ಈ ರಾಶಿಯವರು ಶನಿ ಪ್ರಾರ್ಥನೆ ಮಾಡಿ ಎಳ್ಳುದೀಪವನ್ನು ಹಚ್ಚಿ: ವಾರಭವಿಷ್ಯ

Vaara-Bhavishya
Published on
ಮೇಷ

ಮೇಷ ರಾಶಿಯವರಿಗೆ ಇದು ಸೂಕ್ತ ಸಮಯವಲ್ಲ. ಸಂಯಮದಿಂದ ಈ ವಾರ ಮುಂದೆ ಸಾಗಬೇಕು. ನಿಮಗೆ ಶನಿಯು ದಶಮದಲ್ಲಿದ್ದು, ಗುರುವು ದ್ವಾದಶದಲ್ಲಿದ್ದು, ದೈವಬಲವೂ ಇಲ್ಲ. ಗ್ರಹಬಲವೂ ಇಲ್ಲ. ಸ್ವಕ್ಷೇತ್ರದಲ್ಲಿ ಅಂಗಾರಕನು ಇದ್ದು, ನಿಮ್ಮನ್ನು ದಾರಿ ಕಾಣುವಂತೆ ನಡೆಸಿ ಕಾರ್ಯಗಳು ಯಶಸ್ವಿಯಾಗಬೇಕಾದರೆ ನೀವು ಗಾಣಗಾಪುರದ ಕುಂಸಿ ಮಹಾಕ್ಷೇತ್ರದಲ್ಲಿ ತ್ರಿವಿಕ್ರಮ ಭಾರತಿಗೆ ವಿಶ್ವರೂಪ ತೋರಿದ ಗುರುಗಳನ್ನು ಅರ್ಥೈಸಿಕೊಂಡು ಕೂಡಲೇ ತೆರಳಿ ನಿಮ್ಮ ಪಾಪದ ಗಂಟನ್ನು ಅಲ್ಲೇ ಬಿಟ್ಟು ಪುಣ್ಯದ ಗಂಟನ್ನು ತೆಗೆದುಕೊಂಡು ಬನ್ನಿ.

ವೃಷಭ

ರಾಶಿಯ ಒಡೆಯನು ಬುಧನು ಮನೆಯಲ್ಲಿ ಇದ್ದು ಶುಭ ನೀಡುತ್ತಾನೆ. ಏಕಾದಶ ಗುರುವು ನಿಮಗೆ ರಕ್ಷಣೆ ಕೊಡುತ್ತಾನೆ. ನವಮ ಶನಿ ಇರುವುದರಿಂದ ನಿಮ್ಮ ಕಾರ್ಯ ಚಟುವಟಿಕೆಯು ವೇಗದಿಂದ ಸಾಗಲು ಸಾಧ್ಯವಿಲ್ಲ. ದ್ವಾದಶದಲ್ಲಿ ರಾಹು-ಕುಜನು ವಿಘ್ನಗಳನ್ನು ಅಶಾಂತಿಯನ್ನು ಉಂಟು ಮಾಡುತ್ತಾನೆ. ಗಾಣಗಾಪುರದ ತ್ರಿಮೂರ್ತಿ ದತ್ತಾತ್ರೇಯನನ್ನು ಪೂಜಿಸಿ ಏಕಾದಶ ಸ್ಥಾನದ ಫಲವನ್ನು ಪಡೆಯಿರಿ.

ಮಿಥುನ

ದಶಮ ಗುರು, ಅಷ್ಟಮದಲ್ಲಿ ಶನಿಯೂ ಇದ್ದು, ಕೆಲಸವು ಕಾರ್ಯಗತವಾಗುವುದಿಲ್ಲ. ಬುಧನು ದ್ವಿತೀಯದಲ್ಲಿ ಇರುವುದರಿಂದ ಶ್ರಮಪಟ್ಟು ಕೆಲವನ್ನು ಮಾಡಿದಲ್ಲಿ ತೃಪ್ತಿಯೂ ಸಿಗುತ್ತದೆ. ಮನುಷ್ಯನು ಜೀವಿತವಿರುವಾಗ ದೇವಬಲ ವೃದ್ಧಿಗೊಳಿಸಬೇಕು. ಮಹಾವಿಷ್ಣು ಸಹಸ್ರನಾಮ ಜೊತೆ ಜೊತೆಯಾಗಿ ಶ್ರೀರಾಮಚಂದ್ರನನ್ನು ಅರ್ಚಿಸಿ. ಆಧ್ಯಾತ್ಮ ರಾಮಾಯಣದ 3ನೇ ಸರ್ಗವನ್ನು ಓದಿದಲ್ಲಿ ನಿಮ್ಮ ಕಾರ್ಯಕ್ಕೆ ದೈವಬಲ ಸಿಕ್ಕಿ ಯಶಸ್ಸನ್ನು ಕಾಣಬಹುದು.

