ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಖುಷಿಯ ವಿಚಾರ

Painting_Crowd (6)
Published on

ಬೆಂಗಳೂರು: ಕಲ್ಯಾಣ ಕರ್ನಾಟಕದ 7 ಜಿಲ್ಲೆೆಗಳ ಆಯ್ದ 1,008 ಪ್ರಾಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಾಥಮಿಕ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಪ್ರತಿ ಶಾಲೆಗೆ ಅಗತ್ಯವಿರುವ ಪಠ್ಯಪುಸ್ತಕ, ಕಲಿಕಾ ಸಾಮಗ್ರಿ ಮತ್ತು ಕಲಿಕಾ ಕಿಟ್‌ಗಳನ್ನು ಒದಗಿಸಲು ತಲಾ 75 ಸಾವಿರ ರೂ ನಂತೆ 7.56 ಕೋಟಿ ರೂಗಳನ್ನು ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಭರಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಪ್ರಸ್ತುತ ಕರ್ನಾಟಕ ಪಬ್ಲಿಿಕ್ ಸ್ಕೂಲ್ ಸೇರಿದಂತೆ ಒಟ್ಟು 900 ಶಾಲೆಗಳಲ್ಲಿ ನಾಲ್ಕು ಮತ್ತು ಐದನೇ ವಯಸ್ಸಿಿನ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಪೂರ್ವ ಪ್ರಾಾಥಮಿಕ ಶಾಲೆಗಳನ್ನು ತೆರೆಯಲಾಗಿದೆ. ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಹೆಚ್ಚಿಿನ ಬೇಡಿಕೆಯಿದ್ದು ಅಲ್ಲಿಗೆ ದಾಖಲಾಗುವ ಮಕ್ಕಳು ಆ ಬಳಿಕ ಖಾಸಗಿ ಶಾಲೆಗಳಲ್ಲೇ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಾಾರೆ. ಖಾಸಗಿ ಶಾಲೆಗಳ ಕೆಜಿಗಳಿಗೆ ಹೋಲಿಸಿದರೆ ಅಂಗನವಾಡಿಗಳು ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಪೂರೈಸದ ಹಿನ್ನೆೆಲೆಯಲ್ಲಿ ಸರ್ಕಾರ ತಾನೇ ಖುದ್ದು ಪೂರ್ವ ಪ್ರಾಾಥಮಿಕ ಶಾಲೆಗಳನ್ನು ಆರಂಭಿಸುತ್ತಿಿದೆ.

ಬಳ್ಳಾಾರಿಗೆ 119, ಬೀದರ್ 98, ಕಲಬುರಗಿ 234, ಕೊಪ್ಪಳ 131, ರಾಯಚೂರು 190, ವಿಜಯನಗರ 142 ಮತ್ತು ಯಾದಗಿರಿ ಜಿಲ್ಲೆೆಗೆ 94 ಪೂರ್ವ ಪ್ರಾಾಥಮಿಕ ಶಾಲೆಗಳನ್ನು ಶಾಲಾ ಪ್ರಾಾಥಮಿಕ ಮತ್ತು ಸಾಕ್ಷರತಾ ಇಲಾಖೆ ಮಂಜೂರು ಮಾಡಿದೆ.

ಪೂರ್ವ ಪ್ರಾಾಥಮಿಕ ಶಾಲೆಗಳಲ್ಲಿ ಕನಿಷ್ಠ 20 ಮತ್ತು ಗರಿಷ್ಠ 30 ವಿದ್ಯಾಾರ್ಥಿಗಳಿಗೆ ಪ್ರವೇಶ ಅವಕಾಶವಿದ್ದು ಒಬ್ಬರು ಶಿಕ್ಷಕ/ಶಿಕ್ಷಕಿ ಮತ್ತು ಇಬ್ಬರು ಆಯಾಗಳು ಕಾರ್ಯನಿರ್ವಹಿಸಲಿದ್ದಾಾರೆ. ತರಗತಿಗಳು ಬೆಳಗ್ಗೆೆ 10 ರಿಂದ ಅಪರಾಹ್ನ 3.30ರವರೆಗೆ ನಡೆಯಲಿದೆ. ಅಂಗನವಾಡಿ ಮಕ್ಕಳಿಗೆ ನೀಡಿದಂತೆ ಪೂರ್ವ ಪ್ರಾಾಥಮಿಕ ವಿಭಾಗದ ಮಕ್ಕಳಿಗೂ ಆಹಾರ, ಹಾಲು ನೀಡುವಂತೆ ಸೂಚನೆ ನೀಡಲಾಗಿದೆ.

