

ಒಂಬತ್ತರ ಸೂರ್ಯನು ಜ.15 ರಿಂದ ಅವರೋಹಣದಲ್ಲಿ ಮಕರ ರಾಶಿ ತಲುಪುತ್ತಾನೆ. ಜ. 4 ರಂದು ಬುಧನು ಅಲ್ಲಿ ಸಂಚರಿಸಿ ಚತುರ್ಗ್ರಹ ಯೋಗ ಉಂಟಾಗುತ್ತದೆ. ಕುಜನು ಸ್ವಕ್ಷೇತ್ರದಲ್ಲಿ ಇರುವುದರಿಂದ ದುಷ್ಪರಿಣಾಮ ಇಲ್ಲ. ಆದರೆ ನಾಲಿಗೆ ಹತೋಟಿ ಮುಖ್ಯ. ವಾಹನ ಹತೋಟಿಯೂ ಅಗತ್ಯ. ಎಚ್ಚರವಾಗಿದ್ದಲ್ಲಿ ಎಲ್ಲಾ ಸುಖವನ್ನು ಪಡೆಯಬಹುದು. ಕಾರ್ತಿಕೇಯನ ಸ್ಮರಣೆ ಇರಲಿ. ಭುಜಂಗಪ್ರಾಯದ ಸ್ತೋತ್ರವನ್ನು ಪಠಿಸಿ.
ವೃಷಭದಲ್ಲಿ ರಾಹು ಇದ್ದು, 9ನೇ ಮನೆಗೆ ರವಿಯು ಬಂದು ಶನಿ ಮನೆಯಲ್ಲಿ ನಾಲ್ಕು ಗ್ರಹಗಳ ಸಮಯೋಗದಲ್ಲಿ ಶನಿ-ರವಿ ಸಂಘರ್ಷದಿಂದ ಮನಸ್ಸಿಗೆ ಖೇದ ಉಂಟಾಗುವುದು. ಮಾತು ಬೆಳ್ಳಿಯಾದರೆ ಮೌನವು ಬಂಗಾರ. ಮೌನಧರಿಸಿದಲ್ಲಿ ದುರ್ಗೆ ನಿಮ್ಮನ್ನು ದಡ ಸೇರಿಸಿ ಪ್ರಗತಿಯನ್ನು ತರುತ್ತಾಳೆ. ಆರೋಗ್ಯದಲ್ಲಿ ಎಚ್ಚರ.
ಅಷ್ಟಮದಲ್ಲಿ ಮಿಥುನಾಧಿಪತಿ ಬುಧನು ಗುರು ಹಾಗೂ ಮಿತ್ರರಾದ ಶನಿ, ರವಿಯ ಸಂಪರ್ಕದಲ್ಲಿದ್ದು ನಿಮ್ಮ ಸಮಯವನ್ನು ಸ್ವಲ್ಪ ಸುಧಾರಿಸುತ್ತಾನೆ. ದುಶ್ಚಿಂತನೆ ಬಿಟ್ಟು ಕಾರ್ಯಗಳಿಗೆ ಕೈ ಹಾಕಿದಲ್ಲಿ ಎಲ್ಲಾ ವಿಚಾರದಲ್ಲೂ ಅನುಕೂಲವಾಗುತ್ತದೆ.
ಯಾವ ಗ್ರಹಗಳು ಬಾಧೆಯನ್ನು ಕೊಡುತ್ತದೆಯೋ ಅಂತಹ ಗ್ರಹಗಳ ಜತೆ ಗುರುವು ಇದ್ದಾನೆ. ರವಿ-ಬುಧರು ಶುಭವನ್ನು ತಂದು ಸ್ವಕ್ಷೇತ್ರ ಶನಿಯ ಪ್ರಭಾವವಿದ್ದರೂ ದುಷ್ಪರಿಣಾಮವಿರುವುದಿಲ್ಲ. ಮಾತೆಂಬ ಮುತ್ತು ಕೈಜಾರಿ ಬಿದ್ದಂತಾಗಬಾರದು. ಚಂದ್ರಾಷ್ಟೋತ್ತರ, ಚತುರ್ಭಜ ಬ್ರಹ್ಮನ ಧ್ಯಾನಶ್ಲೋಕ ಪಠಿಸಿ. ಪರಮಾತ್ಮನೇ ಪ್ರಗತಿಯ ದಿಕ್ಕಿಗೆ ಕೊಂಡೊಯ್ಯುತ್ತಾನೆ.
