

10ನೇ ತಾರೀಖು ಕುಜನು ವೃಷಭಕ್ಕೆ ಬರುತ್ತಾನೆ. ಇಲ್ಲಿಯತನಕ ನಡೆದ ವಿಚಾರ, ವಿಷಯಗಳನ್ನು ಮರೆತು ಮುಂದೆ ಸಾಗಿ ಗೌಪ್ಯತೆ ಕಾಪಾಡಿಕೊಳ್ಳಿ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. 12ರ ಗುರುವಿನ ಬಲ ಇಲ್ಲದೆ ಇರುವುದು, ಗುರುಬಲಕ್ಕಾಗಿ ಕುಂಭಕೋಣಂ ಹತ್ತಿರದ ಸ್ವಾಮಿ ಮಲೈಗೆ ತೆರಳಿ ಸುಬ್ರಹ್ಮಣ್ಯನ ದರ್ಶನವನ್ನು ಮಾಡಿ ಬನ್ನಿ. ಹಾಗೆಯೇ 12ರ ಗುರುವಿಗೆ ನಂಜನಗೂಡು ಶ್ರೀಕಂಠೇಶ್ವರ ದೇವಾಲಕ್ಕೆ ಸೋಮವಾರ ಅಥವಾ ಗುರುವಾರ ಅರ್ಚನೆ ಮಾಡಿಸಿ.
ವೃಷಭದಲ್ಲಿ ಕುಜನು ಬಂದು ಏಕಾದಶದಲ್ಲಿ ಗುರುವಿರುವುದರಿಂದ ತುಂಬ ದೂರಾಲೋಚನೆ - ದುರಾಲೋಚನೆ ಎರಡೂ ಬೇಡ. ನಿಮ್ಮ ಕಾರ್ಯಗಳಿಗೆ ಗುರುವು ರಕ್ಷಣೆ ಕೊಡುತ್ತಾನೆ. ಕುಜನು ರಾಶಿಯಲ್ಲಿ ಇರುವುದರಿಂದ ಕೋಪ-ತಾಪಗಳನ್ನು ಬಿಟ್ಟು ಬಾಧ್ಯತೆಗಳಿಗೆ ಗಮನ ನೀಡಿ. ಕೆಲಸಗಳನ್ನು ಜಾಗ್ರತೆಯಿಂದ ಮಾಡಿರಿ. ಶುಕ್ರನ ಮನೆಯಲ್ಲಿ ಕುಜನಿದ್ದು, ದುರ್ಗೆಯನ್ನು, ಷಣ್ಮುಖನನ್ನು ಪೂಜಿಸಿ.
ಮಿಥುನ ರಾಶಿಯವರಿಗೆ ಹತ್ತರ ಗುರು, ಎಂಟರ ಶನಿ ವಿಶೇಷವಾದ ಲಾಭ ನೀಡುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ದ್ವಿತೀಯದಲ್ಲಿ ರವಿ, ಶುಕ್ರರು ಇರುವುದು, ಬುಧನು ಸಿಂಹ ರಾಶಿಯಲ್ಲಿ ಇರುವುದರಿಂದ ನಿಮಗೆ ಬೇಕಾದಷ್ಟು ಧನ ಪ್ರಾಪ್ತಿಯಾಗುತ್ತದೆ. ಅನ್ಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಹರಣವಾದ ಸಮಯ ಮತ್ತು ಧನ ಮತ್ತೆ ಬರುವುದಿಲ್ಲ.
ರಾಶಿಯಲ್ಲಿ ಶುಕ್ರನಿದ್ದು, 6ನೇ ಆಗಸ್ಟ್ನಿಂದ ರವಿಯು ಜತೆಯಿರುತ್ತಾನೆ. ಬುಧನು ಸಿಂಹ ರಾಶಿಯಲ್ಲಿ ಕುಳಿತಿದ್ದಾನೆ. ವ್ಯಾಪಾರ- ವಹಿವಾಟುಗಳನ್ನು ನಡೆಸಿ. 9ರ ಗುರುವು ಸ್ವಕ್ಷೇತ್ರದಲ್ಲಿ ಇದ್ದು, ಯಾವ ಕೆಡಕು ಸಂಭವಿಸದಂತೆ ಗುರುವು ಶ್ರೀರಕ್ಷೆ ನೀಡುತ್ತಾನೆ. ಇದರಿಂದ ಕಾರ್ಯಗಳಲ್ಲಿ ಪ್ರಗತಿಯಾಗುತ್ತದೆ. ದಕ್ಷಿಣಾಮೂರ್ತಿ ಪ್ರಾರ್ಥಿಸಿ ಕಡಲೆಕಾಳು ನೈವೇದ್ಯ ಮಾಡಿದರೆ ಇನ್ನೂ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು.
