

ಪ್ಲವನಾಮ ಸಂವತ್ಸರದ ಕಡೆಯ ವಾರದ ಗುರುವಿನ 11ರ ಫಲ ಪಡೆದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಕೊಟ್ಟ ಮಾತಿಗೆ ತಪ್ಪಿದರೆ ಗೌತಮ ಮಹರ್ಷಿ ಶಾಪದಿಂದ ಅಹಲ್ಯೆ ಕಲ್ಲಾದಂತೆ, ತಪು್ಪ ನೋಡಿ ಸುಮ್ಮನಿರುವವನಿಗೂ ದೇವರೇ ಪಾಠ ಕಲಿಸುತ್ತಾನೆ. ಶನಿ ಏಕಾದಶಕ್ಕೆ ಬಂದು ನಿಮ್ಮನ್ನು ರಕ್ಷಿಸುತ್ತಾನೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.
ರಾಹುಕೇತುಗಳ ಬಿಡುಗಡೆ. ನಿಮಗೆ ಪಾಪಗ್ರಹಗಳಿಂದ ಆದ ತೊಂದರೆಗಳನ್ನು ಜ್ಞಾಪಿಸಿಕೊಂಡು ತಿದ್ದಿ ನಡೆದರೆ ವೈಭವವು ತಾನಾಗಿಯೇ ಬರುತ್ತದೆ. ಮುತ್ತು ಒಡೆದರೆ ಮತ್ತೆ ಸೇರಿಸಲಾಗದು. ಅದನ್ನು ಅರ್ಥೈಸಿಕೊಂಡು ಮಾತನ್ನು ಆಡಿದರೆ ಗೌರವ, ಧನ, ಸಂಪತ್ತು ಬಂದು ಸೇರುತ್ತದೆ.
ರಾಶ್ಯಾಧಿಪತಿ ಬುಧನು, ರವಿಯ ಜತೆ ದಶಮದಲ್ಲಿ ಸೇರಿ ಶುಭ ಕೊಟ್ಟರೂ 9ರ ಗುರುವು ನಿಮಗೆ ಅಧಿಕ ಫಲವನ್ನು ಕೊಡುತ್ತಾನೆ. ಕೊಟ್ಟವನು, ನಿಮ್ಮ ತಪ್ಪುಗಳನ್ನು ಎಣಿಸುವವನು ಲಗ್ನಾಧಿಪತಿ ಮಹಾವಿಷ್ಣುವೇ ಆಗಿರುತ್ತಾನೆ. ಎಲ್ಲರಲ್ಲೂ ಜೀವಾತ್ಮ -ಪರಮಾತ್ಮನು ನೆಲೆಸಿದ್ದಾನೆಂದು ಅರಿತು ಗೌರವದಿಂದ ನಡೆಯಿರಿ.
ಮನುಷ್ಯನು ಸ್ನಾನ ಮಾಡಿದರೆ ಶುಚಿಯಾಗುತ್ತಾನೆ. ಶ್ರದ್ಧೆಯಿದ್ದರೆ ದೇವರಿಗೆ ಪವಿತ್ರ ಜಲದಿಂದ ಮಂತ್ರಗಳಿಂದ ಅಭಿಷೇಕ ಮಾಡುತ್ತಾನೆ. ಅಂಥ ರಾಶಿಯಲ್ಲಿ ಹುಟ್ಟಿದ ನೀವು ಸಾಧಕ ಬಾಧಕ ಯೋಚಿಸದೆ ದೇವರ ಸನಿಹದಲ್ಲಿ ಇದ್ದು ಶಿವನಿಗೆ ಬಿಲ್ವಾರ್ಚನೆ ಹಾಗೂ ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ ಸುಂದರಕಾಂಡ ಪಾರಾಯಣ ಮಾಡಿ.
