ಈ ರಾಶಿಯವರಿಗೆ ಸಾಕಷ್ಟು ಧನವು ಕೈ ಸೇರುವುದು: ವಾರಭವಿಷ್ಯ

Vaara-Bhavishya
Published on
ಮೇಷ

ಅಧಿಕ ಶ್ರಾವಣ ಮಾಸದಲ್ಲಿ ಭಗಂತನಿಗೆ ವಿಶೇಷವಾದ ಪೂಜೆ, ಆರತಿಯನ್ನು ಮಾಡಿ, ಸುಂಗಲಿಯರಿಗೆ ಮಂಗಳದ್ರವ್ಯಗಳನ್ನು, ಬಳೆ, ಹಣ್ಣು, ಹೂವು, ವಸ್ತ್ರಗಳನ್ನು ದಾನ ಮಾಡಿದರೆ ಅತ್ಯಂತ ಶುಭವಾಗುತ್ತದೆ. ಜೀವನದಲ್ಲಿ ನಿಂದನೆಗಳು ಇರುತ್ತವೆ. ಎಲ್ಲಕ್ಕಿಂತ ಭಾವ-ರಾಗ- ದ್ವೇಷಗಳು ದೂರ ಸರಿದು ನಿಮ್ಮನ್ನು ಮೊದಲಿದ್ದ ಉತ್ತಮ ಸ್ಥಿತಿಗೆ ತರಲು ಸಹಾಯಕವಾಗುತ್ತವೆ. ನಾಗದೇವರನ್ನು, ವಿನಾಯಕನನ್ನು ಪ್ರತಿನಿತ್ಯ ಪೂಜಿಸಿ.

ವೃಷಭ ರಾಶಿ

ಈ ವಾರವು 30 ಜುಲೈನಿಂದ ಆರಂಭವಾಗಿ ಮೂಲಾ ನಕ್ಷತ್ರದಿಂದ ಕೂಡಿದ್ದು, ಕೃತ್ತಿಕಾ 4ನೇ ಪಾದ, ರೋಹಿಣಿ, ಮೃಗಶಿರ ನಕ್ಷತ್ರಗಳಿಗೆ ವಿಶೇಷವಾದ ಫಲಗಳನ್ನು ತರುತ್ತದೆ. ಮೂಲಾ ನಕ್ಷತ್ರಾಧಿಪತಿ ಕೇತು ನಿಮಗೆ ಸಹಕಾರ ನೀಡುತ್ತಾನೆ. ದ್ವಾದಶದಲ್ಲಿ ರಾಹುವಿದ್ದು, ದುರ್ಗೆಯನ್ನು ಪೂಜಿಸಿ. ಆರೋಗ್ಯ ಸುಸ್ಥಿರವಾಗಿರುತ್ತದೆ. ಹಣಕಾಸಿನ ವ್ಯವಹಾರಗಳು ಯಥಾವಿಧಿಯಾಗಿ ನಡೆದು ಸಾಕಷ್ಟು ಧನವು ಕೈ ಸೇರುತ್ತದೆ.

ಮಿಥುನ ರಾಶಿ

ಅತಿ ಬುದ್ಧಿಯು ಮನುಷ್ಯನನ್ನು ಹಾಳು ಮಾಡುತ್ತದೆ ಎಂಬ ವಚನವೇ ಇದೆ. ಏಕಾದಶದಲ್ಲಿ ಗುರು, ಒಂಬತ್ತರಲ್ಲಿ ಶನಿ ಉತ್ತಮ ಅಂಶದಲ್ಲಿದ್ದರೂ ಗುರುವಿನ ಮಾರ್ಗದರ್ಶನವಿಲ್ಲದೆ ವಿಷಯ- ವಿಚಾರಗಳಿಗೆ ಕೈ ಹಾಕಿದರೆ, ಅದರಲ್ಲಿ ಸಿಲುಕಿ ಬಾಧೆಯನ್ನು ಪಡುತ್ತೀರಿ. ನಾರಾಯಣನನ್ನು ಪೂಜಿಸಿ. ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿದರೆ (ಶುಕ್ರವಾರ) ಒಳ್ಳೆಯ ಫಲವನ್ನು ಅನುಭವಿಸುತ್ತೀರಿ.

