

05-04-2020 ರಿಂದ 11-04-2020ರವರೆಗೆ
ಮೇಷ: ಸಂತಸ ತರುವ ವಾರವಿದು. ಕಷ್ಟದ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಅಧ್ಯಯನದಲ್ಲಿ ಮುನ್ನಡೆಯಿದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಯಾರೊಂದಿಗೂ ವೈಮನಸ್ಯ ಬೇಡ. ಮಾನವ ಕುಲಕ್ಕಾಗಿ ನಿಮ್ಮ ಸೇವೆಯಿರಲಿ. ದೈವಚಿಂತನೆ ಅಗತ್ಯ.
ವೃಷಭ: ನಾವು ಮಾಡುವ ಪಾಪ-ಕರ್ಮಗಳು ನಮ್ಮ ಹಿಂದೆ ಬರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಧರ್ಮದ ಹಾದಿಯಲ್ಲಿ ನಡೆಯಿರಿ. ನಿಮಗೆ ಸೌಖ್ಯವಾಗುತ್ತದೆ. ಶತ್ರುಗಳಿಂದ ದೂರವಿರಿ. ವ್ಯಾಪಾರದಲ್ಲಿ ಲಾಭವನ್ನು ಕಾಣುತ್ತೀರಿ. ತಾತ್ಕಾಲಿಕ ಗುರುಬಲ ಆದ್ದರಿಂದ ಹಿಮಾಲಯ ಮುಟ್ಟಿದೆನೆಂಬ ಭ್ರಮೆ ಬೇಡ. ನಿಮ್ಮ ದೃಷ್ಟಿ ಎಲ್ಲರ ಮೇಲೂ ಒಂದೇ ಸಮನಾಗಿರಲಿ.
ಮಿಥುನ: ರಾಹುವಿನಿಂದ ಮಾಡುವ ಕೆಲಸಗಳಲ್ಲಿ ವಿಘ್ನ ಕಂಡುಬಂದರೂ ರವಿ ಮತ್ತು ಬುಧ ಗ್ರಹಗಳು ಉತ್ತಮ ಸ್ಥಾನದಲ್ಲಿ ಇರುವುದರಿಂದ ಕಾರ್ಯಸಿದ್ಧಿಯಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಿ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ತಂದೆ-ತಾಯಿಯರನ್ನು ಉಮಾಮಹೇಶ್ವರರಂತೆ ಕಾಣಿರಿ. ಪುರುಷಸೂಕ್ತ ಪಠಿಸಿ ಅಥವಾ ಶ್ರವಣ ಮಾಡಿ.
ಕಟಕ: ಕೆಲಸದಲ್ಲಿ ಏರಿಳಿತಗಳಿರುತ್ತದೆ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ. ಆರೋಗ್ಯದ ವಿಚಾರದಲ್ಲಿ ಉದಾಸೀನ ಬೇಡ. ಏಕಾದಶದಲ್ಲಿರುವ ಶುಕ್ರನಿಂದ ಧನಲಾಭದ ನಿರೀಕ್ಷೆ. ಸಪ್ತಮದ ಗುರುವು ಒಳ್ಳೆಯ ಫಲಗಳನ್ನು ನೀಡುತ್ತಾನೆ. ಮತ್ತೊಬ್ಬರಿಗೆ ಸಹಾಯವನ್ನು ಮಾಡಿ. ಸಪ್ತಮ ಶನಿಯಿಂದ ಮನೆಯಲ್ಲಿ ಕಲಹ. ದಕ್ಷಿಣಾಮೂರ್ತಿಯನ್ನು ಆರಾಧಿಸಿ.
