ಈ ವಾರ ಪರಮೇಶ್ವರನೇ ನಿಮ್ಮ ಕಷ್ಟವನ್ನು ಕಳೆದು ದಾರಿ ತೋರುತ್ತಾನೆ: ವಾರ ಭವಿಷ್ಯ

Vara-Bhavishya-2
Published on

ಮೇಷ

ಮೇಷ-ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಅಂಗಾರಕನ ಅಧಿಪತ್ಯದಲ್ಲಿ ಇರುತ್ತಾರೆ. ಅನುಗ್ರಹ ಏಕಾದಶದ ಗುರುವು ಏನನ್ನೂ ಕೊಡಬಲ್ಲನು. ಎಲ್ಲವನ್ನೂ ಕಳೆಯಬಲ್ಲನು. ಕೊಡುವುದು-ಕಳೆಯುವುದು ಭಾಗಿಸುವುದೇ ಅಂಗಾರಕನ ಲೆಕ್ಕ. ತಾವು ಈ ಮಂತ್ರವನ್ನು ಪಠಿಸಿದಲ್ಲಿ ಎಲ್ಲ ಸನ್ಮಂಗಳವೂ ಉಂಟಾಗಿ ಶುಭಗ್ರಹ ಗುರುವಿನ ಕೃಪೆಗೆ ಪಾತ್ರರಾಗಿ ಗ್ರಹಗಳೇ ನಿಮ್ಮನ್ನು ಮುನ್ನಡೆಸುತ್ತವೆ. ಧರಣಿಗರ್ಭ ಸಂಭೂತಂ ವಿದ್ಯುಕ್ತಾಂತಿ ಸಮಪ್ರಭಂ| ಕುಮಾರಂ ಶಕ್ತಿಹಸ್ತಂಚಂ ಮಂಗಲಂ ಪ್ರಾಣಮಾಮ್ಯಹಂ||

ವೃಷಭ

ಬುದ್ಧಿಬಲ, ಗ್ರಹಬಲ, ಚಂದ್ರಬಲ, ನಕ್ಷತ್ರಗಳ ಬಲ ಇದ್ದರೂ ದೈವಬಲವಿಲ್ಲದಲ್ಲಿ ವಾಹನದಲ್ಲಿ ಇಂಧನವೇ ಇಲ್ಲದೆ ಕೆಲಸ ನಿಂತುಬಿಡುತ್ತದೆ. ಇಂಧನವೆಂದರೆ ಪಂಚಭೂತ- ತತ್ವಾರ್ಥಗಳು. ಪ್ರಕೃತಿಯಲ್ಲಿ ಧನವಂತರಿಗೆ ವಿಶೇಷ ಸ್ಥಾನವಿದೆ. ಶುಕ್ರನನ್ನು ಪ್ರಾರ್ಥಿಸಿ. ಶುಕ್ರಾಷ್ಟೋತ್ತರ ಪಠಿಸಿ. ನಂಜನಗೂಡಿ ನಲ್ಲಿ ನೆಲೆಸಿರುವ ಪ್ರಾತ್ಯಂಗಿರಾದೇವಿ ದರ್ಶಿಸಿ. ಸುಖಮಯ ಜೀವನ ನಡೆಯುವುದು.

ಮಿಥುನ

ಅನಂತಂ ಪದ್ಮನಾಭಂ ಸುರೇಶಂ ಪ್ರಾಣಾಮಂ ಜಪಿತ್ವ ಸರ್ವಂ ಶ್ರೇಯಸ್ಕರಂ. ಈ ನಾಮವೇ ನಿಮ್ಮ ಅಭ್ಯುದಯಕ್ಕೆ ಸಾಕಾಗುತ್ತದೆ. 9ರ ಗುರುವು ನಿಮ್ಮ ಆರೋಗ್ಯವನ್ನು ಸರಿಪಡಿಸಲು ಸಹಕರಿಸುತ್ತಾನೆ. ಆದರೂ ನಾರಾಯಣನ ಸ್ವರೂಪ ದತ್ತಾತ್ರೇಯನನ್ನು ಪೂಜಿಸಿ. ಐಶ್ವರ್ಯಕ್ಕೂ ಮಿಗಿಲಾದ ಆರೋಗ್ಯವನ್ನು ನೀಡುತ್ತಾನೆ.

ಕಟಕ

ಈ ವಾರದಲ್ಲಿ ಚಂದ್ರನ ಪ್ರೀತಿಗಾಗಿ ಬಿಳಿಯ ವಸ್ತ್ರ, ಅಕ್ಕಿಯನ್ನು ತುಪ್ಪದ ಸಹಿತ ನಿಷ್ಠೆಯಿಂದ ಧೈವಮಾರ್ಗದಲ್ಲಿರುವ ಬ್ರಾಹ್ಮಣರಿಗೆ ದಾನ ಮಾಡಿ. ಇದರಿಂದ ಉಲ್ಲಾಸಿತ ಮನಸ್ಸು ನಿಮ್ಮ ಶರೀರದ ಆಯಾಸ ದೂರಮಾಡಿ ಸುಖವನ್ನು ಶಾಂತಿಯನ್ನು ನೀಡುತ್ತಾನೆ. ಭವಾನಿಶಂಕರನನ್ನು ಪ್ರಾರ್ಥಿಸುವುದು ಮರೆಯಬೇಡಿ.

