ಈ ರಾಶಿಯವರು ಹೀಗೆ ಮಾಡಿದರೆ ನಿಮ್ಮನ್ನು ತಡೆಯುವವರು ಯಾರೂ ಇಲ್ಲ: ವಾರಭವಿಷ್ಯ

Vaara-Bhavishya
Published on
ಮೇಷ

ಸೂರ್ಯನು ಸಿಂಹರಾಶಿಯಲ್ಲೇ ಇದ್ದು ಅಲ್ಲಿಂದ ಮುಂದೆ ಕನ್ಯಾ ರಾಶಿಗೆ ಬರುತ್ತಾನೆ. ಸೂರ್ಯನು ಬುಧನ ಮನೆಗೆ ಬಂದರೆ ಮಿತ್ರಕ್ಷೇತ್ರದಲ್ಲಿ ಇದ್ದರೂ ಕೂಡ ಅಂಗಾರಕನು ಶುಭಾಂಶವಲ್ಲ. ಮೇಷ ರಾಶಿಯವರು ಜಾಗರೂಕತೆಯಿಂದ ಸಾಗಿ ಅನಿಷ್ಟ ಫಲಗಳು ಬರದೇ ಇರುವುದಕ್ಕೆ ಸುಬ್ರಹ್ಮಣ್ಯನನ್ನು ಪೂಜಿಸಿ. ರಾಹು ಮೇಷ ರಾಶಿಯನ್ನು ಬಿಟ್ಟ ಕೂಡಲೇ ಸಕಲ ಶಾಪ-ತಾಪ-ಪಾಪಗಳು ದೂರವಾಗಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತೀರ. 10,11 ನೇ ತಾರೀಖು ಮಾತ್ರ ಉತ್ತಮ ಶುಭದಿನಗಳು.

ವೃಷಭ

ವೃಷಭ ರಾಶಿಯವರಿಗೆ ಕೆಲವೊಂದು ಆತಂಕ, ಗೊಂದಲ ಉಂಟಾಗಿ ಅನ್ಯತಾ ದಾಕ್ಷಿಣ್ಯಕ್ಕೆ ಒಳಗಾಗಿ ಬಲತ್ಕಾರದಿಂದ ಕೆಲಸ ಕಾರ್ಯಗಳನ್ನು ಮಾಡಲೇಬೇಕಾಗುತ್ತದೆ. ಆದರೂ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ದಡವನ್ನು ದಾಟಬೇಕಾದರೆ ಸೂರ್ಯನ ಕರುಣೆಯ ಮಹಾಕಾಳಿ- ಮಹಾಲಕ್ಷ್ಮೀ - ಮಹಾಸ್ವರಸ್ವತಿ ಸ್ವರೂಪ ಬನಶಂಕರಿ ಶಾಕಾಂಬರಿ ದೇವಿ ದರ್ಶನ ಮಾಡಿರಿ. ಬಾದಾಮಿ ಕ್ಷೇತ್ರಕ್ಕೆ ತೆರಳಿದರೆ ಅತ್ಯಂತ ಶುಭ ಫಲ ಪಡೆಯಬಹುದು.

ಮಿಥುನ

ಮಿಥುನ ರಾಶಿಯವರು 11ರಲ್ಲಿ ಗುರುವಿದ್ದು, 9ರಲ್ಲಿ ಶನಿ ಸ್ವಕ್ಷೇತ್ರದಲ್ಲಿದ್ದರೂ ಶುಭಾಶುಭ ಫಲ ಪಡೆಯದೆ ಆತಂಕಕ್ಕೂ ಒಳಗಾಗಿ ದೇವರು ಕೊಟ್ಟ ಸೌಖ್ಯ ಕಳೆದುಕೊಳ್ಳುವಿರಿ. ಪೂರ್ವಾರ್ಜಿತ ಪಾಪ ಮನುಷ್ಯನನ್ನು ವ್ಯಾಧಿ ರೂಪದಂತೆ ಕಾಡುತ್ತದೆ. ಅದನ್ನು ದಾಟಬೇಕಾದರೆ ದೇವರ ದೇವ ಮಹಾದೇವನ ಕೃಪೆಯಿರಬೇಕು. ಶ್ರಾವಣದ ಕಡೆಯ ಪ್ರದೋಷದಂದು ವಿಶೇಷವಾಗಿ ಶಿವನನ್ನು ಫಲಪಂಚಾಮೃತ ಅಭಿಷೇಕ ಮಾಡಿದರೆ ಅವನೇ ದಾರಿ ತೋರುತ್ತಾನೆ.

