

ಅ.24 ಶುಭದಿನವಾಗಿದ್ದು, 25ರಿಂದ 29ನೇ ತಾರೀಖಿನ ವರೆಗೂ ಮಹತ್ವದ ಕಾರ್ಯಗಳಿಗೆ ಕೈಹಾಕಬೇಡಿ ಅಥವಾ ಕುಲಪುರೋಹಿತರನ್ನು ಕೇಳಿ ಮುಂದುವರಿಯಿರಿ. ದಶಮ ಸಂಚಾರದಲ್ಲಿ ಗುರು-ಶನಿಯಿದ್ದು, ಮೇಷ ರಾಶಿಯವರು ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ದ್ವಿತೀಯ ರಾಹುವಿಗೆ ನಾಗರಾಜನನ್ನು ಪ್ರಾರ್ಥಿಸಿ ಒಳ್ಳೆಯ ಫಲ ಪಡೆಯಬಹುದು. ಸಂಕಷ್ಟಗಳು ನಿವಾರಣೆ ಆಗುತ್ತವೆ.
ಈ ರಾಶಿಗೆ 9ರಲ್ಲಿ ಗುರು ಶನಿಯಿದ್ದು, ಪಂಚಮದಲ್ಲಿ ಬುಧನು ಸ್ವಕ್ಷೇತ್ರದಲ್ಲಿದ್ದು, ಕೆಲಸ ಕಾರ್ಯಗಳು ಸುಲಭ ರೀತಿಯಲ್ಲಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಾನೆ. ಮನ್ಯುಸೂಕ್ತ ಪಾರಾಯಣವನ್ನು ಮಾಡಿ/ಮಾಡಿಸಿ. ಎಲ್ಲವೂ ಶುಭವಾಗು ತ್ತದೆ. ಕಿತ್ತಾಟವಾಗಲಿ ಅಥವಾ ವಿರೋಧವನ್ನು ತಂದುಕೊಳ್ಳದಿರಿ.
ರಾಶ್ಯಾಧಿಪತಿ ಬುಧ ಚತುರ್ಥದಲ್ಲಿದ್ದು, ರವಿಯೊಡನೆ ನ.2 ರಿಂದ ಸೇರಿ, ಅಂಗಾರಕನೂ ಜೊತೆಯಲ್ಲಿ ಇರುತ್ತಾನೆ. ರಾಶಿಗೆ ಸಪ್ತಮದಲ್ಲಿ ಶುಕ್ರನಿದ್ದು, ಅಷ್ಟಮದಲ್ಲಿ ಗುರು-ಶನಿಯಿದ್ದರೂ ಗುರುವಿನ ಮನೆಯಲ್ಲಿ ಶುಕ್ರನು ಸ್ವಲ್ಪ ಮಟ್ಟಿಗೆ ಆರ್ಥಿಕಸ್ಥಿತಿ ಉತ್ತಮಗೊಳಿಸುತ್ತಾನೆ. ದೇಹಾರೋಗ್ಯ, ಮನಸ್ಸಿನ ಸ್ಥಿತಿಗತಿ ಗಳು ಹತೋಟಿಯಲ್ಲಿದ್ದು, ಧೈರ್ಯ ಕೊಟ್ಟು ಮುನ್ನಡೆಸುತ್ತಾನೆ. ಸಪ್ತಮ ಶುಕ್ರನಿಗೆ ಚಂಡಿಕಾಪರಮೇಶ್ವರಿಯನ್ನು ಆರಾಧಿಸಿ.
ಈ ವಾರದಲ್ಲಿ ಸಾಧಾರಣ ರೀತಿಯ ಶುಭಫಲಗಳಿದ್ದು, 30ನೇ ತಾರೀಖಿನಿಂದ ಒಳ್ಳೆಯ ದಿನಗಳನ್ನು ಕಾಣಬಹುದು. 7ರಲ್ಲಿ ಗುರು, ಶನಿಯಿದ್ದು, ಯಾವ ಏಳು-ಬೀಳುಗಳಿಗೆ ಆಸ್ಪದ ಕೊಡದೆ ದೈವದ ಮೊರೆಹೊದರೆ ಎಲ್ಲವನ್ನೂ ಪಡೆಯಬಹುದು. ಉದ್ವೇಗ ಬೇಡ. ಚಂದ್ರನಿಗೆ ಉಮಾಮಹೇಶ್ವರನನ್ನು ಪೂಜಿಸಿ, ಶನಿಸ್ತೋತ್ರವನ್ನು ಪಠಿಸಿ.
