ವಾರ ಭವಿಷ್ಯ| ಈ ರಾಶಿಯವರಿಗೆ ಅಧಿಪತಿ ಶುಕ್ರನು 10ರಲ್ಲಿ ಶನಿ ಸಂಪರ್ಕದಲ್ಲಿ ಇರುವುದು ಒಳ್ಳೆಯದಲ್ಲ…

Vaara-Bhavishya
Published on
ಮೇಷ: ರಾಶ್ಯಾಧಿಪತಿ ಅಂಗಾರಕನು ವೃಷಭದಲ್ಲಿ, ರಾಹು ಲಗ್ನದಲ್ಲಿ ಇದ್ದು, ದ್ವಾದಶದಲ್ಲಿ ಗುರು ಇದ್ದಾನೆ. ನಿಮ್ಮನ್ನು ಎಚ್ಚರಿಸಿ ಸುಲಭ ಉಪಾಯದಿಂದ ವಿಘ್ನಗಳಿಂದ ಹೊರಬರಲು ಏಕಾದಶ ಶನಿ ಫಲ ಒಂದೇ ಸಾಕು. ಒಂದೇ ಗ್ರಹ ಸಾಕು ಮನುಷ್ಯನನ್ನು ರಕ್ಷಿಸಿ. ಉತ್ತುಂಗಕ್ಕೆ ಕೊಂಡೊಯ್ಯಲು. ಧನ, ಸುಖ, ಜನಾನುರಾಗ ತಂದುಕೊಳ್ಳಲು ಕುಕ್ಕೆ ಸುಬ್ರಹ್ಮಣ್ಯನನ್ನು ದರ್ಶನ ಮಾಡಿ. ಒಳ್ಳೆಯ ಫಲ ದೊರೆಯುುತ್ತದೆ.

ವೃಷಭ: ರಾಶಿ ಅಧಿಪತಿ ಶುಕ್ರನು 10ರಲ್ಲಿ ಶನಿ ಸಂಪರ್ಕದಲ್ಲಿ ಇರುವುದು ಒಳ್ಳೆಯದಲ್ಲ. ಮತ್ತೊಬ್ಬರ ಮೇಲೆ ಸಂದೇಹ, ಅತಿಯಾದ ಖರ್ಚು ತಂದೊಡ್ಡುತ್ತದೆ. ಬಾಯಿಯು ಬೆಂಕಿ ಪೊಟ್ಟಣ ಮತ್ತು ನಾಲಿಗೆ ಬೆಂಕಿ ಕಡ್ಡಿ ಆಗದಿರುವಂತೆ ನೋಡಿಕೊಳ್ಳಿ. ನಾಗರಾಜ ಅಷ್ಟೋತ್ತರ ಪಠಿಸಿ. ಘಾಟಿ ಸುಬ್ರಮಣ್ಯನನ್ನು ಪೂಜಿಸಿ ಬನ್ನಿ. ನಿಮ್ಮ ಅಭಿವೃದ್ಧಿ ಆಗಿ ನೆನಸಿದ ಕಾರ್ಯ ಒಂದು ಹಂತಕ್ಕೆ ಮಟ್ಟಕ್ಕೆ ಬಂದು ಮುಟ್ಟುತ್ತದೆ.

ಮಿಥುನ: ಈ ರಾಶಿಯ ಅಧಿಪತಿ ಒಂಬತ್ತರಲ್ಲಿ ರವಿಯ ಜೊತೆ ಇರುವುದರಿಂದ ನೀವು ಮನಸನ್ನು ಕಾರ್ಯ ಸಾಧನೆಯತ್ತ ನೆಟ್ಟು ಗುರಿಯನ್ನು ಮುಟ್ಟಬೇಕು. ಗುರು ಶುಕ್ರರು ಜೊತೆ ಇದ್ದು, ಹಣಕಾಸು ತೊಂದರೆ ಇರುವುದಿಲ್ಲ. ವಾಮನ ಅಷ್ಟೋತ್ತರ ಪಾರಾಯಣ ಮಾಡಿ. ಬುಧನ ಪ್ರೀತಿಗೆ ಹೆಸರು ಬೇಳೆ, ಹಳದಿ ವಸ್ತ್ರ ದಾನ ನೀಡಿ.