ಕಟಕ ರಾಶಿ

ಪೌರ್ಣಮಿಯ ಚಂದ್ರನು ಬೆಳಕನ್ನು ಕೊಡುತ್ತಾನೆ. ಅಂದಚಂದಕ್ಕೆ ಕಲೆ ಇಲ್ಲದೆ ಶುಭ್ರವಾದ ಪೂರ್ಣಚಂದ್ರನು ಪರಿಪೂರ್ಣ ಅನುಗ್ರಹ ಮಾಡಿ ನಿಮ್ಮ ಮನಸ್ಸಿಗೆ ಆನಂದವನ್ನು ನೀಡುತ್ತಾನೆ. ಮಕ್ಕಳು ನಿಮ್ಮ ಮಾತನ್ನು ಕೇಳಿ ನಿಮಗೆ ಆನಂದ ಉಂಟು ಮಾಡುತ್ತಾರೆ. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪೂಜಿಸಿ. ಮೃತ್ಯುಂಜಯ ಮಹಾಮಂತ್ರವನ್ನು ಪ್ರತಿನಿತ್ಯ 8 ಬಾರಿ ಪಠಿಸಿ.

ಸಿಂಹ ರಾಶಿ

ದೇವರಿಗಿಂತ ದೊಡ್ಡವರಿಲ್ಲ. ದೈವಕ್ಕೆ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ನಾರಾಯಣ ಅಂಶವೇ ಹರಿ. ಹರಿ ಒಬ್ಬನೇ ಸಾಕು ಯಥೋಚಿತ ಧನವನ್ನು, ಆರೋಗ್ಯವನ್ನು ಕರುಣಿಸಲು. ಸೂರ್ಯನಾರಾಯಣನನ್ನು ಪೂಜಿಸಿ. ಸತ್ಯನಾರಾಯಣ ವ್ರತವನ್ನು ಮಾಡಿದಲ್ಲಿ ಸತ್ಯದೇವರಾಗಲಿ , ಈಶ್ವರನೇ ಆಗಲಿ ನಿಮ್ಮ ಅಭೀಷ್ಟಗಳನ್ನು ಈಡೇರಿಸುತ್ತಾರೆ.

ಕನ್ಯಾರಾಶಿ

ನಗುಮುಖದಿಂದ ಸಂಯಮ, ಶಿಸ್ತು, ಇನ್ನೊಬ್ಬರ ಕಷ್ಟಕ್ಕೆ ಪರಿಹಾರ ನೀಡುವುದು. ಎಲ್ಲರನ್ನೂ ಸಮನಾಗಿ ಕಂಡು ಕೈಲಾದ ಸಹಾಯ ಮಾಡಿದ್ದಾದರೆ ಅಷ್ಟಮ ಗುರುವು ನಿಮ್ಮನ್ನು ಬಾಧಿಸದೆ, ಅನಾರೋಗ್ಯ ಕೊಡದೆ, ಷಷ್ಠ ಶನಿಯಿಂದ ಬರುವ ಭಾಗ್ಯವನ್ನು ಅನುಭವಿಸಲು ಬಿಡುತ್ತಾನೆ. ಪ್ರತಿ ಸೋಮವಾರದಂದು ಈಶ್ವರನ ಕಥೆ ಓದಿ. ನಿಮ್ಮ ಮನಸ್ಸು ಶುದ್ಧವಾಗಿ ಜಗದಾನಂದ ಪಡೆಯಬಹುದು.

