

ವೃಷಭ - ಒಂಬತ್ತರ ಶನಿ ಚೈತನ್ಯ, ಚೇತನವನ್ನು ಕೊಡುತ್ತಾನೆ. ಅತಿಯಾದ ಧನದ ಮೇಲಿನ ಆಸೆಯು ದುಃಖವನ್ನು ತಂದು ಆರೋಗ್ಯವನ್ನು ಚಿಂತೆಗೀಡುಮಾಡುತ್ತದೆ. ಶುಕ್ರನು ಮಿಥುನ ರಾಶಿಯನ್ನು ಸೇರುವ ಸಮಯಕ್ಕೆ ನೀವು ನಿರೀಕ್ಷಿಸಿದ ಧನ ಕೈಸೇರುತ್ತದೆ. ಗುರಿಯನ್ನು ಮುಟ್ಟಿ, ಪರ್ವತ ಶ್ರೇಣಿಯನ್ನು ನೋಡಬೇಕೆಂದುಕೊಂಡರೆ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಸಾಧ್ಯ. ಭೂ ಸಂಪತ್ತು, ಪಿತ್ರಾರ್ಜಿತ ಸಂಪತ್ತು ಬರುವ ಕಾಲ.
ಮಿಥುನ - ಹೇಳಿದ್ದನ್ನು ಕೇಳುವವರಿಗೆ ಹೇಳಬಹುದು. ಆದರೆ ಕೇಳಿ ಅದನ್ನು ದೈವವಾಣಿಯೆಂದು ತಿಳಿಯದೆ ಹೇಳಿದವರನ್ನು, ಉಪಕಾರ ಮಾಡಿದವರನ್ನು ಸ್ವೇಚ್ಛೆಯಿಂದ ಟೀಕಿಸಿದರೆ ಪಾಪಕ್ಕೆ ಗುರಿಯಾಗುತ್ತೀರ. ಉಪಯೋಗವಿಲ್ಲದ ಕೆಲಸವನ್ನು ಮಾಡಿ ಹಣದ ದುರ್ಬಲತೆ ನಿಮ್ಮನ್ನು ಕಾಡುತ್ತದೆ. ಅನಾರೋಗ್ಯದಿಂದ ದೂರವಿರಲು ಸ್ವತಃ ಸಪ್ತಮ ಗುರುವನ್ನು, ರಾಶ್ಯಾಧಿಪತಿ ಬುಧನನ್ನು ಆರಾಧಿಸಿ. ಧನ್ವಂತರಿ ಧ್ಯಾನಶ್ಲೋಕವನ್ನು ಎಡಬಿಡದೆ ಧ್ಯಾನಿಸುತ್ತಿರಿ.
ಕಟಕ - ಇನ್ನೇನು ಪ್ರತ್ಯಕ್ಷ ಸೂರ್ಯನಾರಾಯಣನು ದಕ್ಷಿಣದ ಪಥವನ್ನು 16ನೇ ತಾರೀಖು ಬಂದು ಸೇರಲಿದ್ದಾನೆ. ಚಂದ್ರನ ಮನೆಯಲ್ಲಿ ರವಿಯು ಶೀತಲ ಸಮರಕ್ಕೆ ಒಳಗಾಗಿ ತನ್ನ ಕಾಂತಿ, ತೇಜಸ್ಸನ್ನು ಕೊಡುವುದು ನಿಧಾನವಾಗುತ್ತದೆ. ಆರೋಗ್ಯ ಮುಖ್ಯ. ಉಚ್ಚ ಗುರು 6ನೇ ಮನೆಯಲ್ಲಿ ಇದ್ದರೂ ಪರವಾಗಿಲ್ಲ. ನಿತ್ಯ ರಾಮಾಯಣದ ಒಂದು ಸರ್ಗವನ್ನು ಪಠಿಸಿ. ಶ್ರೀರಾಮಚಂದ್ರನೇ ನಿಮ್ಮನ್ನು ಕಾಪಾಡುತ್ತಾನೆ.
ಸಿಂಹ - ಸೂರ್ಯ ರಾಶಿಯಲ್ಲಿ ಹುಟ್ಟಿದ ನೀವು ಮಂಕುತಿಮ್ಮನ ಸ್ವಭಾವ ಬೆಳೆಸಿಕೊಳ್ಳಬೇಡಿ. ರವಿಯು ಮೋಡದಲ್ಲಿ ಹುದುಗಿದ್ದರೂ ಅವನು ಬೆಳಕನ್ನು ನೀಡಬಲ್ಲ ಮಹಾನುಭಾವ. ಮಾನವನ ಹೀನ ಕೆಲಸದಿಂದ ಜಗತ್ತೇ ವ್ಯಾಧಿಮಯವಾಗಿದೆ. ದೈವವು ನಿಮ್ಮ ಸಂಕಷ್ಟಗಳನ್ನು ದೂರಮಾಡಿ ಶ್ರೇಯಸ್ಸು, ಯಶಸ್ಸನ್ನು ನೀಡುತ್ತದೆ. ಸೂರ್ಯಾಷ್ಟೋತ್ತರ ಪಠಿಸಿ. ನಿಮ್ಮ ಪೂರ್ವಪುಣ್ಯದ ಚೀಲದಲ್ಲಿ ಸುಖ-ಸಂತೋಷ ಭದ್ರವಾಗಿದೆ. ನ್ಯಾಯಾಲಯದಲ್ಲಿ ಬಾಕಿಯಿರುವ ವಿಚಾರಗಳು ಜಯ ತಂದುಕೊಡುತ್ತವೆೆ.
