

ಮೇಷಾಧಿಪತಿ ಕುಜನು ದ್ವಾದಶದಲ್ಲಿದ್ದು, ಲಗ್ನಕ್ಕೆ ಹತ್ತರ ಗುರು- ಶನಿ ಸಂಯುಕ್ತವಾಗಿದ್ದು, ದೈವಾನುಗ್ರಹದಿಂದ ಕೆಲಸಗಳು ಕಾರ್ಯಗತ ವಾಗುತ್ತವೆ. ಗುರುವೇ ಎಲ್ಲ ಗ್ರಹಬಾಧೆಗಳನ್ನು ತಡೆದು ಶೇ.70ರಷ್ಟು ಕೆಲಸ ಕೈಗೂಡುತ್ತವೆ. ಗುರುಪ್ರಾರ್ಥನೆ, ಶನಿಪ್ರಾರ್ಥನೆಯನ್ನು ಮಾಡಬೇಕು, ಗುರು-ಶನಿ ಅಷ್ಟೋತ್ತರ ಪಠಿಸಿ, ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮಾಡಿಸಿ.
ವೃಷಭಸ್ಥಿತೇ ರಾಹುವು ತುಲಾ-ವೃಷಭ ರಾಶಿಯಲ್ಲೂ ಉಚ್ಚ ಫಲವನ್ನು ಕೊಡುತ್ತಾನೆ. ಅನುಭವಿಸಿ ಆನಂದಿಸಬಹುದು. ಜೊತೆಯಲ್ಲಿ 9ರ ಗುರು ಹಾಗೂ ಸ್ವಕ್ಷೇತ್ರದಲ್ಲಿ ಶನಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಕೊಡುತ್ತಾರೆ. ಬನಶಂಕರಿಯನ್ನು ಪ್ರಾರ್ಥಿಸಿ, ದರ್ಶನ ಪಡೆಯಿರಿ. ಸುಪ್ಪತ್ತಿಗೆ ಮೇಲೆ ಕುಳಿತಿದ್ದರೂ ದೇವರನ್ನು ಮರೆಯದಿರಿ. ಅವನೇ ದಾರಿ ತೋರುತ್ತಾನೆ.
ಅಷ್ಟಮ ಗುರು, ಶನಿ, ದ್ವಾದಶ ರಾಹು ಗ್ರಹಗಳ ಸ್ಥಿತಿ ಚೆನ್ನಾಗಿ ಕಾಣದಿದ್ದರೂ ಶ್ರೀರಾಮಚಂದ್ರನು ಮಾಯಾವತಾರಿಯಾಗಿ ಕಷ್ಟಪಟ್ಟು 11 ಸಾವಿರ ವರ್ಷ ರಾಜ್ಯವನ್ನಾಳಿದನು. ನೀವು ಶ್ರಮಪಟ್ಟು ಕೆಲಸಮಾಡಿ. ರಾಮಚಂದ್ರನನ್ನು ಪೂಜಿಸಿ. 2021 ಏಪ್ರಿಲ್ನಲ್ಲಿ ಸಂತೋಷ ಕಾಣುತ್ತೀರಿ. ಆರೋಗ್ಯಕ್ಕಾಗಿ ಮೃತ್ಯುಂಜಯ ಮಹಾಮಂತ್ರ ಜಪಿಸಿ. ಶಿವನಿಗೆ ರುದ್ರಾಭಿಷೇಕ ಮಾಡಿಸಿ.
29-ಭಾನುವಾರದಂದು ಕೈಲಾಸದಲ್ಲಿ ಶಿವಕೃತ್ತಿಕೆಯಲ್ಲಿ ದೀಪ ಬೆಳಗುತ್ತದೆ. ಅಂತೆಯೇ ವಿಶೇಷವಾಗಿ ಕಾರ್ತಿಕನನ್ನು ಪೂಜಿಸಿ, ಆನಂದ ಅನುಭವಿಸಿ. ಸಂತೋಷ ಮತ್ತು ಸಿಹಿ ಹಂಚುವ ಪದಾರ್ಥವೆಂದು ತಿಳಿದು ನೀವೂ ಸುಖವನ್ನು ಉಂಡು, ಮತ್ತೊಬ್ಬರಿಗೂ ಸಂತೋಷವನ್ನು ನೀಡಿ. ಸದಾ ದೈವ ಪ್ರಾರ್ಥನೆ ಇರಲಿ.