ಕಟಕ

ಕಟಕ ರಾಶಿಯಲ್ಲಿ ಶುಕ್ರವಿದ್ದು, ಶುಭಾಂಶದಲ್ಲಿ ಶನಿಯು ಅಥವಾ ಗುರುವು ಇಲ್ಲದಿದ್ದರೂ, ನಿಮ್ಮ ಪೂರ್ವಜನ್ಮದ ಪುಣ್ಯಗಳಿಂದ ನಿಮ್ಮನ್ನು ಗುರುವೇ ಕಾಪಾಡಿ ರಕ್ಷಿಸುತ್ತಾನೆ. ಹರಿತವಾದ ಆಯುಧ, ಅತಿಯಾದ ದೇಹಾಲಸ್ಯವು ಒಂದೇ ಫಲ ನೀಡುತ್ತದೆ. ಆಕಾಶ ಮುಟ್ಟಲು ಸಾಹಸಪಡಬೇಡಿ ಗುರುದತ್ತಾತ್ರೇಯನ ಪಾದ ಮುಟ್ಟಲು ಸಧೃಡವಾದ ಆರೋಗ್ಯವನ್ನು ದೇವರು ಕೊಟ್ಟಿದ್ದನ್ನು ಸ್ವೀಕರಿಸಿ ತೃಪ್ತಿಯಿಂದ ಇರುವುದೇ ನಿಮ್ಮ ನೀವನದ ಗುರಿಯಾಗಲಿ.

ಸಿಂಹ

ರವಿ-ಬುಧರು ಸಿಂಹರಾಶಿಯಲ್ಲಿ ಇರುವುದು ಬಲವೇ ಹೌದು. ಇಬ್ಬರೂ ಮತ್ತು ಗ್ರಹಗಳು ಬುಧನು ಮಿಕ್ಕ ಎಲ್ಲ ಗ್ರಹಗಳನ್ನು ಹೊಂದಿಕೊಂಡು ಹೋಗುವ ಮಹಾವಿಷ್ಣು ಸ್ವರೂಪ. ನೀವು ತಿಳಿದು ಕೆಲಸಗಳನ್ನು ಮಾಡಿದರೆ ಬಂದ ವಿಚಾರವನ್ನು ಶಾಂತ ಚಿತ್ತರಾಗಿ ತೆಗೆದುಕೊಂಡು ಮುಂದೆ ಹೋದಲ್ಲಿ ನಿಮ್ಮ ಒಳ್ಳೆಯ ಮಾತುಗಳು ಬೇರೆಯವರಿಗೆ ತೃಪ್ತಿಯನ್ನು ಕೊಟ್ಟು ಕೆಲಸವನ್ನು ಮಾಡಿಕೊಂಡು ಹೋಗುತ್ತಾರೆ. ಗಣಪತಿಯನ್ನು ಸುಬ್ರಹ್ಮಣ್ಯನನ್ನು ಪೂಜಿಸಿ ಪುಷ್ಪ, ಉತ್ತರ ನಕ್ಷತ್ರದವರು ದುರ್ಗೆಯನ್ನು ಆರಾಧಿಸಿ.

ಕನ್ಯಾ

ಕುಜನು ಏಕಾಂಗಿಯಾಗಿ ಕನ್ಯಾ ಇದ್ದು, ದ್ವಾದಶದಲ್ಲಿ ರವಿ- ಬುಧರಿದ್ದಾರೆ. ವ್ಯಾಪಾರ ವಹಿವಾಟುಗಳು ಹಿಂದೆ ಮುಂದೆ ಸಾಗಿ, ಕೊಟ್ಟಿದ್ದನ್ನು ಕೊಡಲಾಗುವುದಿಲ್ಲ. ಬೇಕೆಂದು ಬೇಡಿದ ಹಣವನ್ನು ಹಿಂದಿರುಗಿಸಲು ಆಗುವುದಿಲ್ಲ. ಇನ್ನೊಬ್ಬರಿಗೆ ನೋವು ನೀಡುವುದು ಪಾಪದ ಕಾರ್ಯ, ಅದನ್ನು ಗಮನದಲ್ಲಿ ಇಟ್ಟುಕೊಂಡು 6ರ ಶನಿ ಏನು ಕೊಟ್ಟಿದ್ದಾನೋ ಅದರಲ್ಲಿ ಮೊದಲು ಪಿತೃಋಣ, ಧನ ಋಣ, ದೈವ ಋಣ ತೀರಿಸಿ ಮುಂದುಸಾಗಿ.