ಸಿಂಹ: ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಲಾಭ ಸ್ಥಾನದಲ್ಲಿರುವ ರಾಹುವಿನಿಂದ ಅಧಿಕಾರ ಪ್ರಾಪ್ತಿ. ಆಲಸ್ಯತನದಿಂದ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳಿರುತ್ತದೆ. ಸಾರ್ವಜನಿಕವಾಗಿ ಯಶಸ್ಸು, ಕೀರ್ತಿ ಗಳಿಸುವಿರಿ. ಆಸ್ತಿಪಾಸ್ತಿ ಖರೀದಿಗೆ ಸೂಕ್ತ ಸಮಯವಲ್ಲ. ಷಷ್ಠ ಗುರು ಹಾಗೂ ಶನಿ ಕಳೆದುಹೋದ ಧನವನ್ನು ತರುತ್ತಾನೆ. ಗಣಪತಿ ಹಾಗೂ ದುರ್ಗೆಯನ್ನು ಆರಾಧಿಸಿ.
ಕನ್ಯಾ: ಪಂಚಮದಲ್ಲಿ ಶನಿಗ್ರಹ ಇರುವುದರಿಂದ ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಪ್ತಮ ಸ್ಥಾನದಲ್ಲಿರುವ ರವಿಯಿಂದ ಕಣ್ಣಿನ ಬಗ್ಗೆ ಹೆಚ್ಚು ಗಮನವಿರಲಿ. ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಕುಂಠಿತವಾಗಬಹುದು. ಆಸಕ್ತಿ ಮತ್ತು ಶ್ರಮವಹಿಸಿ ಅಧ್ಯಯನ ನಡೆಸಬೇಕು. ಕ್ಷಣಕಾಲದ ಗುರುವಿನಿಂದ ಆನಂದ ಪಡಬೇಡಿ. ಕಲ್ಯಾಣವನ್ನು, ದೈವದತ್ತವಾದ ಕೆಲಸಗಳನನ್ನು ಮಾಡಿ.
ತುಲಾ: ಸಾಧನೆಯ ಹಾದಿಯಲ್ಲಿ ನಡೆಯುವಿರಿ. ಆಂತರಿಕವಾಗಿ ಬಲವನ್ನು ಪಡೆಯುತ್ತೀರಿ. ಆದರೆ ದೊಡ್ಡ ಯೋಜನೆಗಳನ್ನು ಕೈಗೊಳ್ಳಲು ಸೂಕ್ತ ಸಮಯವಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಮಯವಿದು. ನಿಮ್ಮ ಧ್ಯಾನವು ದುರ್ಗೆಗಾಗಿರಲಿ. ದೇಶಕ್ಕಾಗಿ ನಿಮ್ಮ ಸೇವೆಯಿರಲಿ. ಅಯ್ಯಪ್ಪಸ್ವಾಮಿಯನ್ನು ಆರಾಧಿಸಿ.
ವೃಶ್ಚಿಕ: ಯಾರೊಂದಿಗೂ ವೈರತ್ವ ಬೇಡ. ವಿಕ್ರಮ ಶನಿಯು ಮಾಡಿದ ಕೆಲಸಗಳಲ್ಲಿ ಲಾಭ, ಯಶಸ್ಸು ತಂದುಕೊಡುತ್ತಾನೆ. ಸುಖಮಯವಾದ ಜೀವನ ನಿಮ್ಮದಾಗಲಿದೆ. ಅದೃಷ್ಟ ನಿಮ್ಮ ಬೆನ್ನಹಿಂದಿದೆ. ಆದರೆ ಬಲು ಎಚ್ಚರದಿಂದ ಹಣವ್ಯಯ ಮಾಡಬೇಕು. ಗುರುವಿನಲ್ಲಿ ವಿಶ್ವಾಸ, ನಂಬಿಕೆ ಇರಲಿ. ಕಳೆದುಹೋದ ಸಂಪತ್ತು ಸಿಗುವುದು. ಕಾಮಾಕ್ಷಿಯನ್ನು ಆರಾಧಿಸಿ.
