

28, 29, 1, 2, 4, ಮೇಷ ರಾಶಿಗೆ ಶುಭದಿನವಾಗಿದ್ದು, 30ನೇ ತಾರೀಖು ಮಧ್ಯಮ. ಕಾರ್ಯವೈಖರಿಗಳನ್ನು ನಿಧಾನಗತಿಯಲ್ಲಿ ನಡೆಸಿಕೊಂಡು ಹೋದರೆ ಎಲ್ಲವನ್ನೂ ಸಾಧಿಸಬಹುದು. ಭಗವದ್ಕೃಪೆಗೆ ಪಾತ್ರರಾಗಲು ಮರೆಯಬೇಡಿ. ಚತುರ್ಥ ಶುಕ್ರನು ಪ್ರಾರ್ಥನೆಯಿಂದ ಒಲಿದು ನಷ್ಟವಿಲ್ಲದಂತೆ ನಿಮ್ಮ ಕೈಚೀಲದಲ್ಲಿ ಧನ ತುಂಬುತ್ತಾನೆ.
ಬುಧ-ರಾಹು ವೃಷಭದಲ್ಲಿ ಇರುವುದರಿಂದ, 2, 3, 4, 6ರ ಜುಲೈ ಶುಭದಿನಗಳಾಗಿದ್ದು ನಿಂತುಹೋದ ಕಾರ್ಯಗಳು ಸಮ್ಮುಖಕ್ಕೆ ಬಂದು ನಿಲ್ಲಲಿವೆ. ದುರ್ಗಾ ಪ್ರಾರ್ಥನೆ ಮಾಡಿದರೆ ಕಷ್ಟ ನೀಗುವುದು. ಶತ್ರುಗಳು ಹತೋಟಿಯಲ್ಲಿರುತ್ತಾರೆ. ಬುಧನಿಗಾಗಿ ನಾರಾಯಣನನ್ನು ಪ್ರಾರ್ಥಿಸಿ.
ಸೂರ್ಯನು ತನ್ನ ಮಿತ್ರನ ಮನೆಯಲ್ಲಿ ಬಂದು ಸೇರಿ ನಿಮಗೆ ಅನುಕೂಲ ಕಲ್ಪಿಸುವುದರಲ್ಲಿ ಸಂದೇಹವಿಲ್ಲ. ಸೂರ್ಯನಾರಾಯಣ ಎಂದೇ ಅವನ ನಾಮವಿರುವುದರಿಂದ ಸೂರ್ಯನಾರಾಯಣಾಷ್ಟಕ ಓದಿರಿ. ಮಹಾವಿಷ್ಣುವನ್ನು ಪ್ರಾರ್ಥಿಸಿ. ಸಹಸ್ರನಾಮ, ಸ್ತೋತ್ರದಿಂದ ಪೂಜಿಸಿ. ಸುಖ ತಂದು, ಆರೋಗ್ಯವನ್ನು ಕಾಪಾಡುತ್ತಾನೆ.
ಈ ರಾಶಿ ಗುರುವಿಗೆ ಉಚ್ಚ ಸ್ಥಾನ. 6, 8ರ ಸಂಪರ್ಕದಲ್ಲಿರುವ ಗುರುವನ್ನು ಒಲಿಸಿಕೊಳ್ಳಲು ಪ್ರಾರ್ಥನೆ, ಪೂಜೆ ಅಗತ್ಯ. ಪರಮಾತ್ಮನ ದಯೆಯೊಂದು ಬಂದೊದಗಿದರೆ ಯಾವುದೂ ಕಡಿಮೆಯಾಗುವುದಿಲ್ಲ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಆತುರ ಬೇಡ. ನಿಧಾನವಾಗಿ ಸಾಗಿ ಶುಭವನ್ನು ತಂದುಕೊಳ್ಳಿ. ಗುರುಚರಿತ್ರೆ ಪಾರಾಯಣ ಮಾಡಿ.
