

ಚಂದ್ರನ ಕಾಂತಿ, ನಗು, ಮುಖ ಬಾಡಿಹೋಗುವಂತೆ ಮಾಡಿ ಖಿನ್ನತೆ ಉಂಟುಮಾಡುತ್ತಾನೆ. ಹಸ್ತ-ಚಿತ್ತ ಕನ್ಯಾರಾಶಿಯಲ್ಲಿ ಈ ದೋಷವಾಗಿರುವುದು. ಈ ರಾಶಿಯವರು ದೋಷ ಪರಿಹಾರಕ್ಕೆ ಗಣಹೋಮ ಮಾಡಿಸಿ. 6ರ ಚಂದ್ರ ದೋಷವನ್ನು ಹೋಗಲಾಡಿಸಿ ಗಣೇಶನೇ ಗುರು ಕೊಡುವ ಫಲ ನೀಡುತ್ತಾನೆ. ಶನಿ ಬದಲಾವಣೆ ಆಗುವವರೆಗೆ ಎಚ್ಚರಿಕೆಯಿಂದ ಮುಂದುವರಿದರೆ ಶುಭವಾಗುತ್ತದೆ.
ಲಗ್ನಾತ್ ರಾಹುವಿದ್ದು, ಯಾವ ದಿಕ್ಕಿಗೆ ಹೋಗಬೇಕೆಂದು ತಿಳಿಯದೆ ಕಾಲನೋವು ಮಾಡಿಕೊಂಡು ಮನಸ್ಸಿಗೂ ನೋವನ್ನು ಉಂಟುಮಾಡಿಕೊಳ್ಳಬೇಡಿ. ಲಗ್ನದಲ್ಲಿ ರಾಹು, ದ್ವಾದಶದಲ್ಲಿ ಕುಜನಿರುವುದರಿಂದ ಏಕಾದಶ ಗುರುವಿನ ಲಾಭ ಪಡೆದು ಚಿಂತನ ಮಂಥನ ಮಾಡಿ ಕೆಲಸ ಮಾಡಿದರೆ ಪ್ರಯೋಜನವಾಗುತ್ತದೆ. ದುರ್ಗೆಯನ್ನು ಪೂಜಿಸಿದರೆ ಶತ್ರುಗಳು ನಿವಾರಣೆ ಆಗಿ ಜನಾನುಕೂಲವೂ ಒದಗಿ ಬರುತ್ತದೆ.
10ರ ಗುರು, 8ರ ಶನಿಯು ವಿಶೇಷ ಲಾಭಗಳನ್ನು ತಂದು ನಿಮ್ಮನ್ನು ಸಂತೋಷಗೊಳಿಸಲು ಅವರಲ್ಲಿ ಬಲವಿಲ್ಲ. ರಾಶಿಗೆ ದ್ವಾದಶದಲ್ಲಿ ಅಂಗಾರಕನಿದ್ದು ಖರ್ಚು-ವೆಚ್ಚಕ್ಕೆ ಕಡಿವಾಣವಿರಲಿ. ದೇವರೇ ದಯತೋರುತ್ತಾನೆ. ಕುಲದೇವರನ್ನು ಪೂಜಿಸಿ. ಕೆಲಸ-ಕಾರ್ಯಗಳಲ್ಲಿ ಅಲ್ಪ ಯಶಸ್ಸು ಕಾಣಬಹುದು.
ಕಟಕ ರಾಶಿಯವರಿಗೆ ದ್ವಿತೀಯದಲ್ಲಿ ರವಿ-ಶುಕ್ರರು, 9ರ ಗುರುವು ಅಸಾಧ್ಯವಾದ ಕೆಲಸಗಳನ್ನು ಮಾಡಿಕೊಡಲು ಗ್ರಹಬಲವೂ ಇದ್ದು, ದೈವಬಲವೂ ಇದೆ. ಏಕಾದಶದಲ್ಲಿರುವ ಅಂಗಾರಕನು ಕ್ಷಿಪ್ರ ಫಲವನ್ನು ಕೊಡಬೇಕಾದಲ್ಲಿ ಶಿವನ ಪರಿವಾರದಲ್ಲಿರುವ ವಿಘ್ನರಾಜನನ್ನು, ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ-ಪೂಜಿಸಿ.
