ವಾರಭವಿಷ್ಯ: ಈ ರಾಶಿಯವರಿಗೆ ಪರಿಹಾರ ಮಾರ್ಗ ದೈವವೊಂದೇ

ವಿಜಯವಾಣಿ (1)
Published on

ಮೇಷ: ನಿಮ್ಮ ಚಟುವಟಿಕೆಗೆ ಆಲಸ್ಯವು ಅಡ್ಡಬಾರದಿರಲಿ. ನಾಲಗೆ ಕೆಟ್ಟದಾದರೆ ಬದುಕು ದುಸ್ಥರವಾಗುತ್ತದೆ. ಬಂದದ್ದೆಲ್ಲ ಬರಲಿ, ವೆಂಕಟೇಶ್ವರನ ಕೃಪೆ ಇರಲಿ. ವೆಂಕಟೇಶ್ವರನನ್ನು ಪೂಜಿಸಿ, ಪ್ರಾರ್ಥಿಸಿ. ಅಷ್ಟೋತ್ತರ ಪಾರಾಯಣ ಮಾಡಿ. ಸುಖವೂ ಸಿಗುತ್ತದೆ. ಒಳ್ಳೆಯ ಸ್ಥಾನಮಾನವು ನಿಮ್ಮನ್ನು ಅರಸಿಕೊಂಡು ಬರುತ್ತದೆ.

ವೃಷಭ: ಲಗ್ನದಲ್ಲಿ ಗುರುವಿರುವುದು ಅಶುಭವಲ್ಲ. ಆದರೆ ಕಾರ್ಯಗಳು ಚುರುಕಾಗಿ ಓಡುವುದಿಲ್ಲ. ಬೇಸರ ಬೇಡ. ಮೇ.13ರಿಂದ ಗುರುಬಲ ಬಂದು ಕಾರ್ಯಗಳು ಚುರುಕುಗೊಳ್ಳು ತ್ತದೆ. 29ನೇ ಮಾರ್ಚ್​ನಿಂದ ಶನಿಯು 11ಕ್ಕೆ ಬಂದು ಜೀವನದಲ್ಲಿ ಅತ್ಯತ್ತಮ ಸ್ಥಾನವುದೊರೆಯುತ್ತದೆ. ಈತನಕ ಪಟ್ಟ ಪಾಡೇ ಸಾಕು. ನಿಮಗೆ ಜನಮನ್ನಣೆ ಬಂದು ನಕ್ಷತ್ರದಂತೆ ಕಂಗೊಳಿಸುತ್ತೀರಿ. ದೇವ ಕಾರ್ಯಗಳನ್ನು ತಪ್ಪದೇ ಮಾಡಿ ಕುಲದೇವರನ್ನು ಪೂಜಿಸಿ.

ಮಿಥುನ: 12ರಲ್ಲಿ ಗುರುವಿದ್ದು ಮೈತುಂಬ ಸಾಲ ಮಾಡಿಕೊಂಡು ತಲೆತುಂಬಾ ಆಸೆಗಳು ಆಥವಾ ದುಃಖವನ್ನು ಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ಪರಿಹಾರ ಮಾರ್ಗ ದೈವವೊಂದೇ. ಸೃಷ್ಟಿಯನ್ನು ಮಾಡುವುದು ಮಹಾವಿಷ್ಣುವೇ. ಅವನನ್ನು ಪೂಜಿಸಿ-ಪ್ರಾರ್ಥಿಸಿ. ನಿಮ್ಮ ಕೋರ್ಟು-ಕಚೇರಿ ವ್ಯವಹಾರಗಳಿಗೆ ದೇವರೇ ಪರಿಹಾರವನ್ನು ನೀಡುತ್ತಾನೆ.

