

ಮೇಷ: ಸೂರ್ಯ ತನ್ನ ರಾಶಿಯಲ್ಲಿ ಇದ್ದು, ಕುಜನು ನಾಳೆ ಬುಧನ ಸ್ವಕ್ಷೇತ್ರವಾದ ಕನ್ಯಾ ರಾಶಿಯನ್ನು ಬಂದು ಸೇರಿ, ರವಿ-ಕೇತು ಸಿಂಹದಲ್ಲೇ ಮುಂದುವರಿಯಲಿದ್ದಾರೆ. ಮೇಷಕ್ಕೆ ಪಂಚಮಕ್ಕೆ ರವಿ-ಕೇತು ಇರುವುದರಿಂದ ಸರ್ಕಾರಿ ಕೆಲಸಗಳು, ದೊಡ್ಡ ಸಂಪರ್ಕದಿಂದ ಬರುವ ವ್ಯವಹಾರಗಳನ್ನು ಮಾತನಾಡುವ ಮುನ್ನ ಎಚ್ಚರಿಕೆ ವಹಿಸಿ. ತೃತೀಯದಲ್ಲಿ ಗುರುವು ಇದ್ದು, ಯಾವುದಾದರೂ ಸ್ಥಾನ-ಮಾನ ಕಲ್ಪಿಸಬಹುದು. ಗುರುವನ್ನು ಪ್ರಾರ್ಥಿಸಿ ಸುಖ-ಸಂತೋಷ ಲಭಿಸುತ್ತದೆ.
ವೃಷಭ: ಪಂಚಮದಲ್ಲಿ ಕುಜನಿರುವುದರಿಂದ ಮಾಡುವ ಕೆಲಸಗಳಲ್ಲಿ ಉದ್ವಿಗ್ನತೆಯನ್ನು, ಆತುರವನ್ನುಕೊಟ್ಟು ಕೆಲಸಗಳು ಅಪೂರ್ಣವಾಗುತ್ತದೆ. ಸುಬ್ರಹ್ಮಣ್ಯ ದೇವರ ಅನುಗ್ರಹ ಪಡೆದರೆ, ನಿಮಗೆ ಶ್ರೇಯಸ್ಸು ಕಲ್ಯಾಣವಾಗಿ ಕೆಲಸವು ಮುಗಿಯುವ ಆಕಾರ ತೆಗೆದುಕೊಳ್ಳುತ್ತದೆ. ಅತಿಯಾದ ಮಾತನ್ನು ದೂರವಿಡಿ. ಚಾಮುಂಡೇಶ್ವರಿಯನ್ನು ಪೂಜಿಸಿ- ಪ್ರಾರ್ಥಿಸಿ.
ಮಿಥುನ: ಲಗ್ನದಲ್ಲಿ ಗುರು, ಕಟಕರಾಶಿಯಲ್ಲಿ ಶುಕ್ರನು ಇರುವುದು ಸ್ವಲ್ಪ ಮಟ್ಟಿಗೆ ಕೆಲಸವು ಮುಂದೆ ಸಾಗುತ್ತದೆ. ದ್ವಿತೀಯದಲ್ಲಿ ಶುಕ್ರನಿರುವುದರಿಂದ ಚಂಡಿಕಾ ಪಾರಾಯಣ ಮಾಡಿದರೆ ಇಷ್ಟಾರ್ಥ ಸಿದ್ಧಿಸಿ ನೀವು ಯಶಸ್ಸು, ಶ್ರೇಯಸ್ಸು ಕಾಣಬಹುದು.
ಕಟಕ: ನಾಳೆಯಿಂದ ರವಿ- ಕೇತು ಮಾತ್ರವೇ ಸಿಂಹದಲ್ಲಿದ್ದು, ಕುಜನು, ಬುಧನ ಮನೆ ಕನ್ಯಾ ರಾಶಿ ಯನ್ನು ಸೇರುತ್ತಾರೆ. ಕಟಕ ರಾಶಿಯವರು ಎಲ್ಲವನ್ನು ಇಷ್ಟದಂತೆ ನಡೆಸುವುದು ಕಷ್ಟ ಸಾಧ್ಯ ಆಗುತ್ತದೆ. ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ. ಕೆಲವೊಂದು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಿ, ದ್ವಾದಶದಲ್ಲಿ ಗುರುವು ಆತಂಕಕಾರಿಯಲ್ಲಿದ್ದರೂ ಆರೋಗ್ಯದ ಕಡೆ ಲಕ್ಷ್ಯವನ್ನು ಕೊಡಬೇಕು.