ಸಿಂಹ ರಾಶಿಯಲ್ಲಿ ಬುಧನು ಇದ್ದಾನೆ. ಸೂರ್ಯನು, ಶುಕ್ರನು ದ್ವಾದಶದಲ್ಲಿ ಇರುವುದರಿಂದ ಶುಕ್ರನು ಬದಲಾಗುವವರೆಗೆ ಹಣಕಾಸಿನ ವಿಚಾರದಲ್ಲಿ ತಪು್ಪ ಮಾಡದಂತೆ ನೋಡಿಕೊಂಡು ಸಾಗುವುದು ಶ್ರೇಯಸ್ಕರ. ಷಷ್ಠ ಶನಿಯಿಂದ ಧನ ಲಾಭ, ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿ ಸಾಧನ ಮಾಡಬಹುದು. ಸೂರ್ಯನನ್ನು ಮರೆತರೆ ಮನುಷ್ಯನಿಗೆ ಕತ್ತಲೆ ಕವಿದಂತೆ. ದತ್ತಾತ್ರೇಯನನ್ನು ಪ್ರಾರ್ಥಿಸಿ ಮುನ್ನಡೆಯಿರಿ.
ಕನ್ಯಾ ರಾಶಿಯವರಿಗೆ ಹತ್ತಕ್ಕೆ ಬುಧನು ಬಂದು ಏಕಾದಶದಲ್ಲಿ ಶುಕ್ರನಿರುವುದು ಕಾಲಘಟ್ಟದಲ್ಲಿ ಆಗದ ಕೆಲಸಗಳು ಕೂಡ ನೆರವೇರುತ್ತವೆ. ಬಂಧು-ಬಾಂಧವರನ್ನು, ಕುಲಗುರುಗಳನ್ನು ಬಿಡಬೇಡಿ. ಅವರ ಮಾರ್ಗದರ್ಶನ ಸಲಹೆಯಿಂದ ಕೆಲಸ-ಕಾರ್ಯಗಳಲ್ಲಿ ಜಯವು ದೊರಕುತ್ತದೆ. ರಾಮನ ಅಷ್ಟೋತ್ತರ ಪಾರಾಯಣ ಮಾಡಿ. 21 ಕಮಲ ಪುಷ್ಪದಿಂದ ಲಕ್ಷ್ಮೀಯನ್ನು ಅರ್ಚಿಸಿ.
ಲಗ್ನದಲ್ಲೇ ಕೇತುವಿರುವುದರಿಂದ ಮನಸ್ಸು ನಾನಾ ತರಹದ ವಿಷಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಇಕ್ಕಟ್ಟಿನಲ್ಲಿ ಸಿಲುಕಿಸುತ್ತಾನೆ. ಸತ್ಯ ತಿಳಿದು ನಿಧಾನವಾಗಿ ಸಾಗಿ ಕೆಲಸಗಳನ್ನು ಸಾಧಿಸಿಕೊಳ್ಳಬೇಕು. ಶಬ್ದ ಉಚ್ಛಾರಣೆಯಲ್ಲಿ ಎಚ್ಚರಿಕೆಯಿರಬೇಕು. ಬನ್ನಿ ಎಂದು ಹೇಳಿದರೆ ಕೆಲಸವಾಗುತ್ತದೆ. ಬಾ ಎಂದು ಕರೆದರೆ ಕೆಲಸ ಭಂಗವಾಗುತ್ತದೆ. ಎಚ್ಚರವಿರಲಿ. ಕಾಳಿಕಾಷ್ಟೋತ್ತರ ಜಪ ಮಾಡಿ. ‘ಗ’ಕಾರ ಗಣಪತಿ ಪಾರಾಯಣ ಮಾಡಿ.
ಸುಜ್ಞಾನವನ್ನು ಕೊಡುವ, ದುರ್ಬುದ್ಧಿಯನ್ನು ನಾಶ ಮಾಡುವ ಲಕ್ಷ್ಮೀನರಸಿಂಹ ಪ್ರಾರ್ಥನೆ ಮಾಡಿ. ನಿಮ್ಮನ್ನು ಕಷ್ಟದಿಂದ ಪಾರು ಮಾಡಿ, ಸುಖ ಸಂಪತ್ತಿನಲ್ಲಿ ಕೂರಿಸುತ್ತಾನೆ. ಹೆಣ್ಣುಮಕ್ಕಳಿಗೆ ಅರಿಶಿನ-ಕುಂಕುಮ ಬಳೆಯನ್ನು, ಕುಪ್ಪಸವನ್ನು ಕೈಲಾದಷ್ಟು ದಕ್ಷಿಣೆಯೊಂದಿಗೆ ನೀಡಿ ಆಶೀರ್ವಾದ ಪಡೆದುಕೊಳ್ಳಿ.
