

ಮೇಷ: ಜಗತ್ತಿನ ಜ್ಞಾನರಾಶಿಯನ್ನು ಸಮೃದ್ಧಗೊಳಿಸಿ, ಮನುಷ್ಯನಿಗೆ ಜ್ಞಾನ-ವಿಜ್ಞಾನ, ಇಷ್ಟಾರ್ಥಗಳನ್ನು ಕೊಡುವ ಸುಬ್ರಮಣ್ಯ ದೇವರನ್ನು ಮೇಷ ರಾಶಿಯವರು ಅರ್ಚಿಸಬೇಕು. ಮೇಷರಾಶಿಯಿಂದ ಗ್ರಹನಾಯಕನಾಗಿ 12 ರಾಶಿಗಳನ್ನು ಕಾಪಾಡುವವನೇ ಏಕೈಕದೈವ ಷಣ್ಮುಖ ದೇವರು. ಅವನನ್ನು ಪ್ರಾರ್ಥಿಸಿ, ಪೂಜಿಸಿ. ಸುಖದಿಂದ ಬಾಳಿರಿ.
ವೃಷಭ: ಹೆಣ್ಣು ಇದ್ದರೆ ಸುಂದರವಾದ ಲೋಕ. ಆ ಹೆಣ್ಣು ಸೀತೆ, ಕಾಳಿ, ಲಕ್ಷ್ಮಿಯೂ ಇರಬಹುದು. ಉತ್ತರಾಧಿಪತ್ಯಕ್ಕೆ ದುರ್ಗೆ, ಸ್ಕಂದ ಜನನಿ. ಅವಳನ್ನು ವಿಶೇಷವಾಗಿ ಪೂಜಿಸಿ. ಹತ್ತರ ಗುರು, ಒಂಬತ್ತರ ಶನಿಯ ತಾಪ ಕಡಿಮೆ ಮಾಡಿ ಮುಂದೆ ಸಾಗಿಸುತ್ತಾಳೆ. ಯಶಸ್ಸು ನಿಮ್ಮ ಹಿಂದೆ ಬರುತ್ತದೆ.
ಮಿಥುನ: ಶ್ರೀರಾಮಚಂದ್ರನ ಜನನವು ಪುನರ್ವಸು ನಕ್ಷತ್ರ. ಪಾರಿಜಾತ ಪುಷ್ಪವನ್ನು ಪೂಜೆ ಮಾಡಿದವರೇ ಪುನರ್ವಸು ನಕ್ಷತ್ರದಲ್ಲಿ ಜನಿಸಿದವರು. ದೈವತ್ವ ಇದ್ದರೆ 9ರ ಗುರುವೂ ಅಷ್ಟಮ ಶನಿಬಾಧೆಯಿಂದ ರಕ್ಷಿಸುತ್ತಾನೆ. ಗುರುದತ್ತನ ಧ್ಯಾನವಿರಲಿ. ಶನಿ ಅಷ್ಟೋತ್ತರವನ್ನು ಪಠಿಸಿ.
ಕಟಕ: ಸಪ್ತಮ ಶನಿ ಹಾಗೂ ಅಷ್ಟಮದಲ್ಲಿ ಗುರುವಿದ್ದು, ಆಗುಹೋಗುಗಳಿಗೆ ಚಿಂತಿಸಿ ಫಲವಿಲ್ಲ. ಪೂರ್ವಜನ್ಮದ ಪುಣ್ಯ ಮನುಷ್ಯನನ್ನು ರಕ್ಷಣೆ ಮಾಡುವುದು. ಕಟಕ ರಾಶಿಯ ಅಧಿಪತಿ ಬ್ರಹ್ಮ, ವಿಷ್ಣು, ಮಹೇಶ್ವರ ರೂಪದಲ್ಲಿ ಅನಸೂಯಗೆ ದರ್ಶನ ನೀಡುವವನು ಮಹಾವಿಷ್ಣುವೇ. ಕುಲದೇವರನ್ನು ಆರಾಧಿಸಿ. ಸುಖ, ಸಂತೋಷ ಪಡೆದುಕೊಳ್ಳಿ.
