

ಮೇಷ: ಫೆಬ್ರವರಿ 13ರಂದು ಸೂರ್ಯನು ಕುಂಭ ರಾಶಿಗೆ ಬಂದು ಶನಿಯ ಸಂಗಡ ಇದ್ದಾನೆ. ಇದೇ 19ನೇ ತಾರೀಕು ಬುಧನು ಶನಿಯ ಮನೆಗೆ ಬಂದು ಕೂರುತ್ತಾನೆ. ರವಿ ಶನಿಗೆ ಮಿತ್ರ ಗ್ರಹ ಬುಧ. ಮೇಷ ರಾಶಿಗೆ ಏಕಾದಶದಲ್ಲಿ ರವಿ ಬುಧ, ಸ್ವಕ್ಷೇತ್ರದಲ್ಲಿ ಶನಿ ಇದ್ದು, ಶುಭಾಶುಭಗಳು ದೈವಬಲದಿಂದ ಸಾಧ್ಯವಾಗುತ್ತವೆ. ಯಾರೊಂದಿಗೂ ದ್ವೇಷ ಬೇಡ. ಎಲ್ಲರನ್ನೂ ಮಿತ್ರರಂತೆ ಕಾಣಿರಿ. ಸೂರ್ಯನಾರಾಯಣ ಪ್ರಾರ್ಥನೆಯಿರಲಿ. ಸುಬ್ರಹ್ಮಣ್ಯನನ್ನು ಸದಾ ಕಾಲ ಪೂಜಿಸಿ.
ವೃಷಭ: ವೃಷಭ ರಾಶಿಗೆ ರಾಹು ಏಕಾದಶದಲ್ಲಿದ್ದು, ಗುರು ದ್ವಾದಶದಲ್ಲಿದ್ದಾನೆ. 11ರ ರಾಹುವಿನಿಂದ ಹತ್ತುಹಲವು ಲಾಭ. ಕೈಯಿಟ್ಟ ಕೆಲಸದಲ್ಲಿ ಜಯವನ್ನು ಸಾಧಿಸಬಹುದು. ಧರ್ಮ ಮಾರ್ಗದಲ್ಲಿ ನಡೆದರೆ ಕೆಲಸಗಳು ನಿಮ್ಮಂತೆ ಸಾಗುತ್ತವೆ. ಚಂಡಿಕಾ ಪಾರಾಯಣವನ್ನು ಮಾಡಿಸಿ ದುರ್ಗೆಯನ್ನು ದರ್ಶಿಸಿ ಬನ್ನಿ.
ಮಿಥುನ: ಮಿಥುನ ರಾಶಿಗೆ ಲಗ್ನಾಧಿಪತಿ ಬುಧನು 9ರಲ್ಲಿದ್ದು ರವಿ ಸಂಗಡದಲ್ಲಿ, ಶನಿಯ ಮನೆಯಲ್ಲಿ ಕುಳಿತಿದ್ದಾನೆ. ಎಲ್ಲವೂ ಶುಭವೇ ಇರುತ್ತದೆ. ನಿಮ್ಮ ಸಾಧನೆಯನ್ನು ಹೆಚ್ಚು ಮಾಡಿ, ಅದಕ್ಕೆ ತಕ್ಕಂತೆ ಸುಖವನ್ನು ಪಡೆಯಬಹುದು. 11ರ ಗುರು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾನೆ. ಸೀತಾ ಲಕ್ಷ್ಮಣ ಹನುಮಂತ ಸಹಿತ ರಾಮಚಂದ್ರನನ್ನು ಪೂಜಿಸಿ.
ಕಟಕ: ಹತ್ತರಲ್ಲಿ ಗುರು ಇದ್ದರೂ 8ರಲ್ಲಿ ಶನಿಯು ಬುಧನ ಸಂಯೋಜನೆ ಯಲ್ಲಿ ಇರುವುದರಿಂದ, ತಿಳಿವಳಿಕೆಯಿಂದ, ಅವಾಂತರ ಮಾಡಿಕೊಳ್ಳದೆ ಕೆಲಸ ಸಾಧಿಸಿಕೊಳ್ಳಬಹುದು. ದೊಡ್ಡ ವ್ಯಾಪಾರದಲ್ಲಿ ಧನವನ್ನು ಹೂಡಬಾರದು. ಇದ್ದ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗಲು ಶನಿಯ ಪ್ರಾರ್ಥನೆ ಅತ್ಯಗತ್ಯ. ಶಿವನಿಗೆ ಬಿಲ್ವ ಅಷ್ಟೋತ್ತರ ಮಾಡಿ ಒಳ್ಳೆಯ ಫಲವನ್ನು ಪಡೆದುಕೊಳ್ಳಿ.
