

ಕೇಂದ್ರಪಾರಾ: ಲಾಕ್ಡೌನ್ ತೆರವುಗೊಳಿಸಿದ್ದರೂ ಕೊವಿಡ್-19 ನಿಯಂತ್ರಣಕ್ಕಾಗಿ ಒಂದಷ್ಟು ನಿಯಮಗಳ ಜಾರಿಯನ್ನು ಮಾಡಲಾಗಿದ್ದು, ಅದನ್ನು ಚಾಚೂತಪ್ಪದೆ ಪಾಲಿಸುವಂತೆ ಸಾರ್ವಜನಿಕರಿಗೆ ಸರ್ಕಾರಗಳು ಹೇಳುತ್ತಿವೆ.
ಆದರೂ ಅನೇಕರು ಮದುವೆ, ರಿಸಪ್ಷನ್, ಅಂತ್ಯಕ್ರಿಯೆ, ಸಾರ್ವಜನಿಕ ಸಮಾರಂಭದ ನೆಪದಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸುತ್ತಿದ್ದಾರೆ.
ಇಷ್ಟು ದಿನ ಅನೇಕ ಕಡೆಗಳಿಂದ ನಿಯಮಗಳು ಉಲ್ಲಂಘನೆಯಾದ ಮೇಲೆ ಪ್ರಕರಣ ದಾಖಲಾದ ಸುದ್ದಿಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಒಡಿಶಾದ ಒಂದು ಹಳ್ಳಿಯಲ್ಲಿ ಸ್ಥಳೀಯ ಜಿಲ್ಲಾಡಳಿತ ತುಸು ಒಂದು ಹೆಜ್ಜೆ ಮುಂದಿಟ್ಟು, ರೆಬಲ್ ಆಗಿ ಕ್ರಮ ಕೈಗೊಂಡಿದೆ. ಕರೊನಾ ನಿಯಂತ್ರಣದ ನಿಯಮಗಳು ಉಲ್ಲಂಘನೆ ಆಗುತ್ತಿರುವಾಗ ಮಧ್ಯದಲ್ಲೇ ಪ್ರವೇಶ ಮಾಡಿ, ಖಡಕ್ ಎಚ್ಚರಿಕೆ ನೀಡಿದೆ.
ಆಯತ್ಪುರ ಗ್ರಾಮದಲ್ಲಿ ಮದುವೆ ರಿಸಪ್ಷನ್ ನಡೆಯುತ್ತಿತ್ತು. ಈ ವೇಳೆ ಅನೇಕರು ಸೇರಿದ್ದರು. ಆದರೆ ಅಲ್ಲಿ ಕೊವಿಡ್-19 ನಿಯಮಗಳು ಪಾಲನೆಯಾಗುತ್ತಿರಲಿಲ್ಲ. ಈ ಬಗ್ಗೆ ಕೇಂದ್ರಪಾರಾ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಿದ್ದೇ ತಡ, ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಇದನ್ನೂ ಓದಿ: ಪ್ಲೇಬಾಯ್ ಮಾಡೆಲ್ಗಳಿಗೆ ಹಣ ಪಾವತಿ ವಿಚಾರ; ಸುಪ್ರೀಂ ಕೋರ್ಟ್ನಿಂದ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಭಾರಿ ಮುಖಭಂಗ
ರಿಸಪ್ಷನ್ ನಡೆಯುತ್ತಿದ್ದಾಗಲೇ ಆಗಮಿಸಿದ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿ, ಅತಿಥಿಗಳನ್ನೆಲ್ಲ ವಾಪಸ್ ಕಳಿಸಿದ್ದಾರೆ. ಅಲ್ಲದೆ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ, ವಧು-ವರನ ಮನೆ ಕಡೆಯವರಿಗೆ ಸರಿಯಾಗಿ ಬೆಂಡೆತ್ತಿದ್ದಾರೆ. ಸ್ಥಳೀಯರ ಬಾಯಲ್ಲಂತೂ ಇದೇ ದೊಡ್ಡ ಸುದ್ದಿಯಾಗಿಬಿಟ್ಟಿದೆ.
ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಖಡಕ್ ಆಗಿ ಸೂಚನೆ ನೀಡಿವೆ. ಮದುವೆ ಸಮಾರಂಭದಲ್ಲಿ ಯಾವ ಕಾರಣಕ್ಕೂ 50ಕ್ಕಿಂತ ಜಾಸ್ತಿ ಜನ ಸೇರಬಾರದು ಎಂದು. ಆದರೆ ಅದನ್ನು ಅನೇಕರು ಪಾಲಿಸುತ್ತಿಲ್ಲ. ಕೆಲವು ಕಡೆಗಳಲ್ಲಂತೂ ಮದುವೆ ಮನೆಗಳೇ ಕರೊನಾ ಸ್ಪ್ರೆಡರ್ ಸ್ಥಳಗಳಾಗಿ ಮಾರ್ಪಟ್ಟಿದ್ದೂ ಇದೆ. ಅಷ್ಟೆಲ್ಲಾ ಆದರೂ ಜನರು ಬುದ್ಧಿ ಕಲಿಯುತ್ತಿಲ್ಲ. ಒಡಿಶಾದಲ್ಲಿ ಒಟ್ಟು 11, 201 ಕರೊನಾ ಸೋಂಕಿತರು ಇದ್ದು, 52 ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್)