ವಾರ ಭವಿಷ್ಯ: ಹಣಕಾಸು ವ್ಯವಹಾರಗಳಲ್ಲಿ ಈ ರಾಶಿಯವರು ಒಳ್ಳೆಯ ಲಾಭ ಗಳಿಸಲಿದ್ದಾರೆ

Vara-Bhavishya
Published on

ಮೇಷ: ಪ್ರವಾಸದ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭ ವಾರವಿದು. ವಸ್ತು ವಾಹನ ಖರೀದಿಯಿಂದ ಲಾಭವಿದೆ. ಅವಿವಾಹಿತರಿಗೆ ವಿವಾಹ ಯೋಗವುಂಟು. ಯಾರೊಂದಿಗೂ ಅನವಶ್ಯಕ ವಾದವನ್ನು ಮಾಡದಿರಿ. ಶ್ರೀ ಸುಬ್ರಹ್ಮಣ್ಯ ಹಾಗೂ ಆಂಜನೇಯನ ಆರಾಧನೆ ಮಾಡಿರಿ.

ವೃಷಭ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ. ಕೆಲಸದಲ್ಲಿ ಬಡ್ತಿ ಸಿಗುವ ಸಂಭವ. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಇದ್ದು ಈ ವಾರವು ನಿಮಗೆ ಶುಭದಾಯಕವಾಗಿದೆ. ಶ್ರೀ ಜಗನ್ಮಾತೆಯ ಆರಾಧನೆ ಮಾಡಿರಿ.

ಮಿಥುನ: ಮುಂದೆ ಒದಗಬಹುದಾದ ವಿಪತ್ತುಗಳಿಗೆ ಪರಿಹಾರೋಪಾಯ ಕಂಡುಕೊಳ್ಳುವುದೇ ಬುದ್ಧಿವಂತರ ಲಕ್ಷಣ. ಕೆಲಸಗಳಲ್ಲಿ ಅಭಿವೃದ್ಧಿ, ಸಹವರ್ಗದವರ ಸಹಕಾರ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಮಿಶ್ರ ಫಲ. ಆಹಾರ ಕ್ರಮವನ್ನು ಸರಿಪಡಿಸಿಕೊಳ್ಳಿ. ಅಷ್ಟಮ ಶನಿ ಪ್ರಭಾವ ಕಡಿಮೆಯಾಗಲು ಹನುಮಾನ್ ಚಾಲೀಸಾ ಪಠಿಸಿ.

ಕಟಕ: ಚಿಂತೆಗಳಿಂದ ದೂರ ಸರಿಯಿರಿ. ನಿಮ್ಮ ಪ್ರಯತ್ನಕ್ಕೆ ಈ ವಾರ ಫಲವುಂಟು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಶ್ರೀಮನ್ನಾರಾಯಣನ ಆರಾಧನೆ ಮಾಡಿರಿ.

ಸಿಂಹ: ಮೀನರಾಶಿಯಲ್ಲಿರುವ ರವಿಯಿಂದ ಆರೋಗ್ಯದಲ್ಲಿ ವ್ಯತ್ಯಯ. ಹೊಸ ವ್ಯವಹಾರಗಳು ಹಾಗೂ ಅವಕಾಶಗಳು ತೆರೆದುಕೊಳ್ಳಲಿವೆ. ಆಸ್ತಿಯಿಂದ ಲಾಭವಿದೆ. ಉನ್ನತ ಮೂಲಗಳಿಂದ ಸಹಾಯಹಸ್ತ. ಸ್ತ್ರೀಯರಿಂದ ಲಾಭವುಂಟು. ಶ್ರೀ ಆದಿತ್ಯ ಹೃದಯ ಪಾರಾಯಣ ಮಾಡಿ.

ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಜಾಗರೂಕರಾಗಿ. ಉದ್ಯೋಗಸ್ಥರಿಗೆ ಉನ್ನತ ಸ್ಥಾನ ಸಿಗುವ ಅವಕಾಶ. ಉದರ ಸಂಬಂಧಿ ತೊಂದರೆ. ಪರಿವಾರದವರ ಸಹಕಾರ ಇರುತ್ತದೆ. ಉಪದೇಶದಿಂದ ಮನುಷ್ಯನ ಸ್ವಭಾವ ಬದಲಿಸಲು ಅಸಾಧ್ಯ. ಈ ವಾರ ನೀವು ಆ ಗೋಜಿಗೆ ಹೋಗಬೇಡಿ. ಶ್ರೀ ಆಂಜನೇಯ, ಲಕ್ಷ್ಮೀ ನರಸಿಂಹನ ಆರಾಧಿಸಿ.

ತುಲಾ: ಮೇಲ್ದರ್ಜೆ ಅಧಿಕಾರಿಗಳಿಂದ ನಿಮಗೆ ಸಹಾಯ ದೊರೆಯಲಿದೆ. ಹಣಕಾಸು ವ್ಯವಹಾರಗಳಲ್ಲಿ ಮಿಶ್ರ ಫಲವಿದೆ. ಆರೋಗ್ಯವು ಉತ್ತಮವಾಗಿದ್ದು ನಿಮಗೆ ಶುಭವಾಗುವ ವಾರವಿದು. ಯಾರೊಂದಿಗೂ ಮನಸ್ತಾಪ ಬೇಡ. ಸಂತಾನ ಯೋಗವಿದೆ. ಶ್ರೀದುರ್ಗೆ ಹಾಗೂ ಶ್ರೀ ಸುಬ್ರಹ್ಮಣ್ಯನ ಆರಾಧನೆ ಮಾಡಿರಿ.