ಕಟಕ

ನವಗ್ರಹಗಳ ಒಕ್ಕೂಟವು ಸರಿಯಿಲ್ಲದಿದ್ದಲ್ಲಿ ಗ್ರಹಭಾದೆ ಉಂಟಾಗುವುದು ಸಹಜವು. ಸೂರ್ಯನು ಚಂದ್ರನ ಮನೆಯಲ್ಲಿ ಇದ್ದು, ಮಿತ್ರನಾದ ಬುಧನೊಂದಿಗೆ ಇದ್ದಾನೆ. ಆಗಸ್ಟ್ 15ರ ತನಕ ಸೂರ್ಯನಾರಾಯಣನನ್ನು ಪೂಜಿಸಿ. ಬಾಲಸೂರ್ಯನನ್ನು ಕಂಡು ನಮಸ್ಕರಿಸಿ. ಸೂರ್ಯನಮಸ್ಕಾರ ಮಾಡಿದಲ್ಲಿ ನಿಮಗೆ ಆರೋಗ್ಯವೂ ಕೊಟ್ಟು ಮನಸ್ಸನ್ನು ಉಲ್ಲಾಸವನ್ನಾಗಿಡುತ್ತದೆ. ಅಷ್ಟಮದಲ್ಲಿ ಶನಿಯಿರುವುದರಿಂದ ದೇವರಲ್ಲಿ ಪರಿಪೂರ್ಣ ಆರೋಗ್ಯ ಆಯುಷ್ಯಕ್ಕೆ ಪ್ರಾರ್ಥಿಸಿ.

ಸಿಂಹ

ಸದ್ಯಕ್ಕೆ ದ್ವಾದಶದಲ್ಲಿ ಸೂರ್ಯನು ಬುಧನು ಇರುವುದು. ಸಂಯಮ, ಶಿಸ್ತು ಸಹನೆ, ಸತ್ಸಂಗ ಇದ್ದಲ್ಲಿ ಮಾತ್ರವೇ ಸೂರ್ಯನ ಬೆಳಕನ್ನು ಕಾಣಬಹುದು. ರಾಶ್ಯಾಧಿಪತಿ ಸೂರ್ಯನಿಗೆ ಆದಿತ್ಯ ಹೃದಯ ಪಾರಾಯಣವನ್ನು ಮಾಡಿ. ನಿತ್ಯವೂ ಸೂರ್ಯ ಅಷ್ಟೋತ್ತರ ಪಠಿಸಿ. ಕೆಂಪು ಪುಷ್ಪದಿಂದ ಸೂರ್ಯನನ್ನು ಪೂಜಿಸಿ. ಶನಿ ಬಲ ಆರರ ಶನಿಯು ಧನ, ಸಂಪತ್ತು, ಸುಖ ಎಲ್ಲವನ್ನೂ ನೀಡಿ ಆನಂದವನ್ನು ನೀಡುತ್ತಾನೆ.

ಕನ್ಯಾ

ಏಕಾದಶದಲ್ಲಿ ಸೂರ್ಯ-ಬುಧನು ಇರುವುದು ಶುಭವು. ನಿಮ್ಮ ಕಾರ್ಯಸಾಧನೆ ಮಾಡಿಕೊಳ್ಳಿ. ಧನ ತಾಪತ್ರಯದಿಂದ ಹೊರಗೆ ಬರುವ ಸಮಯ. ಕೋರ್ಟ್-ಕಚೇರಿಯಲ್ಲಿ ವಿಜಯದ ಸರಮಾಲೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲೆಂದೇ ಸಪ್ತಮದಲ್ಲಿ ಗುರುವಿದ್ದಾನೆ. ಆಡಿದ ಮಾತನ್ನು ಉಳಿಸಿಕೊಳ್ಳಬೇಕು. ನಿತ್ಯವೂ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ಶನಿವಾರದಂದು ಶನಿ ಪ್ರಾರ್ಥನೆ ಮಾಡಿ ಎಳ್ಳುದೀಪವನ್ನು ಹಚ್ಚಿ.