ಸಿಂಹ

ಸೂರ್ಯನು ಉದಯಿಸುವುದರಿಂದ ಅಸ್ತನಾಗುವವರೆಗೂ ತನ್ನ ಕೆಲಸವನ್ನು ಮಾಡುವಂತೆ, ಮನುಷ್ಯನು ತನ್ನ ಬುದ್ದಿಬಲದಿಂದ ಜೀವನೋಪಾಯವನ್ನು ಮಾಡಿ ಧರ್ಮ ಕರ್ವನುಸರಣೆ ಮಾಡಲೇಬೇಕು. ಚಂದ್ರನು ಆಗಸದಲ್ಲಿ ಹೊಳಪಿನಿಂದ ಬೆಳಕನ್ನು ನೀಡುತ್ತಾನೆ. ಹಾಗೆಯೇ ಮನುಷ್ಯನು ಮತ್ತೊಬ್ಬರ ಬಾಳಿಗೆ ಬೆಳಕನ್ನು ನೀಡುವವನಾಗಿ ಬಾಳಬೇಕು. ಸೂರ್ಯನಾರಾಯಣ ಅಷ್ಟೋತ್ತರ ಪಠಿಸಿ

ಕನ್ಯಾ

ಭಗವದ್ಗೀತೆಯ 16ನೇ ಅಧ್ಯಾಯ ಪಾರಾಯಣ ಮಾಡಿ ನಿಮ್ಮ ಮನೋ ಇಚ್ಛೆ ಪಡೆದುಕೊಳ್ಳಲು ಸಹಾಯವಾಗುತ್ತದೆ. ಈ ಪಂಚಮ ಶನಿಯ ಕಾಲದಲ್ಲಿ ನೀವು ಮಾಡಿರುವ ತಪು್ಪ ಒಪು್ಪ ಕಣ್ಮುಂದೆ ಕಾಣುತ್ತದೆ. ನೀವು ಮಾಡಿದ ತಪು್ಪಗಳಿಗೆ ಕುಲದೇವರ ಮುಂದೆ ಪ್ರಕಟ ಮಾಡಿ ಅನಂತವಾದ, ಅನನ್ಯವಾದ ಭಕ್ತಿಯಿಂದ ಪ್ರಾರ್ಥಿಸಿ. ದೈವಬಲವನ್ನು ತುಂಬಿ ಸರ್ವದರಲ್ಲೂ ಬಲಿಷ್ಟವಾಗಿ ಮಾಡಿದರೆ ಸಹಸ್ರ ಶಿರಸ್ಸುಳ್ಳ ನಾರಾಯಣನೇ ನಿಮ್ಮನ್ನು ಸುಗಮವಾದ ಹಾದಿಯಲ್ಲಿ ಕೊಂಡೊಯ್ಯುತ್ತಾನೆ.

ತುಲಾ

ಚತುರ್ಥದಲ್ಲಿ ಶನಿ, ಪಂಚಮ ಗುರುವು ಮಾಡಿದ ಪಾಪ-ಪುಣ್ಯ ಸಮತೋಲನ ಮಾಡುತ್ತಾರೆ. ಭಯಪಡಬೇಕಾಗಿಲ್ಲ. ಎಲ್ಲ ಕೆಲಸಗಳಲ್ಲಿ ಯೋಚನೆ ಮಾಡಿ ಮುನ್ನಡೆಯಿರಿ. ಪಂಚಮಗುರು ಒಬ್ಬನೇ ಸಾಕು. ಎಲ್ಲಾ ತೊಡಕು ನಿವಾರಿಸಿ ನಿಮಗೆ ಒಳ್ಳೆಯದನ್ನು ಮಾಡಲು ಉದ್ಯುಕ್ತನಾಗಿದ್ದಾನೆ. ಪುರುಷಸೂಕ್ತ ಪಾರಾಯಣ ಶ್ರವಣ ಮಾಡಿ.

ವೃಶ್ಚಿಕ

ಅತ್ಯಂತ ಮಂಗಳಕರವಾದ ಗ್ರಹ ಅಂಗಾರಕ. ಅವನ ವಾರ ಭೌಮ್ಯವಾಸರ. ಅವನ ಮೂಲ ಸ್ವರೂಪ ಸುಬ್ರಹ್ಮಣ್ಯ ದೇವರು. ಮೂಲ ಸ್ವರೂಪ ವೇಲಾಯುಧ. ಜ್ಞಾನಶಕ್ತಿ, ಇಚ್ಛಾಶಕ್ತಿ ಸ್ವರೂಪ ಸುಬ್ರಹ್ಮಣ್ಯನನ್ನು ಪೂಜಿಸಿ. ಗಣಪತಿಯನ್ನು ಗರಿಕೆಯಿಂದ ಪೂಜಿಸಿ. ಧ್ಯಾನಿಸಿ.