ಕನ್ಯಾ - ಗ್ರಹಗಳ ಸ್ಥಿತಿಗಳು ಚೆನ್ನಾಗಿಲ್ಲದ ಕಾಲದಲ್ಲಿ ಹಠಮಾರಿತನ ಬೇಡ. ಪಂಚಮ ಶನಿಯಲ್ಲಿ ಆರೋಗ್ಯವೇ ಮುಖ್ಯ. ಆರ್ಥಿಕ ಸಂಕಟ, ವೈದ್ಯದರ್ಶನ, ಒಂದರ ಹಿಂದೊಂದು ಸಾಲಾಗಿ ನಿಂತಿದೆ. ದೇವರು ಅಹಂಕಾರವನ್ನು ಕ್ಷಮಿಸಬಹುದು. ದುರಹಂಕಾರವನ್ನು, ಇನ್ನೊಬ್ಬರಿಗೆ ವಿನಾಕಾರಣ ಕೊಟ್ಟ ನೋವನ್ನು ಸಹಿಸುವುದಿಲ್ಲ. ಲಕ್ಷ್ಮೀನಾರಾಯಣ ಹೃದಯ ಪಾರಾಯಣವನ್ನು ಮಾಡಿಸಿ ಶುಭಫಲ ಪಡೆಯಬಹುದು.
ತುಲಾ - ನಿಮಗೆ ನಿಮ್ಮ ಮೇಲೇ ನಂಬಿಕೆಯಿರುವುದಿಲ್ಲ. ದೈವವು ನಿಮಗಾಗಿ ಭೂಮಿಯಿಂದ ಲಾಭ, ನೂತನ ಗೃಹ ಹಾಗೂ ವಾಹನಗಳು ಹಾಗೂ ಬಂಧುಗಳ ಸಹಾಯ, ಆದರವನ್ನು ನೀಡಿದ್ದಾನೆ. ಆದರೆ ಯಾರು ಹಿತವರು ಎಂಬುವುದನ್ನು ವಿಂಗಡಿಸಿಕೊಳ್ಳಿ. ಧೈರ್ಯಂ ಸರ್ವತ್ರ ಸಾಧನಂ. ಕೋರ್ಟು ಕಚೇರಿಗಳಲ್ಲಿ ನಿಮ್ಮದೇ ಜಯ. ಚೆನ್ನಾಗಿರುವ ಸಮಯವನ್ನು ನಿಮ್ಮ ದುರ್ಬುದ್ಧಿಯಿಂದ ಚಿಂತಿಸಿ ಹಾಳು ಮಾಡಿಕೊಳ್ಳಬೇಡಿ.
ವೃಶ್ಚಿಕ- ಸಾಡೇಸಾತಿ ಬಿಡುಗಡೆಯಾಗಿ ಐದು ತಿಂಗಳು ಕಳೆದರೂ ನಿಮ್ಮ ಋಣಭಾರ ತೀರಿಲ್ಲ. ಸುಖ ಕಂಡಿಲ್ಲ. ವ್ಯಥೆ ಪಡಬೇಡಿ. ನಿಧಾನವಾದರೂ ನಿಮ್ಮ ಸರ್ವ ಕಷ್ಟಗಳು ದೂರವಾಗಿ ವಿಶೇಷವಾಗಿ ಆರ್ಥಿಕ ವಿಚಾರದಲ್ಲಿ ಕೆಲವು ಕಾಣದ ಮಾಯಾಶಕ್ತಿಯು ಕೆಲಸ ಮಾಡಿ ಸಂತೋಷ ನೀಡುತ್ತದೆ. ನಿಮ್ಮಿಂದ ಉಪಕಾರವನ್ನು ಪಡೆದು ಉಪದ್ರವ ಕೊಡುವವರಿದ್ದಾರೆ ಎಚ್ಚರ. ದ್ವಿತೀಯ ಗುರುವಿನಿಂದ ಎಲ್ಲ ತರಹದ ಲಾಭಗಳು ಶ್ರೀದತ್ತ ಗುರುವಿನಿಂದ ಬಂದು ಕೈ ಸೇರುತ್ತದೆ.
