

ಮಂಗಳಕಾರಕನು, ಪ್ರಸನ್ನವದನನು, ಆರು ಮುಖ ಉಳ್ಳವನು, ಪಾರ್ವತಿ ಪ್ರಿಯನಂದನನು ಆದ ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ದ್ವಾದಶ ಗುರು, ಹತ್ತರ ಶನಿಯಿಂದ ಉಂಟಾಗುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಮನುಷ್ಯನ ದೇಹದಲ್ಲಿ ಹರಿಯುವ ರಕ್ತಕ್ಕೆ ಅಧಿಪತಿ ಅಂಗಾರಕನೇ. ಅವನ ಕೃಪೆಯಿದ್ದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ. ಸುಬ್ರಹ್ಮಣ್ಯ ಸಹಸ್ರನಾಮ ಪಾರಾಯಣ ಮಾಡಿ.
ಶುಕ್ರನ ಮನೆಯಾದರೂ ರಾಹು-ಕೇತುಗಳು ಬಂದಾಗ ವಿಶೇಷ ಸ್ಥಾನಮಾನ ಸಿಗುತ್ತದೆ. ಅದರ ಸ್ವರೂಪವೇ ದುರ್ಗಾಪರಮೇಶ್ವರಿ. ‘ದುರ್ಗಾಂ ಪೂಜಿತಂ ದಾರಿದ್ರ್ಯ ದುಃಖಹಾರಿಣಿ’. ಆದ್ದರಿಂದ ಈ ವಾರದ ಸಮಯವು ನಿಮಗೆ ಇಷ್ಟಾರ್ಥ ಲಭಿಸುವ ಕಾಲ. ದುರ್ಗೆಯನ್ನು ಪೂಜಿಸಿ. ‘ಓಂ ಶ್ರೀ ದುಂ ದುರ್ಗಾ’ ಎಂಬ ಮಂತ್ರವನ್ನು ಪಠಿಸಿ. ಹಣವು ಬಂದೇ ಬರುತ್ತದೆ. ಹಿತೈಷಿಗಳೂ ಸಹಾಯಹಸ್ತ ನೀಡುತ್ತಾರೆ.
ಮಿಥುನಾಧಿಪತಿ ಬುಧನು ಅಂಗಾರಕನ ಮನೆಯಲ್ಲಿ ಕುಳಿತಿರುವುದರಿಂದ ಕೆಲವೊಂದು ವಿಚಾರಗಳಿಗೆ ಬೇಡದ ಚರ್ಚೆಯಿಂದ ಅಹಿತಕರ ಘಟನೆ ಉಂಟಾಗಬಹುದು. ಯಾವುದನ್ನು ಗೆಲ್ಲಬೇಕಾದರೂ ದೈವಸಂಪತ್ತು ಬೇಕೇ ಬೇಕು. ರಾಮನೇ ರಾವಣನನ್ನು ಸಂಹರಿಸಲು ಅಗಸ್ಱ ಋಷಿಯು ಉಪದೇಶಿಸಿದ ಆದಿತ್ಯ ಹೃದಯ ಪಾರಾಯಣ ಮಾಡಿ ಗೆದ್ದನು. ಶ್ರೀರಾಮಚಂದ್ರನನ್ನು ಪೂಜಿಸಿ. ಹನುಮಂತನಿಗೆ ತುಳಸಿಯಿಂದ ಅರ್ಚನೆ ಮಾಡಿಸಿ.
ವಿಷ್ಣುವಿನ ಮತ್ಸಾ್ಯವತಾರಕ್ಕೆ ಮುಂಚೆಯೇ ಪೂರ್ಣ ಭೂಮಿಯೇ ಜಲಮಯವಾಗಿತ್ತು. ಅಂತಹ ಪರಮಾತ್ಮನಾದ ವಿಷ್ಣುವು ವಟಪುತ್ರ ಬ್ರಹ್ಮನನ್ನು ಸೃಷ್ಟಿಗಾಗಿ, ಶಿವನನ್ನು ಲಯ ಕರ್ತನಾಗಿಯೂ ನೇಮಿಸಿದ್ದಾನೆ. ಜಲರಾಶಿಯವರಾದ ನೀವು ಪವಿತ್ರ, ಪುಣ್ಯಕರ ಕೆಲಸವನ್ನು ಮಾಡಿ. ಶಿವನ ಧ್ಯಾನವನ್ನು ಮಾಡಿ. 9ರ ಗುರುವಿನ ಸ್ಥಿತಿಯಲ್ಲಿ ಎಲ್ಲವನ್ನೂ ಪಡೆದುಕೊಳ್ಳುವ ಕಾಲ. ಶ್ರೀರಾಮಚಂದ್ರನ ಪ್ರಾರ್ಥಿಸಿ.
