ಕೋಳಿ ಮೊದಲಾ, ಮೊಟ್ಟೆ ಮೊದಲಾ?; ಮಿಲಿಯನ್​ ಡಾಲರ್​ ಪ್ರಶ್ನೆಗೆ ಸಿಕ್ಕಿತು ಉತ್ತರ!

chicken
Published on

ನವದೆಹಲಿ: ಕೋಳಿ ಮೊದಲಾ, ಮೊಟ್ಟೆ ಮೊದಲಾ? ಎನ್ನುವ ಪ್ರಶ್ನೆಯನ್ನು ಬಾಲ್ಯದಿಂದಲೂ ನಾವೆಲ್ಲರೂ ಖಂಡಿತವಾಗಿಯೂ ಕೇಳಿದ್ದೇವೆ. ಉತ್ತರಿಸಲಾಗದ ಈ ಪ್ರಶ್ನೆಗೆ ವಿಜ್ಞಾನಿಗಳು ಈಗ ಉತ್ತರವನ್ನು ಕಂಡುಕೊಂಡಿದ್ದಾರೆ. ಈ ಭೂಮಿಗೆ ಮೊದಲು ಬಂದವರು ಯಾರು? ಕೋಳಿ ಅಥವಾ ಮೊಟ್ಟೆ? ಈ ರಹಸ್ಯವನ್ನು ಪರಿಹರಿಸಿದ್ದಾರೆ. ಬನ್ನಿ ಇನ್ಯಾಕೆ ತಡ ಈ ಸಮಸ್ಯೆಗೆ ಉತ್ತರ ನೋಡಣ....

ಈ ವಿಚಿತ್ರ ಪ್ರಶ್ನೆಗೆ ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ವಿಜ್ಞಾನಿಗಳು ಭೂಮಿಗೆ ಮೊದಲು ಕೋಳಿ ಬಂದಿತು ಎಂದು ಹೇಳಿದ್ದಾರೆ. ಅದರ ಹಿಂದಿನ ಸಿದ್ಧಾಂತವು ವಿಭಿನ್ನವಾಗಿದೆ. ಸಂಶೋಧನೆಯಿಂದ ವೈಜ್ಞಾನಿಕ ಸತ್ಯಗಳ ಆಧಾರದ ಮೇಲೆ ನಿಜವೆಂದು ಸಾಬೀತಾಗಿದೆ.

ಸಂಶೋಧನೆ ಏನು ಹೇಳುತ್ತದೆ?:

ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ, ಕೋಳಿಗಳು ಮೊದಲು ಹೀಗಿರಲಿಲ್ಲ. ಅವುಗಳು ಮೊದಲು ಮನುಷ್ಯರಂತೆ ಸಸ್ತನಿಗಳಾಗಿದ್ದವು. ಅದೇನೆಂದರೆ, ಕೋಳಿ ಮೊಟ್ಟೆ ಇಡದೆ ತನ್ನ ಮರಿಗಳಿಗೆ ಜನ್ಮ ನೀಡುತ್ತಿದ್ದವು. ಈ ತೀರ್ಮಾನವು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳ ವಿಶ್ಲೇಷಣೆಯನ್ನು ಆಧರಿಸಿದೆ. ಇದನ್ನು ಅಂಡಾಣು (ಮೊಟ್ಟೆ ಇಡುವುದು) ಅಥವಾ ವಿವಿಪಾರಸ್ (ಮರಿಗಳಿಗೆ ಜನ್ಮ ನೀಡುವುದು) ಎಂದು ವರ್ಗೀಕರಿಸಬಹುದು. ಅಂಡಾಣು ಜಾತಿಗಳು ಗಟ್ಟಿಯಾದ ಅಥವಾ ಮೃದುವಾದ ಚಿಪ್ಪಿನ ಮೊಟ್ಟೆಗಳನ್ನು ಇಡುವುದಕ್ಕೆ ಹೆಸರುವಾಸಿಯಾಗಿದ್ದರೆ, ವಿವಿಪಾರಸ್ ಪ್ರಭೇದಗಳು ಮರಿಗಳಿಗೆ ಜನ್ಮ ನೀಡುತ್ತವೆ. ಈ ಹೊಸ ಸಂಶೋಧನೆಗಳನ್ನು ನೇಚರ್ ಎಕಾಲಜಿ & ಎವಲ್ಯೂಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಬ್ರಿಸ್ಟಲ್ ವಿಶ್ವವಿದ್ಯಾಲಯ ಮತ್ತು ನಾನ್ಜಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಮೊಟ್ಟೆ ಇಡುವ ಪಕ್ಷಿಗಳು ಸಸ್ತನಿಗಳಿಂದ ವಿಕಸನಗೊಂಡಿವೆ ಎಂದು ಹೇಳುತ್ತಾರೆ. ಹಲವು ವರ್ಷಗಳ ಹಿಂದೆ ಮೊಟ್ಟೆಗಳನ್ನು ಇಟ್ಟು ಸಸ್ತನಿಗಳಿಗೆ ಜನ್ಮ ನೀಡಿದ ಜಾತಿಗಳು ಇದ್ದವು. ಈ ಜಾತಿಗಳು ವಿಕಸನಗೊಳ್ಳುವ ಮುಂಚೆಯೇ ಭೂಮಿಯ ಮೇಲೆ ಕೋಳಿಗಳು ಅಸ್ತಿತ್ವದಲ್ಲಿದ್ದವು. ವಿಸ್ತೃತ ಭ್ರೂಣದ ಧಾರಣದಿಂದಾಗಿ ಫಲವತ್ತತೆಯ ವ್ಯತ್ಯಾಸವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ವಿಜ್ಞಾನದ ಆವಿಷ್ಕಾರ...