ತುಲಾ ರಾಶಿ

ನಕ್ಷೆಯೇ ಬೇರೆ; ನಿರೀಕ್ಷೆಯೇ ಬೇರೆ. ನಕ್ಷೆಯು ಜಾಗವನ್ನು ಸೇರಲು ಸಹಾಯ ಮಾಡುತ್ತದೆ. ನಿರೀಕ್ಷೆ ಇದ್ದರೆ ದೈವಸಹಾಯದಿಂದ ನಿರೀಕ್ಷಿಸಿದ ಮಟ್ಟವನ್ನು ಮುಟ್ಟಬಹುದು. ದೇವರಿಲ್ಲದೆ ನಮ್ಮ ಯಾವ ಯಾವ ನಿರೀಕ್ಷೆಯೂ ಈಡೇರಲು ಸಾಧ್ಯವಿಲ್ಲ. ನಿಮ್ಮ ಆಸೆಗಳು ನಿರೀಕ್ಷೆಯ ಫಲ ಪಡೆವ ಕಾಲ. ಮಾಡುವ ಕೆಲಸದಲ್ಲಿ ಶ್ರದ್ಧೆ, ಧರ್ಮ ಕೂಡಿದ್ದರೆ ಸಪ್ತಮ ಗುರುವು ನಿಮಗೆ ಕೀರ್ತಿಯನ್ನು ತರುತ್ತಾನೆ. ಗುರು ದತ್ತಾತ್ರೇಯ ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿರಿ.

ವೃಶ್ಚಿಕ ರಾಶಿ

ದ್ವಾದಶದಲ್ಲಿ ಕೇತು ಇರುವುದು ನಿಮ್ಮನ್ನು ಪರೀಕ್ಷಿಸಲೆಂದೇ ಮಾಡುವ ಕೆಲಸಗಳು. ಬರುವ ಧನವು ವಿಳಂಬವಾದರೂ, ವಿಶೇಷವಾಗಿ ಗಣೇಶನನ್ನು ಅರ್ಕ ಪುಷ್ಪದಿಂದ ಪೂಜಿಸಿ. ಷಷ್ಠಿ ವ್ರತವನ್ನು ತಪ್ಪದೇ ಮಾಡಿದರೆ ವಿಘ್ನಗಳನ್ನು ದಾಟಿ, ಧನವನ್ನು, ಧೈರ್ಯವನ್ನು, ಜತೆಗೆ ಆರೋಗ್ಯವನ್ನೂ ಪಡೆಯಬಹುದು.

ಧನುರ್ ರಾಶಿ

ರಾಶ್ಯಾಧಿಪತಿ ಗುರುವು ಭರಣಿ ನಕ್ಷತ್ರದಲ್ಲಿ ನಿಂತು, ಶನಿಯೂ ವಕ್ರತ್ವ ಪಡೆದು ಮಕರಕ್ಕೆ ಬಂದು ನಿಮ್ಮ ಕಾರ್ಯವೈಖರಿಯು ನಿಮ್ಮ ಇಷ್ಟದಂತೆ ಸಾಗದೆ ಬೇರೆ ದಾರಿಯಲ್ಲಿ ನಡೆಯುತ್ತದೆ. ಹೂವು ಬಾಡಬಹುದು. ಆದರೆ, ಮನಸ್ಸು ಬಾಡದೆ ಇರಲು ದೈವವೆಂಬ ಕಾಲಪುರುಷನೇ ನಿಮ್ಮ ಆತ್ಮದಲ್ಲಿ ನಿಂತಿದ್ದು, ಶ್ರೀರಾಮನ ಪಾಠದಲ್ಲಿ ನಿಮ್ಮ ಮನಸ್ಸನ್ನು ಅರ್ಪಿಸಿದಲ್ಲಿ, ಯಾವ ಕೆಲಸಗಳು ನಿಲ್ಲದೆ, ನಿಂತ ಕೆಲಸಗಳು ಮುಂದುವರಿದು ಧನ, ಯಶಸ್ಸು ಆನಂದ ದೊರೆಯುತ್ತದೆ.