ಶನಿ ಆರರಲ್ಲಿ ಇದ್ದರೂ, ಗುರು ಸಪ್ತಮದಲ್ಲಿ ಇದ್ದು ರಾಹು-ಕೇತು ಭಂಗ ಉಂಟುಮಾಡುತ್ತಾರೆ. ಕೇತುಮಂತ್ರ ಜಪಿಸಿ ಗಣಪತಿಯನ್ನು ಆರಾಧಿಸಿ. ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ಏಕಾದಶದಲ್ಲಿ ರಾಶ್ಯಾಧಿಪತಿ ಇರುವುದರಿಂದ ಸೂರ್ಯನನ್ನು ಪ್ರಾರ್ಥಿಸಿ. ನಿಮ್ಮ ಜೀವನವನ್ನು ಬೆಳಕಾಗಿರಿಸಿಕೊಳ್ಳಬಹುದು.
ಹಿಂದಿನ ವಾರದಲ್ಲಿ ಅಷ್ಟಮ ವಯಸ್ಸಿನ ಕನ್ಯೆಯನ್ನು ಪೂಜಿಸಿರಿ ಎಂಬ ಸಲಹೆ ನೀಡಲಾಗಿತ್ತು. ಅದರಂತೆ ಶ್ರದ್ಧಾ, ಭಕ್ತಿಯಿಂದ ಪೂಜಿಸಿದರೆ ಉತ್ತಮ ಫಲ ಸಿಗುವುದರಲ್ಲಿ ಸಂದೇಹವಿಲ್ಲ. ಶನಿ-ಗುರು ಗ್ರಹ ಸಂಪರ್ಕಗಳು ಪಂಚಮ-ಷಷ್ಠದಲ್ಲಿರುವುದರಿಂದ ಪ್ರಯತ್ನ ಪಡಬೇಕು. ಮನಸ್ಸನ್ನು ಉದ್ವಿಗ್ನ ಮಾಡದೆ ಶಾಂತ ಸ್ವರೂಪದಿಂದ ಕೆಲಸ ಮಾಡಿದರೆ ದೇವರು ದಾರಿ ತೋರಿ ನಿಮಗೆ ಶ್ರೇಯಸ್ಸು, ಲಾಭವನ್ನು ಕರುಣಿಸುತ್ತಾನೆ. ಬಾಲಾತ್ರಿಪುರಸುಂದರಿಯನ್ನು ಪೂಜಿಸಿ-ವಂದಿಸಿ.
ಪಂಚಮ ಗುರುವಿನ ಕರುಣೆ ಇದ್ದೇ ಇದೆ. ಚತುರ್ಥ ಶನಿ ಮನಸ್ಸನ್ನು ಹಾಳುಮಾಡದೆ ಇರಲು ಕಾಲಭೈರವನನ್ನು ಪೂಜಿಸಿ. ಶನಿಪಿಪ್ಪಲಾಸ್ತೋತ್ರ ಪಾರಾಯಣ ಮಾಡಿ. ದಾರಿ ಸುಗಮವಾಗಿದ್ದರೆ ಪ್ರಯಾಣ ಚೆನ್ನಾಗಿರುತ್ತದೆ. ಲಾಭವೂ ಬರುತ್ತದೆ.
ತೃತೀಯದಲ್ಲಿ ಶನಿಯಿರುವುದು ಕೊಡುವುದಕ್ಕೆ, ಲಗ್ನದಲ್ಲಿ ಕೇತುವಿರುವುದು ನಿಮ್ಮನ್ನು ಪರೀಕ್ಷೆಗೊಳಪಡಿಸುವುದಕ್ಕಾಗಿ. ಈ ರಾಶಿಯಲ್ಲಿ ಜನಿಸಿದವರಿಗೆ ಇದು ಕೆಡುವ ಕಾಲವಲ್ಲ. ಧೈರ್ಯ, ಸ್ಥಿರತೆ, ದೈವಪ್ರಾರ್ಥನೆ ಇದ್ದರೆ ದೇವರೇ ಹರಸುತ್ತಾನೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ನಿಮ್ಮ ಕೆಸರಾದ ಕೈಯನ್ನು ಬಂಗಾರ ತುಂಬಿದ ಹಸ್ತವನ್ನಾಗಿ ಮಾಡುತ್ತಾನೆ. ಷಣ್ಮುಖಸ್ತೋತ್ರ ಪಠಿಸಿ.
