

ಶಿಶಿರ ಋತು ಹಾಗೂ ಶಾರ್ವರಿನಾಮ ಸಂವತ್ಸರದ ಕಡೆಯ ಮಾಸ ಫಾಲ್ಗುಣ ರವಿವಾರವೇ ಆರಂಭವಾಗಿ ಅದೇ ದಿನ ಚಂದ್ರೋದಯವಾಗುತ್ತದೆ. ದಿನಗಳಲ್ಲಿ ಅತ್ಯುತ್ತಮವಾದ 14,15,16,17,18 ಹಾಗೂ 19ರಂದು ಏನೇ ಕೆಲಸ ಮಾಡಿದರೂ ಜಯ ಆಗುವುದು. ಸದ್ಯದಲ್ಲೇ ಗುರು 11ಕ್ಕೆ ಬರಲಿದ್ದಾನೆ. ಶುಭಾಶುಭ ಫಲ ಪಡೆಯುತ್ತೀರ. ಸುಬ್ರಹ್ಮಣ್ಯ ದೇವರನ್ನು ಅನುಷ್ಠಾನ ಮಾಡಬೇಕು.
9ರ ಗುರುವು ಹತ್ತನೇ ಮನೆಗೆ ಚಲಿಸಿ 09ರಲ್ಲಿ ಕೊಡಬೇಕಾದ ಫಲವನ್ನು, ಸ್ವತಂತ್ರವಾಗಿ ಕೊಡುತ್ತಾನೆ. ಶನಿ 9ರಲ್ಲಿರುವುದರಿಂದ ಶೀಘ್ರ ಶುಭಫಲ ನಿರೀಕ್ಷೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದದಿದ್ದರೆ ದ್ವಾದಶಕ್ಕೆ ಗುರು ಬಂದಾಗ ಅನವಶ್ಯಕ ತೊಂದರೆ ಪಡುತ್ತೀರ. ಇತಿ-ಮಿತಿ ತಿಳಿದು ಕೆಲಸಮಾಡಿ. ಮಾ. 18,19,24,25,27 ಒಳ್ಳೆಯ ದಿನಗಳು.
ಮಿಥುನ ರಾಶಿಯವರಿಗೆ ಅವಾಹನೆ-ವಿಸರ್ಜನೆ ಎರಡೂ ಬೇಡ. ಯಥಾಸ್ಥಿತಿಯಲ್ಲಿ ಕೆಲಸ ಮುಂದುವರಿಸಿ, ಅಷ್ಟಮ ಶನಿ, ಗುರು ಏನು ಕೊಡಬೇಕೆಂಬುದು ಅವರದ್ದೇ ತೀರ್ವನ. ಆರೋಗ್ಯ ಒಂದಿದ್ದರೆ ಸಾಕು, ಬೇರೆ ಏನನ್ನೂ ಬಯಸುವುದು ಬೇಡ. ಮಾ. 21,23,27ರಂದು ಯಾವ ಕೆಲಸಕ್ಕೂ ಕೈ ಹಾಕಬೇಡಿ. ಎಚ್ಚರವಾಗಿ ಸಾಗಿ.
ಗುರುವಿನ ಲಕ್ಷಣವೊಂದಿದ್ದರೆ, ಕತ್ತಲಲ್ಲೂ ಕಣ್ಣು ಕೆಲಸ ಮಾಡುತ್ತದೆ. ಗುರುವಿಲ್ಲದಲ್ಲಿ ಮಾರ್ಗವೂ ಇಲ್ಲ. ಗುರಿಯೂ ಶೂನ್ಯ. ಶನಿ ಶುಭಕರನಾಗಿದ್ದಾನೆ. ಅಲ್ಪ ಪ್ರಯತ್ನದಿಂದ ಸಂತಸದ ಜೀವನ ನಡೆಸಲು ಅನುಕೂಲವಾಗುತ್ತದೆ. ಆರೋಗ್ಯದ ಮೇಲೆ ನಿಗಾ ಇಡಿ. ಹಸಿರು-ಉಸಿರು ಅತಿ ಅವಶ್ಯಕ. 14,15,24,27 ಶುಭ ದಿನಗಳು.