ಎಸ್‌ಡಿಎಂಸಿಗೆ ಹೊಣೆ

ಶಾಲಾ ಶಿಕ್ಷಣ ಇಲಾಖೆಯು ಪೂರ್ವ ಪ್ರಾಾಥಮಿಕ ಶಿಕ್ಷಣದ ಹೆಚ್ಚಿಿನ ಹೊಣೆಯನ್ನು ಶಾಲಾಭಿವೃದ್ಧಿಿ ಸಂಘ ಮತ್ತು ಮುಖ್ಯೋೋಪಾಧ್ಯಾಾಯರ ಹೆಗಲಿಗೆ ಹೊರಿಸಿದೆ. ಪ್ರತಿ ಪೂರ್ವ ಪ್ರಾಾಥಮಿಕ ಶಾಲೆಗೆ ಒಬ್ಬ ಶಿಕ್ಷಕ/ಶಿಕ್ಷಕಿ ಮತ್ತು ಇಬ್ಬರು ಆಯಾಗಳನ್ನು ಶಾಲಾ ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರು ತಾತ್ಕಾಾಲಿಕವಾಗಿ ಹತ್ತು ತಿಂಗಳ ಅವಧಿಗೆ ನೇಮಕ ಮಾಡಬೇಕು ಮತ್ತು ಈ ಶಾಲೆಗಳ ಬಗ್ಗೆೆ ಸ್ಥಳೀಯ ಮಟ್ಟದಲ್ಲಿ ಪ್ರಚಾರದ ನಡೆಸಬೇಕು ಎಂದು ಸೂಚಿಸಲಾಗಿದೆ.

ಶಿಕ್ಷಕರಿಗೆ ಮಾಸಿಕ ಹತ್ತು ಸಾವಿರ ರೂ ಸಂಭಾವನೆ ಮತ್ತು ಆಯಾಗಳಿಗೆ ಮಾಸಿಕ ತಲಾ ಐದು ಸಾವಿರ ಸಂಭಾವನೆಯನ್ನು ನಿಗದಿ ಪಡಿಸಲಾಗಿದ್ದು ಈ ವೇತನಾ ಅನುದಾನವನ್ನು ಸಂಬಂಧ ಪಟ್ಟ ಉಪನಿರ್ದೇಶಕರು ಆಯಾ ಶಾಲೆಯ ಖಾತೆಗೆ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇರುವ ಮುಖ್ಯ ಶಿಕ್ಷಕರು, ಪ್ರಾಾಥಮಿಕ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಒಬ್ಬ ಹಿರಿಯ ಸಹ ಶಿಕ್ಷಕ/ಶಿಕ್ಷಕಿ ಸದಸ್ಯರಾಗಿರುವ ಆಯ್ಕೆೆ ಸಮಿತಿಯು ಶಿಕ್ಷಕ ಮತ್ತು ಆಯಾರನ್ನು ಆಯ್ಕೆೆ ಮಾಡಲಿದೆ. ಆಯ್ಕೆೆಗೆ ಅಗತ್ಯ ಮಾನದಂಡಗಳನ್ನು ಆದೇಶದಲ್ಲಿ ನಿಗದಿ ಪಡಿಸಲಾಗಿದೆ. ಆಯ್ಕೆೆಗೊಂಡ ಶಿಕ್ಷಕರು ಮತ್ತು ಆಯಾಗಳ ಅವಧಿ ಮಾರ್ಚ್ 31ರವರೆಗೆ ಮಾತ್ರ ಇರಲಿದ್ದು ಮುಂದಿನ ವರ್ಷ ಮರು ನೇಮಕಾತಿಗಾಗಿ ಪುನಃ ಅರ್ಜಿ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ತರಗತಿಯಲ್ಲಿ ಏನಿರಲಿದೆ?

ಶಾಲೆಯ ಒಂದು ಕೊಠಡಿಯನ್ನು ನಿಗದಿ ಪಡಿಸಿ ಅದನ್ನು ಅವಶ್ಯ ಸಾಮಾಗ್ರಿಿಗಳಿಂದ ಸಜ್ಜುಗೊಳಿಸಬೇಕು. ಕೊಠಡಿ ಸಜ್ಜುಗೊಳಿಸಲು ಚಿತ್ರ ಕಲಾ ಶಿಕ್ಷಕರು ಅಥವಾ ಪರಿಣತರ ನೆರವು ಪಡೆದು ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ರಚಿಸಬೇಕು, ಗೋಡೆ ಮೇಲೆ ನೆಲ ಮಟ್ಟದಿಂದ 2 ಅಡಿಯವರೆಗೆ ಮಕ್ಕಳಿಗೆ ಚಿತ್ರ ಬರೆಯಲು, ಚಿತ್ರ ರಚಿಸಲು ಅನುವಾಗುವಂತೆ ಗ್ರೀನ್/ಕಪ್ಪುು ಹಲಗೆ ಇರಲಿದೆ.

ನಿರ್ದೇಶನಗಳೇನು? * ಈ ವರ್ಷದಿಂದಲೇ ಪೂರ್ವ ಪ್ರಾಾಥಮಿಕ ಶಾಲೆಗಳನ್ನು ಪ್ರಾಾರಂಭಿಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು * ಪಠ್ಯಕ್ರಮ ಮತ್ತು ಬೋಧನೋಪಕರಣಗಳನ್ನು ತಕ್ಷಣವೇ ಶಾಲೆಗಳಿಗೆ ಒದಗಿಸಬೇಕು * ಆಯ್ಕೆೆಯಾದ ಶಿಕ್ಷಕರಿಗೆ ಡಯಟ್‌ನಲ್ಲಿ ತರಬೇತಿ ನೀಡಬೇಕು * ಉಪನಿರ್ದೇಶಕರು ಶಾಲೆಗಳಲ್ಲಿ ಅಗತ್ಯ ಕೊಠಡಿ/ಮೂಲಭೂತ ಸೌಕರ್ಯ ಒದಗಿಸಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net