ಸಿಂಹ: ಗ್ರಹಗಳ ಸ್ಥಾನಮಾನ ಚೆನ್ನಾಗಿದೆ. ಮಾಡಿದ ಕಾರ್ಯಗಳಲ್ಲಿ ಯಶಸ್ಸು ದೊರಕುತ್ತದೆ. ಸೂರ್ಯನಾರಾಯಣನನ್ನು ಪ್ರಾರ್ಥಿಸಿ, ಆದಿತ್ಯಹೃದಯ ಪಾರಾಯಣ ಮಾಡಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿ. ಒಳ್ಳೆಯ ದಿನಗಳು ಕಾದಿವೆ. ಸ್ವಲ್ಪ ತಾಳ್ಮೆ ವಹಿಸಿ.
ಕನ್ಯಾ: ಕನ್ಯಾ ರಾಶಿಯವರು ಒಳ್ಳೆಯ ಕಾಲಕ್ಕಾಗಿ ಕಾಯಬೇಕು. ಮಹಾಕಾಲೇಶ್ವರನನ್ನು ಪೂಜಿಸಬೇಕು. ಕಾಲಭೈರವ ಅಷ್ಟೋತ್ತರ ಪಠಿಸಿ. ಆತುರದಲ್ಲಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ದುಡುಕಿನ ನಿರ್ಧಾರ ಮಾಡಿ, ಪಶ್ಚಾತಾಪ ಪಡಬೇಕಾಗಬಹುದು. ಪ್ರಾರ್ಥನೆ ಏಪ್ರಿಲ್ 2022ರವರೆಗೆ ಇರಲಿ. ಆರೋಗ್ಯದ ಕಡೆ ಗಮನವಿರಲಿ. ದೈವಪ್ರಾರ್ಥನೆ ಮರೆಯದಿರಿ.
ತುಲಾ: ತುಲಾ ರಾಶಿಯಲ್ಲಿ ಹುಟ್ಟಿದವರು ಕೆಟ್ಟದ್ದು, ಒಳ್ಳೆಯದನ್ನು ಸಮನಾಗಿ ತೂಗುತ್ತಾರೆ. ಪಂಚಮ ಗುರು ಒಬ್ಬನೇ ಸಾಕು ಬೇಕಾದನ್ನು ಪಡೆಯಲು. ನಿಮ್ಮಂತೆ ನೀವು ಸಾಗಿರಿ. ನಿತ್ಯ ಗುರುಚರಿತ್ರೆಯ ಪಾರಾಯಣ ಇರಲಿ. ಗೆಲುವು, ಶುಭವಾರ್ತೆಗಳು ನಿಮ್ಮನ್ನು ತಲುಪಲಿವೆ. ಮಿದುಳಿಗೆ ಅತಿಯಾದ ಕೆಲಸ ಕೊಡಬೇಡಿ.
ವೃಶ್ಚಿಕ: ಲಕ್ಷ್ಮಿನರಸಿಂಹ ಹಾಗೂ ಸುಬ್ರಮಣ್ಯನನ್ನು ಪ್ರಾರ್ಥಿಸಿ. ಪ್ರಾರ್ಥನೆಯಿಂದ ಕಾರ್ಯವಿಘ್ನಗಳು ದೂರವಾಗಿ, ಸುಖದ ಹಾದಿಯಲ್ಲಿ ಕೊಂಡೊಯ್ಯುತ್ತದೆ. ನರಸಿಂಹನಲ್ಲಿ ಹರಕೆ ಇದ್ದಲ್ಲಿ ಕೂಡಲೇ ದರ್ಶನ ಪಡೆದು ಕೈಲಾದ ಸೇವೆ ಮಾಡಿ. ಬೇಕಾದ ಧನವು ಸಿಕ್ಕಿ ದಾರಿದೀಪವಾಗುತ್ತದೆ.