ಕಟಕ: 11ರ ಗುರು ಎಲ್ಲಾ ಸಹಕಾರ, ಆರೋಗ್ಯ, ನೆಮ್ಮದಿ, ಸಂತೋಷ ನೀಡಿ ಕೈಹಿಡಿದು ನಡೆಸಿಕೊಂಡು ಬಂದಿದ್ದಾನೆ. ಅವಾಂತರದಿಂದ ಕೈ-ಕಾಲುಗಳಿಗೆ ಏಟನ್ನು ಮಾಡಿಕೊಳ್ಳುವುದು ನಿಮ್ಮ ಅಭ್ಯಾಸ. ಗ್ರಹಗತಿ ಚೆನ್ನಾಗಿದ್ದಾಗ, ಅದರ ಆನಂದ ಅನುಭವಿಸಿ, ಸುಖವನ್ನು ಪಡಿ. ಏನು ಮಾಡಬೇಕು, ಏನನ್ನು ಮಾಡಬಾರದು ಎಂಬ ಗಮನವಿರಲಿ-ಶಿವಧ್ಯಾನವನ್ನು ಮಾಡಿಸಿ. ಗೌರಿ ಅಷ್ಟೋತ್ತರ ಪಠಿಸಿ.

ಸಿಂಹ: ಗ್ರಹಬಲವಿಲ್ಲದಿದ್ದರೂ ಸಹ, ಮಖಾ-ಪುಬ್ಬ-ಉತ್ತರಾ ನಕ್ಷತ್ರದವರಿಗೆ ಅನಾಥೋ ದೈವ ರಕ್ಷಕ ಎಂಬ ಮಾತು ನೆನಪಿರಲಿ. ನಿತ್ಯ ಪೂಜೆ ಮಾಡುವವರಿಗೆ ರೋಗದ ಭಯವಿಲ್ಲ. ಸೂರ್ಯನಾರಾಯಣನನ್ನು ಪೂಜಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿ. ಸೂರ್ಯಾಷ್ಟೋತ್ತರ ಜೊತೆಯಲ್ಲಿ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಾರಾಯಣ ಮಾಡಿ.

ಕನ್ಯಾ: ಕನ್ನಿಕಾ ಎಂದರೆ ಎಂಟು ವರ್ಷದ ಸುಂದರ ಹೆಣ್ಣುಮಗು. ರಾಮನು ಭರತಖಂಡದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸ್ಥಾನವನ್ನು ನೀಡಿ ಗೌರವಿಸುತ್ತಿದ್ದರು. ನೀವು ಸಹ ಮನೆಯಲ್ಲಿ ಒಂದು ದಿನ ಎಂಟು ವರ್ಷದ ಬ್ರಾಹ್ಮಣ ಹೆಣ್ಣುಮಗುವಿಗೆ ವಸ್ತ್ರ, ಫಲ, ಕಾಣಿಕೆಯನ್ನು ಕೊಟ್ಟರೆ, ಗುರು-ಶನಿಗಳು ಚೆನ್ನಾಗಿರುವುದ ರಿಂದ ಒಳ್ಳೆಯ ಫಲಗಳು ಶೀಘ್ರವೇ ದೊರೆಯುತ್ತದೆ.

ತುಲಾ: ನ್ಯಾಯಕ್ಕೆ ಸಮಾನವಾದ ಶಬ್ದವೇ ಇಲ್ಲ. ನ್ಯಾಯ ಧರ್ಮ-ಕರ್ಮ ಒಟ್ಟಾಗಿ ಸೇರುವುದು ತಕ್ಕಡಿಯಲ್ಲಿ. ದೇವರು ಬೇಕಾದ್ದನ್ನು ಕೊಟ್ಟಿದ್ದಾನೆ. ಪಂಚಮ ಶನಿಯು ಬಿಟ್ಟು ಹೋಗುವಾಗ ಎಲ್ಲವನ್ನೂ ಕೊಡುತ್ತಾನೆ. ಸುಖಮಯವಾದ ಜೀವನವನ್ನೂ ಕೊಡುತ್ತಾನೆ. ಶನಿಗಾಗಿ ಪ್ರಾರ್ಥನೆ ಇರಲಿ. ಕುಲಗುರುಗಳನ್ನು ಮನಸಾ ಪೂಜಿಸಿ.

