ಮದುವೆ ಹಿಂದಿನ ದಿನ ಸೀರೆ ವಿಚಾರಕ್ಕೆ ಶುರುವಾಯ್ತು ಜಗಳ, ಪರಾರಿಯಾದ ವರ...ಠಾಣೆ ಮೆಟ್ಟಿಲೇರಿದ ಯುವತಿ

Crime 6 Feb 20
Published on

ಹಾಸನ: ಮದುವೆ ಹಿಂದಿನ ದಿನ ವರ ಪರಾರಿಯಾದ ಘಟನೆ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ. ಬಿದಿರೆಕೆರೆ ಗ್ರಾಮದ ಬಿ.ಆರ್.ಸಂಗೀತಾ ಎಂಬುವರೊಂದಿಗೆ ಬಿ.ಎನ್​.ರಘುಕುಮಾರ್​ಗೆ ಮದುವೆ ನಿಶ್ಚಯವಾಗಿತ್ತು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇಂದು ಅದೇ ಗ್ರಾಮದಲ್ಲಿ ಬೀಗರ ಔತಣಕೂಟವಿತ್ತು. ಆದರೆ ಸಂಭ್ರಮದ ಮಧ್ಯೆ ದಾರೆ ಸೀರೆ ವಿಚಾರಕ್ಕಾಗಿ ಎರಡೂ ಕುಟುಂಬಗಳ ನಡುವೆ ಜಗಳ ಶುರುವಾಗಿತ್ತು.

ಇದೇ ವೇಳೆ ವರ ರಘುಕುಮಾರ್​ ಪರಾರಿಯಾಗಿದ್ದಾನೆ. ಈ ಬಗ್ಗೆ ಯುವತಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net