ಪಕ್ಷಿಗಳು, ಮೊಸಳೆಗಳು ಮತ್ತು ಆಮೆಗಳು ಭ್ರೂಣವನ್ನು ಹೊಂದಿರದ ಮೊಟ್ಟೆಗಳನ್ನು ಇಡುತ್ತವೆ. ಆದರೆ ಕೆಲವು ವಿವಿಪಾರಸ್ಗಳು ಭ್ರೂಣವು ಬೆಳವಣಿಗೆಯಾದ ನಂತರವೇ ಮೊಟ್ಟೆಗಳನ್ನು ಇಡುತ್ತವೆ.  ಹಾವುಗಳು ಮೊಟ್ಟೆಗಳನ್ನು ಇಡುವ ಮತ್ತು ಮರಿಗಳಿಗೆ ಜನ್ಮ ನೀಡಬಲ್ಲ ಜಾತಿಗಳಾಗಿವೆ.

ಮೊಟ್ಟೆಯನ್ನು ರೂಪಿಸಲು ಪ್ರೋಟೀನ್‌ ಬೇಕು, ಅದಕ್ಕಾಗಿಯೇ ಕೋಳಿ ಬೇಕು ಎನ್ನುವುದು ಹಲವರ ವಾದವಾಗಿದೆ. ಲಕ್ಷಗಟ್ಟಲೆ ವರ್ಷಗಳ ಹಿಂದೆ ಕೋಳಿ ಮಾದರಿಯ ಪ್ರಾಣಿಯೊಂದು ಮತ್ತೊಂದು ಮಾದರಿಯ ಕೋಳಿಯೊಂದಿಗೆ ಸಂಬೋಂಗ ಹೊಂದಿದ್ದವು. ನಂತರ ಅನುವಂಶಿಕ ರೂಪಾಂತರವಾಗಿ ಡಿಎನ್‌ಎ ವಿಭಿನ್ನವಾದ ಮೊಟ್ಟೆ ಅಸ್ತಿತ್ವಕ್ಕೆ ಬಂದಿತು ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಇದು ವರ್ಷಗಳವರೆಗೆ ನಡೆಯುವ ಪ್ರಕ್ರಿಯೆಯಾಗಿದ್ದು, ಅದು ನಿಧಾನವಾಗಿ ಪರಿವರ್ತನೆಗೆ ಕಾರಣವಾಗುತ್ತದೆ. ಈ ಮ್ಯುಟೇಶನ್ ಕೂಡ ಸಾಕಷ್ಟು ಸಮಯ ತೆಗೆದುಕೊಂಡಿರಬೇಕು ರೂಪಾಂತರಗೊಂಡ ನಂತರ ಆಗಿರುವ ಮೊಟ್ಟೆಯಿಂದ ಕೋಳಿ ಬೆಳೆದಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net