ವೃಶ್ಚಿಕ: ಈ ರಾಶಿಯವರು 5ರಿಂದ 7ನೇ ಮನೆಯ ಗುರು ಸಂಚಾರದ ಕಾಲದಲ್ಲಿ ಏನನ್ನು ಮಾಡಿದ್ದರೆಂದು ತಿಳಿಯಬೇಕು. ಶನಿಯು ಚತುರ್ಥವನ್ನು ಬಿಟ್ಟು ಪಂಚಮಕ್ಕೆ ಬರುವಾಗ ನಿಮಗೆ ಮಂಗಳವನ್ನು ಉಂಟುಮಾಡಿ ಸಾಗುತ್ತಾನೆ. ಸಮಸ್ಯೆಗಳಿಂದ ನಿಮ್ಮನ್ನು ಪಾರುಮಾಡಿ ಧನ ಸಂಪತ್ತನ್ನು ಕೊಡುತ್ತಾನೆ. ದೇವರು ಕೊಟ್ಟಿದ್ದಕ್ಕೆ ತೃಪ್ತಿಯಿರಲಿ. ಪಂಚಮ ಶನಿ ಬಂದ ಕೂಡಲೇ ಕೋಪ-ತಾಪ ದೂರವಿಟ್ಟರೆ ಕೆಟ್ಟ ಕಾಲವೂ ಅಮೃತವಾಗುತ್ತದೆ. ಲಕ್ಷ್ಮೀನರಸಿಂಹನ ಧ್ಯಾನವಿರಲಿ. ನರಸಿಂಹ ಅಷ್ಟೋತ್ತರ ಪಠಿಸಿ.

ಧನಸ್ಸು: ದೇವರ ಪ್ರಾರ್ಥನೆ, ದೇವರಿಗೆ ಅರ್ಚನೆ, ತಂದೆ ತಾಯಿಗೆ ಕೊಡುವ ಗೌರವ, ಪ್ರೀತಿ ಯಿಂದ ಮಾತನಾಡಬೇಕು. ವಿದ್ಯೆಯಿದ್ದರೆ ಸಾಲದು, ಬುದ್ದಿಯಿರಬೇಕು. ವೇಗ ತಗ್ಗಿಸಿ ಮಾತನಾಡಿದರೆ ನಿಮ್ಮನ್ನು ಹಿಡಿಯುವವರು ಯಾರೂ ಇಲ್ಲ. ಯಾರ ಹಂಗಿನ ಅಗತ್ಯವಿಲ್ಲ. ಧನುರ್ ರಾಶಿಯವರು ಹರಿ- ಹರರಲ್ಲಿ ಭೇದ ಕಾಣದೆ, ಶಿವ ನನ್ನು-ವಿಷ್ಣುವನ್ನು ಸಮಾನಾಂತರವಾಗಿ ಪೂಜಿಸಿದರೆ ಒಳ್ಳೆಯ ಫಲಗಳು ಸಿಗುತ್ತವೆ.

ಮಕರ: ಹತ್ತು ಹಲವಾರು ಕಾರಣಗಳಿಗೆ ಮನೆಯನ್ನು ಬಿಡುತ್ತೇವೆ- ಮನಸ್ಸನ್ನು ಕೆಡಿಸಿಕೊಳ್ಳು ತ್ತೇವೆ. ಊರನ್ನು ಬಿಟ್ಟು ಒಬ್ಬಂಟಿಯಾದರೂ ಕಾಲವು ಎಲ್ಲವನ್ನು ಮನುಷ್ಯನಿಗೆ ಅರ್ಥಮಾಡಿಸುತ್ತದೆ. ಮುಂದೆ ಇಂತಹ ಸಮಸ್ಯೆಗಳು ಇರುವುದಿಲ್ಲ ಹೆದರದಿರಿ. ಶನಿಯ ರಾಶಿಯಲ್ಲಿ ಹುಟ್ಟಿದ ನೀವು ಸದಾ ಕಾಲ ಶನಿಯನ್ನು ಪೂಜಿಸಿದರೆ ಭಯಪಡಬೇಕಾಗಿಲ್ಲ. ಧರ್ಮ- ಅರ್ಥ- ಕಾಮ- ಮೋಕ್ಷಗಳನ್ನು ಕೊಟ್ಟು ನ್ಯಾಯ ಮಾರ್ಗದಲ್ಲಿ ನಿಮ್ಮನ್ನು ಮುನ್ನಡೆಸಲು ಶನಿ ಒಬ್ಬನೆ ಸಾಕು.

