

ಮೇಷ: ಜೀವನದ ಬಂಡಿ ದೂರ ತೀರಕೆ ಸೇರಲಿ. ಆಸೆಯನ್ನು ಹೊತ್ತ ಜೀವಿಗಳಿಗೆ ನಿರಾಸೆ ಆಗದಿರಲಿ. ನಿರಾಸೆ ಆದಾಗ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಇರಬಾರದು. ಇದಕ್ಕೆ ತಕ್ಕ ಉತ್ತರ ವೆಂದರೆ ಮೇಷ ರಾಶಿಯ ಗುರುವು ನಿಮಗೆ ಬಲವನ್ನು ತುಂಬ ಬೇಕು. ಈಗ ಸದ್ಯದಲ್ಲಿ ಮೌನ ಧರಿಸಿ. ಗುರು ದತ್ತಾತ್ರೇಯ ಜೊತೆಗೆ ಇರುವ ಸುಬ್ರಮಣ್ಯನನ್ನು ದರ್ಶಿಸಿ. ಇಷ್ಟಾರ್ಥ ನೆರವೇರುತ್ತದೆ.
ವೃಷಭ: ನಿಮ್ಮನ್ನು ಪ್ರೀತಿಸುವವರು, ಗೌರವಿಸುವವರು ತನ್ನ ಕೆಲಸಕ್ಕೆ ಯಾವ ದಾರಿ ಎಂದರೆ ಅವರಿಗೆ ಹಿತವಾದ ದಾರಿ ತೋರಬೇಕೆ ಹೊರತು ನಿಮ್ಮ ದಾರಿಯಲ್ಲಿ ನಡೆದು, ಮುಂದೆ ನೋಡೋಣ ಎಂಬ ಮಾತನ್ನು ಆಡಿದರೆ ಬೆಲೆಯೇ ಇರುವುದಿಲ್ಲ. ಹಸಿದವರ ಮತ್ತು ನಿಮ್ಮನ್ನು ನಂಬುವ ವ್ಯಕ್ತಿಗಳ ಇಚ್ಛೆಯನ್ನು ಪೂರೈಸಿದರೆ ದುರ್ಗೆ ನಿಮ್ಮನ್ನು ಮೆಚ್ಚುತಾಳೆ. ಸಹಾಯಹಸ್ತ ಇರಲಿ. ನಿಮ್ಮ ನಡಿಗೆ ಎಚ್ಚರದಿಂದ ಕೂಡಿರಲಿ. ದುರ್ಗೆಯನ್ನು ಪ್ರಾರ್ಥಿಸಿ.
ಮಿಥುನ: ಈ ರಾಶಿಯಲ್ಲಿ ಜನಿಸಿದವರು ಸನ್ಮಾರ್ಗದಲ್ಲಿ ನಡೆದರೆ 11ರ ಗುರುವು ತುಂಬು ಹೃದಯದಿಂದ ಹರಸಿ ಕೆಲಸ ನಡೆಸಿಕೊಡುತ್ತಾರೆ. ಶ್ರಮ ಪಟ್ಟು ಹಣ ಸಂಪಾದನೆ ಮಾಡಿದರೆ ಸಂತಸ, ಸುಖ ಇರುತ್ತದೆ. ನಿಮ್ಮ ಕಾರ್ಯಗಳು ಮುಂದೆ ಸಾಗುತ್ತವೆ. ಇನ್ನು 2 ತಿಂಗಳ ಕಾಲ ನಿಮಗೆ ಯಾವ ಭಯವೂ ಇಲ್ಲ. ದೇವರಗುಡ್ಡದಲ್ಲಿ ನೆಲೆಸಿರುವ ಮನಿಕಾಸುರನನ್ನು ಸದೆಬಡಿದು ಕುದುರೆಯಲ್ಲಿ ಖಡ್ಗ ಹಿಡಿದು ಮಾನಸದೇವಿಯೊಂದಿಗೆ ಇರುವ ಮಲ್ಲಾರಿ ದೇವರನ್ನು ಪೂಜಿಸಿ. ಜೀವನವನ್ನು ಗೆಲ್ಲಬಹುದು.