ಸಿಂಹ: ಅಪೂರ್ವವಾದ ಗುರುಬಲವಿದೆ. ನೀವಿಟ್ಟ ಗುರಿಯನ್ನು ತಪ್ಪದಿ ರಲು ದತ್ತ ದೇವರ ಪ್ರಾರ್ಥನೆ ಗುರು ಚರಿತ್ರೆಯ ನಿತ್ಯ ಪಾರಾ ಯಣ ಅತ್ಯಗತ್ಯ. ಸಪ್ತಮದಲ್ಲಿ ಶನಿ ಇರುವುದರಿಂದ ಹರಿತವಾದ ನಾಲಿಗೆಯಿಂದ ಮಾತಿನ ಪ್ರಹಾರ ಬೇಡ. ದೈವ ಬಲವನ್ನು ಹೆಚ್ಚಿಸಿಕೊಂಡರೆ ಜೀವನದಲ್ಲಿ ಗೆಲುವನ್ನು ಸಾಧಿಸಬಹುದು.
ಕನ್ಯಾ: ಲಗ್ನದಲ್ಲಿ ಕೇತುವಿದ್ದು ವಿಘ್ನೕಶ್ವರನನ್ನು ಪೂಜಿಸಿದರೆ 6ರ ಶನಿ ಶುಭ ಫಲವನ್ನು ಕೊಡುತ್ತಾನೆ. ಗಣೇಶನನ್ನು ಪೂಜಿಸುವುದರಿಂದ ಗುರá-ಬಲವು ಬಂದು ಅನುಕೂಲವಾಗುತ್ತದೆ. ಚಿಂತೆಯು ದೂರವಾಗುವ ಕಾಲ ಬಂದೇ ಬರುತ್ತದೆ, ತಾಳ್ಮೆಯಿಂದಿರಿ. ನರಸಿಂಹನನ್ನು ಪೂಜಿಸಿ ರಾಹು ಕೇತುವಿಗಾಗಿ ನಾಗದೇವರನ್ನು ಅರ್ಚಿಸಿ.
ತುಲಾ: ಮನುಷ್ಯನು ಸುಖವಾಗಿ ಬಾಳಬೇಕಾದರೆ ಸತತ ಪ್ರಯತ್ನಗಳನ್ನು ಮಾಡಲೇಬೇಕು. ನಿಮ್ಮ ದೈವ ಪ್ರಾರ್ಥನೆಯನ್ನು ಮುಂದುವರಿಸಿ ಕೀರ್ತಿ, ಲಾಭ, ಧನ ನಿಮ್ಮ ಪಾಲಿಗೆ ಬಂದು ಸೇರುತ್ತದೆ. ಪಂಚಮ ಶನಿಯಿಂದ ಕೆಲವೊಂದು ಕಹಿ ಮಾತುಗಳನ್ನು ಕೇಳಬೇಕಾದ ಸಂದರ್ಭವೂ ಒದಗಿ ಬರುತ್ತದೆ. ಕೋಪವೂ ಬಂದೀತು. ರಾಮ ನಾಮವನ್ನು ಜಪಿಸಿ. ಸುಂದರಕಾಂಡ ಪಾರಾಯಣವನ್ನು ಮಾಡಿ. ಸಮಾಧಾನ ಸಾವಧಾನ ಕೆಲಸದಲ್ಲಿ ನಿಧಾನವು ನಿಮ್ಮ ಅಭ್ಯಾಸವಾಗಿರಲಿ.
ವೃಶ್ಚಿಕ: ನಿರೀಕ್ಷಿತ ಕೆಲಸ ಸುಲಭವಾಗಿ ನಡೆಯಲು ದೇವರನ್ನು, ಜನ್ಮ ಕೊಟ್ಟ ತಂದೆ ತಾಯಿ, ಗುರುವನ್ನು ಸ್ಮರಿಸಲೇಬೇಕು. ಗುರು ಸ್ಮರಣೆಯಿಂದ ಏನನ್ನು ಬೇಕಾದರೂ ಪಡೆಯಬಹುದು. ಗುರು ಚರಿತ್ರೆ 18ನೇ ಅಧ್ಯಾಯ ಪಾರಾಯಣ ಮಾಡಿ, ಕೈ ಸೇರಬೇಕಾದ ಧನವು ಬಂದು ಸೇರುತ್ತದೆ. ಸುಬ್ರಹ್ಮಣ್ಯನನ್ನು ಸದಾ ಕಾಲ ಪೂಜಿಸಿ, ಅರ್ಚಿಸಿ.