ಆಗಸ್ಟ್ 31ರಂದು ಸಿಂಹ ರಾಶಿಯಲ್ಲಿ ಶುಕ್ರನು ಸೇರಿದ್ದಾನೆ. ದ್ವಿತೀಯದಲ್ಲಿ ಬುಧ, ಶನಿಯು ಷಷ್ಠದಲ್ಲಿದ್ದು, ನಿಮಗೆ ಒಳ್ಳೆಯ ಫಲ ನೀಡಲಿದ್ದಾರೆ. ಅಷ್ಟಮ ಗುರು ಸ್ವಕ್ಷೇತ್ರದಲ್ಲಿರುವುದರಿಂದ ನಿಮಗೆ ದಾರಿತೋರುತ್ತಾನೆ. ಕೆಲಸಗಳಲ್ಲಿ ಶ್ರದ್ಧೆಯಿರಲಿ. ನಿಮಗೆ ಕೊಡುವುದನ್ನು ದೇವರೇ ನೀಡುತ್ತಾನೆ. ಈಶ್ವರನ ಪ್ರಾರ್ಥನೆ ಇರಲಿ. ಶ್ರೀಕೃಷ್ಣದೇವರ ಸಹಿತ ದುರ್ಗೆಯನ್ನು ಪೂಜಿಸಿ. ಪ್ರಾರ್ಥಿಸಿ.
ಗುರು ಬುಧರು ಸ್ವಕ್ಷೇತ್ರದಲ್ಲಿದ್ದರೂ, ಶನಿಯು ಪಂಚಮದಲ್ಲಿ. ಆರೋಗ್ಯದ ಬಗ್ಗೆ ಎಚ್ಚರ ತಪ್ಪಿದರೆ ಹಾನಿ ಉಂಟಾಗಿ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಆರೋಗ್ಯ ವಿಚಾರ ಬಂದಾಗ ವೈದ್ಯರನ್ನು ಸಂರ್ಪಸಿ. 7ರಲ್ಲಿ ಗುರುವಿರುವುದರಿಂದ ನಿಮ್ಮ ಪೂರ್ವಪುಣ್ಯದಿಂದ ಗುರುವು ರಕ್ಷಿಸುತ್ತಾನೆ. ಉಪಕಾರ ಮಾಡಿದವರನ್ನು ಸ್ಮರಿಸಿ. ಯಾರಿಗೂ ದ್ರೋಹವಾಗದಂತೆ ನಡೆದುಕೊಳ್ಳಿ.
ತಕ್ಕಡಿಯ ತೂಕ ತಪ್ಪಾಗಿ ತೂಗಿಸಬಾರದು. ಮನುಷ್ಯನು ಎಲ್ಲೆ ಮೀರಿ ವರ್ತಿಸಿದಾಗ ಆಯತಪ್ಪಿ ಬೀಳುವ ಸಮಯ. ಆದ್ದರಿಂದ ಜಾಗರೂಕತೆಯಿಂದ, ಸಮಯವನ್ನು ನೋಡಿಕೊಂಡು ಮುಂದೆ ಸಾಗಬೇಕು. ಕೇತುವಿಗೆ ಗಣಪತಿಯನ್ನು, ಷಷ್ಠ ಗುರುವಿಗೆ ದತ್ತಾತ್ರೇಯನನ್ನು ಪ್ರಾರ್ಥಿಸಿ. ದೇವರು ಕೊಟ್ಟಿದ್ದನ್ನು ತೃಪ್ತಿಯಿಂದ ಸ್ವೀಕರಿಸಿ. ಮನಸ್ಸನ್ನು ಕೆಡಿಸಿಕೊಳ್ಳಬೇಡಿ.
ಗುರುವಿನ ಮಾತನ್ನು ಮೀರಬಾರದು. ದೇಶ-ಕಾಲ-ಆದೇಶ-ಗುರೂಪದೇಶ. ಗುರು ಹೇಳಿದ ಮಾರ್ಗವನ್ನು ಬದಲಾಯಿಸದಿದ್ದರೆ ಋಣಬಾಧೆ ತೀರುತ್ತದೆ. ಆಸೆಯೂ ಬೇಡ. ದುರಾಸೆಯೂ ಬೇಡ. ನುಡಿದಂತೆ ನಡೆ. ನಡೆದಂತೆ ನಿಮ್ಮ ಯೋಗವು ಕಾಪಾಡುತ್ತದೆ. ತೃತೀಯ ಶನಿಗೆ ರಾಮನನ್ನು ಪ್ರಾರ್ಥಿಸಿ. ಷಷ್ಠ ರಾಹುವಿಗೆ ಸುಬ್ರಹ್ಮಣ್ಯನ ಪ್ರಾರ್ಥನೆ ಅಗತ್ಯ.
