ವಾರಭವಿಷ್ಯ: ಈ ರಾಶಿಯವರಿಗೆ ಶನಿಯ ಸಂಚಾರವು ಆರಂಭವಾಗಿದೆ ಜೋಪಾನ

Vara-Bhavishya-2
Published on

ಮೇಷ: ಮೇಷ ರಾಶಿಗೆ ಶನಿ 11ನೇ ಮನೆಯಲ್ಲಿದ್ದು, ಅಲ್ಪಕಾಲ ಇದ್ದು, ಮತ್ತೆ ವಕ್ರಿಯಾಗಿ ಮಕರಕ್ಕೆ ಹಿಂದೆ ಬರುತ್ತಾನೆ. ಈ ಸಮಯದಲ್ಲಿ ಶ್ರಮವಹಿಸಿದರೆ ಅಸಾಧ್ಯವಾದ ಕೆಲಸಗಳನ್ನೂ ಸಾಧಿಸಬಹುದು. ಹಣಕ್ಕೂ ಕೊರತೆ ಇರುವುದಿಲ್ಲ. ಗುರು ದ್ವಾದಶದಲ್ಲಿದ್ದು, ವ್ಯಕ್ತಿತ್ವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಿ. ಗುರುಗಳನ್ನು ಪೂಜಿಸಿ.

ವೃಷಭ: ದಶಮದಲ್ಲಿ ಶನಿಯಿದ್ದು, ಏಕಾದಶದಲ್ಲಿ ಸ್ವಂತ ಮನೆಯಲ್ಲಿ ಗುರುವಿದ್ದಾನೆ. ಇದೇ ಶ್ರೇಯಸ್ಕರವಾದ ಸಮಯ. ಈ ಸಮಯವನ್ನು ನಿಮ್ಮ ಒಳ್ಳೆಯ ಕೆಲಸಗಳಿಗಾಗಿ ಕಾಯ್ದಿರಿಸಿ. ಅನ್ಯರನ್ನು ಟೀಕಿಸುವುದು ಅಥವಾ ಇನ್ನೊಬ್ಬರ ಅವಗುಣಗಳನ್ನು ಚರ್ಚಿಸದೆ ಮುಂದೆ ಸಾಗಿದಲ್ಲಿ ಒಳ್ಳೆಯ ದಿನ ಬರುತ್ತದೆ.

ಮಿಥುನ: ಜುಲೈ 12ರವರೆಗೂ ಶನಿಯು 9ರಲ್ಲಿದ್ದು, ಮತ್ತೆ ಅಷ್ಟಮಕ್ಕೆ ಬರುತ್ತಾನೆ. ಜನ್ಮಾಂತರದ ಪಾಪಗಳಿಗೆ ಪರಿಹಾರವಿರುವುದಿಲ್ಲ. ಆದರೆ, ದ್ವಾದಶದಲ್ಲಿ ಗುರುವು 9ರ ಶನಿಯು ಇರುವ ಕಾಲದಲ್ಲಿ ಒಳ್ಳೆಯ ಕೆಲಸಗಳನ್ನು ಸಾಧಿಸಿ, ಸುಖವಾದ ಜೀವನ ನಡೆಸಿ. ಶನಿ ಅಷ್ಟೋತ್ತರ ಪಾರಾಯಣ ಮಾಡಿ.

ಕಟಕ: ಮನುಷ್ಯನ ಸಂಕಲ್ಪವು ಸತ್ಯವಾದಲ್ಲಿ ಜಯಕ್ಕೆ ಬೇರೆ ಕಾರಣವೇ ಬೇಕಾಗಿಲ್ಲ. 9ರ ಗುರು, ಶನಿ ಅಷ್ಟಮದಲ್ಲಿ ಇದ್ದು, ಜುಲೈ 12ರಿಂದ ಸಪ್ತಮದಲ್ಲಿ ಸಂಚರಿಸುತ್ತಾನೆ. ನೀವು ನಿಮ್ಮ ಕೈಲಾದಷ್ಟೇ ಕೆಲಸವನ್ನು ಮಾಡುವುದು ಒಳ್ಳೆಯದು. ಪ್ರತಿನಿತ್ಯ ಶಾರದಾ ಪರಮೇಶ್ವರಿಯನ್ನು ಪೂಜಿಸಿ, ಧ್ಯಾನಿಸಿ.

