

ಜುಲೈ 25ರಂದು ಪಾಡ್ಯ. ಮಕರ ರಾಶಿಯಲ್ಲಿ ಚಂದ್ರ ಪರಿಪೂರ್ಣ ಬಿಂಬದಲ್ಲಿದ್ದು, ದಶಮ ಶನಿ, ಏಕಾದಶ ಗುರು ನಿಮ್ಮ ಕೆಲಸಕಾರ್ಯಗಳನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾನೆ. ಹುಣ್ಣಿಮೆಯ ಬೆಳಕು ಈ ವಾರ ಇರುವುದರಿಂದ ಶ್ರೀ ಮಹಾಗಣಪತಿ ಆದಿತ್ಯಾದಿ ನವಗ್ರಹ, ಭೂದೇವಿ ಸಹಿತ ಲಕ್ಷ್ಮೀಸತ್ಯನಾರಾಯಣನನ್ನು ಪೂಜಿಸಿ. ಸೂರ್ಯಾರಾಧನೆ ಯೊಂದಿಗೆ ಭಾಗವತವನ್ನು ಪಾರಾಯಣ ಮಾಡಿ.
ತಿನ್ನಲು ಆಗದ ಆಹಾರ, ಕೊಡುವ ಮನಸ್ಸು ಇಲ್ಲದ ಧನ ಯಾವ ದೇವರಿಗೂ ಪ್ರೀತಿಯಾಗಲಾರದು. ಇಟ್ಟು ಕಂಡವರ ಪಾಲಾಗುವ ಬದಲು ಕೊಟ್ಟು ಸಂತೋಷ ಪಡುವ ಧರ್ಮ ಅನುಸರಿಸಿದರೆ ವೃಷಭ ರಾಹುವಿನಿಂದ ಅನಿರೀಕ್ಷಿತ ಧನ, ಗೃಹಶ್ರೇಷ್ಠ ಶನಿಯಿಂದ ಲಾಭವೂ ದೊರಕುತ್ತದೆ. ಉಮಾ ಮಹೇಶ್ವರ ಸ್ತೋತ್ರ ಪಾರಾಯಣ ಮಾಡಲು ಮರೆಯದಿರಿ.
ರಾಶ್ಯಾಧಿಪತಿ ಬುಧ ಸ್ವಕ್ಷೇತ್ರದಲ್ಲಿದ್ದು, ಅಂಗಾರಕನ ಸಂಪರ್ಕದಲ್ಲಿದ್ದಾನೆ. ಷಷ್ಟದಲ್ಲಿ ಕೇತು, ದ್ವಾದಶ ರಾಹುವಿರುವುದರಿಂದ ತ್ವರಿತ ಕಾರ್ಯಾಚರಣೆ, ಆರೋಗ್ಯತೃಪ್ತಿಯನ್ನು ತರುವ ಧನಕ್ಕೆ ಕಠಿಣ ಕಾರ್ಯಸಿದ್ಧಿ ಮಂತ್ರ ಜಪಿಸಿ ಸುಖ ಪಡೆದುಕೊಳ್ಳಿ. ಸರ್ವಾನ್ ಲೋಕಾನ್ ಸುಸಂಹೃತ್ಯ ಸಭೂತಾನ್ ಸಚರಾಚರನ್| ಪುನರೇವಾ ತಥಾ ಸ್ರಷ್ಟುಂ ಶಕ್ತೋ ರಾಮೋ ಮಹಾಯಶಾಃ || (28 ಬಾರಿ)
ಬುದ್ಧಿಬಲವಿಲ್ಲದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಗ್ರಹಗತಿಗಳ ಸಂಚಾರ ಅನುಕೂಲಕರವಾಗಿಲ್ಲ- ನಂಬಿದವರನ್ನು ಕೈಬಿಡದವನು ದೇವನೊಬ್ಬನೇ. ಲಕ್ಷ್ಮೀನರಸಿಂಹನನ್ನು ಮರೆಯದೆ ಪಾರಾಯಣ ಮಾಡಿ. ವಾಮಾಂಕ ಶ್ರೀಯಯಾಯುಕ್ತಂ ಚಕ್ರಶಂಖಾಬ್ಜ ಧೃಕ್ಕರಮ್ ಪೀತಾಂಬರಂ ಸರ್ವಭೂಷಂ ಪ್ರಸನಂ ನೃಹರಿಂ ಭಜೇ (16 ಬಾರಿ)
ಈ ರಾಶಿಗೆ ಗ್ರಹಗಳು ಭಾಗ್ಯವನ್ನೇ ಕೊಡಲು ಬರುತ್ತಿವೆ. ನಿಮಗೆ ಭಾಗ್ಯೋದಯವಾಗಬೇಕಾದರೆ ದೇವರು ಕೊಟ್ಟದ್ದನ್ನು ಹಂಚಿ ತಿನ್ನಿ. ನಿಮಗೆ ಎಂದಿಗೂ ಕಷ್ಟ ಬರುವುದಿಲ್ಲ. ಸೂರ್ಯನಾರಾಯಣನನ್ನು ಪೂಜಿಸಿ. ಒಂದು ಸೇರು ಗೋಧಿ, ಬಿಳಿಯ ವಸ್ತ್ರ ದಾನಮಾಡಿ.
