

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜಯಭೇರಿ ಭಾರಿಸಿದೆ.
ಕಾಂಗ್ರೆಸ್ 136 ಸ್ಥಾನ, ಬಿಜೆಪಿ 65, ಜೆಡಿಎಸ್ 19 ಕ್ಷೇತ್ರಗಳಲ್ಲಿ ಹಾಗೂ ಇತರರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿಯಲು ಈಗಾಗಲೇ ತಯಾರಿ ನಡೆಸಿದೆ.
- ಪ್ರಚಾರದಲ್ಲಿ ಹೈಕಮಾಂಡ್ ನಾಯಕರ ಜತೆಗೆ ರಾಜ್ಯ ನಾಯಕತ್ವಕ್ಕೆ ಮನ್ನಣೆ
- ಅಧಿಕಾರ ಪಡೆಯಲು ಎರಡು ಮತ್ತು ಮೂರನೇ ಹಂತದ ನಾಯಕರ ಹೋರಾಟ
- ಅಬ್ಬರದ ಪ್ರಚಾರದ ಜತೆಗೆ ಡೋರ್ ಟೂ ಡೋರ್ ಪ್ರಚಾರ
- ಕೊನೆ ಹಂತದಲ್ಲಿ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ನಲ್ಲಿ ಜಾರಿ ಭರವಸೆ
- ಐದು ಗ್ಯಾರಂಟಿಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿದ್ದ ಕಾಂಗ್ರೆಸ್
- ಕಾಂಗ್ರೆಸ್ಸಿಗೆ ವರದಾನವಾದ ಗ್ಯಾರಂಟಿಗಳ ಘೋಷಣೆ
- ಮೊದಲ ಪಟ್ಟಿಯಲ್ಲಿ 124, ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಆಯ್ಕೆ
- ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಎಚ್ಚರಿಕೆಯಿಂದ ಅಭ್ಯರ್ಥಿಗಳ ಆಯ್ಕೆ
- ಶಿಸ್ತು ಬದ್ಧವಾಗಿ ಟಿಕೆಟ್ ಹಂಚಿಕೆ
- ಡಿಕೆಶಿ, ಸಿದ್ದರಾಮಯ್ಯ ನಡುವೆ ಮುನಿಸಿದ್ದರೂ ಒಗ್ಗಟ್ಟು ಪ್ರದರ್ಶನ
- ಕೊನೆಯವರೆಗೂ ಒಗ್ಗಟ್ಟು ಪ್ರದರ್ಶನ
- ಸಂಘಟಿತ ಹೋರಾಟ ಮಾಡಿದ್ದ ಕೈ ನಾಯಕರು
- ಬಿಜೆಪಿ ಭ್ರಷ್ಟಾಚಾರವನ್ನೆ ಮೊದಲ ಅಸ್ತ್ರ ಮಾಡಿದ್ದ ಕಾಂಗ್ರೆಸ್
- ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಮಾಡಿದ್ದ ಕಾಂಗ್ರೆಸ್
- ಬಿಜೆಪಿ ವಿರೋಧಿ ಅಲೆ ಯಶಸ್ವಿಯಾಗಿ ಬಳಕೆ
- ಬೆಲೆ ಏರಿಕೆ ಬಗ್ಗೆ ನಿರಂತರ ಪ್ರಚಾರ ಮಾಡಿದ್ದ ಕಾಂಗ್ರೆಸ್
- ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ಕೈಗೆ ವರದಾನ
- ಗ್ಯಾಸ್ ಸಿಲಿಂಡರ್ ಕೈ ಮುಗಿದು ಮತ ಹಾಕಿ ಎಂದು ಅಭಿಯಾನ
- ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಾಂಗ್ರೆಸ್ಸಿಗೆ ವರದಾನ
- 40% ಕಮಿಷನ್ ಆರೋಪ, ಪೇ ಸಿಎಂ ಅಭಿಯಾನ ತೀವ್ರ ಪ್ರಚಾರ
ಕಾಂಗ್ರೆಸ್ ಗೆಲುವಿನ ಕಾರಣಗಳು:
ಬಿಜೆಪಿಯ ಘಟಾನುಘಟಿ ನಾಯಕರುಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಕೈ ಜೋಡೆತ್ತುಗಳಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಗ್ಗಟ್ಟಿನ ಹೋರಾಟದ ಫಲ ಈ ಫಲಿತಾಂಶ ಎಂಬುದು ನಿಸ್ಸಂಶಯ. ಇದರ ಜತೆಗೆ ಬಿಜೆಪಿ ವಿರುದ್ಧದ ಪ್ರಬಲವಾದ ಆಡಳಿತ ವಿರೋಧಿ ಏಲ್ ಕೂಡ ಇಂತಹ ಫಲಿತಾಂಶ ಬರಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾದರೆ ನಿರ್ದಿಷ್ಟವಾಗಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟ ಅಂಶಗಳು ಯಾವುವು ಎಂಬುದರ ವಿವರ ಇಲ್ಲಿದೆ.