ಸಿಂಹದ ವಾಸ ಅರಣ್ಯದಲ್ಲಿ. ಸಿಂಹರಾಶಿಯವರ ವಾಸ ಕಲ್ಯಾಣವನ್ನು ಉಂಟುಮಾಡುವ ಕಲ್ಯಾಣನಗರಿಯಲ್ಲಿ. ಗುರುಕೃಪೆ ನಿತ್ಯವೂ ಬೇಕು, ಪ್ರಾರ್ಥಿಸಿ. ಗುರುವಿಗೆ ಕಡಲೆಬೇಳೆಯನ್ನು ನೈವೇದ್ಯ ಮಾಡಿ. ಶಿವನಿಗೆ ಅಭಿಷೇಕ ಮಾಡಿಸಿ. ಆನಂದದ ಜತೆಗೆ ಲಾಭ-ಕೀರ್ತಿಯೂ ಬರುತ್ತದೆ ಎಂಬುದನ್ನು ಮರೆಯದಿರಿ.
ಕನ್ಯಾ ರಾಶಿಯಲ್ಲಿ ಜನಿಸಿದವರು ಕನ್ನಿಕೆ(8 ವರ್ಷದ ಒಳಗಿನ) ಹೆಣ್ಣುಮಗುವಿಗೆ ಪೂಜಿಸಿ. ದುರ್ಗೆಯನ್ನು ಕನ್ನಿಕಾಪರಮೇಶ್ವರಿಯನ್ನು ಪೂಜಿಸಿ. ಪಂಚಮದಲ್ಲಿ ಗುರುವಿದ್ದರೂ ಶನಿಯ ಬಾಧೆ ತಪ್ಪಿಸಿಕೊಳ್ಳಲು ಕನ್ನಿಕಾ ಪೂಜೆ ಅಗತ್ಯ. ನವಗ್ರಹಗಳಲ್ಲಿ ಶ್ರೇಷ್ಠ ಗ್ರಹ ಶನಿ. ಮಾತೆಯ ವಚನ ಪಾಲಿಸಿದ ಏಕೈಕ ಗ್ರಹ ಶನಿ. ಎಲ್ಲರೂ ಜನ್ಮಕೊಟ್ಟ ತಂದೆ-ತಾಯಿಯನ್ನು ನಿತ್ಯವೂ ಪೂಜಿಸಿದರೆ ಜೀವನದಲ್ಲಿ ತೊಂದರೆ, ಕಷ್ಟ-ಕಾರ್ಪಣ್ಯಗಳೇ ಇರುವುದಿಲ್ಲ.
ತುಲಾಧಿಪತಿ ಶುಕ್ರನು ದ್ವಿತೀಯದಲ್ಲಿ ಧನವನ್ನು ಕೈತುಂಬ ಅನುಗ್ರಹಿಸುತ್ತಾನೆ. ಕಷ್ಟಪಟ್ಟಾಗ ಸುಖದ ಬೆಲೆ ತಿಳಿಯುತ್ತದೆ. ಕೊಡುವವನು ದೇವರೇ. ಅವನ ಸ್ಮರಣೆ ಇರಲಿ. ಧನಕ್ಕಾಗಿ, ಆರೋಗ್ಯಕ್ಕಾಗಿ ಚಿಂತೆ ಮಾಡಬೇಡಿ. ಯಾರಾದರೂ ಉಪಟಳ ಕೊಟ್ಟರೆ ಅಂಥವರಿಂದ ದೂರವಿರಿ. ಸುಖ ಬಂದಾಗ ದುಃಖವನ್ನು ಹಳಿಯಬಾರದು. ಈ ವಾರದಲ್ಲಿ ಹನುಮಂತನಿಗೆ ಅಭಿಷೇಕ ಮಾಡಿ, ಇಷ್ಟಾರ್ಥ ಸಿದ್ಧಿಸಿಕೊಳ್ಳಬಹುದು. 5 ಶನಿವಾರಗಳು ರಾತ್ರಿಯಲ್ಲಿ ಉಪವಾಸವಿದ್ದು ಇಷ್ಟಾರ್ಥ ಸಿದ್ಧಿಸಿಕೊಳ್ಳಿ.