ಜುಲೈ 26, 28, 29, 31 ಶುಭದಿನವಾಗಿರುತ್ತದೆ. ಅಲ್ಪ ಪ್ರಯತ್ನದಲ್ಲೇ ಲಾಭ ಪಡೆಯುತ್ತೀರ. ಶಮಂತಪೋಖ್ಯಾನವನ್ನು ಪಾರಾಯಣ ಮಾಡಿರಿ. ಕಷ್ಟಕಾರ್ಪಣ್ಯಗಳು ಇಲ್ಲದೆ ಈ ವಾರ ನಿಮಗೆ ತೃಪ್ತಿಕರವಾಗಿ ಸಾಗಬಹುದು.
ನಿಮ್ಮ ಪುಣ್ಯರಾಶಿಯಲ್ಲಿರುವ ಪಿತೃವರ್ಗವನ್ನು ಸ್ಮರಿಸಿ, ಮನಸಾ ಪೂಜಿಸಿ. ನೀಳಾದೇವಿಯನ್ನು ಪ್ರಾರ್ಥನೆ ಮಾಡಿ. ಕಠಿಣಕಾರ್ಯಸಿದ್ಧಿಗಾಗಿ 48 ದಿನ ಒಂದು ಮಂಡಲ ಪ್ರಾರ್ಥನೆ ಮಾಡಿ.
ವಿಷ್ಣುರ್ಜಿಷ್ಣುರ್ವಷಟ್ಕಾರೋ ದಿತಿಜೋ ದೈತ್ಯಸೂದನಃ
ಫಣಾಸಹಸ್ರವಿಲಸದ್-ಭೂಮಂಡಲ ಅಹಸ್ಕರಃ||
ಸರ್ಪರಾಜೋ ವಿಷೀವೈದ್ಯೋ ಭಾನುರ್ಭಾನುಸಹಸ್ರಧೃಕ್
ರಜತಾದ್ರಿ ಸಮಾಕಾರೋನಂ ತೋನಂತಶಿರಾಃ ಪ್ರಭುಃ||
ರಾಹು-ಕೇತುಗಳು ವೃಷಭ -ವೃಶ್ಚಿಕ ರಾಶಿಯಲ್ಲಿ ಸ್ಥಿತರಿದ್ದಾರೆ. ಮಕ್ಕಳು ಹಸಿವೆಯಾದರೆ ಅನ್ನಕ್ಕಾಗಿ ತಾಯಿಯನ್ನು ಸ್ಮರಿಸುತ್ತಾರೆ. ಇಲ್ಲವೇ ಅಳುತ್ತಾರೆ. ನಿಮ್ಮ ಜೇಬನ್ನು ತುಂಬಿಕೊಳ್ಳಲು ದೇವರಿಗೆ ಕರುಣಾವಚನಗಳಿಂದ, ಗಣಪತಿಯನ್ನು ಕೂಗಿದೊಡೆ ನಿಮ್ಮ ಕಣ್ಣನ್ನು ಒರೆಸಿ- ಜೇಬನ್ನು ತುಂಬುತ್ತಾನೆ.
ತ್ವರಿತಗಣಪತಿ ಮಂತ್ರ
ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ||
ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ||
ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ|| ವಕ್ರತುಂಡಃ ಶೂರ್ಪಕರ್ಣೇ ಹೇರಂಬಃ ಸ್ಕಂದಪೂರ್ವಜಃ||
ಮನುಷ್ಯನಿಗೆ ಆರೋಗ್ಯವೇ ಮಹಾಭಾಗ್ಯ. ಪರಮಾತ್ಮ ಇದನ್ನು ಕೊಟ್ಟರೆ ಎಲ್ಲವನ್ನೂ ಕೊಟ್ಟಂತೆ. ಮಾಂಸಕೀಲು ಗಳು, ಕೈಕಾಲು, ಬೆನ್ನು ಸೆಳೆತದಿಂದ ನೋವುಂಟಾಗಿ ಮಾಡುವ ಕೆಲಸ ಇಳಿಮುಖವಾಗುತ್ತದೆ. ಧೈರ್ಯ ಗೆಡುವ ಅಗತ್ಯವಿಲ್ಲ. ಮತ್ತೇ ಉತ್ಸಾಹ ಕೊಟ್ಟು ದೇವರೇ ನಡೆಸುತ್ತಾನೆ. ವಾಮನ ಅಷ್ಟೋತ್ತರ ಪಾರಾಯಣ ಮಾಡಿ, ದೇವರನ್ನು ಹೃದಯಮಂದಿರದಲ್ಲಿಟ್ಟು ಪೂಜಿಸಿ.