ಕಷ್ಟ ನಷ್ಟಗಳು ಎದುರಾದರೂ ವಿವೇಕ-ವಿವೇಚನೆ ಎರಡೂ ಇರಬೇಕು. ಅದಕ್ಕಾಗಿ ಕುಲಗುರುಗಳು, ಮಾತಾ-ಪಿತೃರು, ಈಶ್ವರನನ್ನು ಅರ್ಚಿಸಿದರೆ ಮುಂದೆ ಕೀರ್ತಿ ಶಾಲಿಗಳಾಗಿ ಬದುಕುತ್ತೀರಿ. ಶ್ರೀರಾಮನ ಪ್ರಾರ್ಥನೆ ಇರಲಿ. ಹನುಮಂತನನ್ನು ಪೂಜಿಸಿ ಸುಖವಾದ ದಾರಿಯಲ್ಲಿ ಸಾಗಿ.
ಶನಿಯು ಲಗ್ನದಲ್ಲಿದ್ದು, ಕೆಲಸ ಮಾಡಲು ಬಿಡುವುದಿಲ್ಲ. ಕೆಲಸವು ಆಗದಂತೆಯೂ ಇರುವುದಿಲ್ಲ. ಹೇಗಾದರೂ ಇರಲಿ ಮನುಷ್ಯನು ಪ್ರಯತ್ನ ಮಾಡಿದಲ್ಲಿ ಕಟ್ಟ ಕಡೆಯ ಗಳಿಗೆಯಲ್ಲಿ ದೈವವೇ ಸಹಾಯ ಮಾಡಿ ನಿಮ್ಮ ಕಾರ್ಯಗಳಿಗೆ ಅನುಕೂಲವಾಗುವಂತೆ ನಡೆಸಿಕೊಡುತ್ತಾನೆ. ಗುರುವಾಕ್ಯದಲ್ಲಿ ವಿಶ್ವಾಸವಿರಲಿ. ಗುರುವಿನ ದಾರಿಯಲ್ಲಿ ಹೋಗಿರಿ. ವಿಶೇಷವಾಗಿ ನಿತ್ಯವೂ ಶನಿಯನ್ನು ಪ್ರಾರ್ಥಿಸಿ. ಕಷ್ಟ ನಷ್ಟ ಇರುವುದಿಲ್ಲ.
ದ್ವಾದಶದಲ್ಲಿ ಶನಿಯಿದ್ದು, ದ್ವಿತೀಯ ಗುರುವು ಮೀನದಲ್ಲಿದ್ದು, ಮನಬಂದಂತೆ ಏನೇನೋ ಮಾಡಿ ಪೇಚಿಗೆ ಸಿಲುಕಿಕೊಳ್ಳಬೇಡಿ. ಬುದ್ಧಿಯನ್ನು ಕೊಟ್ಟಿರುವುದು ನಿಯಮದಂತೆ ಕೆಲಸಗಳನ್ನು ಜಾಗೃತರಾಗಿ ಮಾಡಲು, ಕೀರ್ತಿಯನ್ನು ಗಳಿಸಲು. ಗುರು ರಾಘವೇಂದ್ರನನ್ನು ಪ್ರಾರ್ಥಿಸಿ. ರಾಯರಿಗೆ ನಿತ್ಯವೂ ನಮಸ್ಕರಿಸಿ. ಎಲ್ಲವೂ ಸುಖಮಯವಾಗುವುದು.
ಲಗ್ನದಲ್ಲಿ ಗುರುವಿರುವುದರಿಂದ ಏಕಾದಶ ಶನಿಯು ಇನ್ನೂ ಕೊಡುವುದು ಅನೇಕವಿದೆ. ತೆಗೆದುಕೊಳ್ಳಲು ಸಾಮರ್ಥ್ಯ ಹಾಗೂ ದೈವ ಬಲವಿರಬೇಕು. ಏನು ನಡೆಸಿ ಬೇಕಾದರೂ ಹೋರಾಟವಿರಬೇಕು. ಕೆಲಸದಲ್ಲಿ ಪ್ರಶಂಸೆಯೂ, ಪ್ರಗತಿಯೂ, ಲಾಭವೂ ದೊರೆಯುತ್ತದೆ. ನಿತ್ಯ ಗುರುಚರಿತ್ರೆಯ ಪಾರಾಯಣವನ್ನು ಮಾಡಲೇಬೇಕು. ಅದರಿಂದ ಸಂತಸವು, ಆರೋಗ್ಯವೂ ಬಂದು ಸೇರುತ್ತದೆ.