ಧನು: ನಿಮ್ಮಿಂದ ಲೋಕೋಪಯೋಗಿ ಕೆಲಸಗಳು ಜರುಗುತ್ತವೆ. ಉತ್ತಮವಾದ ವಾರವಾಗಿದೆ. ನಿಮ್ಮ ಕೋಪವನ್ನು ಹತೋಟಿಯಲ್ಲಿಡಿ. ಮುಖ್ಯ ನಿರ್ಧಾರಗಳನ್ನು ಮಾಡುವ ಮೊದಲು ಹತ್ತು ಹಲವು ಬಾರಿ ಯೋಚಿಸಿ. ಸ್ತ್ರೀಯರು ಆರೋಗ್ಯದ ಬಗ್ಗೆ ಗಮನಹರಿಸಿ. ಕೋಪದಿಂದ ನಷ್ಟವನ್ನು ಅನುಭವಿಸುವಿರಿ ಜೋಕೆ. ದ್ವಿತೀಯ ಗುರುವಿನಿಂದ ಲಾಭವನ್ನು ಪಡೆಯಿರಿ. ಅನುಷ್ಠಾನವನ್ನು ಬಿಟ್ಟು ದುಃಖಿತರಾಗಬೇಡಿ.
ಮಕರ: ಸೌಹಾರ್ದವಾದ ವರ್ತನೆಯಿಂದ ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಮಿಶ್ರಿತ ಫಲಗಳನ್ನು ಪಡೆಯುವ ವಾರ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಮಾನಸಿಕವಾಗಿ ಅತೃಪ್ತಿ ಬೇಡ. ಧೈರ್ಯದಿಂದ ಮುನ್ನಡೆಯಿರಿ. ರಾಶಿಯಲ್ಲಿ ತ್ರಿಗ್ರಹಗಳ ತಾಪವಿರುತ್ತದೆ. ನಿಮ್ಮ ದುಃಖವನ್ನು ಮರೆತು ಪರರಿಗಾಗಿ ದುಡಿಯಿರಿ. ದೈವವನ್ನು ನಂಬಿ. ಸ್ವಂತ ರಾಶಿಯಲ್ಲಿ ಶನಿ ಕೇಡು ಮಾಡುವುದಿಲ್ಲ.
ಕುಂಭ: ಸಾಮಾನ್ಯವಾದ ವಾರವಿದಾಗಿದೆ. ವ್ಯಾಪಾರ -ವ್ಯವಹಾರಗಳಲ್ಲಿ ಸುಧಾರಣೆ ಇದ್ದರೂ, ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾನಸಿಕ ಒತ್ತಡವಿದ್ದರೂ ದೈವ ಚಿಂತನೆಯಿಂದ ಕ್ಷಯವಾಗುವುದು. ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಕಾರ್ಯಕ್ಷಮತೆಯಲ್ಲಿ ಎಚ್ಚರವಿರಲಿ. ಗುರುಪೂಜೆ ಮಾಡಿ ಹಾಗೂ ಮಾತಾಪಿತೃಗಳನ್ನೂ ಪೂಜಿಸಿ.
ಮೀನ: ಗುರು ಶನಿ ಹಾಗೂ ಕುಜ ಗ್ರಹಗಳ ಪ್ರಭಾವದಿಂದ ತಮ್ಮ ಮನಸ್ಸಿನಂತೆ ಎಲ್ಲಾ ಕಾರ್ಯಗಳು ನಡೆಯುತ್ತವೆ. ರಾಜಯೋಗವನ್ನು ಅನುಭವಿಸುವ ಕಾಲವಿದು. ರಾಶ್ಯಾಧಿಪತಿ ಗುರುವಾದ್ದರಿಂದ ಸತ್ಯ, ಧರ್ಮದ ನಡತೆ ನಿಮ್ಮನ್ನು ಕಾಪಾಡುತ್ತದೆ. ಅಹಿತ ಕೆಲಸಗಳನ್ನು ಮಾಡಬಾರದು. ಮುಂದೆ ಜನ್ಮ ಶನಿಯಲ್ಲಿ ಕಷ್ಟವನ್ನು ನೋಡಬೇಕಾಗಬಹುದು.