ಸಿಂಹ: ದುಃಖವನ್ನು ದೂರವಿಡಲು ದುರ್ಗೆ ಸಿಂಹವಾಹಿನಿಯಾಗಿದ್ದಾಳೆ. ಇದನ್ನು ನೋಡಿ ಜನ ಅಂಜುತ್ತಾರೆ. ನೀವು ಈ ಸಮಯದಲ್ಲಿ ಶುದ್ಧವಾದ ಕೆಲಸಗಳನ್ನು ಶಾಂತವಾದ ಮನಸ್ಸಿನಿಂದ ಮಾಡಿ ಯಶಸ್ವಿಯಾಗಿರಿ. ಗೆಲ್ಲುವುದೇ ನಿಮ್ಮ ಗುರಿಯಾಗಿರಲಿ. ಸೂರ್ಯನನ್ನು ಪೂಜಿಸಿ, ಅನಂತವಾದ ಲಾಭವನ್ನು ಪಡೆಯಿರಿ.

ಕನ್ಯಾ: ಸಪ್ತಮದಲ್ಲಿ ಗುರು. ಗುರು ಎಂದರೆ ಧರ್ಮಶಾಸ್ತ್ರದಲ್ಲಿ ಕಾಮಧೇನುವಿನಂತೆ. ಗುರುವಿಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ. ಷಷ್ಠದಲ್ಲಿ ತಾತ್ಕಾಲಿಕವಾಗಿ ಶನಿಯ ಸಂಚಾರವಿದ್ದು, ಕೆಲಸಗಳು ನೀವು ಎಣಿಸಿದಂತೆ ಮುಂದೆ ಸಾಗುತ್ತವೆ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಸಂಕಷ್ಟಗಳು ಕರಗುತ್ತವೆ.

ತುಲಾ: ಪಂಚಮ ಶನಿ, ಷಷ್ಠ ಗುರುವು ಏನಾದರೂ ಕೊಡಲಿ, ಸ್ವೀಕರಿಸಿ. ಏನೇ ಕಷ್ಟ ಕೊಟ್ಟರೂ, ತಲೆಬಾಗಿ ಕಾಯೆಂದು ಬೇಡಿ. ನಿಮ್ಮನ್ನು ಉದ್ದರಿಸುತ್ತಾನೆ. ಶ್ರಮವಿರಬೇಕು. ಲಲಾಟದಲ್ಲಿ ಏನು ಸಿಗುತ್ತದೆಯೆಂದು ಬರೆದಿದೆಯೋ, ಅಷ್ಟೇ ಸಿಗುವುದು. ವೆಚ್ಚಕ್ಕೆ ಕಡಿವಾಣ ಹಾಕಿ. ಆರೋಗ್ಯ ಕಾಪಾಡಿಕೊಳ್ಳಿ. ಸಾಲಿಗ್ರಾಮ ಗುರುನರಸಿಂಹನನ್ನು ಪೂಜಿಸಿ.

ವೃಶ್ಚಿಕ: ಶನಿ-ಕುಜರು ಒಂದೇ ಮನೆಯಲ್ಲಿದ್ದು, ರ್ಷಣೆ ಸೂಚಿಸುತ್ತಾರೆ. ಪಂಚಮದಲ್ಲಿ ಗುರುವಿರುವುದು ನಿಮ್ಮ ಕಾರ್ಯಸಾಧನೆಯಲ್ಲಿ ಅನುಕೂಲ. ಉಪಕಾರ ಮರೆಯುವುದು ಹೀನಾಯ ಕೆಲಸ. ಸಮಯ ಚೆನ್ನಾಗಿ ಇರುವುದರಿಂದ ಮುನ್ನುಗ್ಗಿ. ಬರುವ ಹಣದಿಂದ ಬಾಕಿ ಸಾಲ ತೀರಿಸಬೇಕು. ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಸಲ್ಲಿಸಿ.