ಸಿಂಹ: ರಾಶಿಯಲ್ಲೇ ರವಿ-ಕೇತು ಸಂಯೋಗದಲ್ಲಿದ್ದು, ಕುಜನು ಬುಧನ ಮನೆಯನ್ನು ಸೇರುತ್ತಾನೆ. ಭಗವದ್ ಭಕ್ರಿಯೊಂದಿದ್ದರೆ, ಸಿಂಹ ರಾಶಿಯವರು ಏನನ್ನಾದರೂ ಗೆಲ್ಲಬಹುದು. ಶನಿಯು ವಕ್ರಗತಿಯಲ್ಲಿ ಸಪ್ತಮ ಸ್ಥಾನದ ಫಲವನ್ನು ಕೊಡುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಆದಿತ್ಯ ಹೃದಯ ಪಾರಾಯಣ, ಸುಬ್ರಹ್ಮಣ್ಯ ಹಾಗು ಗಣಪತಿಯ ಆರಾಧನೆ ಸದಾ ಇರಲಿ.
ಕನ್ಯಾ: ಹತ್ತು ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ವಿಫಲರಾಗಿದ್ದೀರಿ. ಯಾವುದೇ ವಿಚಾರವಿದ್ದರೂ, ಬೇಗನೇ ಅದನ್ನು ಮುಕ್ತಾಯ ಮಾಡಿ ಹೊರ ಬರಬೇಕು, ಇಲ್ಲದಿದ್ದರೆ 7ನೇ ಮನೆಗೆ ಶನಿಯು ಬಂದಾಗ ಕೆಲಸದಲ್ಲಿ ಅಡಚಣೆ ಉಂಟಾಗಿ ಸ್ಥಗಿತಗೊಳ್ಳುತ್ತದೆ. ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆ, ಹತ್ತರ ಗುರು ಸಾಮಾನ್ಯ ಪಲ ನೀಡುತ್ತಾನೆ, ಕುಲದೇವರನ್ನು ಪೂಜಿಸಿ.
ತುಲಾ: ತಕ್ಕಡಿಯು ತರಕಾರಿಯನ್ನು, ಹಣ್ಣನ್ನು, ಧನ-ಧಾನ್ಯ, ಚಿನ್ನ-ಬೆಳ್ಳಿ ಯನ್ನು ತೂಗುವಂತೆ ದೇವರು ಸೃಷ್ಟಿಯ ನಿಯಂತ್ರಣದಲ್ಲಿ ನಿಮ್ಮನ್ನು ಸಿಲುಕಿಸಿದ್ದಾನೆ. ಆದರೆ ತುಲಾ ರಾಶಿಯಲ್ಲಿ ಹುಟ್ಟಿದವರು ವ್ಯವಹಾರ ವಿಷಯದಲ್ಲಿ ಸಾಮರ್ಥ್ಯ ಹೊಂದಿದವರು, ಜನಾಕರ್ಷಣೆಯಿಂದ ಕೆಲಸ ಸಾಧಿಸಿಕೊಳ್ಳುವವರು. ನೀಲಾದೇವಿಯನ್ನು ಪೂಜಿಸಿದರೆ ತನ್ನಿಂದ ತಾನೇ ಎಲ್ಲವೂ ನಿಮಗೆ ಶ್ರೇಯಸ್ಸು ಉಂಟಾಗುತ್ತದೆ.
ವೃಶ್ಚಿಕ: ರಾಶ್ಯಾಧಿಪತಿ ಏಕಾದಶದಲ್ಲಿದ್ದಾನೆ. ಸುಬ್ರಹ್ಮಣ್ಯನೇ ಹನ್ನೊಂದನೆ ಮನೆಯಲ್ಲಿ ಕೂತಾಗ ನಿಮಗೇನು ಯೋಚನೆ?. ಕೆಲಸವು ನಿಮಗೆ ಇಷ್ಟದಂತೆ ನಡೆದು ಕಷ್ಟಗಳನ್ನು ನೀಗಿ ಸುಖದ ಹಾದಿಗೆ ಕೊಂಡೊಯುತ್ತಾನೆ. ಸುಬ್ರಹ್ಮಣ್ಯ ಅಷ್ಟೋತ್ತರ, ಸುಬ್ರಹ್ಮಣ್ಯ ಸಹಸ್ರನಾಮವನ್ನು ಸಂಜೆಯಲ್ಲಿ ಪಾರಾಯಣ ಮಾಡಿದರೆ, ಕಾಯಾಶಕ್ತಿ, ಜ್ಞಾನಶಕ್ತಿ ಕೊಟ್ಟು ನಿಮಗೆ ಮಂದಹಾಸ ನೀಡುತ್ತಾನೆ.