ಶನಿಯು 3.6.10.11ನೇ ಮನೆಯಲ್ಲಿ ಕೆಲವು ಫಲಗಳನ್ನು ಕೊಡುವನು. ಇನ್ನುಳಿದ ಸ್ಥಾನಗಳಲ್ಲಿ ಜೀವನ ಪಾಠ ಕಲಿಸುವನು. 6ರ ಶನಿಯು ಬಹಳಷ್ಟು ಧನ-ಧೈರ್ಯ, ಜೀವನೋಪಾಯ, ನೂತನ ಗೃಹ, ರವಿಯಿಂದ ಜೀವನದಲ್ಲಿ ಹೊಸ ಬೆಳಕು, ಬುಧ ವಿಪರೀತ ಧನ ಕೊಟ್ಟೇ ಕೊಡುತ್ತಾನೆ. ಶನಿಯ ಧ್ಯಾನ ಶ್ಲೋಕ ಪಠಿಸಿ. ಗುರುವಿನ ಧ್ಯಾನಶ್ಲೋಕ ನಿತ್ಯವೂ 28 ಬಾರಿ ಪಠಿಸಿ. ಶುಭವೇ ನಿಮ್ಮ ಕೈಯಲ್ಲಿದೆ.
ಯಾರು ಬುದ್ದಿ ಹೇಳಿದರೂ ನೀವು ಕೇಳುವುದಿಲ್ಲ. ಮಿಥುನ ಮತ್ತು ಕನ್ಯಾ ರಾಶಿಯವರಿಗೆ ಇದು ಅನ್ವಯ. ಪಂಚಮ ಗುರು ರಕ್ಷಣೆ ಕೊಟ್ಟರೂ, ಶನಿಯು ಚಿಂತೆಗೀಡುಮಾಡುತ್ತಾನೆ. ಅವಶ್ಯವಾಗಿ ಶನಿ ಉಪಾಸನೆಯನ್ನು ಮಾಡಲೇಬೇಕು. ಗುರುವಿನ ಅನುಗ್ರಹ ಪಡೆಯಲೇಬೇಕು. ಶನಿಯ ಈ ಧ್ಯಾನ ಶ್ಲೋಕ ನಿತ್ಯವೂ ಪಠಿಸಿ. (ಅಹೌಸೌರಾಷ್ಟ್ರ ಸಂಜಾತ ಛಾಯಾಪುತ್ರ ಚತುರ್ಭಜ | ಕೃಷ್ಣವರ್ಣಾಕ ಗೋತ್ರೀಯ ಬಾಣಹಸ್ತ ಧನುರ್ಧರಾ||)
ದೈವಸಂಕಲ್ಪ ಇಲ್ಲದಿದ್ದಲ್ಲಿ ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ. ಅದರಂತೆ ನೀವು ಧರ್ವನುಸಾರ ನಡೆದಲ್ಲಿ ಧನಕ್ಕೆ ಕೊರತೆ ಇರುವುದಿಲ್ಲ. ಸ್ವಕ್ಷೇತ್ರ ಶನಿಯು ತುಲಾರಾಶಿಯವರಿಗೆ ಯಾವ ಕೆಡುಕನ್ನೂ ಮಾಡುವುದಿಲ್ಲ. ಆಂಜನೇಯ ಅಷ್ಟಕವನ್ನು ಪಠಿಸಿ. ಹನುಮದೇವರಿಗೆ ವೀಳ್ಯದೆಲೆ ಹಾರವನ್ನು ಹಾಕಿಸಿ. ಎಲ್ಲಾ ವಿಧವಾದ ಕ್ಷೇತ್ರಗಳಲ್ಲೂ ಜಯ ಸಾಧಿಸಬಹುದು.
ದೈವ ಕೃಪೆ ನಿಮ್ಮದಾಗಿಸಿಕೊಳ್ಳಬೇಕು. 2022ರವರೆಗೂ ನಿಮ್ಮ ಸಮಯ ಚನ್ನಾಗಿದೆ. ನಿಮ್ಮ ತಾಯಿಗೆ ನಮಸ್ಕರಿಸದೆ ಮನೆಯಿಂದ ಹೊರಬರಬೇಡಿ. ಗುರುಚರಿತ್ರೆ ಪಾರಾಯಣ ಮಾಡಿರಿ. ದತ್ತಾತ್ರೇಯ ಸಹಸ್ರನಾಮ ಮಾಡಿರಿ. ನಿಮ್ಮ ಗುರುಗಳಿಗೆ ಭಿಕ್ಷಾರೂಪದ ಸೇವೆಯನ್ನು ಮಾಡಿ.