ತುಲಾ

ಮನುಷ್ಯನಿಗೆ ಸೌಂದರ್ಯವೇ ಶಿರ ಭಾಗವು. ಶಿರಸ್ಸಿನಲ್ಲಿ ಜ್ಞಾನೇಂದ್ರಿಯವನ್ನು ಕೊಟ್ಟು ಲೋಕವನ್ನು ಭಗವಂತ ಮುನ್ನಡೆಸುತ್ತಾನೆ. ಅದೇ ರೀತಿ ಕೆಡಕು- ಒಳಿತು ಭಗವಂತ ಇಟ್ಟಿದ್ದಾನೆ. ಆರಿಸಿಕೊಳ್ಳುವುದು ನಮ್ಮ ಕರ್ತವ್ಯ. ದೈವಬಲವು ಇದ್ದರೆ ಮಾತ್ರವೇ 4ರ ಶನಿ, 6ರ ಗುರುವನ್ನು ದಾಟಬಹುದು. ಸ್ವಕ್ಷೇತ್ರ ಶನಿಯು ಬಾಧಿಸದಿದ್ದರೂ ಚತುರ್ಥದಲ್ಲಿ ಇರುವುದರಿಂದ ಅನಂತವಾಗಿ ದುರ್ಗೆಯನ್ನು ಪ್ರಾರ್ಥಿಸಿ-ಪೂಜಿಸಿ.

ವೃಶ್ಚಿಕ

ಷಷ್ಠದಲ್ಲಿ ರಾಶ್ಯಾಧಿಪತಿಯಿದ್ದು ಪಂಚಮ ಗುರು ಇರುವುದರಿಂದ ಭೂ ವ್ಯವಹಾರ, ಗಣಿ ವ್ಯಾಪಾರ, ವಿದ್ಯಾಕ್ಷೇತ್ರ, ಕ್ರೀಡಾಕ್ಷೇತ್ರ ಎಲ್ಲರಿಗೂ ಅನುಕೂಲವಾದ ಸಮಯ. ದ್ವಾದಶ ಕೇತುವಿಗೆ ಚಿನ್ಮಯ ಮಾತ್ರನು. ಬೇಡಿದ ವರವನ್ನು ಕೊಡುವವನಾದ ವರಸಿದ್ಧಿ ವಿನಾಯಕನನ್ನು ಪೂಜಿಸಿ ಪ್ರಾರ್ಥಿಸಿ. ಎಲ್ಲವೂ ಶುಭವಾಗುತ್ತದೆ.

ಧನಸ್ಸು

ಅಚಂಚಲವಾದ ಮನಸ್ಸು, ಭಕ್ತಿಯು ದೇವರ ಪ್ರಾರ್ಥನೆಯಿಂದ ಮಾತ್ರವೇ ಸಾಧ್ಯವಾದ ಮಾತು. ಸಿಂಹ ಮಾಸವು ಬರುವವರೆಗೂ ಅನಂತವಾಗಿ ಸಾಂಬಸದಾಶಿವನನ್ನು ಪೂಜಿಸಿ. ನಿಮ್ಮನ್ನು ಕಾಡುವ ಶತ್ರುಗಳಿಗೆ ಸನ್ಮಾರ್ಗ ಸದ್ಗುಣಗಳನ್ನು ಕೊಟ್ಟು ನಿಮ್ಮನ್ನು ಕಾಪಾಡುತ್ತಾನೆ. ಸಹನೆಯಿಂದ ನಿಮ್ಮ ಪಯಣವು ಸಾಗಲಿ. 2023 ಜನವರಿ ನಂತರ ಜಯದ ಹಾದಿಯನ್ನು ಕಾಣುತ್ತೀರ.

ಮಕರ

ಸ್ವಕ್ಷೇತ್ರದಲ್ಲಿ ಶನಿಯಿದ್ದು, ತೃತೀಯದಲ್ಲಿ ಗುರುವಿದ್ದು, ಯಾರು ಏನೇ ಮಾಡಿದರೂ ನಿಮ್ಮನ್ನು ಮಣಿಸಲಾಗುವುದಿಲ್ಲ. ಅನಂತವಾಗಿ ಭಕ್ತಿ ಇದ್ದಲ್ಲಿ ಅಲ್ಪಕಾಲವಿರುವ ಶನಿಯನ್ನು ದಾಟಿ ಮಾನವನು ಸದ್ಗುಣಗಳಿಂದ ಕೂಡಿ ಬಾಳಿದ್ದಾದರೆ ಮುಂದಿನ ದಿನಗಳಲ್ಲಿ ಶುಭವಾಗಿ ಪರಿಣಮಿಸಿ ಬೇಡಿದ್ದನ್ನು ಕೊಡುವವನೇ ಶಿವಶಂಕರ. ಶಿವನ ಪೂಜೆ ಇರಲಿ. ಮಹಾದೇವನಿಗೆ ಬೆಲ್ಲ-ಅಕ್ಕಿಯನ್ನು ನೀಡಿ. ಬಿಲ್ವಪತ್ರೆಯನ್ನು ಶಿವಾರಾಧನೆಗೆ ಕೊಡಿ. ನಿಮ್ಮನ್ನು ಸುಖದ ಹಾದಿಯಲ್ಲಿ ಕೊಂಡೊಯ್ಯುತ್ತಾನೆ.

