ಮಂಗಳೂರು ಸಮುದ್ರದಲ್ಲಿ ವೇಲ್ ಶಾರ್ಕ್ ಮೀನು ಪತ್ತೆ

shark jan 06 2020
Published on

ಮಂಗಳೂರು: ಕಾರವಾರದ ನೇತ್ರಾಣಿ ದ್ವೀಪ ಹಾಗೂ ಅದರ ಉತ್ತರಕ್ಕೆ ಕಾಣಸಿಗುವ ಅಪರೂಪದ ವೇಲ್ ಶಾರ್ಕ್ ಮೀನನ್ನು ಮಂಗಳೂರು ಸಮುದ್ರದಲ್ಲಿ ರಾಜ್ಯದ ಹಕ್ಕಿವೀಕ್ಷಣಾ ತಂಡದವರು ಪತ್ತೆ ಮಾಡಿದ್ದಾರೆ.

ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಹಮ್ಮಿಕೊಳ್ಳಲಾದ ಸಾಗರ ಪಕ್ಷಿ ವೀಕ್ಷಣಾ ಅಭಿಯಾನದ ವೇಳೆ 15ರಿಂದ 20 ಕಿ.ಮೀನಷ್ಟು ದೂರ ಸಮುದ್ರದಲ್ಲಿ ಸಾಗಿರುವ ತಂಡಕ್ಕೆ ಅಪರೂಪದ ವೇಲ್ ಶಾರ್ಕ್ ಮೀನು ಸಮುದ್ರದ ಮೇಲ್ಮೈ ನೀರಿನಲ್ಲಿ ಈಜುವುದು ಕಂಡುಬಂದಿದೆ. ಐದು ನಿಮಿಷ ಕಾಲ ಅದರ ವಿಡಿಯೋವನ್ನೂ ಈ ತಂಡ ಸೆರೆಹಿಡಿದಿದೆ.

ಮಂಗಳೂರು ಸಮುದ್ರದಲ್ಲಿ ಇದು ಇದ್ದಿರಬಹುದಾದರೂ ನೋಡಲು ಸಿಗುವುದು ಕಡಿಮೆ, ಉಳಿದಂತೆ ಗುಜರಾತ್, ಮಹಾರಾಷ್ಟ್ರ ಸಮುದ್ರ ಹಾಗೂ ನೇತ್ರಾಣಿ ದ್ವೀಪ ಭಾಗದಲ್ಲಿ ಇವು ಕಾಣಸಿಗುತ್ತವೆ ಎಂಬ ಮಾಹಿತಿಯನ್ನು ವೈಲ್ಡ್​ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಸಾಜನ್ ಜಾನ್ ತಮಗೆ ಸ್ಪಷ್ಟಪಡಿಸಿರುವುದಾಗಿ ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್​ವರ್ಕ್ ಸದಸ್ಯ ಎಂ. ಶಿವಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net