'ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ' ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ

Narendra-Modi-Mamata-Banerjee
Narendra-Modi-Mamata-Banerjee
Published on

ಕಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಚುನಾವಣಾ ಆಯೋಗದ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಆಯೋಗದ ಮಾದರಿ ನೀತಿ ಸಂಹಿತಿ ವಿರುದ್ಧ ಕಿಡಿ ಕಾರಿದ್ದಾರೆ.

ಚುನಾವಣಾ ಆಯೋಗದ್ದು ಮಾದರಿ ನೀತಿ ಸಂಹಿತೆ ಅಲ್ಲ, ಅದು ಮೋದಿ ನೀತಿ ಸಂಹಿತೆ ಎಂದು ಲೇವಡಿ ಮಾಡಿದ್ದಾರೆ.

ನಿನ್ನೆ ಕೂಚ್ ಬೆಹರ್ ಜಿಲ್ಲೆಯ ಸೀತಾಲಕುಚಿಯಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದರು. ಇದಿರಂದ ಕೂಚ್ ಬೆಹರ್ ಜಿಲ್ಲೆಗೆ ಮೂರು ದಿನ ರಾಜಕಾರಣಿಗಳ ಪ್ರವೇಶವನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಇದರಿಂದ ಕೋಪಗೊಂಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಏನೇ ಮಾಡಿದರೂ ನನ್ನನ್ನು ಸೋಲಿಸಲು ಆಗುವುದಿಲ್ಲ ಹಾಗೂ ನನ್ನ ಜನರು ನನ್ನ ಬಳಿ ಬರುವುದನ್ನು ತಡೆಯಲು ಆಗುವುದಿಲ್ಲ. ನಾನು ಮೂರು ದಿನ ಅವರ ಬಳಿ ಹೋಗುವುದನ್ನು ನೀವು (ಆಯೋಗ) ತಡೆಹಿಡಿದಿರಬಹುದು. ಆದರೆ, ನಾಲ್ಕನೇ ದಿನ ನಾನು ಅಲ್ಲಿರುತ್ತೇನೆ ಎಂದು ದೀದಿ ಗುಡುಗಿದ್ದಾರೆ.

ಸೀತಾಲಕುಚಿಯ ಘಟನೆಯನ್ನು ದೀದಿ, ಇದು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದ ಮಾನವ ಹತ್ಯಾಕಾಂಡ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net