ಕುಂಭ

ದ್ವಾದಶದಲ್ಲಿ ಶನಿ, ದ್ವಿತೀಯದಲ್ಲಿ ಗುರುವಿರುವುದರಿಂದ ನಿಮ್ಮ ಕುಲಗುರುಗಳನ್ನು ಪೂಜಿಸಿ. ತಂದೆ-ತಾಯಿಗಿಂತ ಯಾವ ದೊಡ್ಡ ಗುರುಗಳು ಜಗತ್ತಿನಲ್ಲಿ ಇಲ್ಲವೆಂದು ಅರ್ಥೈಸಿಕೊಂಡು ನಿತ್ಯವೂ ಪಾದತೊಳೆದು ತೀರ್ಥ ಶಿರೋಧಾರಣೆ ಮಾಡಿದರೆ ಮಾಡಿದ ಪಾಪ ತೊಳೆದು ನಿಮ್ಮನ್ನು ಸಂರಕ್ಷಿಸಿ, ನಿಮ್ಮ ಇಷ್ಟಾರ್ಥ ಕಾರ್ಯವನ್ನು ಮುಗಿಸಲು ಚೈತನ್ಯ ಕೊಟ್ಟು ದೈವಬಲವನ್ನು ಉಂಟು ಮಾಡುತ್ತಾನೆ. ಈ ಸಮಯದಲ್ಲಿ ಸೋಮವಾರ ವ್ರತದ ಕಲ್ಪೋತ್ತರ ಪೂಜೆ ಮಾಡಲು ಪ್ರಯತ್ನಿಸಿ. ಇಲ್ಲವೇ ಶಿವಾಲಯಕ್ಕೆ ಹೋಗಿ ಪೂಜೆಗಾಗಿ ಇದ್ದ ಧನವನ್ನು ಖರ್ಚು ಮಾಡಿ ಶುಭವನ್ನು ಪಡೆದುಕೊಳ್ಳಿ.

ಮೀನ

ಪಶ್ಚಿಮ ಬಂಗಾಳಕ್ಕೆ ಹೋದರೆ ಮೀನಿನ ಭೋಜನ ಸಸ್ಯಹಾರವಾಗುತ್ತದೆ. ಮತ್ಸಲೋಕಾಧಿಪತಿ ಮಹಾವಿಷ್ಣು. ಮೀನು ಮನುಷ್ಯನ ಆಹಾರವಾಗಬಹುದೇ? ಅವರವರ ವಿಚಾರಕ್ಕೆ ಬಿಟ್ಟದ್ದು. ಹಾಗೆಯೇ ಬೇಡದ ವಿಚಾರವನ್ನು ತಲೆಗೆ ಹಾಕಿಕೊಳ್ಳದೆ ನಿಮ್ಮ ವಿಚಾರದಲ್ಲಿ ಎಚ್ಚರಿಕೆಯಿಂದ ಲಗ್ನದಲ್ಲಿರುವ ಗುರುವಿಗೆ ಗುರು ನರಸಿಂಹನನ್ನು ಪ್ರಾರ್ಥಿಸಿ. ನರಸಿಂಹ ಅಷ್ಟೋತ್ತರ ಪಠಿಸಿ. ಅನುಕೂಲವಿದ್ದರೆ ಸಾಲಿಗ್ರಾಮದ ನರಸಿಂಹನನ್ನು ದರ್ಶಿಸಿ ಬನ್ನಿ. ನರಸಿಂಹ ಅಷ್ಟಕವನ್ನು, ನಾರಸಿಂಹ ಸ್ತೋತ್ರ ಧ್ಯಾನ ಮಾಡಿರಿ. ಕಷ್ಟಕಾಲ ಕಳೆದು ಮನೋವ್ಯಥೆಯನ್ನು ಕಳೆದು ನಿಮ್ಮನ್ನು ಗುರು ದತ್ತಾತ್ರೇಯನೇ ರಕ್ಷಿಸುತ್ತಾನೆ. ಕುರುವಪುರದ ದತ್ತನನ್ನು ನೆನೆಸಿ - ಪ್ರಾರ್ಥಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net