ನಿಮ್ಮ ಎಂದಿನ ಶೈಲಿಯಲ್ಲಿ ಧೈರ್ಯ-ಸಾಹಸ ದಿಂದ ಮುನ್ನುಗ್ಗಿ. ಯಾವುದೇ ಕೆಲಸ ಮಾಡಿಕೊಳ್ಳಲು ನೀವು ನಿಲ್ಲುವ, ಕೂಡುವ ಸಮಯದಲ್ಲಿ ಓಡಿದಷ್ಟು ಲಾಭವಿದೆ. ಈಶ್ವರನ ಅನುಗ್ರಹವಿದೆ. 6ರ ಗುರುವಿಗೆ ದತ್ತಾತ್ರೇಯ ಸ್ತೋತ್ರವನ್ನು ಪಾರಾಯಣ ಮಾಡಿ.
ರಾಶ್ಯಾಧಿಪತಿ ಸ್ವಕ್ಷೇತ್ರದಲ್ಲಿದ್ದು, ಅಂಗಾರಕನು ದ್ವಿತೀಯದಲ್ಲಿದ್ದಾನೆ. ದ್ವಂದ್ವವಾದ ಮನಸ್ಸು, ವಿನಾಕಾರಣ ಅತಂತ್ರದ ಸ್ಥಿತಿ. ಪಂಚಮ ಶನಿಯಿಂದ ಕಾರ್ಯದೊತ್ತಡ ಅಧಿಕವಾಗಿರುತ್ತದೆ. ಸತ್ಚಿತ್ ಸುಖವನ್ನು ಕೊಡುವ ಚಿದಾನಂದನನ್ನು ಭಜಿಸಿ, ಪಂಚಮ ಶನಿಗೆ ಸಂಬಂಧಿಸಿದ ನಿಮ್ಮ ದೋಷಗಳು ಕಳೆಯುತ್ತವೆ.
ಈ ರಾಶಿಗೆ ಸೂರ್ಯನು ಬಂದು, ತುಲಾ ಮಾಸದ ವೈಶಿಷ್ಟ್ಯವನ್ನು ತಾವು ಅರಿತು, ತುಲಾ ಮಾಸದ ಒಂದು ದಿನವಾದರೂ ಕಾವೇರಿಯಲ್ಲಿ ಸ್ನಾನ ಮಾಡಿ, ರಂಗನಾಥನನ್ನು ಪೂಜಿಸಿ. ಕೈಲಾದರೆ ಸಜ್ಜನರಿಗೆ ಭೋಜನವನ್ನು ಮಾಡಿಸಿ ಪುಣ್ಯಸಂಪಾದನೆ ಮಾಡಿಕೊಳ್ಳಿ. ಕಾಣದ ಕೈಗಳು ನಿಮಗೆ ಸಹಾಯ ಮಾಡಿ, ನಿಮ್ಮ ಕಾರ್ಯದಲ್ಲಿ ಅಭಿವೃದ್ಧಿ, ಸುಖವನ್ನು ನೀಡುತ್ತಾರೆ.
ಶುಕ್ರನು ರಾಶಿಯನ್ನು ಪ್ರವೇಶಿಸಿರುವುದರಿಂದ ಹಣಕಾಸಿನ ದೃಷ್ಟಿಯಿಂದ ಒಳ್ಳೆಯ ಫಲವನ್ನು ನೀಡುತ್ತಾನೆ. ಅಲ್ಲಿಯೇ ಕೇತು ಇರುವುದರಿಂದ ವಿಘ್ನಗಳು ಬಾರದಂತೆ ನೋಡಿಕೊಳ್ಳುವುದೇ ನಿಮ್ಮ ಕರ್ತವ್ಯ. ಗಣಪತಿಯನ್ನು ಪೂಜಿಸಿ. ಅನನ್ಯವಾಗಿ ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ. ನಿಮ್ಮ ಜೀವನಶೈಲಿಯನ್ನು ಪ್ರಗತಿಪಥದತ್ತ ಕೊಂಡೊಯ್ಯಬಹುದು.
ದ್ವಾದಶದಲ್ಲಿ ಶುಕ್ರ ಕೇತುವಿರುವುದರಿಂದ ಅಧಿಕವಾದ, ಉಪಯೋಗವಿಲ್ಲದ ಖರ್ಚು, ವೆಚ್ಚಗಳು ಬಂದು ನಿಮ್ಮ ನಿದ್ದೆಗೆಡಿಸುತ್ತದೆ. ಈ ವಾರದಲ್ಲಿ ನೀವು ಬುದ್ಧಿವಂತಿಕೆ ಪ್ರದರ್ಶಿಸುವ ಸಮಯ. ದೈವಬಲವೊಂದಿದ್ದರೆ ಏನನ್ನೂ ಗೆಲ್ಲಬಹುದು. ಅಡೆ-ತಡೆಗಳು ಬಂದಾಗ ಜಾಗರೂಕತೆಯಿಂದ ನಡೆಯಬೇಕು.