ಕಟಕ: ರಾಶ್ಯಾಧಿಪತಿ ಚಂದ್ರ ನಿತ್ಯ ಒಂದೊಂದು ಮನೆಗೆ ಸಾಗಿ, ಕೆಲವೊಮ್ಮೆ ಚಂಚಲತೆಯಿಂದ ಮನಸ್ಸಿನಲ್ಲಿ ಗೊಂದಲ ಉಂಟು ಮಾಡುತ್ತಿರುತಾನೆ. ಈಶ್ವರ ಆರಾಧನೆಗಿಂತ ದಿವ್ಯ ಔಷಧ ಇಲ್ಲ. ಪ್ರದೋಷದಲ್ಲಿ ಈಶ್ವರನಿಗೆ ಬಿಲ್ವಾರ್ಚನೆ ಮಾಡಿ. ಅಷ್ಟಮ ಶನಿಯು ಕಾಡದೇ ಇರಲು ಶನಿ ಅಷ್ಟೋತ್ತರ ಪಾರಾಯಣ ಮಾಡಿ.

ಸಿಂಹ: ಅಧಿಪತಿ ಬುಧನೊಂದಿಗೆ ಏಳರಲ್ಲಿ ಇದ್ದು, ಶನಿಯು ಅಲ್ಲೇ ಇದ್ದಾನೆ. ಶನಿಯು ಧರ್ಮವನ್ನು ಉಳಿಸಿದವರನ್ನು, ಉಪಕಾರ ಮಾಡಿದವರನ್ನು ಮುಟ್ಟುವುದೂ ಇಲ್ಲ. ತೊಡಕನ್ನು ತರುವುದೂ ಇಲ್ಲ. ಆದಿತ್ಯ ಹೃದಯ ಪಾರಾಯಣ ಮಾಡಿ. ಲಕ್ಷ್ಮಿನರಸಿಂಹನ ಪ್ರಾರ್ಥನೆ ಮಾಡಿ.

ಕನ್ಯಾ: ಸಪ್ತಮದಲ್ಲಿ ಗುರು, ಷಷ್ಟದಲ್ಲಿ ಶನಿಯು ಇದ್ದು ಒಳ್ಳೆ ಫಲ ಕೊಡುತ್ತದೆ. ಗುರು ಅಷ್ಟಮಕ್ಕೆ ಹೋಗುತ್ತಾನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಕಷ್ಟಗಳನ್ನು ತಂದೊಡ್ಡುತ್ತದೆ. ಏಪ್ರಿಲ್​ವರೆಗೂ ನಿಮ್ಮನ್ನು ತಿದ್ದಿಕೊಳ್ಳಲು ಅವಕಾಶ ಕಲ್ಪಿಸಿದ್ದಾನೆ. ಸುದರ್ಶನ ಅಷ್ಟೋತ್ತರ ಪಠಿಸಿ. ಶ್ರೀರಂಗಪಟ್ಟಣದಲ್ಲಿರುವ ಸುದರ್ಶನ ಚಕ್ರಕ್ಕೆ ಪೂಜೆ ಮಾಡಿಸಿ ಬನ್ನಿ.

ತುಲಾ: ಲಗ್ನದಲ್ಲಿ ಕೇತು, ಪಂಚಮ ಶನಿ ಸುಕ್ಷೇತ್ರದಲ್ಲಿದ್ದರೂ ಮನಸ್ಸಿಗೆ ಒತ್ತಡ ನೀಡುತ್ತಾನೆ. ಆಯಾಸವನ್ನು ಕೊಡುತ್ತಾನೆ. ವೇಗವಾಗಿ ಓಡಿದವನು ಬಳಲುತ್ತಾನೆ. ನೀವು ಬಳಲದೆ ಇರಲು ಗಣಪತಿಯನ್ನು ಪೂಜಿಸಿ. ದುರ್ಗೆಯು ದುಃಖ ದೂರ ಮಾಡಿ ವಿಶೇಷವಾದ ಕೆಲಸದಲ್ಲಿ ನ್ಯಾಯ ಒದಗಿಸಿ , ಒಳಿತನ್ನು ಮಾಡುತ್ತಾಳೆ. ದ್ವಾದಶದಲ್ಲಿ ಕೇತು ಇದ್ದಾನೆ. ಊರೂರು ಸುತ್ತಿದರೆ ಪುಣ್ಯ ಬರುವುದಿಲ್ಲ.

ವೃಶ್ಚಿಕ: ದೇವತಾ ಕ್ಷೇತ್ರ ದರ್ಶನ ಮಾಡಿದರೆ ಪಾಪದ ಗಂಟು ಕಡಿಮೆಯಾಗಿ ಪುಣ್ಯ ಬರುತ್ತದೆ. ಸಮಸ್ಯೆ ಬಗೆಹರಿಯುತ್ತದೆ. ಕಾಲ ಸನ್ನಿಹಿತ ಆಗಿದೆ. ಶುಕ್ರ ಗುರು ಪಂಚಮದಲ್ಲಿ ಇರುವುದರಿಂದ ಧನವು ಹರಿದು ಬರುತ್ತದೆ. ಗಣಪತಿಗೆ ನವನೀತ ನೈವೇದ್ಯ ಮಾಡಿ.