ಧನಕ್ಕೆ ಕೊರತೆಯಿದೆ. ನಾಲ್ಕು ಗ್ರಹಗಳು ಒಂದೇ ರಾಶಿಯಲ್ಲಿ ಕೂತು ಆಗುಹೋಗುವುದನ್ನು ನೋಡುವುದರ ಜೊತೆಗೆ ನೀವು ತಿದ್ದಿಕೊಂಡು ನಡೆಯುವುದನ್ನು ನೋಡುತ್ತಿರುತ್ತಾರೆ. ನಿಮಗೆ ಹೇರಳ ಧನ ಬೇಕಾದರೆ ಕಾರ್ತಿಕಸ್ವಾಮಿಯನ್ನು ಪೂಜಿಸಿರಿ. ಸುಬ್ರಹ್ಮಣ್ಯನಿಗೆ ಅರ್ಚನೆ, ಅಭಿಷೇಕ ಮಾಡಿಸಿ. ದೇವರಿಗೆ ರಾತ್ರಿಯಲ್ಲಿ ಕಾರ್ತಿಕ ದೀಪಹಚ್ಚಿ. ನಯವಿನಯದಿಂದ ಮಂಡಿಯೂರಿ ದೀಪವನ್ನು ಬೆಳಗಿ.
ಗುರು ರಾಶಿಯಲ್ಲಿ ಜನಿಸಿದ್ದೀರಿ. ಆದರೆ ಗುರು- ಸ್ವರೂಪವೂ ಅಲ್ಲ, ನೀವು ದೇವರೂ ಅಲ್ಲ. ನಾನು ಎಂಬುದನ್ನು ದೂರವಿಟ್ಟಾಗ ನಿಮಗೆ ಎಲ್ಲವೂ ಲಭ್ಯ. ರಾಶ್ಯಾಧಿಪತಿಯು ಶನಿ ಸಂಯೋಗದಲ್ಲಿ ಎರಡನೇ ಮನೆಯಲ್ಲಿದ್ದು, ಹನ್ನೆರಡರ ಕೇತುವು ಮನುಷ್ಯನಿಗೆ ನೀಡುವುದು ಕೋಪವೊಂದೇ. ಆರೋಗ್ಯಕ್ಕೆ ಕೊರತೆಯಿಲ್ಲ. ಧನಕ್ಕೆ ಚಿಂತೆ ಇಲ್ಲ. ಸುಖಕ್ಕೆ ಕೊರತೆಯಿಲ್ಲ. ದತ್ತಾತ್ರೇಯನನ್ನು ಪ್ರಾರ್ಥಿಸಿ. ಸತ್ಯನಾರಾಯಣ ಕಥೆಯನ್ನು ಓದಿರಿ.