ವೃಶ್ಚಿಕ: ಬಲ್ಲ ಮೂಲಗಳಿಂದ ಆರ್ಥಿಕವಾಗಿ ಲಾಭವಾಗಲಿದೆ. ಶ್ರೀ ಸುಬ್ರಹ್ಮಣ್ಯನ ಆರಾಧನೆಯಿಂದ ಭಯ-ಭೀತಿ ದೂರವಾಗುತ್ತದೆ. ವಾಹನಗಳಲ್ಲಿ ಸಂಚರಿಸುವಾಗ ಬಹಳ ಎಚ್ಚರದಿಂದಿರಿ. ಒಳ್ಳೆಯ ಕರ್ಮಗಳಿಂದ ಮಾಡುವ ಕೆಲಸಗಳಲ್ಲಿ ಫಲ ಸಿಗುತ್ತದೆ. ಶ್ರೀ ದತ್ತಾತ್ರೇಯನ ಆರಾಧನೆ ಮಾಡಿರಿ.

ಧನು: ಒತ್ತಡದ ವಾತಾವರಣದಿಂದ ಹೊರಬರುವಿರಿ. ನಿಮ್ಮ ಕೆಲಸಕ್ಕೆ ತಕ್ಕಂತೆ ನಿಮಗೆ ಫಲವುಂಟು. ಆಸ್ತಿಗೆ ಸಂಬಂಧಿಸಿದ ವ್ಯವಹಾರ ಮಾಡುವ ಮೊದಲು ಯೋಚಿಸಿ. ವಿದ್ಯಾರ್ಥಿಗಳು ಶ್ರಮಪಟ್ಟು ಓದಿದಲ್ಲಿ ಯಶಸ್ಸು ಕಾಣಬಹುದು. ಶ್ರೀ ದತ್ತಾತ್ರೇಯ ಹಾಗೂ ಆಂಜನೇಯನ ಆರಾಧನೆ ಮಾಡಿರಿ.

ಮಕರ: ಶತ್ರುಗಳೂ ಮಿತ್ರರಾಗುವ ಸಮಯ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಕಾರಾತ್ಮಕ ಹಾಗೂ ದೈವಿಕ ಚಿಂತನೆಗಳಿಂದ ಮನಸ್ಸಿಗೆ ಹಿತ. ಪ್ರವಾಸದಿಂದ ಲಾಭವಿದೆ. ಮಕ್ಕಳಿಂದ ಸಂತೋಷ ಸಿಗಲಿದೆ. ಹನುಮಾನ್ ಚಾಲೀಸಾ ಪಠಿಸುವುದರಿಂದ ಒಳ್ಳೆಯದಾಗುತ್ತದೆ.

ಕುಂಭ: ಶ್ರಮದಿಂದ ಕೆಲಸಗಳಲ್ಲಿ ಜಯ. ಇದರಿಂದ ನಿಮಗೆ ಕೀರ್ತಿ ಹೆಚ್ಚಾಗಲಿದೆ. ಸಾಡೇಸಾತಿಯ ಪ್ರಭಾವದಿಂದ ಕಷ್ಟಗಳು ಹಾಗೂ ಆರೋಗ್ಯದ ಸಮಸ್ಯೆ ಎದುರಾದರೂ ಧೈರ್ಯದಿಂದ ಎದುರಿಸಿ. ದೈವಿಕ ಚಿಂತನೆಗೆ ಹೆಚ್ಚು ಸಮಯ ನೀಡಿ. ಸ್ವಪ್ರಶಂಸೆ ಒಳ್ಳೆಯದಲ್ಲ. ಶ್ರೀ ಆಂಜನೇಯ ಹಾಗೂ ದತ್ತಾತ್ರೇಯನ ಆರಾಧನೆ ಮಾಡಿ.

ಮೀನ: ನಿಮ್ಮ ಗೌರವ ಹಾಗೂ ಕೀರ್ತಿ ಹೆಚ್ಚಾಗುವ ಸಮಯ. ಶುಭದಿನಗಳು ಬಂದಾಗ ಒಳ್ಳೆಯ ಕೆಲಸಗಳನ್ನು ಮಾಡದೆ ಹೋದರೆ ಅದು ಮತ್ತೆ ದೊರೆಯುವುದಿಲ್ಲ. ಆದ್ದರಿಂದ ಪರೋಪಕಾರವನ್ನು ಮಾಡಿ. ಇದರಿಂದ ಪುಣ್ಯ ಸಂಪಾದನೆ ಹಾಗೂ ನಿಮ್ಮ ಯಶಸ್ಸು ವೃದ್ಧಿಸುತ್ತದೆ. ಶ್ರೀ ದತ್ತಾತ್ರೇಯನ ಆರಾಧನೆ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net