ಓಡಿ ಸುಸ್ತಾಗಬೇಡಿ. ಪರಮಾತ್ಮ ಕೊಟ್ಟಿದ್ದು ನಿಮಗೆ ಬಂದು ಸೇರುತ್ತದೆ. ಕಾಲಾಯ ತಸ್ಮೈ ನಮಃ ಎಂಬಂತೆ ದೇವರು ಕೊಟ್ಟ ಕೆಲಸ ಮಾಡಿ. ಸಮಾಜದಲ್ಲಿ ಉನ್ನತ ಹುದ್ದೆ, ಕೀರ್ತಿ, ಲಾಭ ಬರುತ್ತದೆ. ಗುರುಪ್ರಾರ್ಥನೆ ಇರಲಿ. ಮರೆಯದೇ ತಂದೆ-ತಾಯಿ ಆಶೀರ್ವಾದವನ್ನು ಪಡೆದುಕೊಳ್ಳಿ.
ಹಿರಿಯರು ಹೇಳಿದ ಮಾತನ್ನು ಕೇಳಿದವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಗುರುಗಳಲ್ಲಿ ವಿಶ್ವಾಸವಿಟ್ಟರೆ ಸೋಲೆಂಬುದೇ ಇಲ್ಲ. ಕುಲಗುರುವಿನ ಆಜ್ಞೆಯನ್ನು ಮೀರದೆ ಅವರು ಕೊಟ್ಟ ಮಾರ್ಗದಲ್ಲಿ ಹೆಜ್ಜೆ ಹಾಕಿರಿ. ಅದೇ ನಿಮ್ಮನ್ನು ಕಾಪಾಡುತ್ತದೆ. ಈಶ್ವರನ ಮುಂದೆ ಜೋಡಿ ತೆಂಗಿನಕಾಯಿ ಇಟ್ಟು ಕಷ್ಟವನ್ನು ನೀಗೆಂದು ಪ್ರಾರ್ಥಿಸಿ. ಒಳಿತಾಗುತ್ತದೆ.
ಈ ರಾಶಿಯಲ್ಲಿ ಗುರುವು ಸೆಪ್ಟೆಂಬರ್ 17ರವರೆಗೆ ಇರುವುದರಿಂದ ನೀವು ಶಾಂತಚಿತ್ತರಾಗಿದ್ದರೆ ಹಾನಿಯಿಲ್ಲ. ಶನಿ ಸಂಚಾರದಲ್ಲಿ ಎಲ್ಲವೂ ಸಿಗುವ ಕಾಲವಲ್ಲ. ಸಿಕ್ಕಿದ್ದನ್ನು ಜಾಣ್ಮೆಯಿಂದ ವ್ಯವಹರಿಸಿ, ಭಗವಂತನ ಕೃಪೆಗೆ ಪಾತ್ರರಾಗಿ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ಶನಿಸ್ತೋತ್ರ ಪಾರಾಯಣ ಮಾಡಿ. ಈಶ್ವರನನ್ನು ಪೂಜಿಸಿ.
ಹನ್ನೊಂದರಲ್ಲಿ ಶನಿಯಿದ್ದು ಸಮಯ ಚೆನ್ನಾಗಿದೆ. ಆಹಾರವಿಲ್ಲದ ಮನುಷ್ಯ ಬಳಲುತ್ತಾನೆ. ಹಾಗೆಯೇ ದೈವಚಿಂತನೆಯಿಲ್ಲದಿದ್ದರೆ ಬುದ್ಧಿ ತನ್ನ ಶಕ್ತಿ ಕಳೆದುಕೊಂಡು ತನಗೆ ತಾನೇ ಕೇಡನ್ನು ಉಂಟುಮಾಡಿಕೊಳ್ಳುತ್ತಾನೆ. ಆದ್ದರಿಂದ ಪಾರ್ವತಿಸಹಿತ ಸಾಂಬಸದಾಶಿವನನ್ನು ಪೂಜಿಸಿ. ಶಿವಪಂಚಾಕ್ಷರಿಯನ್ನು ಜಪಿಸಿ. ಸುಖ-ಸಂತೋಷ ಪಡೆಯಬಹುದು.