವ್ಯಕ್ತಿ ಸಿಂಹ-ಸಿಂಹಿಣಿಯನ್ನು ಸಾಕಿದ್ದು ದಿನಾಲು ಮುದ್ದು ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಸಾಕಿದ್ದಾರೆ. ನಾವು ನಾಯಿ ಮತ್ತು ಬೆಕ್ಕುಗಳನ್ನು ಸಾಕುವಂತೆ, ಕೆಲವು ಸ್ಥಳಗಳಲ್ಲಿ ಜನರು ಸಿಂಹಗಳಂತಹ ಕಾಡುಪ್ರಾಣಿಗಳನ್ನೂ ಸಾಕುತ್ತಾರೆ. ಈತ ಒಂದಲ್ಲ, ಎರಡರೆಡು ಸಿಂಹಗಳನ್ನು ಸಾಕಿದ್ದ. ವಿಡಿಯೋದ ಮೊದಲಿಗೆ ಈತ, ಗಂಡು ಸಿಂಹವನ್ನು ಮುದ್ದು ಮಾಡುತ್ತಿರುತ್ತಾನೆ. ಅದರ ಜತೆ ಆಟವಾಡುತ್ತಾ ಇರಬೇಕಾದರೆ, ಸಿಂಹವೂ ತನ್ನ ಮಾಲೀಕನ ಮೈಗೆ ತನ್ನ ಮೈಯನ್ನು ಪಕ್ಕಾ ಸಾಕು ಪ್ರಾಣಿಯಂತೆ ಉಜ್ಜುತ್ತಾ ಇರುತ್ತದೆ. ಕೆಲ ಸಮಯ ನಂತರ ಅದು ಪಕ್ಕಕ್ಕೆ ಹೋಗಿ ಕುಳಿತುಕೊಳ್ಳುತ್ತದೆ.

ಇದಾದ ಮೇಲೆ ಆ ಮಾಲೀಕ ಪಕ್ಕದಲ್ಲೇ ಇದ್ದ ಸಿಂಹಿಣಿಯನ್ನೂ ಹತ್ತಿರಕ್ಕೆ ಕರೆಯುತ್ತಾನೆ. ಸಿಂಹಿಣಿಯು ಹತ್ತಿರ ಬಂದು ತನ್ನ ಮಾಲೀಕನಿಗೆ ಒರಗಿಕೊಂಡು ಮೈಯನ್ನು ಉಜ್ಜಿಸಿಕೊಳ್ಳುತ್ತಾ ಇರುತ್ತದೆ. ಆಗ ಅಲ್ಲೇ ಪಕ್ಕದಲ್ಲಿದ್ದ ಸಿಂಹಕ್ಕೆ ಹೊಟ್ಟೆ ಕಿಚ್ಚಾಗಿದ್ದು, ತಕ್ಷಣ ಎದ್ದು ಬಂದು ಮಾಲೀಕನ ಬಳಿಗೆ ಬರುತ್ತದೆ. ಸಿಂಹಿಣಿಯನ್ನು ಕೆಳಕ್ಕೆ ದೂಡಿ ತನ್ನ ಮಾಲೀಕನಿಂದ ಮೈ ಸವರಿಸಿಕೊಳ್ಳುತ್ತದೆ. ಸಂಪೂರ್ಣವಾಗಿ ಬೆಳೆದ ಸಿಂಹಗಳೂ ಈ ರೀತಿಯಾಗಿ ಸಣ್ಣ ಮಕ್ಕಳಂತೆ ಆಡುವುದನ್ನು ಕಂಡ ನೆಟ್ಟಿಗರೂ ಆಶ್ಚರ್ಯಚಕಿತರಾಗಿದ್ದು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಕುರಿತಾಗಿ ಜನ ಏನು ಹೇಳಿದ್ದಾರೆ ಎಂದು ತಿಳಿಯಬೇಕೇ? ಈ ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net