ವ್ಯಾಘ್ರವು ಹುಲ್ಲನ್ನು ತಿನ್ನುವುದಿಲ್ಲ. ತನಗೆ ಬೇಕಾದ ವಸ್ತುವನ್ನು ಬೇಟೆಯಾಡಿ ಆಹಾರವಾಗಿಸಿಕೊಳ್ಳುತ್ತದೆ. ಅದು ದೈವನಿಯಮ. ಸಿಂಹ ರಾಶಿಯಲ್ಲಿ ಜನಿಸಿದ ನೀವು ಏನೇ ಇರಲಿ ಬೇಕಾದ್ದನ್ನು ಪಡೆಯಬೇಕೆಂಬ ಸಾಮರ್ಥ್ಯ, ಧೈರ್ಯ, ಬುದ್ಧಿಪ್ರದರ್ಶನ, ದೈವಸಂಪತ್ತು ಬೆಳೆಸಿಕೊಂಡರೆ ಯಾವುದೂ ಕಷ್ಟವೆನಿಸದು. ಲೋಕಕ್ಕೇ ಬೆಳಕನ್ನು ಕೊಡುವ ಸೂರ್ಯನನ್ನು ಅರ್ಚಿಸಿ. ಮಖಾನಕ್ಷತ್ರ ಅಧಿಪತಿ ಕೇತು ಗಣಪತಿಯನ್ನು ಪೂಜಿಸಿದರೆ ವಿಘ್ನಗಳನ್ನು ದಾಟಿ ಗಾಂಭೀರ್ಯದ ಗಜಾನನನಂತೆ ಬಾಳನ್ನು ನಡೆಸಬಹುದು.
ಈ ಜಗತ್ತಿನಲ್ಲಿ ಕನ್ಯೆ ಎಂಬ ಕೂಸು ಜನ್ಮತಾಳದೆ ಇದ್ದಿದ್ದರೆ ಲೋಕವೇ ಇರುತ್ತಿರಲಿಲ್ಲ. ಆ ಕನ್ಯೆಯೇ ದೇವತಾ ಸ್ವರೂಪ ಹೊಂದಿರುವ ಸರಸ್ವತಿ, ದುರ್ಗೆ ಕಾಳಿಯಾಗಿ ಅವತರಿಸಿದ್ದಾಳೆ. ಇನ್ನು ಕೇವಲ ಆರು ವಾರ ಕಳೆದರೆ ಶನಿ ಮುಂದೆ ಹೋಗುತ್ತಾನೆ. ಸ್ವಧರ್ಮ ಆಚರಣೆ ಇರಲಿ. ಯಾರ ಮನಸ್ಸಿಗೆ ನೋವುಂಟು ಮಾಡದೆ ಋಣವನ್ನು ತೀರಿಸಿ ಬದುಕನ್ನು ಮುನ್ನಡೆಸಿ. ಆರರ ಶನಿ ಎಲ್ಲವನ್ನು ಕೊಟ್ಟು ಸಪ್ತಮದ ಗುರುವೂ ಹರಸುತ್ತಾನೆ.
ವ್ಯಾಪಾರಸ್ಥರು ಯಾವುದೇ ವ್ಯಾಪಾರವಿರಲಿ ದೇವರು ತಕ್ಕಡಿಯನ್ನು ಸೃಷ್ಟಿ ಮಾಡದಿದ್ದರೆ ವ್ಯಾಪಾರ-ವಹಿವಾಟು ಸಾ ಗುತ್ತಿರಲಿಲ್ಲ. ಮೂಲಾರ್ಥವು ಧರ್ಮ- ಅಧರ್ಮದ ಸೃಷ್ಟಿಯ ಗುರುತೇ ಅಳತೆಗೋಲದ ತಕ್ಕಡಿ. ನಿಮ್ಮ ಜೀವನದ ಭಾರವನ್ನು ಸಾಗಿಸಲು ಪುಣ್ಯ ಕೆಲಸವನ್ನು ಮಾಡಿ, ಪುಣ್ಯಾತ್ಮರನ್ನು ದರ್ಶಿಸಿ. ದಾನ-ಧರ್ಮವನ್ನು ಮಾಡಿ. ನಿಮಗೆ ನಮ್ಮಂತವರು ಸಲಹೆಯನ್ನು ಹೇಳುವ ಪ್ರಶ್ನೆಯೇ ಇರುವುದಿಲ್ಲ. ಜಾಗರೂಕರಾಗಿ ಈ ಮಾಸದಲ್ಲಿ ಬನಶಂಕರಿಯನ್ನು ಪ್ರಾರ್ಥಿಸಿ. ತುಪ್ಪದ ದೀಪವನ್ನು ಬೆಳಗಿಸಿ.