ಹಗಲಾದ ಮೇಲೆ ಕತ್ತಲೆ. ಕತ್ತಲೆ ನಂತರವೇ ಸೂರ್ಯನ ಬೆಳಕು. ಈ ಲೋಕ ನಿಯಮಿತ ಗುರಿಯನ್ನು ಸಾಕ್ಷಾತ್ ಶಿವನೇ ನಿರ್ವಿುಸಿದ್ದಾನೆ. ಬೆಳಕಲ್ಲಿ ಮಾಡುವ ಕೆಲಸ ಹೆಚ್ಚುಕಾಲ ಉಳಿಯುತ್ತದೆ. ರಾತ್ರಿಯಲ್ಲಿ ದೇಹಕ್ಕೆ ವಿಶ್ರಾಂತಿ ನೀಡಿದರೆ ಬುದ್ಧಿ ಓಡುತ್ತದೆ. 4ನೇ ಮನೆ ಸ್ವಕ್ಷೇತ್ರದಲ್ಲಿ ಗುರುವಿದ್ದಾನೆ. ಸಮಸ್ತ ಚಿಂತೆಗಳನ್ನು ಬಿಟ್ಟು ಗುರು ನರಸಿಂಹನನ್ನು ಪ್ರಾರ್ಥಿಸಿ. ಸೋಲು ಕೂಡ ಗೆಲುವಾಗಿ ಪರಿಣಮಿಸುತ್ತದೆ.
ಮಕರದಲ್ಲಿ ಶನಿ ಸ್ವಕ್ಷೇತ್ರದಲ್ಲಿದ್ದು, ತೃತೀಯ ಗುರುವು ಸ್ವಕ್ಷೇತ್ರದಲ್ಲಿದ್ದಾನೆ. ಗುರಿಮುಟ್ಟಲು ಗುರು ಅನುಗ್ರಹ ಪಡೆಯಲೇಬೇಕು. ಹಗ್ಗವು ಹಾವಾಗುವುದಿಲ್ಲ. ಸಮಯೋಚಿತ ಪ್ರಯತ್ನ ಪೂರ್ವಕ ಕೆಲಸಗಳಿಂದ, ಹಗ್ಗವೇ ನಿಮಗೆ ಆಸರೆಯಾಗಿ ರಾಮನು ಸೇತುವೆ ನಿರ್ವಿುಸಿ ಲಂಕೆಯನ್ನು ಮುಟ್ಟಿದಂತೆ ಗುರಿ ತಲುಪುತ್ತೀರ. ಸುಂದರಕಾಂಡ ಪಾರಾಯಣ ಮಾಡಿ. ರಾಮನಾಮ ಸ್ಮರಣೆ ಇರಲಿ.
ದ್ವಾದಶ ಶನಿ ಶುಭವಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಛಲವಿರಬೇಕು. 12ರ ಶನಿಗೆ, ಶನಿಯು ಕೊಟ್ಟ ಕೆಲಸಗಳಲ್ಲಿ ಪಾಠ ಕಲಿತು ನಿಮ್ಮ ಮಿತ್ರರು, ಸಹಪಾಠಿಗಳು, ಬಂಧುಗಳ ಜತೆಯಲ್ಲಿ ಎಚ್ಚರಿಕೆಯಿಂದ ನಡೆಯಬೇಕು. ತಾತ್ಕಾಲಿಕವಾಗಿ ಗುರುವು ದ್ವಿತೀಯದಲ್ಲಿರುವುದು ಸಂರಕ್ಷಿಸುತ್ತಾನೆ ನಿಮ್ಮನ್ನು. ಗುರು ಪ್ರೀತ್ಯರ್ಥವಾಗಿ ಉಮಾಮಹೇಶ್ವರ ವ್ರತ ಮಾಡಿ. ದೈವಬಲ ಹೆಚ್ಚಿಸಿಕೊಳ್ಳಿ.
ಲಗ್ನದಲ್ಲಿ ಗುರುವಿದ್ದಾನೆ. ಇನ್ನು 4 ತಿಂಗಳ ಕಾಲ ಏಕಾದಶದಲ್ಲಿ ಶನಿಯಿದ್ದು, ಸಮಯೋಚಿತ ಕೆಲಸ ಮಾಡಿದರೆ ಯಶಸ್ಸು ಪಡೆಯಬಹುದು. ಗುರುವು ಆತ್ಮರಕ್ಷಣೆಯನ್ನು ನೀಡುತ್ತಾನೆ. ನಾಳೆ ಏನು ಮಾಡಬೇಕೆಂಬ ಗುರಿ ಇರಬೇಕೇ ಹೊರತು ಹಳೆಯ ವಿಚಾರ ತೆಗೆದು ಚಿಂತಿಸುತ್ತಾ ಕುಳಿತರೆ ಸಮಯ ಜಾರಿ ಕಷ್ಟಕ್ಕೆ ಸಿಲುಕುತ್ತೀರ. ಶನಿ ಸಂಚಾರದಲ್ಲಿ ಪಾಂಡವರು ಕಷ್ಟಪಟ್ಟಿದ್ದರು. ಅನಂತ ಪದ್ಮನಾಭಸ್ವಾಮಿಯನ್ನು ಪೂಜಿಸಿ.