ಮಕರಾಧಿಪತಿ ಮಕರದಲ್ಲಿದ್ದು ಗುರುವಿನೊಡನಿದ್ದಾನೆ. ಸ್ವಲ್ಪಮಟ್ಟಿಗೆ ಶನಿಯ ತಾಪವು ಗುರುವಿನಿಂದ ಕಡಿಮೆಯಾಗಿ ಅಭಿವೃದ್ಧಿ ಮಾರ್ಗ ಕಾಣುತ್ತೀರಿ. ಚಲಿಸುವ ದಾರಿ ಸರಿಯಿರಲಿ. ಮುಳ್ಳು. ಕಲ್ಲು ಚುಚ್ಚಿದರೂ ಹೆದರಬಾರದು. ಸಾಕ್ಷಾತ್ ಈಶ್ವರನ ಸೃಷ್ಟಿಯಾದ ಶನಿಯನ್ನು ಅನನ್ಯ ವಾಗಿ ಪೂಜಿಸಿ. ಶಿವಾಲಯದಲ್ಲಿ ಹುಣ್ಣಿಮೆ ದಿನದಂದು ಜೇನುತುಪ್ಪದಲ್ಲಿ ಅಭಿಷೇಕ ಮಾಡಿಸಿ. ಕಡಲೆಬೇಳೆಯಲ್ಲಿ ಮಾಡಿದ ಉಸಲಿ ಹಂಚಿ. ಒಂದು ವರ್ಷದ ಕಾಲ ಕುಲದೇವರನ್ನು ಹಾಗೂ ಶಿವನನ್ನು ನಿತ್ಯ ಪೂಜಿಸಿ.
ಕುಂಭರಾಶಿಯವರು ನೀರು ತುಂಬಿದ ಕುಂಭ ಎಂದೂ ತುಳುಕುವುದಿಲ್ಲ. ನೀವು ಸದ್ದುಗದ್ದಲ ಮಾಡದೆ, ಬಂದ ಕಷ್ಟ-ಸುಖವಾಗುತ್ತ ಅನುಭವಿಸುವ ಸಮಯ. ಧರ್ಮಕ್ಕೂ ದೈವಭಕ್ತಿಗೂ ಮೆಚ್ಚಿ ಫಲಕೊಡುತ್ತಾನೆ ಶನಿಮಹಾತ್ಮ. ಅವನನ್ನು ಪೂಜಿಸಿ. ಕಷ್ಟ ಓಡಿಹೋಗುವುದು. ಜತೆಗೆ ಭೂಮಿಯಿಂದ ಬಾರದ ಹಣವು ಬರಬೇಕಾದಲ್ಲಿ, ಭಾಗ್ಯವೂ ಉದಯವಾಗಬೇಕಾದಲ್ಲಿ ಏಕಕಾಲದಲ್ಲಿ ಮಹಾಲಕ್ಷ್ಮಿಯನ್ನು, ಕಾರ್ತಿಕೇಯನನ್ನು ಮನಸಾ ಪೂಜಿಸಿ. ನಿಮ್ಮ ಇಚ್ಛೆ ಪೂರ್ಣಗೊಳ್ಳುತ್ತದೆ.
ನೀರಿನಲ್ಲಿದ್ದ ಮೀನು ಆಚೆಬಂದರೆ ಮನುಷ್ಯನಿಗೆ ಆಹಾರವಾಗುತ್ತದೆ. ನೀವು ಸುಖಕಾಲದಲ್ಲಿ ದೇವರನ್ನು ಮರೆತರೆ ಕ್ಷಮೆಯಿಲ್ಲ. ಅವನು ಕೊಟ್ಟಂಥ ಭಾಗ್ಯವನ್ನು ಮರೆಯಬಾರದು. ದೇವರ ಋಣ, ಋಷಿ ಋಣ, ಪಿತೃಋಣ, ಮರೆಯಬಾರದು. ಹನ್ನೊಂದರ ಶನಿ- ಗುರುವಿನ ಲಾಭ ಸುಖ, ಸಂತೋಷ, ಧನ ಅಭಿವೃದ್ಧಿಯಾಗಿ ನಿಮ್ಮನ್ನು ಕಾಪಾಡುವ ಸಮಯ. ಹನ್ನೆರಡು ರಾಶಿಯವರಲ್ಲಿ ಅತ್ಯಂತ ಫಲಕಾರಿಗಳು ನೀವು ಮನೆಯಲ್ಲಿ ವಿಷ್ಣು-ಈಶ್ವರನನ್ನು ಏಕಕಾಲದಲ್ಲಿ ಅರ್ಚಿಸಿ.