ಇನ್ನು ಮುಂದೆ ಜೀವನವನ್ನು ಚೆನ್ನಾಗಿ ಅರ್ಥೈಸಿಕೊಂಡು ಮುಂದೆ ಸಾಗಿ. ಶ್ರಮಕ್ಕೆ ತಕ್ಕನಾದ ಫಲ ಕೊಡಲು ಶನಿ ತೃತೀಯದಲ್ಲಿ ಇದ್ದಾನೆ. ದೈವಬಲವು ನಿಮಗೆ ಯಾರೂ ಮೋಸ ಮಾಡದೆ ಮುನ್ನಡೆಸಲು ಗುರುವಿದ್ದಾನೆ. ಮೂಲತಃ ವೃಶ್ಚಿಕ ರಾಶಿಯವರು ಗುರುಸ್ವರೂಪ ಅರಿತು ಪೂಜಿಸಿ. ಪ್ರತ್ಯಕ್ಷ ಗುರುಗಳಾದ ಮಾತಾ-ಪಿತರನ್ನು ಸಂರಕ್ಷಣೆ ಮಾಡಿ. ಅವರಲ್ಲಿ ವಿಶ್ವಾಸ ಇಟ್ಟರೆ ಅವರ ಆಶೀರ್ವಾದವು ನಿಮಗೆ ಸಾಫಲ್ಯ ಕೊಡುತ್ತದೆ.
ಶಿವಧನಸ್ಸು ಮುರಿದು ಬಾಣ-ಬಿಲ್ಲಿನ ಸದ್ದುಗಳನ್ನು ಮಾಡಿ ಲೋಕಕ್ಕೆ ತೋರಿದವನು ಶ್ರೀರಾಮನು. ಕೇವಲ ಬಿಲ್ಲು - ಬಾಣದಿಂದಲೇ ರಾವಣನ ಸಂಹಾರ ಮಾಡಿದನೆಂದರೆ ಅವನು ಗುರು ವಶಿಷ್ಟರಲ್ಲಿ ಇಟ್ಟ ವಿಶ್ವಾಸ, ನಂಬಿಕೆ ಹಾಗೂ ಗುರು ಶುದ್ಧವಾದ ಭಕ್ತಿ, ಭಕ್ತಿಯು ಭಕ್ತನನ್ನು ಕಾಪಾಡುತ್ತದೆ. ದೀಪವು ಬೆಳಕು ನೀಡಲು ಹೂವಿನ ಬತ್ತಿಯು ಬೇಕು. ಮನುಷ್ಯರನ್ನು ಮೋಹಗೊಳಿಸುವ ಮಹಾವಿಷ್ಣುವನ್ನು ಸತತವಾಗಿ ಬಿಡದೆ, ದಶಾವತಾರದ ಎಲ್ಲಾ ರೂಪಗಳನ್ನು ಹಾಗೂ ಗುರುದತ್ತಾತ್ರೇಯನನ್ನು ಪ್ರಾರ್ಥಿಸಿ. ನಿಮಗೆ ಬೇಕಾದ್ದನ್ನೆಲ್ಲ ಕೊಟ್ಟು, ಒಳ್ಳೆಯ ಸ್ಥಾನಮಾನಗಳನ್ನು ಕೊಡುತ್ತಾನೆ.