ಕಟಕ: ಮಾಘಮಾಸವು ಅಂತ್ಯಕ್ಕೆ ಬಂದು ಅಮಾವಾಸ್ಯೆಯಿಂದ ಕೊನೆಗೊಂಡು ಕತ್ತಲೆಯೂ ದೂರವಾಗಿ, ಶಾಶ್ವತವಾದ ಬೆಳಕನ್ನು ನೀಡಿ ದೇವಾನುದೇವತೆಗಳನ್ನು ಒಲಿಸಿಕೊಳ್ಳಲು ಭಕ್ತಿಯೇ ಮಾರ್ಗವಾಗಿದೆ. ಸೂರ್ಯನಾರಾಯಣನ ಆರಾಧನೆಯನ್ನು ಮಾಡಿ. ಕೆಂಪು ಹೂವಿನಿಂದ ಸೂರ್ಯನನ್ನು ಅರ್ಚಿಸಿ. ಜೀವನದ ಮುಂದಿನ ಪಯಣ ಆರಾಮವಾಗಿರುತ್ತದೆ.
ಸಿಂಹ: ಸಪ್ತಮದಲ್ಲಿ ಶುಕ್ರನು, ಕುಜ ಶನಿಯು ಕೂಡಿರುವುದು ಧನಭಾಗ್ಯವು, ಸುಖವು ಮತ್ತು ನಿರೀಕ್ಷಿಸಿದ ಕೆಲಸ ನಿಮ್ಮಂತೆ ಆಗಿ ಸಂತಸ ಕೊಡುತ್ತದೆ. ಯಾರೊಂದಿಗೂ ಚರ್ಚೆಗೆ ಇಳಿಯಬೇಡಿ. ಯಾರ ಹತ್ತಿರ ವಿಷಯಗಳ ವಾದ-ವಿವಾದ ಮಾಡಿ ಕಳಂಕ ತಂದುಕೊಳ್ಳಬೇಡಿ. ಈಶ್ವರನ ಅರ್ಚನೆಯನ್ನು ಮಾಡಿ. ಸುಖವನ್ನು, ಯೋಗಗಳನ್ನು ಪಡೆಯಿರಿ.
ಕನ್ಯಾ: ಆರನೇ ಮನೆಯ ಶನಿಯು ಕನ್ಯಾ ರಾಶಿ ಅವರಿಗೆ ಬಿಡುವುದನ್ನು ಬಿಟ್ಟು, ಕೊಡುವುದನ್ನು ಕೊಟ್ಟು ನಿಮ್ಮ ಕೈ ಹಿಡಿದು ನಡೆಸುತ್ತಾನೆ. ಅಷ್ಟಮದಲ್ಲೀ ಗುರು ಇರುವುದರಿಂದ ದೈವಬಲವು ಅಷ್ಟೇನೂ ಇಲ್ಲದಿರುವುದರಿಂದ ದಕ್ಷಿಣಾಮೂರ್ತಿಯನ್ನು ಪೂಜಿಸಿ. ದಕ್ಷಿಣಾಮೂರ್ತಿ ಅಷ್ಟೋತ್ತರ ಪಠಣ ಮಾಡಿ. ಧನ್ವಂತರಿ ಅಷ್ಟೋತ್ತರ ನಿತ್ಯ ಪಾರಾಯಣ ಮಾಡಿ.