ತುಲಾ

ತುಲಾ ರಾಶಿಯಲ್ಲೇ ಕೇತುವಿದ್ದರೂ, ಸಪ್ತಮದಲ್ಲಿ ಗುರುವಿರುವುದರಿಂದ ಕಾರ್ಯಾಚರಣೆಯು ನಿಮ್ಮಂತೆ ನಡೆದು ಹರ್ಷವನ್ನು ಉಂಟುಮಾಡುತ್ತದೆ. ಆಲಸ್ಯಂ ಅಮೃತಂ ವಿಷಂ ಎಂಬಂತೆ ಮಾಡುವ ಕೆಲಸದಲ್ಲಿ ಆಲಸ್ಯ ತೋರದೆ ಎಚ್ಚರದಿಂದ ಇದ್ದರೆ ಸರಿಪಡಿಸಿಕೊಳ್ಳಬಹುದು. ಮಾತು ನಾಲಿಗೆ ಮೀರಿದರೆ ನಿಮ್ಮನ್ನು ಶತ್ರು ಸ್ಥಾನದಲ್ಲಿ ನಿಲ್ಲಿಸಿ ಅಪಾರ ಸಂಕಟ ಕೊಡುತ್ತಾರೆ. ಲಲಿತಾಪರಮೇಶ್ವರಿಯನ್ನು ಪ್ರಾರ್ಥಿಸಿ ದಾರಿಯನ್ನು ಕಂಡುಕೊಳ್ಳಿ. 12, 13, 14ರಂದು ಯಾವ ಶುಭ ಕೆಲಸಗಳನ್ನೂ ಕೈಗೊಳ್ಳಬೇಡಿ. ಏನೇ ಕೆಲಸಗಳು ಇದ್ದರೂ, 11ನೇ ತಾರೀಖು ಉತ್ತಮ ಶುಭಫಲಗಳತ್ತ ಕೊಂಡೊಯ್ಯತ್ತವೆ.

ವೃಶ್ಚಿಕ

ಕೇತು ದ್ವಾದಶದಲ್ಲಿ ಇರುವುದರಿಂದ ಕುಜನು ಏಕಾದಶದಲ್ಲಿದ್ದು, ಕೆಲಸ ಕುಂಠಿತವಾಗುತ್ತದೆ. ನಿಮಗೆ 13ನೇ ಅಕ್ಟೋಬರ್ ನಂತರ ರಾಹು ಮೇಷ ರಾಶಿಯಿಂದ ನಿರ್ಗಮವಾದ ಮೇಲೆ ಬರಬೇಕಾದ ಧನವು ಬಂದು ಸೇರುತ್ತದೆ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ. ಕೇತುವಿಗೆ ಗಣಪತಿಗೆ ದೂರ್ವಯಿಂದ ಅರ್ಚಿಸಿ. ದೇವರು ಯಾರನ್ನು ಏನೂ ಕೇಳುವುದಿಲ್ಲ. ಫಲ- ಪುಷ್ಪಗಳನ್ನು ಕೊಟ್ಟು ನೀವು ಬೇಕಾದನ್ನು ಪಡೆಯಬಹುದು.

ಧನಸ್ಸು

ಧನುರ್ ರಾಶಿಯವರಿಗೆ ವಕ್ರಗುರು, ವಕ್ರಶನಿಯಿಂದ ಮನಸ್ಸು ಅಸಮಾಧಾನದಿಂದ ಕೂಡಿ, ನಿಮ್ಮ ಮುಖವು ಬಾಡಿದಂತಾಗುತ್ತದೆ. ಶನಿ ಸಂಚಾರ ಮುಗಿದಿದ್ದರಿಂದ, ಗುರು - ಶನಿಯ ವಕ್ರತ್ವವು ಕಳೆದ ಮೇಲೆ ಕಾರ್ಯಗತವಾದರೆ ಇಷ್ಟಾರ್ಥ ಈಡೇರುತ್ತದೆ. ಗುರುಚರಿತ್ರೆಯ ಪಾರಾಯಣವು ಇರಲಿ. ಜೊತೆ ಜೊತೆಯಾಗಿ ಆದಿತ್ಯ ಹೃದಯ ಪಾರಾಯಣ ಮಾಡಿರಿ.