ಧನುಸ್ಸು: ಶ್ರೀರಾಮನು 10,000 ವರ್ಷಗಳ ಕಾಲ ಭರತ ಖಂಡವನ್ನು ಆಳಿದರು ಎಂದು ದರ್ಪವನ್ನಾಗಲಿ ಕೋಪವನ್ನಾಗಲಿ ತೋರಿದ, ಅಹಿತಕರ ಮಾತುಗಳನ್ನು ಆಡಿದ ಸಂದರ್ಭವೇ ಬರಲಿಲ್ಲ. ಧನುರ್ ರಾಶಿಯಲ್ಲಿ ಹುಟ್ಟಿದ ನೀವು ನೋಡಲು ಸುಂದರವಾಗಿರುತ್ತೀರಿ. ಆದರೆ ಅತಿ ತೀಕ್ಷ ್ಣ ಮಾತುಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತವೆ. ಅದಕ್ಕೆ ಆಸ್ಪದ ಕೊಡದಿರಿ. ಮೂರರ ಶನಿ ಪಂಚಮ ಗುರು ನೀವು ಬಯಸಿದ್ದನ್ನು ಕೊಡುತ್ತಾನೆ. ಕೆಲವೇ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಅತ್ಯಾಶ್ಚರ್ಯಕರವಾದ ಘಟನೆ ನಡೆದು ಸಂತಸವನ್ನು ತರುತ್ತದೆ.
ಮಕರ: ರಾಶಿಯ ಅಧಿಪತಿ ಶನಿಯು ದ್ವಿತೀಯದಲ್ಲಿದ್ದು ಅಲ್ಲಿ ರವಿ ಬುಧರು ಬಂದು ಸೇರಿರುತ್ತಾರೆ. ರವಿ ಬುಧರು ಶನಿಯೊಂದಿಗೆ ಬಂದು ಸೇರಿದಾಗ ನಿಮ್ಮ ಕೆಲಸಗಳು ಚುರುಕುಗೊಂಡು ಬಯಸಿದ ಹಾದಿಯಲ್ಲಿ ಸಾಗುತ್ತವೆ. ನಿತ್ಯ ಲಕ್ಷ್ಮಿ ನರಸಿಂಹನ ಭಜಿಸಿ ಕಾಲಭೈರವವನ್ನು ಪೂಜಿಸಿ.
ಕುಂಭ: ಲಗ್ನದಲ್ಲಿ ಶನಿ ಇದ್ದು ಕುಂಭ ರಾಶಿಯ ವರಿಗೆ ಮನಸ್ಸು ಆತಂಕದಿಂದಲೂ ಅಶಾಂತತೆಯಿಂದಲೂ ಯೋಚನೆಯಿಂದಲೂ ಕೂಡಿರುತ್ತದೆ. ಸ್ಥಿರವಾದ ಬುದ್ಧಿಯಿಂದ ಕೆಲಸ ಮಾಡಿಕೊಳ್ಳಲು ಧೈರ್ಯ ಸಾಲದಂತೆ ಆಗುತ್ತದೆ. ಮಾಡಿದ ಕೆಲಸಗಳಲ್ಲಿ ಪರಿಪೂರ್ಣ ಫಲ ಸಿಕ್ಕದು. ಶನಿಯು ಮಧ್ಯಭಾಗದಲ್ಲಿ ಇರುವುದರಿಂದ ನಿತ್ಯವೂ ಅನಂತಪದ್ಮನಾಭ ವ್ರತ ಕಥೆಯನ್ನು ಶ್ರವಣ ಮಾಡಿ. ವಿಷ್ಣುವನ್ನು ತುಳಸಿಯಿಂದ ಅರ್ಚನೆ ಮಾಡಿ. ಯಶಸ್ಸಿನ ದಾರಿಗೆ ಕೊಂಡೊಯ್ಯುತ್ತದೆ.
ಮೀನ: ಮೀನ ರಾಶಿಯವರಿಗೆ ಗುರು ಶುದ್ಧನಾಗಿ ದ್ವಿತೀಯದಲ್ಲಿ ಕುಳಿತು ಜ್ಞಾನಾರ್ಜನೆಗೆ ಅನೇಕ ಪುಣ್ಯ ಕಥೆಗಳನ್ನು ಕೇಳಲು ಅನುವು ಮಾಡಿಕೊಟ್ಟಿರುತ್ತಾನೆ. ಗುರು ಮೇಷ ರಾಶಿಯಲ್ಲಿ ಇರುವುದರಿಂದ ಗುರುವಿನ ರಕ್ಷಣೆ ಇದ್ದು ಕಷ್ಟ ನಷ್ಟಗಳು ಬರುವುದಿಲ್ಲ. ದ್ವಾದಶ ಶನಿಯ ಬಾಧೆ ಬರದಂತೆ ನಿಮ್ಮ ದೇಹವನ್ನು ಕಾಪಾಡಿಕೊಳ್ಳಬೇಕು. ಮನಸ್ಸಿನಲ್ಲಿರುವ ಕೊಳಕನ್ನು ತೊಳೆದು ನೀರಿನಂತೆ ಶುಭ್ರವಾಗಿದ್ದರೆ, ಒಳ್ಳೆಯ ಮಾತನ್ನಾಡುತ್ತಿದ್ದರೆ, ಸಂತೋಷಮಯ ಜೀವನ ನಿಮ್ಮದಾಗುತ್ತದೆ.