ಸಿಂಹರಾಶಿಯಲ್ಲಿ ಜನಿಸಿದವರಿಗೆ ನುಡಿಯಲ್ಲಿ ಗಾಂಭೀರ್ಯ, ನಡೆಯಲ್ಲಿ ರಾಜಠೀವಿ ಇರಬೇಕು. ಬೆನ್ನಹಿಂದೆ ಭಗವಂತನಿದ್ದಾನೆಂಬ ನಂಬಿಕೆಯೂ ಇರಬೇಕು. ಎಲ್ಲೂ ಸೋಲದೆ ಧೈರ್ಯದಿಂದ ಬಂದದ್ದನ್ನು ಎದುರಿಸಬೇಕು. ನೀವು ಬಯಸಿದ್ದೆಲ್ಲಾ ಸಿಕ್ಕಿ ಹರ್ಷವನ್ನು ಪಡೆಯುತ್ತೀರ. ಸೂರ್ಯ ನಾರಾಯಣ ಹಾಗೂ ದುರ್ಗೆಯ ಪ್ರಾರ್ಥನೆ ಇರಲಿ.
ಕನ್ಯಾ ರಾಶಿಯಲ್ಲಿ ಜನಿಸಿದವರು ಕಳೆದ ಎರಡು ವರ್ಷಗಳಿಗೂ ಅಧಿಕವಾಗಿ ಸಾಕಷ್ಟು ತೊಂದರೆ ದುಃಖ ಅನುಭವಿಸಿದ್ದೀರ. ಇರುಳು ಕಳೆದು ಸೂರ್ಯ ಮೂಡುತ್ತಾನೆಂದು ಭಾವನೆ- ನಂಬಿಕೆ ಇರಲಿ. ನೆನ್ನೆಯನ್ನು ಜ್ಞಾಪಿಸಿಕೊಳ್ಳದೆ ನಾಳೆಯ ಒಳ್ಳೆಯ ಕೆಲಸ ಮಾಡಬೇಕೆಂಬ ಸತ್ಸಂಕಲ್ಪವಿರಲಿ. ಪರಮಾತ್ಮನೇ ಮೆಚ್ಚಿ ನಿನ್ನನ್ನು ನಡೆಸುವನಯ್ಯ.
ಆಡಿದ ಮಾತಿಗೆ, ಕೊಟ್ಟ ದಾನಕ್ಕೆ ಎಚ್ಚರಿಕೆ ವಹಿಸಿ. ಮುಂದೆ ಹೆಜ್ಜೆ ಹಾಕಲು ವಿಶಾಖ ನಕ್ಷತ್ರಾಧಿಪತಿ ಆರು ಮುಖ, ಹನ್ನೆರಡು ಕೈಗಳು, ಕೈಯಲ್ಲಿ ವೇಲನ್ನು ಹಿಡಿದು ಶಿವಪಾರ್ವತಿಯ ಅಂಶದಿಂದ ಕೂಡಿದ ಷಣ್ಮುಖನನ್ನು ನೀವು ಧ್ಯಾನಿಸಿ. ಅವನೇ ಬಂದು ನಿಮ್ಮನ್ನು ಸರ್ವಕಷ್ಟಗಳಿಂದ ಕಾಪಾಡುತ್ತಾನೆ. ಕೆಲಸದಲ್ಲಿ ಶ್ರಮವಿರಲಿ. ಸುಖವೂ ಬರುತ್ತದೆ. ಧನವೂ ಅಧಿಕಗೊಳ್ಳುತ್ತದೆ.
ಮೂರರ ಶನಿ ಕೊಟ್ಟಿದ್ದನ್ನು ಕೊಟ್ಟು ಕೊಡಬೇಕಾದ್ದನ್ನು ತರಿಸಿಕೊಳ್ಳುವ ಶಕ್ತಿ ಇರುವವನು. ಮನುಷ್ಯನಿಗೆ ಶಕ್ತಿ ಗಿಂತ ಯುಕ್ತಿಯಿದ್ದು, ದೈವಾನುಗ್ರಹವಿದ್ದರೆ ಯಾವುದೂ ಕಷ್ಟವಲ್ಲ. ತನ್ನಿಂದ ತಾನೇ ಬಂದು ಸೇರುತ್ತದೆ. ದೇವರಿಗೆ ಮಾಡಿದ ಪೂಜೆ ಹಾಗೂ ಶ್ರಮವಹಿಸಿ ಮಾಡಿದ ಕೆಲಸಗಳಿಗೆ ಎಂದೂ ಕೈಬರಿದಾಗುವುದಿಲ್ಲ. ಇಡಗುಂಜಿ ಗಣಪತಿಯನ್ನು ಪೂಜಿಸಿ.