ತುಲಾ: ಪಂಚಮ ಶನಿ ಮನಸ್ಸಿಗೆ ಖಿನ್ನತೆಯನ್ನು, ಬೇಸರವನ್ನು ತರುತ್ತಾನೆ. ಕಾರ್ಯವು ನಿರೀಕ್ಷೆಯ ಮಟ್ಟವನ್ನು ಮುಟ್ಟದೆ, ಬೇಕಾದ ಕೆಲಸಗಳು ನಿಧಾನ ಆಗುವುದು ಗ್ರಹಗಳ ಸ್ಥಾನಗಳಿಂದ. ಯಾವ ದಷೆ, ನಕ್ಷತ್ರ ಯೋಗ, ಕರಣಗಳಿರಲಿ ಸಪ್ತಮದಲ್ಲಿರುವ ಗುರು ಒಬ್ಬನೇ ಸಾಕು ಎಲ್ಲವನ್ನೂ ನಿಭಾಯಿಸಲು. ಶ್ರದ್ಧಾ, ಭಕ್ತಿಯಿಂದ ಗುರುವನ್ನು ನಂಬಿದರೆ ನೀವು ಚಾಣಾಕ್ಷತೆಯಿಂದ ಕೆಲಸ ನಡೆಸಲು ಸಹಾಯಕನಾಗುವನು.
ವೃಶ್ಚಿಕ: ನಾಲ್ಕರ ಶನಿ, 6ರ ಗುರು ಗ್ರಹಗತಿ ಚೆನ್ನಾಗಿ ಇಲ್ಲದಿದ್ದರೂ ಪೂರ್ವಪುಣ್ಯದಿಂದ ಬರುವ ಒಳ್ಳೆಯ ಫಲ ಹೊಂದಿಕೊಂಡಿರುತ್ತದೆ. ಪುಣ್ಯಜೀವಿಗಳಾಗಿ ಮನುಷ್ಯನು ಬದುಕುವುದಕ್ಕೆ ಜನ್ಮ ತಾಳಿದ್ದಿವಿ. ನಿಮ್ಮ ಆಸೆ, ಆಕಾಂಕ್ಷೆಗಳು ತೃಪ್ತಿ, ಸಂತೋಷವನ್ನು ತರಬೇಕಾದರೆ ತಿರುಪತಿಯ ವೆಂಕಟಗಿರಿಯನ್ನು ಹತ್ತಿ, ಹುಣ್ಣಿಮೆಯಂದು ಗರುಡವಾಹನ ಸೇವೆಯನ್ನು ನೋಡಿ ಬನ್ನಿ. ಜೀವನದಲ್ಲಿ ಆನಂದ ಸಿಗುತ್ತದೆ.
ಧನಸ್ಸು: ಬಾಣದ ಗುರಿಯು ಬಿಲ್ಲಿನ ಬಲವು ಬೇರೆ ಯಾವುದೇ ಆಯುಧಗಳಿಗೆ ಸರಿಸಮ ಇಲ್ಲ. ಒಂದೇ ಗುರಿಯಿಂದ ಬಿಲ್ಲನ್ನು ಬಾಣದಿಂದ ಪ್ರಯೋಗಿಸಿದದರೆ ಬಿಲ್ಲು ನಿಮ್ಮ ನಿರೀಕ್ಷೆಯಂತೆ ಫಲ ಕೊಡುತ್ತದೆ. ಸರ್ಕಾರವೇ ಇರಲಿ, ಸ್ನೇಹಿತರೇ ಇರಲಿ ನಿಮ್ಮ ಕೆಲಸ ಮಾಡಿಕೊಳ್ಳುವ ಸಮಯ ನಿಮ್ಮ ಕೈಯಲ್ಲಿ ಇದೆ. ಗುರುವಿನ ಪಂಚಮ ಸ್ಥಾನದಿಂದ ಮನದಲ್ಲಿ ಬಲ ಬರಬೇಕಾದರೆ ಯಾವುದೇ ಒಂದು ಶರತ್ತು ಇಲ್ಲದೆ ಗುರುವನ್ನು ಪ್ರಾರ್ಥಿಸಿದರೆ ಚಂದ್ರಮಂಡಲವನ್ನೇ ಮುಟ್ಟಬಹುದು. ಗುರು ಪರಂಪರಾ ಸ್ತೋತ್ರ ಪಠಿಸಿ.
