ನಾನು ಭಾರತದ ಪರ! ಮೇಕೆದಾಟು ವಿಚಾರದಲ್ಲಿ ಸಿ.ಟಿ.ರವಿ ಹೇಳಿದ್ದೇನು?

Ravi
Published on

ಬೆಂಗಳೂರು : ಮೇಕೆದಾಟು ವಿಚಾರದಲ್ಲಿ ನಾನು ಭಾರತದ ಪರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗಳ ಮಾಡುವ ಬದಲು, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ನ್ಯಾಯಾಲಯಗಳು ಈ ಬಗ್ಗೆ ಹಲವು ತೀರ್ಪು ನೀಡಿವೆ. ನ್ಯಾಯ ಯಾರ ಪರವಾಗಿದೆಯೋ ಹಾಗೇ ನಾನು ಎಂದು ರವಿ ಹೇಳಿದರು. ತಮಿಳುನಾಡು ಪತ್ರಕರ್ತರ ಪ್ರಶ್ನೆಗೆ ನಾನು ನನ್ನ ಟೀಮ್​​ಗೆ ಬೆಂಬಲ ಮಾಡ್ತೇನೆ ಎಂದಿದ್ದೇನೆ. ಇದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಬೇಕು ಎಂದರು.

ಕುಡಿಯುವ ನೀರಿನ ವಿಚಾರ ಭಾವನಾತ್ಮಕವಾಗಿ ನೋಡಬಾರದು. ಕುಡಿಯುವ ನೀರಿಗೆ ರಾಜಕಾರಣ ಮಾಡಬಾರದು. ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಹೇಳಿದರು. ಕಾಂಗ್ರೆಸ್ ರಾಜಕಾರಣದ ಬಗ್ಗೆ ಎಂದಿನಂತೆ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net