ಮಕರ

ರಾಶಿಯಲ್ಲಿ ವಕ್ರ ಶನಿಯಿದ್ದು, ಕೆಲಸವು ಆಗಿವೆ ಎಂದು ತೃಪ್ತಿ ಪಡುವುದಿಲ್ಲ. ಹಾಗೆಯೇ ಆಗಿಲ್ಲವೆಂದೂ ಅಲ್ಲ. ಸಂದಿಗ್ಧತೆ ಇರುತ್ತದೆ. ಎಚ್ಚರಿಕೆಯ ನಡೆ ನಿಮ್ಮನ್ನು ರಕ್ಷಿಸುತ್ತದೆ. ಸುಂದರಕಾಂಡ ಪಾರಾಯಣ ಮಾಡಿದರೆ ಶುಭಪಲವು ದೊರಕಿ ನಿಮ್ಮನ್ನು ಸಮಸ್ಯೆಗಳ ಸಂಕೋಲೆಗಳಿಂದ ಬಿಡಿಸಿ ನಿಮ್ಮನ್ನು ರಕ್ಷಿಸುವವನೇ ಸಾಕ್ಷಾತ್ ಮಾನಸ ಸರೋವರದಲ್ಲಿ ವಾಸಿಸುವ ಉಮಾಮಹೇಶ್ವರ ವ್ರತಕಥೆಯನ್ನು ಓದಿ ಸುಖವನ್ನು ಕಂಡುಕೊಳ್ಳಿ.

ಕುಂಭ

ತಾತ್ಕಾಲಿಕವಾಗಿ ಕುಂಭ ರಾಶಿಗೆ 12ರಲ್ಲಿ ಶನಿಯಿದ್ದು, ನಿಮ್ಮ ಸ್ನೇಹದಲ್ಲಿ ಒಡಕು, ಬೇಡದ ಚರ್ಚೆಗಳು, ಮಾತಿನಲ್ಲಿ ಒರಟುತನವು ನಿಮ್ಮನ್ನು ಶಿಕ್ಷೆಗೆ ಗುರಿಮಾಡುತ್ತದೆ. ಯಾರು ಏನೇ ಹೇಳಿದರೂ ಸಮಾಧಾನದಿಂದ ಮಾಡಿರಿ. ಕೈಲಾಗದು ಎಂದಿದ್ದರೆ ಸಮಯಕೊಡಿ ಎಂದು ಕೇಳಬೇಕು. ನೀವು ಎಡವಿಬಿದ್ದರೆ ನಿಮ್ಮನ್ನು ಕೈ ಹಿಡಿಯಲು ಯಾರು ಇಲ್ಲ. ಎಡವದೆ ನೀವು ನಡೆಯಬೇಕಾದರೆ ನವಗ್ರಹಗಳ ರಾಜನಾದ ಶನಿಗ್ರಹವು ಬೇಕೇಬೇಕು. ಕುಲದೇವರ ಜೊತೆಯಲ್ಲಿ ಸಾಂಬಸದಾಶಿವನನ್ನು ಪೂಜಿಸಿದರೆ ಕೆಲಸಗಳು ಪರಿಪೂರ್ಣವಾಗುತ್ತದೆ.

ಮೀನ

ಮೀನ ರಾಶಿಯವರು 9,13,14,15 ನೇ ಸೆಪೆ್ಟಂಬರ್ ಈ ದಿನಗಳನ್ನು ರ್ವ್ಯಜ ಮಾಡಿ ನಿಮ್ಮ ಶುಭಕಾರ್ಯಗಳನ್ನು ಕೆಲವ ದಿನಗಳ ಕಾಲ ಮುಂದೂಡಿ. 16ನೇ ಸೆಪ್ಟೆಂಬರ್ ಮಾಸದಿಂದ ಶುಭಫಲಗಳನ್ನು ಕಾಣುತ್ತೀರ. ಯಾರನ್ನೂ ನಿಂದಿಸದೆ ಯಾರನ್ನೂ ಅವಮಾನಿಸದೆ, ಮಧ್ಯಾಹ್ನ ಬಂದ ಅತಿಥಿಗಳಿಗೆ ಅನ್ನ ನೀಡುವುದೇ ಪತಿವ್ರತೆಯ ಕೆಲಸ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿದರೆ ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಶುಭವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net