ಕುಂಭ: ಹತ್ತು ಹಲವಾರು ಕಾರಣಗಳಿಗೆ ಮನೆಯನ್ನು ಬಿಡುತ್ತೇವೆ- ಮನಸ್ಸನ್ನು ಕೆಡಿಸಿಕೊಳ್ಳು ತ್ತೇವೆ. ಊರನ್ನು ಬಿಟ್ಟು ಒಬ್ಬಂಟಿಯಾದರೂ ಕಾಲವು ಎಲ್ಲವನ್ನು ಮನುಷ್ಯನಿಗೆ ಅರ್ಥಮಾಡಿಸುತ್ತದೆ. ಮುಂದೆ ಇಂತಹ ಸಮಸ್ಯೆಗಳು ಇರುವುದಿಲ್ಲ ಹೆದರದಿರಿ. ಶನಿಯ ರಾಶಿಯಲ್ಲಿ ಹುಟ್ಟಿದ ನೀವು ಸದಾ ಕಾಲ ಶನಿಯನ್ನು ಪೂಜಿಸಿದರೆ ಭಯಪಡಬೇಕಾಗಿಲ್ಲ. ಧರ್ಮ- ಅರ್ಥ- ಕಾಮ- ಮೋಕ್ಷಗಳನ್ನು ಕೊಟ್ಟು ನ್ಯಾಯ ಮಾರ್ಗದಲ್ಲಿ ನಿಮ್ಮನ್ನು ಮುನ್ನಡೆಸಲು ಶನಿ ಒಬ್ಬನೆ ಸಾಕು.

ಮೀನ: ದ್ವಾದಶ ಶನಿಯಿಂದ ದುಃಖವು ಬಂದಿರಬಹುದು. ಆದರೆ ಗುರುರಾಶಿಯಲ್ಲಿ ಹುಟ್ಟಿ ರುವ ನೀವು ಕಷ್ಟ ಬಂದಾಗ ದೇವರನ್ನು ನಿಂದಿಸಬಾರದು. ಇದು ಮಾನವನ ಬುದ್ದಿ. ನೀವು ದೇವಮಾನವರಾಗಿ ಬದುಕಬೇಕೇ ಹೊರತು ಅನ್ಯರೀತ್ಯಾ ಬಾಳಬಾರದು. ಜನ್ಮಕ್ಕೆ ಶನಿ ಬರುತ್ತಾನೆ. ಗುರುಬಲವೂ ಅಲ್ಪವಾಗುತ್ತದೆ. ಜಾತಿ-ಮತ-ಭೇದ ಕಾಣದೇ ಯಾರು ನಿಮ್ಮ ಬೆನ್ನಹಿಂದೆ ರಕ್ಷಣೆ ಕೊಟ್ಟು, ಯಾವ ಆಪತ್ತು ಬಾರದ ರೀತಿ ರಕ್ಷಣೆ ನೀಡುತ್ತಾರೋ ಅಂತಹ ಗುರುವನ್ನು ಪೂಜಿಸಿ. ಮೀನಾಕ್ಷಿ ಸುಂದರೇಶ್ವರನನ್ನು ಪ್ರಾರ್ಥಿಸಿ. ಮೀನಾಕ್ಷಿ-ಸುಂದರೇಶ್ವರ ಕಲ್ಯಾಣದ ಮಂಗಳ ಕಥೆ ಓದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net