ಮನುಷ್ಯನು ಹಗಲಿನಲ್ಲಿ ಸೂರ್ಯಾಸ್ತದವರೆಗೆ ದೀಪದ ಆಸರೆಯಿಲ್ಲದೆ ಎಲ್ಲಿ ಬೇಕಾದರೂ ಹೋಗಬಹುದು. ಏನು ಬೇಕಾದರೂ ಮಾಡ ಬಹುದು. ಅವನ ರಾಶಿಯಲ್ಲಿ ಜನಿಸಿರುವುದು ಬೆಳಕನ್ನು, ಬಂದ ಧನವನ್ನು ದೇವರು ಕೊಡುವ ಸುಖವನ್ನು ಹಂಚಿಕೊಳ್ಳಬೇಕು ಎಂಬುದು ಅವನ ಸಂದೇಶ. ಭಯ-ಭೀತಿ ದುಃಖ ಬೇಡ. ಸೂರ್ಯ ವಿಷ್ಣು, ದುರ್ಗೆಯನ್ನು ಪೂಜಿಸಿ.
ಪಂಚಮ ಗುರುವಿದ್ದರೂ, ಪಂಚಮ ಶನಿಯು ದಾರಿ-ದಿಕ್ಕನ್ನು ತಪ್ಪಿಸುತ್ತಾನೆ. ಗುರುಚರಿತ್ರೆಯಲ್ಲಿ ಶಿಷ್ಯ ಸಾಯಂದೇವನನ್ನು ಗುರುಗಳು ಅಗ್ನಿಯನ್ನು ತರಲು ಹೇಳುತ್ತಾರೆ. ಎರಡು ಘಟಸರ್ಪಗಳು ಹಿಂದೆ ಬಿದ್ದು ದಾರಿ ತಪ್ಪಿಸುತ್ತವೆ. ಭಯಭೀತನಾಗಿ ಗುರುವನ್ನು ನೆನೆಸಿದಾಗ ಗುರು ದಾರಿ ತೋರಿಸುತ್ತಾನೆೆ. ದೃಢವಾದ ಗುರುಭಕ್ತಿ ಬೇಕು. ಶನಿಯನ್ನು ಅಷ್ಟೋತ್ತರದಿಂದ ಪೂಜಿಸಿ. ವಿಷ್ಣು ಸಹಸ್ರನಾಮ ಮಾಡಲೇಬೇಕು.
ಸತ್ಯ ಧರ್ಮ-ನಿಷ್ಠೆಯ ಸಂಕೇತವೇ ತಕ್ಕಡಿ. ನೀವು ತಕ್ಕಡಿಯಲ್ಲಿ ಚಿನ್ನವನ್ನು ತೂಗುತ್ತೀರೋ, ಖರ್ಜೂರ ತೂಗುತ್ತೀರೋ ಯಾವುದು ಬೇಕೆಂದು ಅರಿತು, ಚಿನ್ನದಂಥ ಬಾಳು ಅಪೇಕ್ಷೆಯಿದ್ದಲ್ಲಿ, ಸರಳವಾಗಿ, ಸನ್ಮಾರ್ಗಿಗಳಾಗಿ, ಉಪಕಾರಿಗಳಾಗಿ ಬದುಕುವ ಕಾಲ. ಏನನ್ನೂ ಇಚ್ಚಿಸದೆ ಎಲ್ಲವೂ ನಡೆಯುತ್ತದೆ. ಇಲ್ಲದ ಆತಂಕ, ವೇಗ ಬೇಡ. ಕಾಳಿಕಾಂಬ, ಖಡ್ಗಮಾಲಾ ಸ್ತೋತ್ರ ಪಠಿಸಿ.
ವೃಶ್ಚಿಕ ರಾಶಿಯಲ್ಲಿ ಕೇತುವಿರುವುದರಿಂದ ಗಣಪತಿಯನ್ನು ಏನು ಬೇಡಿದರೂ ಕೊಡುತ್ತಾನೆ. ಗುರುಚರಿತ್ರೆಯ 12,14ನೇ ಅಧ್ಯಾಯ ಪಾರಾಯಣ ಮಾಡಿ, ನಿಂತಿರುವ ಕೆಲಸ ಪ್ರಾರಂಭ ಮಾಡಿ. ನಿರೀಕ್ಷೆಗೂ ಮೀರಿದ ಹಣವನ್ನು ಪರಮಾತ್ಮ ನಿಡುತ್ತಾನೆ. ಮಾ. 14,15,16,17,19,23,27 ನಿಮ್ಮ ಇಚ್ಛೆಯನ್ನು ನೆರವೇರಿಸುವ ದಿನಗಳು. 17ರಂದು ವಿನಾಯಕ ಚತುರ್ಥಿ, ಮರೆಯದೇ ಪ್ರಾರ್ಥಿಸಿ.