ಮಕರ: ಲಗ್ನದಲ್ಲಿ ಯಾವ ಗ್ರಹ ಇರುವುದಿಲ್ಲ. 2ರಲ್ಲಿ ಶನಿ ಶುಕ್ರ ಕುಜ ಸಂಯೋಗದಲ್ಲಿ ಇದ್ದು, ಅದು ಶನಿಯ ಸ್ವಗೃಹವಾಗಿದೆ. ಈ ವಾರದಲ್ಲಿ ಮೌನವಾಗಿದ್ದು, ತಾಳ್ಮೆಯಿಂದ ನಡೆದರೆ. ಕೆಲಸ ತನ್ನಿಂದ ತಾನೇ ರೂಪರೇಖೆ ಹಿಡಿದು ಸಂತಸ ತರುತ್ತದೆ. ಯಾರೊಂದಿಗೂ ಚರ್ಚೆ, ದ್ವೇಷ ಬೇಡ. ಬುದ್ಧಿ ನಿಮ್ಮದು, ಬಲ ಭಗವಂತನದ್ದು.
ಕುಂಭ: ಅಡುಗೆ ಮಾಡುವ ಪಾತ್ರೆ ಮಣ್ಣಿನದಾದರೇನು, ಚಿನ್ನವಾದರೆ ಏನು ಅದರ ಗುಣ ಹಾಕಿದ ಪದಾರ್ಥವನ್ನು ನಿಮ್ಮ ನಾಲಿಗೆಯ ರುಚಿಗೆ ತಕ್ಕಂತೆ ಸಿದ್ಧ ಮಾಡುವುದು ಪಾತ್ರೆಯ ಅಥವಾ ಕುಂಭದ ಕೆಲಸ. ಒಡನಾಡಿಗಳೊಂದಿಗೆ ನಿಮ್ಮ ಯಾವುದೇ ಮೇಲ್ಮಟ್ಟವನ್ನು ಪ್ರದರ್ಶಿಸದೆ ಸರಳ ಜೀವನ ಅಳವಡಿಸಿಕೊಂಡರೆ ಪಾತ್ರೆಯೂ ತುಂಬಿ ತುಪ್ಪದ ಹೊಳೆಯನ್ನು ಭಗವಂತನೇ ಹರಿಸುತ್ತಾನೆ. ಉಮಾಮಹೇಶ್ವರನನ್ನು ಪೂಜಿಸಿ.
ಮೀನ: ನೀರಿನಲ್ಲಿ ಇರುವ ಮೀನುಗಳಿಗೆ ಕೂಡ ನಾನಾ ಥರವಾದ ಜಾತಿಗಳಿವೆ. ನೀರನ್ನು ಬಿಟ್ಟರೆ ಜಾತಿಯೂ ಇಲ್ಲ. ಜೀವವೂ ಇಲ್ಲ. ಧರ್ಮವನ್ನು, ಜಾತಿಯನ್ನು ತಲೆಗೆ ತೆಗೆದುಕೊಳ್ಳದೆ, ಎಲ್ಲರನ್ನೂ ಪ್ರೀತಿಸುವ ಮಹತ್ವ ಅರಿತುಕೊಂಡರೆ ದ್ವಿತೀಯ ಗುರುವು ನಿಮಗೆ ಸಹಾಯಹಸ್ತ ನೀಡುತ್ತಾನೆ. ದ್ವಾದಶ ಶನಿ ಕೆಲವೊಂದು ಆತಂಕ, ಮನೆಯಲ್ಲಿ ಆರೋಗ್ಯ ಸಮಸ್ಯೆ ಸೃಷ್ಟಿಸಿದರೂ, ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯನ್ನು ನಂಜನಗೂಡಿನಲ್ಲಿ ದರ್ಶಿಸಿ ಬನ್ನಿ. ಶುಭವಾಗುವುದು.