ಧನಸ್ಸು - ಗುರುವು ರಾಶಿಯಲ್ಲೇ ಇದ್ದು, ಶಿವಧನಸ್ಸನ್ನು ಮುರಿದು ಲೋಕೋಪಕಾರಕ್ಕಾಗಿ ರಾಮನು ರಾವಣನನ್ನು ವಧೆ ಮಾಡಿದ ಮಾಯಾವೇಷಧಾರಿ ಭಗವಂತನಾದ ರಾಮಚಂದ್ರನೇ ಸಾಕ್ಷಿ. ಎಲ್ಲ ಕೆಟ್ಟ ಸಂಕೋಲೆಗಳಿಂದ ಆಚೆ ಬಂದು ಧನಕನಕ ವಸ್ತುವಾಹನಾದಿಗಳನ್ನು ಗಳಿಸಲು ದೈವಾನುಗ್ರಹವಿದೆ. ಕುಲದೇವರ ದರ್ಶನವನ್ನು ಮಾಡಿ. ರಾಹು ಕೇತುಗಳಾಗಲಿ ಯಾವುದೇ ಪಾಪಗ್ರಹಗಳಾಗಲಿ ಯಾವುದೇ ಕರೊನಾ ಸೋಂಕನ್ನು ನೀಡುವುದಿಲ್ಲ. ಧೈರ್ಯವೇ ನಿಮ್ಮ ಶಾಶ್ವತವಾದ ಮೆಟ್ಟಿಲು.
ಮಕರ - ಅಧೈರ್ಯ, ಅಸಂತೋಷ, ವಿನಾಕಾರಣದ ಚಿಂತೆ ನಿಮ್ಮನ್ನು ದುಃಖಕ್ಕೆ ಈಡುಮಾಡುತ್ತದೆ. ಭಗವಂತನಲ್ಲಿ ಅಚಲವಾದ ನಂಬಿಕೆಯಿಂದ ಜಯ ಉಂಟಾಗುತ್ತದೆ. ಸಾಡೆಸಾತಿಗೆ ಹೆದರುವ ಅವಕಾಶವಿಲ್ಲ. ಯಾರಾದರೂ ಮನಸ್ಸಿಗೆ ನೋವು ಮಾಡಿದರೆ ಧೈರ್ಯಗುಂದದೆ ಕಾರ್ಯವನ್ನು ಸಾಧಿಸಿ ತೋರಿಸಿ. ಆರೋಗ್ಯವು ಧನಕ್ಕಿಂತ ದೊಡ್ಡದು. ಕಾರ್ತಿಕೇಯನನ್ನು ಸ್ತೋತ್ರನಾಮಗಳಿಂದ ಭಜಿಸಿ, ಪೂಜಿಸಿ. ಭಗವದ್ಭಕ್ತಿಯೇ ನಿಮ್ಮ ಆಧಾರಸ್ತಂಭ.
ಕುಂಭ - ದುಃಖಕ್ಕೆ ಕಾರಣ ಹನ್ನೆರಡರ ಶನಿ. ಹತ್ತರ ಗುರು ಕೇತುವಿನ ಜೊತೆ ಸಂಪರ್ಕದಲ್ಲಿದ್ದು, ಆರೋಗ್ಯವು ಸ್ಥಿರವಾಗಿರುವುದಿಲ್ಲ. ಮಾನಾಪಮಾನಗಳು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ನಂಬಿದವರು ದ್ರೋಹ ಮಾಡುತ್ತಾರೆ. ಇದು ಸೂರ್ಯನು ದಕ್ಷಿಣಾಯನಕ್ಕೆ ಬರುವ ಕಾಲ. ಯಾರ ಮಾತಿಗೂ ಮರುಳಾಗಬೇಡಿ. ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯನ್ನು ಪೂಜಿಸಿ, ಸುದರ್ಶನ ಚಕ್ರವನ್ನು ಆರಾಧಿಸಿ.
ಮೀನ - ಹನ್ನೊಂದರ ಶನಿ, ಹತ್ತರ ಗುರು ಭಾಗ್ಯವನ್ನು ಸುವರ್ಣಾಕ್ಷರದಲ್ಲಿ ಲಲಾಟದ ಮೇಲೆ ಬರೆದಿರುತ್ತಾನೆ. ಮನುಷ್ಯನು ತಪೋಲೋಕ ತಲುಪಿದಾಗ ಇಂದ್ರಿಯಗಳಿಗೆ ಸಂತೋಷವನ್ನುಂಟು ಮಾಡುವ ಸಾಕ್ಷಾತ್ ದೇವರು ಅಥವಾ ದೇವತಾ ಸ್ವರೂಪಿಗಳು ನಿಮಗೆ ಕಾಣಿಸುತ್ತಾರೆ. ದೇವರ ಸಹಸ್ರನಾಮ ಪಾರಾಯಣವೇ ನಿಮಗೆ ಸಹಸ್ರಕೋಟಿ ಪುಣ್ಯತರುತ್ತದೆ. ಏಕಕಾಲದಲ್ಲಿ ಇಂದುವಾಸರದಲ್ಲಿ ಶಿವ ತ್ರಿಶತಿಯನ್ನು, ಭಾರ್ಗವಾಸರ (ಶುಕ್ರವಾರ) ಲಲಿತಾ ತ್ರಿಶತಿಯನ್ನು ಪಾರಾಯಣ ಮಾಡಿ.