ಧನಸ್ಸು: ರಾಶ್ಯಾಧಿಪತಿಯು ಸಪ್ತಮದಲ್ಲಿರುವುದು ಶುಭಸೂಚನೆ. ಚತುರ್ಥ ಶನಿಯು ವಕ್ರನಾಗಿ ಸ್ವಂತ ಮನೆಯಲ್ಲಿದ್ದಾನೆ, ಗುರುವು 7 ನೇ ಮನೆಯಲಿದ್ದು, ಗುರುವಿನ ಅನುಗ್ರಹ, ಭಗವದ್ ಭಕ್ತಿ ಇದ್ದರೆ, ಛತ್ರಿ- ಚಾಮರ ಹಿಡಿದು ದೇವರೆ ಕಾಯುತ್ತಾನೆ. ಭಾಗವತವನ್ನು ದಿನಕ್ಕೊಂದು ಕಾಂಡದಂತೆ ಪಠಿಸಿದರೆ ದೇಹದ ಆರೋಗ್ಯವೂ ಚುರುಕಾಗಿ ಕೆಲಸಗಳು ಮುಂದೆ ಸಾಗಲು ಸಹಾಯಕವಾಗುತ್ತದೆ, ಶುಭವಾಗಲಿ.
ಮಕರ: ಈ ರಾಶಿಗೆ ಆರರಲ್ಲಿ ಗುರುವಿದ್ದು, ಶನಿಯು ವಕ್ರಗತಿಯಲ್ಲಿಕುಳಿತಿ ದ್ದಾನೆ. ಕುಂಭದಲ್ಲಿ ರಾಹು ಕೂಡ ಇದ್ದಾನೆ. ಗ್ರಹಗಳು ಗಣನೀಯವಾಗಿ ನಿಮಗೆ ಇಷ್ಟ ಬಂದಂತೆ ಕೆಲಗಳನ್ನು ನಡೆಸಲು ಬಿಡುವುದಿಲ್ಲ. ಆದರೆ ಭಗವಂತನು ಕೊಟ್ಟಿರುವುದನ್ನು ಸ್ವೀಕರಿಸಿ ತೃಪ್ತಿ ಹೊಂದಿದರೆ, ಒಳ್ಳೆಯ ದಿನಗಳು ಬರುವ ಹಾದಿಯಲ್ಲಿ ಅಷ್ಟೈಶ್ವರ್ಯ ಕೊಟ್ಟು ಕಾಪಾಡುತ್ತಾನೆ.
ಕುಂಭ: ಲಗ್ನದಲ್ಲಿ ರಾಹು, ದ್ವಿತೀಯದಲ್ಲಿ ಶನಿ ವಕ್ರಗತಿಯಲ್ಲಿದ್ದು ಆದರೆ ಗುರು ಮಾತ್ರ ಪಂಚಮದಲ್ಲಿದ್ದಾನೆ. ವಿಚಾರ- ವಿಷಯಗಳಲ್ಲಿ ವಿಷಯವನ್ನು ಬೆರೆಸಬಾರದು, ಅಪಾರ ಕಲ್ಪನೆ ಮಾಡಿಕೊಳ್ಳದೆ ದೀರ್ಘವಾದ ಆಲೋಚನೆಯಿಂದ ಕೆಲಸ ಮಾಡುವ ಸಮಯ. ಯಾವುದೇ ಕಾರಣಕ್ಕೂ ಕುಟುಂಬದಲ್ಲಿ ವಿರೋಧ ಮಾಡಿಕೊಳ್ಳಬಾರದು. ಅದರಿಂದ ನಷ್ಟವೂ, ಬೇಸರವೂ, ಮನಸ್ಸಿಗೆ ದುಃಖವೂ ಉಂಟಾಗುತ್ತದೆ. ಭಗವದ್ಗೀತೆಯ 11ನೇ ಅಧ್ಯಾಯ ಪಾರಾಯಣ ಮಾಡಿ.
ಮೀನ: 12ರ ರಾಹು, ವಕ್ರಗತಿಯಲ್ಲಿ ಇರುವ ಶನಿ, ಚತುರ್ಥ ಗುರು ಎಲ್ಲೂ ಹೋಗಲೂ ಆಗುವುದಿಲ್ಲ. ಏನೂ ಮಾಡಲು ಆಗುವುದಿಲ್ಲ. ಶುಕ್ರನು ಗುರುವಿನ ಉಚ್ಚ ಸ್ಥಾನದಲ್ಲಿ ಕಟಕ ರಾಶಿಯಲ್ಲಿ ಕುಳಿತಿದ್ದಾನೆ. ಏನಾದರೂ ಸಿಕ್ಕರೆ ಶುಕ್ರನು ಕೊಡುವ ಸತ್ಪಲವಾಗಿರುತ್ತದೆ. ಕೆಲಸಗಳಲ್ಲಿ ಕೆಲವೊಂದು ಭಂಗವಾದರೂ ಯೋಚಿಸಬೇಡಿ. ಶಂಖ-ಚಕ್ರ-ಗದಾಧಾರಿಯಾದ ಮಹಾವಿಷ್ಣುವನ್ನು ಏಕಾಗ್ರತೆಯಿಂದ ಪ್ರಾರ್ಥಿಸಿ, ಪೂಜಿಸಿದರೆ ಕೆಲಸವು ಮುಂದೆ ಸಾಗುತ್ತದೆ.