ಜನ್ಮ ಶನಿಯು ಮುಂದೆ ಸಾಗಿ ಜೀವನ ಸಾಗಿಸಲು ಅನುವು ಮಾಡಿಕೊಡುತ್ತಾನೆ. ಇಷ್ಟು ದಿನ ಪಟ್ಟ ಕಷ್ಟವು ಮರುಕಳಿಸುವುದಿಲ್ಲ. ಆದರೆ, ಭಗವಂತನಲ್ಲಿ ಭಕ್ತಿ-ಭಾವ ಇರಲೇಬೇಕು. ದೇವರ ಗುಣಗಾನ ಮಾಡಿ ಹಾಡಿದರೆ ಕಷ್ಟವು ದೂರವಾಗಿ, ನಿರೀಕ್ಷಿಸಿದ ಫಲ ಕೊಡುತ್ತಾನೆ. ಉಮಾಮಹೇಶ್ವರನನ್ನು ಪೂಜಿಸಿ. ಉತ್ತರ ಕರ್ನಾಟಕದಲ್ಲಿ ನೆಲೆಸಿರುವ ಪರಮಪೂಜ್ಯರಾದ ಶ್ರೀ ಶ್ರೀ ಗಂಗಾಧರೇಶ್ವರ ಸರಸ್ವತಿಯನ್ನು ದರ್ಶಿಸಿ ಬನ್ನಿ. ಸಮಸ್ಯೆ ದೂರವಾಗುತ್ತದೆ.
ದ್ವಾದಶ ಶನಿಯು ಜನ್ಮಕ್ಕೆ ಬಂದು ನಿಮ್ಮನ್ನು ಶೋಧಿಸಿ ಫಲವನ್ನು ನೀಡುತ್ತಾನೆ. ಆಗುಹೋಗುಗಳನ್ನು, ತಪು್ಪಗಳನ್ನು, ಕೌರ್ಯವನ್ನು, ಸ್ವಾರ್ಥವನ್ನು ಬಿಟ್ಟು ಮನುಷ್ಯನ ದುರ್ನಡತೆಗಳನ್ನು ಸಂಹಾರ ಮಾಡುವ ಲಕ್ಷ್ಮೀ ನರಸಿಂಹನನ್ನು ಧ್ಯಾನಿಸಿ. ಸಾಲಿಗ್ರಾಮದ ಗುರುನರಸಿಂಹನನ್ನು ಪೂಜಿಸಿ. ಜೀವನದ ಮಾರ್ಗವನ್ನು ಬದಲಿಸಿ. ಅವನೇ ನಿಮ್ಮನ್ನು ನಡೆಸಿ ಹರಸುತ್ತಾನೆ.
ಲಗ್ನದಲ್ಲಿ ಗುರು, ಇನ್ನು ಕೇವಲ 45 ದಿನಗಳವರೆಗೆ ಏಕಾದಶದಲ್ಲಿ ಶನಿಯಿರುತ್ತಾನೆ. ಪರಮಾತ್ಮನು ನಿತ್ಯವೂ ಅದೃಷ್ಟವನ್ನು ಬರೆಯುವುದಿಲ್ಲ. ಕಾಣದ ಲೇಖನಿಯಲ್ಲಿ ಹಣೆಬರಹವನ್ನು ಬ್ರಹ್ಮನೇ ಬರೆದರೂ ಅದನ್ನು ಕೊಡುವವನು ಮಹಾವಿಷ್ಣುವೇ. ಸದ್ಭುದ್ಧಿಯಿಂದ ದೇವರು ಕೊಟ್ಟದ್ದನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಹರಿ-ಹರ- ಬ್ರಹ್ಮರೂ ಏನೂ ಮಾಡಲಾಗುವುದಿಲ್ಲ. ಮೀನ ರಾಶಿಯಲ್ಲಿ ಜನಿಸಿದವರು ಮೀನು ನೀರಿನಿಂದ ಆಚೆ ಬಂದರೆ ಏನಾಗಬಹುದು ಎಂದು ತಿಳಿದು ದೇವರು ಕೊಟ್ಟ ವರವನ್ನು ನಿರ್ಲಕ್ಷಿಸದೆ ಉಪಕಾರಗಳಾಗಿ ಬದುಕಿ. 4ನೇ ತಾರೀಖು ಭಾನುವಾರದಿಂದ ಸಪ್ತ ದಿನಗಳ ಪರ್ಯಂತ ಗುರುದತ್ತಾತ್ರೇಯ ಚರಿತ್ರೆಯನ್ನು ಪಾರಾಯಣ ಮಾಡಿ. ಸುಖಜೀವನ ನಿಮ್ಮದಾಗುತ್ತದೆ.