ಇನ್ನು ಅಲ್ಪಕಾಲ ಶನಿಯು ದ್ವಿತೀಯದಲ್ಲಿರುವುದರಿಂದ ನಿಮಗೆ ಎಲ್ಲಾ ಸುಖ, ಆನಂದವನ್ನು ಏಕಾಏಕಿ ಕೊಡಲು ಗ್ರಹಗಳು ಒಪು್ಪವುದಿಲ್ಲ. ನಿಧಾನವಾದರೂ ಸಂದರ್ಭ ಬಂದಾಗ ಹೇಗೆ ನಡೆಯಬೇಕೆಂಬ ಪಾಠವನ್ನು ಕಲಿಸಿ, ನಿಮಗೆ ಸಂತೋಷ, ಧನ, ಕೀರ್ತಿಯನ್ನು ತರುತ್ತಾನೆ. ಬೆಂಕಿಯಿಂದ ದೂರವಿರಬೇಕು. ಬೆಂಕಿಗಿರುವ ಶಕ್ತಿ ಹೆಣ್ಣಿನಲ್ಲಿರುತ್ತದೆ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ಶ್ರೀಕ್ಷೇತ್ರ ಗಾಣಗಾಪುರವನ್ನು ಸಂದರ್ಶಿಸಿ.
ಮಾನವನಾಗಿ ಹುಟ್ಟಿ ಏನನ್ನು ಮಾಡಿದ್ದೀರ ಎಂದರೆ ನಿಮ್ಮಲ್ಲಿ ಉತ್ತರವಿರುವುದಿಲ್ಲ. ಮಕರ-ಕುಂಭ ಶನಿಯು ಜನ್ಮ ದ್ವಾದಶದಲ್ಲೂ ಇದ್ದಾನೆ. ನಿಮ್ಮನ್ನು ಗುರುವಿಗೆ ಅರ್ಪಣೆ ಮಾಡಿಕೊಂಡು ಪರಮಾತ್ಮನು ಕೊಟ್ಟಿದ್ದನ್ನು ತೃಪ್ತಿಯಿಂದ ಸ್ವೀಕರಿಸಿದಲ್ಲಿ, ವ್ಯವಹಾರದಲ್ಲಿ ಹಿನ್ನಡೆ, ದುಡ್ಡಿನ ಸ್ತಂಭನ ಆಗುವುದಿಲ್ಲ. ಸೂರ್ಯಾಷ್ಟಕವನ್ನು ಪಾರಾಯಣ ಮಾಡಿ, ನಿಮಿಷಾಂಬಾ ದೇವಿಯ ದರ್ಶನ ಪಡೆಯಿರಿ.
ನೀವು ಮಾಡಿದ ಪೂಜಾ ವಿಶೇಷಗಳು ಸಾಕಾಗುವುದಿಲ್ಲ. ಶನಿಕಾಟದಲ್ಲಿ ಯಾವುದೇ ಅಪಾಯ ಆಗದಿದ್ದಲ್ಲಿ ನಿಮಗೆ ಗ್ರಹಗಳು ಒಲಿದಿದೆ ಎಂದರ್ಥ. ಹೊಸ ಕಾಮಗಾರಿ, ಮನೆ ಕಟ್ಟುವುದು ದೂರವಿಟ್ಟು, ನಿಮ್ಮ ಸಮಯಕ್ಕಾಗಿ ಕಾಯಿರಿ. ಒಳ್ಳೆಯ ದಿನಗಳು ಬರಲಿದೆ. ಹನುಮಂತನ ಅನುಗ್ರಹಕ್ಕೆ ಸುಂದರಕಾಂಡ ಪಾರಾಯಣ ಮಾಡಿ.
ಆಹಾರದಿಂದ ಹಿಡಿದು ಧನಾರ್ಜನೆಯವರೆಗೂ ಯಾವ ಆಸೆ-ಆಮಿಷಗಳಿಗೆ ಬೀಳದೆ ಇದ್ದಲ್ಲಿ ನಿಮ್ಮ ಜೀವನ ಸುಖಮಯವಾಗುವುದು. 11ರ ಗುರು, ರವಿ, ಬುಧ, ಸ್ವಕ್ಷೇತ್ರ ಶನಿಯಿಂದ ನಿಮಗೆ ಅತ್ಯಂತ ಗೌರವ, ಕೀರ್ತಿ, ಧನ, ಸಂಪತ್ತು, ಆರೋಗ್ಯ ಲಭಿಸುವುದರಲ್ಲಿ ಅನುಮಾನವಿಲ್ಲ. ಜನ್ಮದಾತೆಯ ಪಾದಕ್ಕೆರಗಿ ಆಶೀರ್ವಾದದ ಆನಂದವನ್ನು ಅನುಭವಿಸುವ ಕಾಲವಿದು.