ಧನುಸ್ಸು: ರಾಶ್ಯಾಧಿಪತಿ ಗುರುವು ಚತುರ್ಥದಲ್ಲಿದ್ದರೂ ಶುಭ ಕ್ಷೇತ್ರದಲ್ಲಿ ಇರುವುದರಿಂದ ಯಾವ ಕೆಟ್ಟದ್ದನ್ನು ಮಾಡುವುದಿಲ್ಲ. ಆದರೆ, ಪ್ರಗತಿ ಕೊಡುವುದಿಲ್ಲ. ಶನಿಯು ತೃತೀಯದಲ್ಲಿ ಇದ್ದು ಮಾಡುವ ಕಾರ್ಯದಲ್ಲಿ ಶುಭವನ್ನು ಕೊಟ್ಟು ಏನೇ ಸಮಸ್ಯೆ ಬಂದರೂ ಸರಿಪಡಿಸಿಕೊಳ್ಳುವ ಯೋಗ್ಯತೆ ಕೊಟ್ಟು ಹರಸುತ್ತಾನೆ. ಶ್ರೀ ರಾಮಚಂದ್ರ ನನ್ನು ಪೂಜಿಸಿ. ದೇವರು ಕೊಟ್ಟ ಸಂತೋಷವನ್ನು ಅನುಭವಿಸಿ. ಯೋಚನೆ ಬಿಟ್ಟು ನಿಶ್ಚಿಂತೆಯಿಂದ ಇರಿ.

ಮಕರ: ಅಧಿಪತಿ ದ್ವಿತೀಯದಲ್ಲಿ ಇದ್ದು, ರವಿ- ಬುಧ ಜೊತೆಗಿದ್ದಾರೆ. ಸಂಧಾನಗಳನ್ನು ಯಶಸ್ವಿಯಾಗಿ ಮಾಡಿಕೊಳ್ಳುವ ಸಮಯ. ಸೌಮ್ಯವು ಸುಖವನ್ನು ತರುತ್ತದೆ. ತರ್ಕವು ಶತ್ರುವನ್ನು ಉಂಟು ಮಾಡುತ್ತದೆ. ಕೊಟ್ಟ ಕೆಲಸ ಮಾಡಿಕೊಂಡು ಸುಖವನ್ನು ಕಂಡುಕೊಳ್ಳಿ. ಶನಿ ಅಷ್ಟೋತ್ತರ ಪಾರಾಯಣ ಮಾಡಿ.

ಕುಂಭ: ದ್ವಿತೀಯದಲ್ಲಿ ಶುಕ್ರನು ಇದ್ದಾನೆ. ಶುಭ ಕಾರ್ಯಗಳನ್ನು ಮಾಡಿಸುತ್ತಾನೆ. ರವಿ, ಬುಧರು ಕುಂಭದಲ್ಲೇ ಇರುವುದರಿಂದ ಕೆಲವು ಕಾರ್ಯಗಳನ್ನು ಚಾಣಾಕ್ಷತನದಿಂದ ಸಾಧಿಸಿಕೊಳ್ಳ ಬಹುದು. ಶನಿಗಾಗಿ ಗುರುಚರಿತ್ರೆ ಪಾರಾಯಣ ಮಾಡಿ ಸುಖವನ್ನು ತಂದುಕೊಳ್ಳಿ.

ಮೀನ: ದ್ವಾದಶದಲ್ಲಿ ಶನಿ ಇದ್ದು, ಮನುಷ್ಯನು ಗಾಂಭೀರ್ಯದಿಂದ ಇದ್ದಲ್ಲಿ ದೈವ ರಕ್ಷಣೆ ಇರುತ್ತದೆ. ನಕಾರಾತ್ಮಕ ಯೋಚನೆಗಳನ್ನು ಬಿಟ್ಟು ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿದರೆ ಅದೇ ಒಳ್ಳೆಯದನ್ನು ಮಾಡುತ್ತದೆ. ಹಣೆಯಲ್ಲಿ ದುಷ್ಟಾಕ್ಷರ ಬರೆದಿದ್ದರೂ ಗುರು ಚರಣ ರ್ಸ³ಸಿದರೆ ಅದೇ ಸುಷ್ಟಾಕ್ಷರ ಆಗುತ್ತದೆ. ನಿಮ್ಮ ಕುಲಗುರುಗಳನ್ನು ಪ್ರಾರ್ಥಿಸಿ, ವಂದಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net