ಧರ್ನಧಾರಿಯಾದ ಸೀತಾ-ರಾಮ-ಲಕ್ಷ್ಮಣರನ್ನು ನೋಡಿ ನಿಮ್ಮ ಗುರಿಯನ್ನು, ಬುದ್ಧಿ ಎಂಬ ಬಾಣವನ್ನು ಸರಿಯಾಗಿ ಉಪಯೋಗಿಸಿ. ಗೊಂದಲ ಬೇಡ. ಏಕಾಗ್ರತೆ ಇರಲಿ. ಏಕಲವ್ಯನ ಆದರ್ಶವಿರಲಿ. ಮನೋಧೈರ್ಯದಿಂದ ಮನೋವಾಂಛಿತ ಫಲ ಪಡೆಯುತ್ತೀರ. ತಂದೆ- ತಾಯಿಯನ್ನು ನೆನೆಸದವನು ಭ್ರಷ್ಟನೆಂದು ಗುರು ಚರಿತ್ರೆ ಹೇಳುತ್ತದೆ. ದತ್ತಕ್ಷೇತ್ರವನ್ನು ಸಂದರ್ಶಿಸಿ.
ಮುಖಾರವಿಂದವೆಂದರೆ ಸುಂದರವಾಗಿರುವ, ಕ್ರೋಧವಿಲ್ಲದ ಸೌಂದರ್ಯಭರಿತ ಮುಖ. ಮಹಾತ್ಮರು ಹೇಳುತ್ತಾರೆ-ಮುಖದಲ್ಲಿ ಕಳೆಯಿಲ್ಲದ ವನಿಗೆ ಭೂಲೋಕದಲ್ಲಿ ಏನೂ ಸಿಗುವುದಿಲ್ಲ. ರಾಮನನ್ನು ನೆನೆಸಿ ಸುಂದರವಾದ ಜೀವನ ರೂಪಿಸಿ, ಉತ್ಸಾಹದಿಂದಿರಿ. ನೀವಾಗಲಿ, ಮನೆಯವರಾಗಲೀ ಅನ್ಯಮಾರ್ಗದ ಧನದ ಮೇಲೆ ಆಶ್ರಯಿಸಬೇಡಿ. ಮುಂದೆ ಕೇಡನ್ನು ತಂದೊಡ್ಡಬಹುದು.
ಕಂಭಕ್ಕೂ- ಕುಂಭಕ್ಕೂ ಬಹಳ ವ್ಯತ್ಯಾಸವಿಲ್ಲ. ಕಂಭಕ್ಕೆ ಕಟ್ಟು ಹಾಕಿದರೆ ಶರೀರವೂ ಅಲ್ಲಾಡುವುದಿಲ್ಲ. ಕುಂಭಕ್ಕೆ ಕೈ ಹಾಕಿ ತೆಗೆಯುವಾಗ ಕೈ ಪೆಟ್ಟಾದರೆ ಏನೂ ಮಾಡಲಾಗುವುದಿಲ್ಲ. ನಮ್ಮ ಕೈ-ಕಾಲು ಹತೋಟಿಯಲ್ಲಿದ್ದು, ನಮ್ಮನ್ನು ನಡೆಸುವವನು -ನುಡಿಸುವವನಾದ ಪರಮೇಶ್ವರನ ಅನುಗ್ರಹ ಬೇಕೇ ಬೇಕು. ಲಗ್ನಕ್ಕೆ ಗುರುಬಂದ ಮೇಲೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಕಾಲಭೈರವನನ್ನು, ದಕ್ಷಿಣಾಮೂರ್ತಿಯನ್ನು ಪೂಜಿಸಿ.
ಏ. 14ರಿಂದ ಶುಕ್ರಗ್ರಹವು ರವಿಯೊಂದಿಗೆ ನಿಮ್ಮ ರಾಶಿಗೆ ಸೇರಿ ಉಚ್ಚವಾದ ಶುಕ್ರನು ಉಚ್ಚ ಪದವನ್ನೇ ಕೊಡುತ್ತಾನೆ. ಅತಿಧನವು ದುಃಖ ತರುತ್ತದೆ. ಸಮತೋಲನದ ಜೀವನ ಇರಬೇಕು. ನಿಮಗೆ ಕಳೆದ ಒಂದೂವರೆ ವರ್ಷದಿಂದ ಗ್ರಹಗಳು ಏನನ್ನೂ ಕಡಿಮೆ ಮಾಡಿಲ್ಲ. ಬಾಳಲ್ಲಿ ತೃಪ್ತಿ ಇದ್ದಲ್ಲಿ ಎಲ್ಲವೂ ಕೈಸೇರುತ್ತದೆ. ಸಾಧ್ಯವಾದಲ್ಲಿ ಹೊರನಾಡು ಅನ್ನಪೂರ್ಣೆಶ್ವರಿಯನ್ನು ಸಂದರ್ಶಿಸಿ ಸೇವೆ ಮಾಡಿ.