ಧನು: ಮನುಷ್ಯನ ಅನುಭವಗಳು ರಾಮನ ಬತ್ತಳಿಕೆಯಲ್ಲಿರುವ ಬಾಣದಂತೆ. ನಿಂದಿಸುವವರನ್ನು, ತೆಗಳುವವರನ್ನು ದೂರವಿಟ್ಟು ಮುಂದೆ ಸಾಗಿ. ನಿನ್ನೆಯನ್ನು ಮರೆತು ನಾಳೆಯನ್ನು ರೂಪಿಸಿಕೊಳ್ಳಿ. ಶ್ರೀರಾಮನ ಅನುಗ್ರಹವನ್ನು ದಿನನಿತ್ಯ ಸಂಪಾದನೆ ಮಾಡಿರಿ. ಒಳ್ಳೆಯ ದಿನಗಳು ಬರಲಿವೆ.

ಮಕರ: ಮಕರ-ಕುಂಭ ರಾಶಿಯವರಿಗೆ ಶನಿಯು ದ್ವಾದಶ ಹಾಗೂ ಜನ್ಮಸ್ಥಾನದ ಒತ್ತಡ, ತಾಪವನ್ನು ನೀಡದೆ ದೂರವಿಟ್ಟಿದ್ದಾನೆ. ಮಕರ ರಾಶಿಯವರಿಗೆ, ಗುರು ತೃತೀಯಕ್ಕೆ ಬಂದಿದ್ದು, ನಿತ್ಯವೂ ಅವನ ಪ್ರಾರ್ಥನೆ ಮಾಡಿರಿ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿರಿ. ಪಿಪ್ಪಲಾ ಶನಿಸ್ತೋತ್ರ ಪಾರಾಯಣ ಮಾಡಿರಿ.

ಕುಂಭ: ಜನ್ಮದಲ್ಲಿ ಶನಿಯಿದ್ದು, ಗುರುವು ಸ್ವಕ್ಷೇತ್ರದಲ್ಲಿದ್ದಾನೆ. ನಿಮ್ಮನ್ನು ಕಾಪಾಡುತ್ತಾನೆ. ಬರುವ ಕಷ್ಟಗಳನ್ನು ಪರಿಹರಿಸುತ್ತಾನೆ. ದಣಾಮೂರ್ತಿಯನ್ನು ಪೂಜಿಸಿ. ಕಡಲೆಬೇಳೆ-ಬೆಲ್ಲವನ್ನು ಇಟ್ಟು ಗಣಪತಿಗೆ ಪ್ರಾರ್ಥನೆ ಮಾಡಿ. ದೇವರು ನಿಮ್ಮ ದುಃಖ-ದುಮ್ಮಾನವನ್ನು ಕಡಿಮೆ ಮಾಡುತ್ತಾನೆ.

ಮೀನ: ಲಗ್ನದಲ್ಲಿ ಗುರು, ದ್ವಾದಶದಲ್ಲಿ ಶನಿ. ಶನಿಯ ಸಂಚಾರವು ಆರಂಭವಾಗಿದೆ. ಜೋಪಾನ. ಜುಲೈ 12ರಿಂದ ಶನಿ ಏಕಾದಶಕ್ಕೆ ಬರಲಿದ್ದಾನೆ. ಜನವರಿ 2023ರವರೆಗೆ ನೀವು ಹಿಡಿದ ಕೆಲಸಗಳೆಲ್ಲ ಆಗುತ್ತವೆ. ಗುರು ಪ್ರಾರ್ಥನೆ ಅವಶ್ಯ. ಆರೋಗ್ಯ ಕಾಪಾಡಿಕೊಳ್ಳಿ. ಮನೆ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net