ಧನು: ಮಳೆ, ಬಿಸಿಲನ್ನು ತಡೆಯಲಾಗುವುದಿಲ್ಲ. ಅದು ಪ್ರಕೃತಿಯ ನಿಯಮ. ಸಮುದ್ರದ ಅಲೆಗಳು ಒಂದರ ಮೇಲೊಂದು ಅಬ್ಬಿರಿಸಿ ಭೀತಿ ಉಂಟು ಮಾಡುವುದು ಸಹಜವೇ. ಭಯಪಡದೆ ಧನುರ್ ರಾಶಿ ಅಧಿಪತಿ ಗುರುವನ್ನು ಜ್ಞಾನದಾರಣೆ ಶಕ್ತಿಯಿಂದ ಪ್ರಾರ್ಥಿಸಿ. ವಿಶೇಷವಾಗಿ ಗಣೇಶನನ್ನು ಮತ್ತು ಶ್ರೀರಾಮಚಂದ್ರನನ್ನು ಪ್ರಾರ್ಥಿಸಿ.
ಮಕರ: ಸಕಲ ವಿಧವಾದ ತೊಂದರೆ, ಬೇಸರ, ಒಮ್ಮೆಲೆ ಬಂದು ನಿಮ್ಮನ್ನು ಅಪ್ಪಳಿಸುವುದಿಲ್ಲ. ದ್ವಿತೀಯದಲ್ಲಿ ಗುರು, ಶನಿ ಜನ್ಮದಲ್ಲಿ ಇರುವುದರಿಂದ ಕೆಲವು ವಿಷಯಗಳು ಕೆಲವೊಮ್ಮೆ ಮನಸನ್ನು ಕೆಡಿಸಬಹುದು. ಬೇಡದ ವಿಚಾರ ಎಲ್ಲ ಬಿಟ್ಟು 2ನೇ ಮನೆಯ ಗುರುವಿಗೆ ಪ್ರಾರ್ಥನೆ ಸಲ್ಲಿಸಿ, ಮುನ್ನಡೆದರೆ ಕಾರ್ಯಜಯ. ಮನಶಾಂತಿ ಸಿಗುತ್ತದೆ.
ಕುಂಭ: ಲಗ್ನದಲ್ಲಿ ಗುರುವಿದ್ದು, ದ್ವಾದಶದಲ್ಲೀ ಶನಿ ಇರುವುದು. ಶನಿಯ ಸ್ವಗೃಹದಲ್ಲಿ ಕುಂಭ ರಾಶಿಯಲ್ಲಿರುವ ಗುರುವು ನಿಮಗೆ ಬೇಕಾದ ವರ ನೀಡಿ ಸಂರಕ್ಷಣೆ ಮಾಡಿದರೂ ಕೆಲವೊಂದು ವಿಚಾರದಲ್ಲಿ ಶನಿತಾಪ ತಗುಲಿ ಮನಸಿಗೆ ಅಶಾಂತಿ ಮೂಡುತ್ತದೆ. ಅದನ್ನು ಗೆಲ್ಲಲು ಶನಿಸ್ತೋತ್ರ ಪಠಿಸಿ. ಶನಿವಾರದಂದು ಶನಿಪ್ರೀತಿಗಾಗಿ ಎಳ್ಳುದೀಪ ಹಚ್ಚಿರಿ. ವಿಘ್ನಗಳು ದೂರವಾಗುತ್ತವೆ.
ಮೀನ: ಎಲ್ಲರಲ್ಲೂ ಒಬ್ಬನೇ ಭಗವಂತ ಅಂದುಕೊಂಡರೂ ಪಂಚೇಂದ್ರಿಯಗಳನ್ನು ಕಾಪಾಡಿಕೊಂಡು ಬಾಳನ್ನು ಜಯಿಸಬೇಕಾಗಿದೆ. ದೃಢಸಂಕಲ್ಪ, ಗುರುಕಟಾಕ್ಷ ಇರಲೇಬೇಕು. ಶನಿಯು 11ನೇ ಮನೆಯಲ್ಲಿ ಇರುವುದರಿಂದ ಮಾಡುವ ಕೆಲಸದಲ್ಲಿ ಹಿನ್ನಡೆ ಇಲ್ಲ. ಉಮಾಮಹೇಶ್ವರ ಸ್ತೋತ್ರ ಪಠಿಸಿ. ಸೋಮವಾರದಂದು ಈಶ್ವರನಿಗೆ ಪ್ರದೋಷಕಾಲದಲ್ಲಿ ಪೂಜಿಸಿ. ಎಲ್ಲ ಕಾರ್ಯಗಳು ವಿಘ್ನವಿಲ್ಲದೆ ಮುಂದೆ ಸಾಗುತ್ತವೆ.