ಕಾಲವೆಂಬುದು ಕಾಲಾತ್ಮಕನಾದ ಶ್ರೀರಾಮನಿಗೇ ಗೊತ್ತು. ಶುಭವನ್ನು ಬಯಸಿದರೆ ಎಲ್ಲವೂ ಮಂಗಳಕರ ವಾಗಿ ನಡೆಯುತ್ತದೆ. ಅದರ ತಯಾರಿಗೆ ದೈವಕೃಪೆ ಇರಬೇಕು. ಮಕರ ಶನಿ ನಿಮ್ಮ ಖಾತೆಯಲ್ಲಿರುವ ಪುಣ್ಯದಂತೆ ನಡೆಸುತ್ತಾನೆ. ನಿಮ್ಮ ಜಾತಕದ ಶುಭ ಪರಿವರ್ತನೆಗೆ ಅನಂತವಾಗಿ ಏಕಕಾಲದಲ್ಲಿ ನಾರಾಯಣನನ್ನು-ಶಿವನನ್ನು ಪೂಜಿಸಿ. ನಿಮಗೆ ಮನಸಂತೋಷವಾಗಿ ಪ್ರಗತಿ ಕಾಣುವ ಸಮಯ.
12ನೇ ಮನೆಯ ಗ್ರಹಗಳು ಎಲ್ಲ ವಿಧವಾದ ತೊಂದರೆ ಯನ್ನು ಸೂಚಿಸಿ ನಿಮ್ಮ ಮನಸ್ಸಿಗೆ ನೋವನ್ನು ಉಂಟುಮಾಡುತ್ತವೆ. ಆದರೆ ನೀವು ಸುಮ್ಮನೆ ಕೂತರೆ ಮಾವಿನಕಾಯಿ ಉದುರುವುದಿಲ್ಲ. ದೈವಬಲ, ಬುದ್ಧಿಬಲದಿಂದ ವೃತ್ತಿಯನ್ನು ಮುಂದುವರಿಸಿ, ಆರೋಗ್ಯ ಕಾಪಾಡಿಕೊಳ್ಳಿ. ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ಮಂತ್ರವನ್ನು ಜಪ ಮಾಡಿ. ನಿಮ್ಮ ತೊಂದರೆ ದೂರವಾಗುತ್ತದೆ.
ಗುರುವಿನ ಸ್ವಗೃಹಗಳು ಧನಸ್ಸು ಮತ್ತು ಮೀನ. ಗುರುವಿಗೆ ಉಚ್ಚಸ್ಥಾನ ಚತುರ್ಥದಲ್ಲಿ. ಏನು ಮಾಡಬೇಕೆಂದು ಯೋಚಿಸಿದ್ದರೂ ತಡಮಾಡದೆ ನಿಮ್ಮ ಕುಲಪುರೋಹಿತರೊಂದಿಗೆ ರ್ಚಚಿಸಿ. ವಿಷಯಕ್ಕೂ ನಿಮ್ಮ ಮನಸ್ಸಿನ ವಿಷಕ್ಕೂ ಕಡಿವಾಣ ಹಾಕಿ. ನಿಮ್ಮ ಏಕಾದರ ಶನಿ ನೀವು ಬಯಸಿದ ಸುಖ-ಭೋಗ, ಭಾಗ್ಯ, ಆಯುಷ್ಯವನ್ನು ಕೊಡಬಲ್ಲ. ಶ್ರೀರಂಗಪಟ್ಟಣದ ರಂಗನಾಥನನ್ನು ಪ್ರಾರ್ಥಿಸಿ. ರಂಗನಾಥ ಅಷ್ಟೋತ್ತರ ಪಠಿಸಿ. ಸಾಧ್ಯವಾದಲ್ಲಿ ಚನ್ನಿಗರಾಯ ಸ್ವಾಮಿಯನ್ನು ದರ್ಶಿಸಿ.