ಧನು

ಮನುಷ್ಯನಿಗೆ ಮಾಯಾಸ್ವರೂಪಿ ಶ್ರೀರಾಮನ ಕೈಯಲ್ಲಿ ಧನುರ್ಬಾಣವು ಇದ್ದರೆ ಸಾಲದು. ಧನುರ್ಬಾಣಧಾರಿ ಶ್ರೀರಾಮನಂತೆ ನೀವು ಶ್ರೀರಾಮ ಸ್ವರೂಪ ಪಡೆದುಕೊಂಡು ವ್ಯವಹರಿಸಿದಲ್ಲಿ ಯಾವುದೂ ಕಷ್ಟವಾಗುವುದಿಲ್ಲ. ಶ್ರೀ ರಾಮಹೃದಯ ಪಾರಾಯಣ ಮಾಡಿ.

ಮಕರ

ಈ ರಾಶಿಯವರು ದೈವಬಲದಲ್ಲೇ ಸಾಗಬೇಕು. ಸಂಸಾರ ನೌಕೆ ದಾಟಲು ಶನೈಶ್ಚರನ ಕೃಪಾಕಟಾಕ್ಷ ಅತ್ಯವಶ್ಯಕ. ನಿತ್ಯವೂ ಎದ್ದಕೂಡಲೇ 21 ಬಾರಿ ಈ ಮಂತ್ರ ಜಪಿಸಿ ನಿಮ್ಮ ದುಃಖ ದೂರವಾಗಿ ಸ್ಥಿರವಾದ ಬುದ್ಧಿಯನ್ನು ದೇವರೇ ಕರುಣಿಸುತ್ತಾನೆ. ಚಿಂತಿತ ಕಾರ್ಯವೂ ಫಲಿಸುತ್ತದೆ. ನೀಲಾಂಜನ ಸಮಾಭಾಸಂ ರವಿಪುತಂ ಯಮಾಗ್ರಜಂ| ಛಾಯಾಮಾರ್ತಾಂಡ ಸಂಭೂತಂ ತಂ ತಮಾಮಿ ಶನೈಶ್ಚರಂ ||

ಕುಂಭ

ದ್ವಾದಶ ಶನಿಗೆ, ಲಗ್ನದ ಗುರುವಿಗೆ ಏಕಕಾಲದಲ್ಲಿ ಈ ಮಂತ್ರಗಳನ್ನು ಪಠಿಸಿ.

ಕೋಣಸ್ಥಃ ಪಿಂಗಲೋ ಭ್ರುಃ ಕೃಷ್ಣೋ ರೌದ್ರೋಂತ ಕೋ ಯಮಃ|| ಸೌರಿ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ || ಏತಾನಿ ದಶನಾಮಾಮಿ ಪ್ರಾತರುತ್ಥಾಯ ಯಃ ಪಠೇತ್|

ಶನೇಶ್ವರಕೃತಾ ಪೀಡಾ ನ ಕದಾಚಿದ್ಭವಿಷ್ಯತಿ ||

ಗುಂ ಗುರುಭ್ಯೋ ನಮಃ 21 ಬಾರಿ ಪಾರಾಯಣ ಮಾಡಿ. ಸಾಕ್ಷಾತ್ ಪರಮೇಶ್ವರನೇ ನಿಮ್ಮ ಕಷ್ಟವನ್ನು ಕಳೆದು ದಾರಿತೋರುತ್ತಾನೆ.

ಮೀನ

ಸಂತೋಷವಿದ್ದಲ್ಲಿ ನಿರಾಸೆಯೂ, ಭೀತಿಯೂ ಇಲ್ಲ. ಮನುಷ್ಯನು ಇಲ್ಲದ್ದಕ್ಕೆ ಚಿಂತಿಸಬಾರದು. ಇದ್ದದ್ದನ್ನು ಹಂಚಿಕೊಂಡು ತಿನ್ನುವ ಬುದ್ಧಿ ಇರಲಿ. ಏಕಾದಶ ಶನಿಯು ಎಲ್ಲವನ್ನು ಕೊಟ್ಟಿದ್ದಾನೆ. ದ್ವಾದಶ ಗುರುವಿಗೆ ಈ ಮಂತ್ರವನ್ನು 11 ಬಾರಿ ಜಪಿಸಿ (48 ದಿನಗಳ ಕಾಲ) . ದೇವನಾಂಚ ಋಷೀನಾಂ ಚ ಗುರುಂ ಕಾಂಚನ ಸನ್ನಿಧಿಂ ಬುದ್ಧಿ ಭೂತಂ ತ್ರಿಲೋಕೇಶಂ ತನ್ನಮಾಮಿ ಬೃಹಸ್ಪತಿಮ್| ಶಿವಾತ್ಮಕ ಸ್ವರೂಪನಾದ ಶ್ರೀರಾಮಪ್ರಿಯನಾದ ಓಂ ಶ್ರೀಂ ಹಂ ಹನುಮತೇ ನಮಃ ಎಂಬ ಮಂತ್ರದಿಂದ ಜಪಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net