ಮಕರ ರಾಶಿ

ತಾತ್ಕಾಲಿಕವಾಗಿ ಶನಿಯು ಮಕರಕ್ಕೆ ಬಂದು ವಕ್ರನಾಗಿ ಸ್ವಂತ ಮನೆಯಲ್ಲಿ ಇರುವುದರಿಂದ ಮನೋಕಾಮನೆಗಳು ಪೂರ್ಣವಾಗುವ ಸಾಧ್ಯತೆಗಳು ಕಡಿಮೆ. ದೃಷ್ಟಿದೋಷ, ಜನರ ಶಾಪದಿಂದ ದೂರವಿದ್ದು, ಶನಿಯು ವಕ್ರಗತಿಯನ್ನು ಬಿಡುವವರೆಗೂ ಸೋಮವಾರ ಸಾಯಂಕಾಲದಲ್ಲಿ ಭ್ರಮರಾಂಭ- ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎಳ್ಳು, ಬತ್ತಿ, ಹಚ್ಚಿ, ಪಾಪಗಳು ದಹಿಸಿ ಪುಣ್ಯವು ಬೆರೆತು ನಿಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತದೆ.

ಕುಂಭ ರಾಶಿ

ಶನಿಯು ವಕ್ರನಾಗಿ ದ್ವಾದಶಕ್ಕೆ ಬಂದಿದ್ದು, ಗುರುವು, ರಾಹು ಸಂಯುಕ್ತನಾಗಿ ತೃತೀಯದಲ್ಲಿದ್ದಾನೆ. ಅಂದರೆ ಗ್ರಹಗಳು ಸಮತೋಲನದಲ್ಲಿ ಇಲ್ಲದಿರುವಾಗ ನೀವು ಸಮಾಧಾನದಿಂದಿರಲು ಸಾಧ್ಯವೇ ಇಲ್ಲ. ಸಮುದ್ರದಲ್ಲಿ ಅಲೆಗಳು ಅಪ್ಪಳಿಸಿ ಪ್ರವಾಹ ಉಂಟಾಗುತ್ತದೆ. ಹಾಗೆಯೇ ಆಲೋಚನೆಗಳು ಅಲೆಯ ಮಾರ್ಗ ಅನುಸರಿಸದೆ ನಿಮ್ಮ ಕೆಲಸಗಳನ್ನು ಯೋಚಿಸಿ, ಬುದ್ಧಿವಂತಿಕೆಯಿಂದ ಸರಿಪಡಿಸಿಕೊಂಡಲ್ಲಿ ಕೆಲಸಗಳು ದಡ ಸೇರುತ್ತವೆ. ಸುಂದರಕಾಂಡ ಪಾರಾಯಣ ಮಾಡಿ.

ಮೀನ ರಾಶಿ

ಮೀನ ರಾಶಿಯಲ್ಲಿ ಜನಿಸಿದವರಿಗೆ ವಕ್ರ ಶನಿಯು ಏಕಾದಶಕ್ಕೆ ಬಂದಿದ್ದಾನೆ. ದೇವರು ನೇತ್ರವನ್ನು ಕೊಟ್ಟಿರುವುದಿಲ್ಲ. ಕಣ್ಣೀರು ಹಾಕಲು ಅಲ್ಲ. ಗುರು ಎರಡನೇ ಮನೆಯಲ್ಲಿ ಇದ್ದರೂ, ರಾಹುವಿನ ಸಂಪರ್ಕದಲ್ಲಿರುವುದರಿಂದ ಪ್ರತಿನಿತ್ಯ ಗುರುಚರಿತ್ರೆಯ 11ನೇ ಅಧ್ಯಾಯ ಪಾರಾಯಣ ಮಾಡಿ. ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕಿ ನಿಮ್ಮ ಜೀವನವು ಮುಂದೆ ಸಾಗಲು ದೇವರೇ ಬಲ ನೀಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net