ರಾಶಿಯಲ್ಲಿ ಶನಿ-ಗುರು ಒಟ್ಟಿಗೆಯಿದ್ದು, ಸಂತೋಷ, ನಿರಾಶೆ ಎರಡನ್ನೂ ಉಂಟು ಮಾಡುತ್ತಾರೆ. ಆದರೆ, ಹೆದರುವ ಅಗತ್ಯವಿಲ್ಲ. ಜಗತ್ತನ್ನೇ ಪ್ರೀತಿಯಿಂದ ಕಂಡು ಸ್ವಾರ್ಥವಿಲ್ಲದ ವಿಚಾರದಲ್ಲಿ ತೊಡಗಿಸಿಕೊಂಡರೆ ಶ್ರೇಯಸ್ಸನ್ನೂ, ಅಲ್ಪಮಟ್ಟಿನ ಪ್ರಗತಿಯನ್ನೂ ಕಾಣ ಬಹುದು. ಏಪ್ರಿಲ್ 2022ರವರೆಗೆ ಶನಿಸಂಚಾರದಲ್ಲಿ ಎಚ್ಚರವಾಗಿ ಸಾಗಬೇಕು. ಸುಖಬಂದಾಗ ದೇವರ ನೆನಪಿರುವುದಿಲ್ಲ. ದೈವವನ್ನು ನಂಬಿ ಮುಂದೆಸಾಗಿ.
ದ್ವಾದಶದಲ್ಲಿ ಶನಿ, ಗುರು ಶುಭ ಕೊಡುವುದಿಲ್ಲ. ಸುಖವನ್ನೂ ತಂದುಕೊಡುವುದಿಲ್ಲ. ಪಾಪದ ಭೀತಿಗೆ ಹೆದರುವ ಅಗತ್ಯವಿಲ್ಲ. ಪಾಪವನ್ನು ಮಾಡುವುದು ಸಹಜ. ಅದಕ್ಕೆ ಪ್ರಾಯಶ್ಚಿತವೇ ಔಷಧ. ಮಾಡಿದ ಪಾಪಕ್ಕೆ ದೇವರಲ್ಲಿ ಕ್ಷಮೆ ಕೇಳಿದರೆ ನಿಮ್ಮನ್ನು ಕೈಹಿಡಿದು ನಡೆಸುತ್ತಾರೆ. ಗುರುಚರಿತ್ರೆ ಪಾರಾಯಣವನ್ನು ಮುಂದುವರಿಸಿ, ನಿಧಾನವೇ ನಿಮ್ಮನ್ನು ಕಾಪಾಡುತ್ತದೆ.
ಮನುಷ್ಯನು ಶ್ರೀರಾಮಚಂದ್ರನು ಹೇಳಿದಂತೆ ದೈವತ್ವ ತುಂಬಿಕೊಂಡು ಬದುಕುವುದು ಅವನ ಕರ್ತವ್ಯ. ದೇವರು ಜೀವನವನ್ನು ಕೊಟ್ಟಿರುವುದು ಉಪಕಾರವನ್ನು ಮಾಡಲು,ಜಗತ್ತನ್ನು ಪ್ರೀತಿಸಲು. ನಿಮಗೆ ಭಾಗ್ಯೋದಯವಾಗಿದೆ. 11ರ ಶನಿ-ಗುರು ಏನೇನು ಬೇಕೋ ಎಲ್ಲವನ್ನು ಕೊಡುತ್ತಾನೆ. ಕೊಡಿಸುತ್ತಾನೆ. ದುಃಖಕ್ಕೆ ಕಾರಣವಿಲ್ಲ ಸುಖಕ್ಕೆ ಕೊರತೆಯಿಲ್ಲ. ಅನುದಿನವೂ ದತ್ತಾತ್ರೇಯ ಗುರುವನ್ನು ಸ್ಮರಿಸಿ, ಆರಾಧಿಸಿ. ಸದಾಕಾಲವು ನಿಮ್ಮ ಕುಲಗುರುಗಳಿಗೆ ವಂದಿಸಿ ಪೂಜಿಸಿ. ಒಳಿತಾಗುತ್ತದೆ.