

ಲಂಡನ್: 'ಸಾವಿರ ಸುಳ್ಳು ಹೇಳಿ ಮದುವೆ ಮಾಡು' ಎಂಬ ಮಾತು ಹಳೆಯದು. ಲಕ್ಷಗಟ್ಟಲೆ ಖರ್ಚಾದರೂ ಪರವಾಗಿಲ್ಲ ಕುದುರಿದ ಮದುವೆ ಕ್ಯಾನ್ಸಲ್ ಮಾಡಬೇಕೆನ್ನುವುದು ಹೊಸ ಟ್ರೆಂಡ್. ಮುಂದುವರಿದ ಸ್ಪೇನ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಇದು ಹೆಚ್ಚುತ್ತಿದೆ. ಮದುವೆ ಚೆನ್ನಾಗಿ ನಡೆಯಲು ವೆಡ್ಡಿಂಗ್ ಪ್ಲಾನರ್‌ಗಳು ಇರುವಂತೆಯೇ, ನಿಶ್ಚಯಿಸಿದ ಮದುವೆಯನ್ನು ಹಾಳು ಮಾಡಲು ಹೊಸ 'ವಿವಾಹ ವಿಧ್ವಂಸಕರು'(Wedding destroyers) ಹುಟ್ಟಿಕೊಂಡಿದ್ದಾರೆ.ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಸ್ಪೇನ್‌ನಲ್ಲಿ ವಾರಿಯೊ ಎಂಬ ವಿವಾಹ ವಿಧ್ವಂಸಕ ಸಂಸ್ಥೆಗೆ ಈ ವರ್ಷದ ಅಂತ್ಯದವರೆಗೆ ಬಿಡುವಿಲ್ಲದ ಕೆಲಸವಂತೆ. ಕುದುರಿದ ಮದುವೆ ಒಡೆಯಬೇಕು ಎಂದು ಯಾರಾದರೂ ಬಂದರೆ ಡಿಸೆಂಬರ್ ಅಂತ್ಯದ ವರೆಗೆ ಬಿಡುವಿಲ್ಲ ಎಂದು ಹೇಳಿ ಕಳೂಹಿಸುತ್ತಿದ್ದಾರೆ.
ಹಾಗಾದರೆ ಮದುವೆ ಮುರುಕರಿಗೆ ಲಾಭವೇನು ಎಂದುಕೊಂಡ್ರೆ ಅದು ನಿಮ್ಮ ತಪ್ಪಾಗುತ್ತದೆ. ಏಕೆಂದರೆ ಇವರಿಗೆ ಪ್ರತಿ ಒಪ್ಪಂದಕ್ಕೆ 50 ಸಾವಿರ ರೂ. ನಿಂದ ಎರಡುಮೂರು ಲಕ್ಷ ರೂ.ವರೆಗೆ ಫೀಸ್ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.
ಇಷ್ಟಕ್ಕೂ ಇವರ ಕಾರ್ಯಚಟುವಟಿಕೆ ಏನೆಂದರೆ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಹೇಳಿದರೆ ಉಳಿದಂತೆ ಎಲ್ಲವನ್ನೂ ಇವರು ನೋಡಿಕೊಳ್ಳುತ್ತಾರೆ. ಪ್ರತಿ ಮದುವೆಗೂ ಒಂದೊಂದು ಯೋಜನೆ ಜಾರಿಗೆ ತರುತ್ತಾರೆ.
ಇನ್ನು ಮದುವೆ ಮುರಿಯಲು ಹೋದಾಗ ವಧು-ವರರ ಸಂಬಂಧಿಕರು ಯಾರಾದರೂ ದಾಳಿ ಮಾಡಿದರೆ, ಪ್ರತಿ ಏಟಿಗೆ ಇಂತಿಷ್ಟು ಹೆಚ್ಚುವರಿ ಹಣ ನೀಡಬೇಕೆಮದು ಸುಫಾರಿ ಕೊಟ್ಟವರಿಂದ ಮೊದಲೇ ಒಪ್ಪಂದ ಮಾಡಿಕೊಳ್ಳುತ್ತಾರೆ.
ಸಾಮಾನ್ಯವಾಗಿ ವಿವಾಹ ಮುರುಕರು ಹಿರಿಯರು ನಿರ್ಣಯಿಸಿದ ಮದುವೆ ನಿಮಗೆ ಇಷ್ಟವಿದೆಯೇ? ಇಲ್ಲವೇ ಎಂದು ವಧುವರರನ್ನು ಸಂಪರ್ಕಿಸಿ ಕೇಳುತ್ತಾರೆ. ಇವಿಷ್ಟೇ ಅಲ್ಲ, ಅಧು ಅಥವಾ ವರನ ಬಾಯಿಂದ ಯಾವುದಾದರೂ ಒಂದು ಕಾರಣಕ್ಕೆ ಮನಸ್ಸು ಬದಲಿಸಿ ‘ಸಂಬಂಧ ಬೇಡ’ ಎನಿಸಲು ಯೋಜನೆ ಮೇಲೆ ಯೋಜನೆ ಸಿದ್ಧಪಡಿಸುತ್ತಾರೆ. 'ವಧು ಅಥವಾ ವರ ನಮಗೆ ಮದುವೆಯಾಗಲು ಇಷ್ಟವಿಲ್ಲ ಎಂದರೆ ಸಾಕು ಅರೇಂಜ್ಡ್ ಮ್ಯಾರೇಜ್ ಅನ್ನು ಹಾಳು ಮಾಡಿ ತಮ್ಮ ಒಪ್ಪಂದವನ್ನು ನಿರೂಪಿಸಿಕೊಳ್ಳುತ್ತಾರೆ.
ಹೀಗೆ ಮುರಿದ ಮದುವೆಗಳ ಕುರಿತು ಇವರು ಪ್ರಚಾರವನ್ನೂ ಮಾಡುತ್ತಾರೆ. 'ಇಂತಹ ಮದುವೆ ಮುರಿಯಬೇಕು ಎಂದು ನಿಮಗೆ ಅನಿಸಿದರೆ ನಮಗೆ ಜವಾಬ್ದಾರಿ ಕೊಡಿ' ಎಂದು ವಾರಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಈ ಟ್ರೆಂಡ್ ಸಾಮಾಇಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.