ಸಾಕ್ಷಾತ್ಕಾರಕ್ಕೂ ಸಂಸ್ಕಾರಕ್ಕೂ ಒಂದಕ್ಕೊಂದು ಹೊಂದಿ ಕೊಂಡಿರುತ್ತದೆ. ಅದನ್ನು ಪಡೆಯಲು ಪೂರ್ವಾರ್ಜಿತ ಪುಣ್ಯ, ನಿಮ್ಮ ಹಿರಿಯರು, ತಂದೆ-ತಾಯಿ ಮಾಡಿದ ಪುಣ್ಯವೂ ಬೆನ್ನಹಿಂದೆ ಇರುತ್ತದೆ. ರಾಮನ ಸ್ತುತಿಯಿರಲಿ. ಹನುಮಾನ್ ಚಾಲೀಸಾ ಪಠಿಸಿ. ಧನುರ್ ರಾಶಿಯಲ್ಲಿ ಹುಟ್ಟಿದವರು ಮುಖಕಾಂತಿ ಹೊಂದಬೇಕಾದರೆ ದೇವರನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ರುದ್ರ ದೇವರನ್ನು ಪೂಜಿಸಿ. ಶನಿವಾರದಂದು ಹನುಮಂತನ ದರ್ಶನ ಪಡೆಯಿರಿ.
ಎರಡನೇ ಮನೆ ಗುರು ಸ್ವಲ್ಪ ಮಟ್ಟಿಗೆ ಬಲಹೀನತೆ ನಿವಾರಿಸುವನು. ಭಕ್ತಿಗೆ ಮೆಚ್ಚಿ ಬೇಕಾದ ಸೌಲಭ್ಯವನ್ನು ಕೊಡುವಂತಹ ಗುರು ಒಬ್ಬನೇ ಸಾಕು. ಶನಿಯು ಜನ್ಮರಾಶಿಯನ್ನು ಬಿಟ್ಟರೆ ಸುಖಕಾಲ ಪಡೆಯಬಹುದು. ಆದರೆ ಇನ್ನೂ ಎರಡೂವರೆ ವರ್ಷ ಕಡೆಯ ಭಾಗದ ಶನಿಯ ಸಂಚಾರವಿದೆ. ಶನಿವಾರದಂದು ಶನೀಶ್ವರ ಅಷ್ಟೋತ್ತರ ಪಾರಾಯಣ ಮಾಡಿ.
ಲಗ್ನದಲ್ಲಿ ಗುರುವಿದ್ದು, ದ್ವಾದಶದಲ್ಲಿ ಶನಿಯಿದ್ದಾನೆ. ದೇವರು ಏನನ್ನು ಕೊಟ್ಟರೂ ಅದರಲ್ಲಿ ಅರ್ಥ ಫಲವೇ ಸಿಗುವುದು. ಕೆಲಸವಾಗಲಿಲ್ಲವೆಂದು ದೇವರನ್ನು ಹಳಿಯದೆ, ಅದರಿಂದ ಆಗುವ ಪರಿಣಾಮಗಳಿಂದ ದೇವರು ನಿಮ್ಮನ್ನು ಕಾಪಾಡಿದ್ದಾನೆಂದು ಅರ್ಥೈಸಿಕೊಂಡು ಬಾಳಿರಿ. ದ್ವಾದಶ ಶನಿಗೆ ಶನಿಸ್ತೋತ್ರ ಪಠಿಸಿ. ಗುರು ದತ್ತಾತ್ತೇಯನೊಬ್ಬನೇ ಸಾಕು ನಿಮ್ಮನ್ನು ಕೈಹಿಡಿದು ನಡೆಸಲು.
ತಲೆಯೆಂಬುದು ಮಾನವ ದೇಹಕ್ಕೆ ಭಗವಂತನು ಇಟ್ಟ ಕಿರೀಟ. ಒಳ್ಳೆಯ ಕೆಲಸ ಮಾಡುವ ಸಂಕಲ್ಪವಿರಬೇಕು. ದೇವರು ಕೊಟ್ಟ ಸೌಕರ್ಯವನ್ನು ಉಪಯೋಗಿಸಿಕೊಂಡು ಯಾರಿಗೂ ನೋವಾಗದಂತೆ ನಡೆಯಬೇಕಾದ್ದೇ ಮೀನ ರಾಶಿಯ ಲಕ್ಷಣ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಗುರುವಾಯೂರಪ್ಪನನ್ನು ಪೂಜಿಸಿ.